ವಿಧ: ಬ್ಲಾಗ್ ಬರಹ
September 15, 2006
ಎಲ್ಲಿ ಎಲ್ಲಿ ತೋರಣ
ಅಲ್ಲಿ ಅಲ್ಲಿ ಹೂರಣ !
ಕರೆದರೂ ಸರಿ , ಬಿಟ್ಟರೂ ಸರಿ ,
ನಡಿ ಅಲ್ಲಿಗೆ ಹೋಗೋಣ !
------------------
ಸಂತೋಷಂ ಜನಯಂತಿ ಪ್ರಾಜ್ಞಃ
ತದೇವ ಈಶ್ವರ ಪೂಜನಂ
( ಬಲ್ಲವರು ಸಂತೋಷವನ್ನುಂಟು ಮಾಡುತ್ತಾರೆ , ಅದುವೇ ಈಶಸೇವೆ)
-------------------
ನೀಚಾ: ಕಲಹಮಿಚ್ಛಂತಿ ,
ಸಂಧಿಮಿಚ್ಛಂತಿ ಸಾಧವಃ
( ನೀಚರು ಕಲಹವನ್ನು ಇಚ್ಛಿಸುತ್ತಾರೆ, ಸಜ್ಜನರು ಸಂಧಿಯನ್ನು ಇಚ್ಛಿಸುತ್ತಾರೆ)
--------------------
ಪಂಜೆ ಮಗೇಶರಾಯರು ಹೇಳಿದ್ದು .
"ನನ್ನ ಅವಸಾನ ಕಾಲದಲ್ಲಿ ಬಾಯಿಂದ 'ಕೃಷ್ಣ…
ವಿಧ: ಬ್ಲಾಗ್ ಬರಹ
September 15, 2006
ನಿನ್ನೆ ಸಂಜೆ, ಕಿಟಕಿಯ ಹೊರಗೆ ಸಣ್ಣಗೆ ಮಳೆ.. ಬೆಂಗಳೂರಿಗೆ ತುಂತುರು ಸ್ನಾನ, ಬಹಳ ದಿನಗಳನಂತರ ಸಂಜೆಯ ಹೊತ್ತು ನೀರ ಸಿಂಚನ. ನನಗೆ ಮಳೆ ಅಂದರೆ ಯಾವತ್ತೂ ಇಷ್ಟ.. ಅದರಲ್ಲೂ ಇಂತಹ ತುಂತುರು ಮಳೆಯಲ್ಲಿ ನೆನೆಯುತ್ತಾ ನಡೆಯುವುದು..ಆಹ್!
ಮಳೆ ಬಂದ ದಿನ ಮನಸ್ಸು ಪ್ರಫುಲ್ಲ! ವರ್ಷಧಾರೆಗೆ ಮನದ ದುಗುಡವನ್ನ, ಬೇನೆ- ಬೇಸರವನ್ನ ಅರ್ಥ ಮಾಡಿಕೊಂಡು ನಮ್ಮನ್ನ ಸರಿಯಾದ ಲಹರಿಗೆ ತಂದು ನಿಲ್ಲಿಸುವ ಶಕ್ತಿ ಇದೆ. ಮಳೆಯನ್ನ ಸಹೃದಯರೆಲ್ಲ ಪ್ರೀತಿಸುತ್ತಾರೆ ಮತ್ತು ಮಳೆ ಪ್ರೀತಿಸುವುದನ್ನ ಕಲಿಸುತ್ತದೆ!…
ವಿಧ: ಬ್ಲಾಗ್ ಬರಹ
September 14, 2006
ಗಣಕ, ಅಂತರಜಾಲ, ಮೊಬೈಲ್ ಫೋನು, ಎಟಿಎಂ -ಹೀಗೆ ಮಾಹಿತಿ ತಂತ್ರಜ್ಞಾನದ ಎಲ್ಲ ಅಂಗಗಳು ಇನ್ನು ಮುಂದೆ ಯುನಿಕೋಡ್ ವಿಧಾನದಲ್ಲೇ ಕೆಲಸ ಮಾಡಲಿವೆ. ಆಗ ತುಳು ಭಾಷೆಯೂ ಇವುಗಳಲ್ಲೆಲ್ಲ ಬಳಕೆಗೆ ಬರಬೇಕಾದರೆ ತುಳುವಿಗೆ ಯುನಿಕೋಡ್‌ನಲ್ಲಿ ಜಾಗ ಇರಲೇಬೇಕು. “ಅಯಿಕ್ಕೇ ಪಣ್ಪುನ, ತುಳುಕ್ಲಾ ಒಂತೆ ಜಾಗೆ ಕೊರ್ಲೆ” (ಅದಕ್ಕೇ ಹೇಳಿದ್ದು, ತುಳುವಿಗೂ ಸ್ವಲ್ಪ ಜಾಗೆ ಕೊಡಿ ಎಂದು).
