ವಿಧ: ಬ್ಲಾಗ್ ಬರಹ
September 20, 2006
ಓ ನನ್ನ ಕನಸಿನ ಕನ್ಯೆ
ಯಾವಾಗ , ಎಂದು, ಎಲ್ಲಿ
ನಮ್ಮ ಮದುವೆ?
ಆಗ ನುಡಿದಳು ಚಲುವೆ
ಇಂದು ,ರಾತ್ರಿ , ಕನಸಿನಲ್ಲಿ
ಎಂದಳು ಮೆಲ್ಲಗೆ !!!
ವಿಧ: ಬ್ಲಾಗ್ ಬರಹ
September 20, 2006
ರಾತ್ರಿ ಪಾರ್ಟಿಗಳಲ್ಲಿ ಹಣ ಉಡಾಯಿಸುತ್ತಾ ನಡೆಯುತ್ತದೆ ಇವರ ವೀಕೆಂಡ್ ಮರುದಿನದ ಸುಸ್ತು, ತಲೆನೋವಿನಿಂದ ಮಾಡುತ್ತಾರೆ ವಾರದ ವೀಕ್-ಎಂಡ್
ವಿಧ: ಬ್ಲಾಗ್ ಬರಹ
September 19, 2006
ತಪ್ಪಿಗೆ ಏನಾದರೊಂದು ಪಿಳ್ಳೆನೆವ ಹುಡುಕುವುದು ಮಾನವ ಸಹಜ ಸ್ವಭಾವ. ನಾನೂ ಒಬ್ಬ ಮನುಷ್ಯ ಪ್ರಾಣಿ ಆಗಿರುವುದರಿಂದ ಇದು ನನಗೂ ಅನ್ವಯಿಸುತ್ತದೆ. ಬರೆಯುವುದನ್ನು ಬಿಟ್ಟು ತುಂಬಾ ದಿನವಾಗಿದ್ದರಿಂದ ಏನಾದರೂ ಬರೆದೇ ತೀರಬೇಕೆಂಬ ಹಠದಿಂದ ಬ್ಲಾಗ್ ಶುರುಮಾಡಿದೆ. ಅದು ತಕ್ಕಮಟ್ಟಿಗೆ ಅಪ್ ಡೇಟ್ ಆಗುತ್ತಿರುವಾಗಲೇ ಮುಂಬೈ ಸ್ಫೋಟದ ಸದ್ದಿಗೆ "ಬ್ಲಾಗ್‌ಸ್ಪಾಟ್ " ತನ್ನ ಕದಮುಚ್ಚಿ "ಬ್ಲಾಕ್‌ಸ್ಪಾಟ್" ಆಯಿತು. ಇದರ ಬೆನ್ನ ಹಿಂದೆಯೇ ನನ್ನ ಬ್ಲಾಗ್ ಕೂಡ ಆಲಸ್ಯ ರೋಗದಿಂದ ಹಾಸಿಗೆ ಹಿಡಿಯಿತು.
ಬ್ಲಾಗ್…
ವಿಧ: Basic page
September 19, 2006
ನನ್ನವಳ ಮೊಗದಲ್ಲಿ ಸಣ್ಣನೆಯ ಕಿರುನಗೆಯು,
ಕಾರಣವದೇನೆಂದು ಕೇಳಬಹುದೆ?
ತುಟಿಯಂಚ ನಗು ಹಿಂದೆ ಏನದೋ ತುಂಟತನ
ಮನದೊಳಗೆ ಏನಿದೆಯೋ ಅರಿಯಬಹುದೆ..
ಅನುನಯದ ನಡೆ ನುಡಿಯು, ತಣ್ಣನೆಯ ಮಾತುಗಳು
ಹೊಸದೇನೋ ಹುನ್ನಾರ ನಡೆಯುತಿಹುದು
ನಿತ್ಯವೂ ಇಲ್ಲದಿಹ ಬೇರೆಯದೆ ನೋಟವಿದು
ನನಗೇತಕೋ ಶಂಕೆ ಮೊಡುತಿಹುದು
ಹೊಸದು ಸೀರೆಯು ಬೇಕೆ, ಹಬ್ಬ ಸನಿಹದೊಳಿಲ್ಲ
ಅಮ್ಮ ಬರುವಳೆ ತವರು ಮನೆಯಿಂದ
ಚಿನ್ನ್ನದಾ ಸರಕಿನ್ನು ತಿಂಗಳೂ ಕಳೆದಿಲ್ಲ
ವಿಷಯವೇನೆಂದೊಮ್ಮೆ ಹೇಳಿದೊಡೆ ಚೆಂದ.
ಒಳಮನೆಯ ಗೋಡೆಯಲಿ ಕಂದನಾ ಚಿತ್ರಪಟ…
ವಿಧ: ಬ್ಲಾಗ್ ಬರಹ
September 18, 2006
ಕವಿಯಾದವನು ಬರೆದರೆ ಕವಿತೆಎಲ್ಲರೂ ಅನ್ನುತ್ತಾರೆ ಅದ್ಭುತನೀ ನಮ್ಮ ಮನ ಗೆದ್ದೆನಾ ಬರೆದರೆ ನನ್ನವಳೇ ಕೇಳುತ್ತಾಳೆಇದನ್ನೆಲ್ಲಿಂದ ಕದ್ದೆ ?
