ಎಲ್ಲಿ ಎಲ್ಲಿ ತೋರಣ , ಅಲ್ಲಿ ಅಲ್ಲಿ ಹೂರಣ !

ಎಲ್ಲಿ ಎಲ್ಲಿ ತೋರಣ , ಅಲ್ಲಿ ಅಲ್ಲಿ ಹೂರಣ !

ಎಲ್ಲಿ ಎಲ್ಲಿ ತೋರಣ
ಅಲ್ಲಿ ಅಲ್ಲಿ ಹೂರಣ !
ಕರೆದರೂ ಸರಿ , ಬಿಟ್ಟರೂ ಸರಿ ,
ನಡಿ ಅಲ್ಲಿಗೆ ಹೋಗೋಣ !
------------------

ಸಂತೋಷಂ ಜನಯಂತಿ ಪ್ರಾಜ್ಞಃ
ತದೇವ ಈಶ್ವರ ಪೂಜನಂ
( ಬಲ್ಲವರು ಸಂತೋಷವನ್ನುಂಟು ಮಾಡುತ್ತಾರೆ , ಅದುವೇ ಈಶಸೇವೆ)
-------------------

ನೀಚಾ: ಕಲಹಮಿಚ್ಛಂತಿ ,
ಸಂಧಿಮಿಚ್ಛಂತಿ ಸಾಧವಃ
( ನೀಚರು ಕಲಹವನ್ನು ಇಚ್ಛಿಸುತ್ತಾರೆ, ಸಜ್ಜನರು ಸಂಧಿಯನ್ನು ಇಚ್ಛಿಸುತ್ತಾರೆ)

--------------------

ಪಂಜೆ ಮಗೇಶರಾಯರು ಹೇಳಿದ್ದು .
"ನನ್ನ ಅವಸಾನ ಕಾಲದಲ್ಲಿ ಬಾಯಿಂದ 'ಕೃಷ್ಣ' 'ಕೃಷ್ಣ' ಎಂಬ ಮಾತು ಹೊರಡುವಂತೆ 'ಕನ್ನಡ' 'ಕನ್ನಡ' ಎಂಬ ಮಾತೂ ಉಚ್ಚಾರಣೆಯಾಗಲಿ .

-------------------------
ಊಟ ಗೊಡ್ಡು ಸಾರನ್ನವಾದರೂ ಸಂಗೀತ ಭಾವ ಸಂಪನ್ನವಾಗಿರಬೇಕು . ಬಟ್ಟೆ ಹರಕಲಾಗಿದ್ದರೂ ಸರಿ; ಮಲ್ಲಿಗೆಯ ಘಮಲಿದ್ದರೆ ಸಾಕು . ಇದು ರಸಿಕನ ಮತ.

--------------------------
ಸಂತಃ ಸದಾಭಿಗಂತವ್ಯಾ ಯದಿ ನ ಉಪದಿಶ್ಯಂತಿ ಅಪಿ
ಯಾಸ್ತು ಸ್ವೈರಕಥಾಸ್ತೇಷಾಂ ಉಪದೇಶಾ ಭವಂತಿ ತಾ:

ಸತ್ಪುರುಷರಲ್ಲಿಗೆ ಯಾವಾಗಲೂ ಹೋಗುತ್ತಿರಬೇಕಾದ್ದು . ಅವರು ( ಉಪದೇಶವೆಂದು ) ಹೇಳಿ ಉಪದೇಶ ಮಾಡದೇ ಇದ್ದರೂ ಪರವಾಗಿಲ್ಲ . ಅವರು ತಮ್ಮ ಮನಸ್ಸು ಬಂದಂತೆ ಏನು ಮಾತುಕಥೆ ನಡೆಸಿದರೂ ಅದೇ ನಮಗೆ ಉಪದೇಶವಾಗುತ್ತದೆ .
-------------------------

( 'ಹಕ್ಕಿಯ ಪಯಣ' ಡಿ.ವಿ.ಜಿ. ಅವರ ಪುಸ್ತಕದಿಂದ ಕೆಲವು ಮಾತುಗಳು

Rating
No votes yet