ಇದೇ ವಿಷಯದ ಬಗ್ಗೆ ಸಂಪೂರ್ಣ ಲೇಖನವನ್ನು [http://vishvakannada.com/node/301|ವಿಶ್ವಕನ್ನಡದಲ್ಲಿ ಓದಬಹುದು].
ಸಿಗೋಣ,…
ವಿಧ: ಬ್ಲಾಗ್ ಬರಹ
September 14, 2006
ಯಾವುದೇ ವಸ್ತುವು ಪರಮಾಣು ಮತ್ತು ಅಣುಗಳಿಂದ ಆಗಿರುವಂತೆ ಕಂಪ್ಯೂಟರ್ ಬಿಟ್ ಮತ್ತು ಬೈಟ್‍ಗಳಿಂದ ಆಗಿದೆ . ಬಿಟ್ ಎಂದರೆ binary digit . ಬಿಟ್ ಎನ್ನುವದು ಕಾಂತೀಯ(magnetic)ವಾಗಿ ಅಥವಾ ವಿದ್ಯುದೀಯ(electricic) ವಾಗಿ ಚಾರ್ಜ್ ಅಗಿರುತ್ತದೆ ಅಥವಾ ಆಗಿರುವದಿಲ್ಲ . ಈ ರೀತಿ ೦ ಮತ್ತು ೧ (1) ರಿಂದ ಪ್ರತಿನಿಧಿಸುವ ವ್ಯವಸ್ಥೆಯನ್ನು binary system- ದ್ವಿಮಾನ ವ್ಯವಸ್ಥೆ ಎನ್ನುತ್ತಾರೆ. ( ಈಗ ನಾವು ನಮಗರಿವಿಲ್ಲದೆ ಉಪಯೋಗಿಸುತ್ತಿರುವ ದಶಮಾನ ಪದ್ಧತಿ-decimal system ಯನ್ನೂ ,…
ವಿಧ: ಬ್ಲಾಗ್ ಬರಹ
September 14, 2006
ಹೋಗುವೆಯಾ ಗೆಳತಿ ಬಾಗಿಲನು ಮುಚ್ಚಿ?
ಬಲವಾದ ಬೀಗವನ್ನು ಹಾಕಿ,
ಎಸಳನ್ನು ತೆಗೆದುಕೊಂದು ಹೋಗಿಬಿಟ್ಟೆಯಾ?