ವಿಧ: ಬ್ಲಾಗ್ ಬರಹ
September 18, 2006
ರಸ್ತೆಗೊಂದೊಂದು ಹೆಸರು
ಈ ವೃತ್ತ, ಆ ವೃತ್ತ
ಹನಿ ಮಳೆ ಬಂದರೆ ಸಾಕು
ಎಲ್ಲಾ ಜಲಾವೃತ
ವಿಧ: ಬ್ಲಾಗ್ ಬರಹ
September 18, 2006
ನಮ್ಮ ಕಂಪೆನಿಯ ಹೆಸರೂ
ಏನೋ ಒಂದು ಲಿಮಿಟೆಡ್
ಅವರು ಕೊಡುವ ಸಂಬಳವೂ
ಕೂಡ ಹಾಗೇ ಲಿಮಿಟೆಡ್
ವಿಧ: Basic page
September 18, 2006
ಕೊಕ್ಕರೆ ಕಥೆ
ಒಮ್ಮೆ ಕೊಕ್ಕರೆಯೊಂದು ಕೆರೆಯಲ್ಲಿ ಮೀನುಗಳನ್ನು ಹೆಕ್ಕಿ ತಿನ್ನುತ್ತಿರುವಾಗ ಅಲ್ಲಿಗೆ ನರಿಯೊಂದು ಬಂತು. ಕೊಕ್ಕರೆ ಮೀನುಗಳನ್ನು ತಿನ್ನುತ್ತಾ ಸುಗ್ರಾಸ ಭೋಜನದಲ್ಲಿ ತೊಡಗಿರುವುದನ್ನು ಕಂಡು ನರಿಗೆ ಆಶೆಯಾಯಿತು. ಅದು ಕೊಕ್ಕರೆಯೊಂದಿಗೆ ಸ್ನೇಹ ಸಂಪಾದಿಸಲು ನೋಡಿತು. 'ಕೊಕ್ಕರೆಯಣ್ಣಾ ಕೊಕ್ಕರೆಯಣ್ಣಾ, ನೀನು ಅದೆಷ್ಟು ಸುಂದರವಾಗಿದ್ದೀಯೆ! ನಿನ್ನ ಮೈಬಣ್ಣ ಅದೆಷ್ಟು ಬಿಳಿ! ಕೋಮಲವಾದ ನಿನ್ನ ಮೈಮಾಟ, ನೀಳವಾದ ಕತ್ತು, ಊದ್ದ-ಚೂಪು ಕೊಕ್ಕು.. ಆಹಾ! ನೀನು ನಿಜಕ್ಕೂ ಸುಂದರಾಂಗ! ನೀನು…
ವಿಧ: ಬ್ಲಾಗ್ ಬರಹ
September 18, 2006
ಈ ಕೆಳಗಿನ ಕೊಂಡಿಯಲ್ಲಿ ನಿಮ್ಮ ಬಲಾಗು ಮತ್ತು ನಿಮಗೆ ತಿಳಿದ ಕನ್ನಡ ಕೊಂಡಿಗಳನ್ನು ಸೇರಿಸಿ. ಇಲ್ಲಿ ನೀವು, ನಿಮಗೆ ತಿಳಿದ ಕನ್ನಡ ಪದ, ಇಂಗಲೀಸ್ ಪದವೊಂದರ ಕನ್ನಡ ತಿಳಿ, ಇವುಗಳನ್ನೂ ಬರೆಯಬಹುದು. ಒಮ್ಮೆ ಈ ಕೊಂಡಿಯ ಮೇಲೆ ಮೌಸು ಅದುಮಿ ನೋಡಿ.
http://kannadablogs.co.nr
ಕೈ ಮುಗಿದೆ.
ವಿಧ: Basic page
September 18, 2006
ನನ್ನವಳ ಮೊಗದಲ್ಲಿ ಸಣ್ಣನೆಯ ಕಿರುನಗೆಯು,
ಕಾರಣವದೇನೆಂದು ಕೇಳಬಹುದೆ?
ತುಟಿಯಂಚ ನಗು ಹಿಂದೆ ಏನದೋ ತುಂಟತನ
ಮನದೊಳಗೆ ಏನಿದೆಯೋ ಅರಿಯಬಹುದೆ..
ಅನುನಯದ ನಡೆ ನುಡಿಯು, ತಣ್ಣನೆಯ ಮಾತುಗಳು
ಹೊಸದೇನೋ ಹುನ್ನಾರ ನಡೆಯುತಿಹುದು
ನಿತ್ಯವೂ ಇಲ್ಲದಿಹ ಬೇರೆಯದೆ ನೋಟವಿದು
ನನಗೇತಕೋ ಶಂಕೆ ಮೊಡುತಿಹುದು
ಹೊಸದು ಸೀರೆಯು ಬೇಕೆ, ಹಬ್ಬ ಸನಿಹದೊಳಿಲ್ಲ
ಅಮ್ಮ ಬರುವಳೆ ತವರು ಮನೆಯಿಂದ
ಚಿನ್ನ್ನದಾ ಸರಕಿನ್ನು ತಿಂಗಳೂ ಕಳೆದಿಲ್ಲ
ವಿಷಯವೇನೆಂದೊಮ್ಮೆ ಹೇಳಿದೊಡೆ ಚೆಂದ.
ಒಳಮನೆಯ ಗೋಡೆಯಲಿ ಕಂದನಾ ಚಿತ್ರಪಟ…