ಕಕಂಕೆಂಕಿಹಹನೀನೇಬೂಬಿ
ಇದೇನು ವಿಚಿತ್ರ ತಲೆಬರಹ ಎಂದಿರಾ? ಇವು ಕೆಳಗೆ ಕೊಟ್ಟಿರುವ 10 ಬಣ್ಣಗಳ ಹೆಸರುಗಳ ಮೊದಲ ಅಕ್ಷರಗಳು. ಆಂಗ್ಲ ಭಾಷೆಯಲ್ಲಿ ಇವನ್ನು BBROYGBVGW ಕರೆಯುತ್ತಾರೆ. Electronics ಓದಿದ್ದವರು ತಕ್ಷಣ ಇದನ್ನು ಗುರುತು ಹಿಡಿಯಬಲ್ಲರು.
ಕಪ್ಪು = Black = 0
ಕಂದು = Brown = 1
ಕೆಂಪು = Red = 2
ಕಿತ್ತಳೆ = Orange = 3
ಹಳದಿ = Yellow = 4
ಹಸಿರು = Green = 5
ನೀಲಿ = Blue = 6
ನೇರಳೆ = Violet = 7
ಬೂದಿ = Gray = 8
ಬಿಳಿ = White = 9
ಇವು [w:Resistor|ರೋಧಕ]ದಲ್ಲಿ ಬಳಸುವ ಬಣ್ಣಗಳು. ಇವನ್ನು ರೋಧಕಗಳ ರೋಧಕತೆಯ ಮಟ್ಟವನ್ನು ಗುರುತಿಸಲು ಉಪಯೋಗಿಸುವರು. ಆಂಗ್ಲ ಭಾಷೆಯಲ್ಲಿ ಇವನ್ನು ನೆನಪಿನಲ್ಲಿ ಇಡಲು ಅನೇಕ ಸೂತ್ರಗಳಿವೆ (Mnemonics). ನಾವು ನಮ್ಮ ಕಾಲೇಜಿನ ದಿನಗಳಲ್ಲಿ ಇದನ್ನು ನೆನಪಿಡಲು ಉಪಯೋಗಿಸಿದ ವಾಕ್ಯ "B B ROY of Great Britain has a Very Good Wife". ಹೆಚ್ಚಿನ ಉದಾಹರಣೆಗಳಿಗಾಗಿ [w:Electronic_color_code|ವಿಕಿಪಿಡಿಯ] ನೋಡಿ.
ಆಂಗ್ಲ ಭಾಷೆಯಲ್ಲಿರುವಂತೆಯೇ ಕನ್ನಡದಲ್ಲಿ ಈ ಹತ್ತು ಬಣ್ಣಗಳ ಸರಳ ಸೂತ್ರ ತಯಾರಿಸಲು ಸಾಧ್ಯವೇ? ನೆನಪಿಡಲು ಸಹಾಯಕಾರಿಯಾಗುವ ಅರ್ಥಪೂರ್ಣ ವಾಕ್ಯ ರಚನೆಯೇ ಇದರ ಹಿಂದಿನ ಉದ್ದೇಶ. ಈ ಹುಳ ತಲೆಗೆ ಹೊಕ್ಕ ನಂತರ ಸದಾ ಇದೇ ಧ್ಯಾನ. ಪದಬಂಧ, ಸುಡೊಕು ಎಲ್ಲಕ್ಕಿಂತ ಹೆಚ್ಚು ಬಿಡಿ ಸಮಯವನ್ನು ಇದರಲ್ಲೇ ಕಳೆಯುತ್ತೇನೆ. ನೀವೂ ಸಹ ಪ್ರಯತ್ನಿಸಿ. ಸಿಕ್ಕರೆ ಇಲ್ಲಿ ಹಂಚಿ ಪುಣ್ಯ ಕಟ್ಟಿಕೊಳ್ಳಿ.