ಕೋಣೆಯಲ್ಲಿ ನನ್ನನ್ನು ದೂಡಿ
ಚಿಂತೆಯಿಲ್ಲ ಬಿದು ಗೆಳತಿ ನಾನೊಬ್ಬನೆ ಇರುವೆ
ಹೊರಗಡೆ ಮಳೆಯು ಸುರಿಯುತ್ತಿದೆ
ಕಿತಕಿಯಲ್ಲಿ ತಂಗಾಳಿ ಬಿಡದೆ ಸುಯ್ಯಲಿಡುತ್ತಿದೆ
ಬೆಚ್ಚನೆಯ ನೀರೊಲೆ ಕರೆಯುತ್ತಿದೆ
ನನ್ನ ಮನದೊಳಗೆ ಮೂಡುವ ಭಾವನೆಗಳು
ಒಲೆಯೊಳಗಿಂದೇಳುತಿರುವ ಜ್ವಾಲೆಗಳು
ಹೊಗೆಯಿಲ್ಲದೆ ಉರಿದುರಿದು ಭಸ್ಮವಾಗುತ್ತಿವೆ
ತಮ್ಮ ಕೆಅಸದಲ್ಲಿ ತಾವು ಮಗ್ನವಾಗಿವೆ
ನಾನು ಬೇರೆಯಲ್ಲ ನನ್ನ ಭಾವನೆಗಳು…
ವಿಧ: ಬ್ಲಾಗ್ ಬರಹ
September 14, 2006
ಕಂಪ್ಯೂಟರ್ ಆಫ್ ಆಗಿರುವಾಗ ಅದು ನಿರ್ಜೀವ ಯಂತ್ರವಷ್ಟೇ . ಇಂಥ ಕಂಪ್ಯೂಟರ್ ನ CPU ಡಬ್ಬಿ ,
, ಪ್ರಿಂಟರ್ , ಮೋಡೆಮ್ , ಕೀಬೋರ್ಡ್ , ಪರದೆ(screen) ಒಳಗೊಂಡ ಮಾನಿಟರ್ ಇತ್ಯಾದಿ ಭೌತಿಕ
ಭಾಗಗಳು ( ಕೈಯಿಂದ ಮುಟ್ಟಬಹುದಾಗಿದ್ದು ) ಹಾರ್ಡ್‍ವೇರ್ ವರ್ಗಕ್ಕೆ ಸೇರುತ್ತವೆ.
ಕಂಪ್ಯೂಟರ್ ನಲ್ಲಿ ಅಳವಡಿಸಿದ ಕಾರ್ಯಕ್ರಮಗಳಿಗೆ ತಂತ್ರಾಂಶ- (software) ಎನ್ನುತ್ತಾರೆ.
ಇದನ್ನು hardware ನಂತೆ ಮುಟ್ಟಿ ತಿಳಿಯಲಾಗದು.
ಕಂಪ್ಯೂಟರ್ ಆನ್ ಆಗುವಾಗ ಅದರಲ್ಲಿ ಅಳವಡಿಸಿದ ತಂತ್ರಾಂಶ ( ಸಾಫ್ಟ್ …
ವಿಧ: ಬ್ಲಾಗ್ ಬರಹ
September 14, 2006
ಕೆಲವು ಆಯ್ದ ಭಾಗಗಳು
(೧೯೧೨ರಲ್ಲಿ ಬಿ.ಎಂ.ಶ್ರೀ. ಅವರು ಮಾಡಿದ ಉಪನ್ಯಾಸದ ಮುಖ್ಯ ಅಂಶಗಳು .
೧. ಕನ್ನಡಕ್ಕೆ ಹೊಸ ಸಾಹಿತ್ಯ ಬೇಕಾಗಿದೆ.
೨. ಪ್ರಾಚೀನ ಸಾಹಿತ್ಯದ ಅಭ್ಯಾಸ ಮಾಡಿ ಭಾಷೆಯ ಹಳೆಯ ಶಬ್ದರಾಶಿಯನ್ನೂ ಪ್ರಯೋಗಗಳನ್ನೂ ಚೆನ್ನಾಗಿ ತಿಳಿದುಕೊಳ್ಳುವುದು ಹೊಸ ಬರವಣಿಗೆಗೆ ಅತ್ಯಂತ ಅವಶ್ಯಕ ಸಿದ್ಧತೆ.
