ಕಂಪ್ಯೂಟರ್ ‍ ಪಾಠ -೨ . - ಕಂಪ್ಯೂಟರ್ ರಚನೆ

ಕಂಪ್ಯೂಟರ್ ‍ ಪಾಠ -೨ . - ಕಂಪ್ಯೂಟರ್ ರಚನೆ

ಯಾವುದೇ ವಸ್ತುವು ಪರಮಾಣು ಮತ್ತು ಅಣುಗಳಿಂದ ಆಗಿರುವಂತೆ ಕಂಪ್ಯೂಟರ್ ಬಿಟ್ ಮತ್ತು ಬೈಟ್‍ಗಳಿಂದ ಆಗಿದೆ . ಬಿಟ್ ಎಂದರೆ binary digit . ಬಿಟ್ ಎನ್ನುವದು ಕಾಂತೀಯ(magnetic)ವಾಗಿ ಅಥವಾ ವಿದ್ಯುದೀಯ(electricic) ವಾಗಿ ಚಾರ್ಜ್ ಅಗಿರುತ್ತದೆ ಅಥವಾ ಆಗಿರುವದಿಲ್ಲ . ಈ ರೀತಿ ೦ ಮತ್ತು ೧ (1) ರಿಂದ ಪ್ರತಿನಿಧಿಸುವ ವ್ಯವಸ್ಥೆಯನ್ನು binary system- ದ್ವಿಮಾನ ವ್ಯವಸ್ಥೆ ಎನ್ನುತ್ತಾರೆ. ( ಈಗ ನಾವು ನಮಗರಿವಿಲ್ಲದೆ ಉಪಯೋಗಿಸುತ್ತಿರುವ ದಶಮಾನ ಪದ್ಧತಿ-decimal system ಯನ್ನೂ , ಚಿಕ್ಕಂದಿನಲ್ಲಿ ಶಾಲೆಯಲ್ಲಿ ಕಲಿತಿರುವ ದ್ವಿಮಾನ ಪದ್ಧತಿ( binary sytem)ಯನ್ನೂ ನೆನಪಿಸಿಕೊಳ್ಳಬಹುದು) .

ಕಂಪ್ಯೂಟರ್ ಅರ್ಥ ಮಾಡಿಕೊಳ್ಳುವದು ಈ 'ಇದೆ' ಅಥವಾ 'ಇಲ್ಲ' ಎಂಬ ಎರಡು ಸ್ಥಿತಿಗಳನ್ನು ಮಾತ್ರ . ತ್ವರಿತ ಕಾರ್ಯನಿರ್ವಹಣೆಗೆ ಅನುವಾಗುವಂತೆ ತಾಂತ್ರಿಕ ಕಾರಣಗಳಿಂದಾಗಿ ಈ ರೀತಿ ಕಂಪ್ಯೂಟರ್ ಅನ್ನು ನಿರ್ಮಿಸಲಾಗಿದೆ . ಹೀಗಾಗಿ ಅದು ಸಂಗ್ರಹಿಸಿ ಸಂಸ್ಕರಿಸಬೇಕಾದ ಎಲ್ಲ ಮಾಹಿತಿಯನ್ನು , ಪಾಲಿಸಬೇಕಾದ ಎಲ್ಲ ಆದೇಶಗಳು ೦ ಮತ್ತು ೧ ರ ರೂಪದಲ್ಲಿರಬೇಕು. ಆ ರೂಪಕ್ಕೆ ಪರಿವರ್ತನೆಗೊಳ್ಳಬೇಕು .

ನಮ್ಮ ಆದೇಶಗಳನ್ನು ಕಂಪ್ಯೂಟರ್ ಅರ್ಥಮಾಡಿಕೊಳ್ಳುವಂತೆ ೦ ಮತ್ತು ೧ ರ ರೂಪದಲ್ಲಿ ಕೊಡುವದು ಬಹಳ ಕಠಿಣ. ನಮ್ಮ ಆದೇಶಗಳು ನಾವು ಅರ್ಥ ಮಾಡಿಕೊಂಡು ಬಳಸುವ ರೂಪದಲ್ಲಿರಬೇಕು . ಇವೇ ಕಂಪ್ಯೂಟರ್ ಭಾಷೆಗಳು - C , COBOL , Assembly language , Basic ಇತ್ಯಾದಿ. ಕಂಪ್ಯೂಟರ್ ನ ಇನ್ನೊಂದು ಕಾರ್ಯಕ್ರಮವು ಕಂಪ್ಯೂಟರ್‍‍ಗೆ ಅರ್ಥವಾಗುವಂತೆ ೦ ಮತ್ತು ೧ ಗಳಿಗೆ ಪರಿವರ್ತಿಸುತ್ತದೆ. ಈ ಕಾರ್ಯಕ್ರಮಕ್ಕೆ compiler ಎನ್ನುತ್ತಾರೆ. ೦ ಮತ್ತು ೧ ಗಳಿರುವ ರೂಪಕ್ಕೆ binary code/ Object Code / Executable ಎಂದೆಲ್ಲ ಹೇಳುತ್ತಾರೆ.
ನಾವು ಬರೆದ ಆದೇಶಗಳುಳ್ಳ ಕಾರ್ಯಕ್ರಮಕ್ಕೆ program / script / Source Code ಎಂದೆಲ್ಲ ಎನ್ನುತ್ತಾರೆ .

ಮುಂದಿನ ಭಾಗದಲ್ಲಿ ಕಂಪ್ಯೂಟರ್ ಭಾಷೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ.

Rating
No votes yet

Comments