೩. ಅಷ್ಟೇ ಸಾಲದು . ಹೊಸ ಬರವಣಿಗೆ ಬರೆಯುವವನು ಸಂಸ್ಕೃತದ ಪರಿಚಯ ಸಂಪಾದಿಸಿಕೊಳ್ಳಬೇಕು . ಸಂಸ್ಕೃತದ ಸಹಾಯವಿಲ್ಲದೆ ಹೊಸ ಸಾಹಿತ್ಯಕ್ಕೆ ಬೇಕಾದ ಶಬ್ದಸಾಮಗ್ರಿ ಒದಗಲಾರದು.
೪. ಆದರೆ…
ವಿಧ: ಬ್ಲಾಗ್ ಬರಹ
September 13, 2006
1. (೧೨-೯-೨೦೦೬ ರ ಪ್ರಜಾವಾಣಿ ಸುದ್ದಿ)
www.quillpad.in/kannada ನೋಡಿ .
ಕನ್ನಡ ಬರೆಯಲು transliteration ನಿಯಮಗಳನ್ನು ಬಳಸಬೇಕಿಲ್ಲ!
( ಚೆನ್ನಾಗಿದೆ . kannada ಎಂದು ಬರೆದರೆ ಕನ್ನಡ ಎಂದೇ ತಿಳಿಯುವದು
ಕಂಡ , ಕಂದ ಬರೆಯ್ಅಲೂ kanda ಎಂದು ಬರೆದರೆ ಸಾಕು . ಹೇಗೆ ಅಂದಿರಾ ? ನೀವೇ ಪರೀಕ್ಷಿಸಿ ನೋಡಿ . ಸ್ವಲ್ಪ ಸುಧಾರಣೆ ಅಗತ್ಯವೆಂದು ತೋರುತ್ತದೆ . ಉಪಯೋಗಿಸಿ ನೋಡಿ , ನಿಮ್ಮ feedback ಅವರಿಗೆ ತಿಳಿಸಿ . ಸ್ವಲ್ಪ ಸುಧಾರಣೆ ಆದರೆ ಬಹಳ ಅನುಕೂಲವಾಗುವದು
2. ೧೦-೯-೨೦೦೬ ರ…
ವಿಧ: ಬ್ಲಾಗ್ ಬರಹ
September 13, 2006
ಇದೇನು ವಿಚಿತ್ರ ತಲೆಬರಹ ಎಂದಿರಾ? ಇವು ಕೆಳಗೆ ಕೊಟ್ಟಿರುವ 10 ಬಣ್ಣಗಳ ಹೆಸರುಗಳ ಮೊದಲ ಅಕ್ಷರಗಳು. ಆಂಗ್ಲ ಭಾಷೆಯಲ್ಲಿ ಇವನ್ನು BBROYGBVGW ಕರೆಯುತ್ತಾರೆ. Electronics ಓದಿದ್ದವರು ತಕ್ಷಣ ಇದನ್ನು ಗುರುತು ಹಿಡಿಯಬಲ್ಲರು.
ಕಪ್ಪು = Black = 0
ಕಂದು = Brown = 1
ಕೆಂಪು = Red = 2
ಕಿತ್ತಳೆ = Orange = 3
ಹಳದಿ = Yellow = 4
ಹಸಿರು = Green = 5
ನೀಲಿ = Blue = 6
ನೇರಳೆ = Violet = 7
ಬೂದಿ = Gray = 8
ಬಿಳಿ = White = 9
ಇವು [w:Resistor|ರೋಧಕ]ದಲ್ಲಿ ಬಳಸುವ…
ವಿಧ: ಕಾರ್ಯಕ್ರಮ
September 13, 2006
Srigandha Kannada Koota is proud to host the gala music program "GANA
LAHARI" by famous artistes from India namely
Vidhyabhushana Swamiji
Playback Singer Badri Prasad and
Vasantha Shashi
On Sept.24th 2006 at 2 pm in the Hindu Temple of Florida, 5509 Lynn Road, Tampa
Tickets: $15.00 per person
Daasara Padagalu
Classical Music
Light Music
Film Songs
Kolaata (by audience)
Please come and enjoy the…