ವಿಧ: ಬ್ಲಾಗ್ ಬರಹ
September 01, 2006
ನಾನು ಜನವರಿ ೨೦೦೬ ರ ಹೊತ್ತಿಗೆ ಸಂಪದದಲ್ಲಿ ಸದಸ್ಯನಾದೆ. ಈವರೆಗೆ ಓದಿದ ಒಳ್ಳೆಯ ವಿಷಯಗಳನ್ನು 'ಕೇಳಬಲ್ಲವರಿಂಗೆ ಪೇಳುವೆನು ಸೊಲ್ಲ ' ಎಂಬಂತೆ ಓದುವವರಿಗೆ ತಿಳಿಸೋಣವೆಂದು ಬರೆಯಲಾರಂಭಿಸಿದೆ. ಬರವಣಿಗೆಗೆ ಇಲ್ಲಿ ಪಾಯಿಂಟ್ ನೀಡುವ ವ್ಯವಸ್ಥೆ ಇದೆ. ಬ್ಲಾಗ್ ಗಳಿಗೆ ಕಡಿಮೆ , ಲೇಖನಗಳಿಗೆ ಹೆಚ್ಚು ಎಂತೆಲ್ಲ ಇದೆ. ಹೆಚ್ಚಿನ ಪಾಯಿಂಟ್ ಪಡೆದವರ ಪಟ್ಟಿಯೂ ಲಭ್ಯವಿತ್ತು . ಅದನ್ನೇಕೋ ವ್ಯವಸ್ಥಾಪಕರು ತೆಗೆದು ಹಾಕಿದ್ದಾರೆ ಇರಲಿ. ಅಂದಿನಿಂದ ಈವರೆಗೆ ಆಗಾಗ ಚಿಕ್ಕ ಪುಟ್ಟ ಲೇಖನ , ಅದು-ಇದು…
ವಿಧ: ಬ್ಲಾಗ್ ಬರಹ
September 01, 2006
ಕನ್ನಡ ಸಾಹಿತ್ಯ, ಕವನ, ಲಘು ಬರಹಗಳನ್ನು ಬಿಟ್ಟು ತೋಟಗಾರಿಕೆಯ ಬಗ್ಗೆ ಪ್ರಶ್ನೆ ಕೇಳಿರುವುದಕ್ಕೆ ಕ್ಷಮೆಯಿರಲಿ. ಮನೆಯಲ್ಲಿ ಬೆಳೆಸುವ ಗುಲಾಬಿ ಗಿಡಗಳಿಗೆ ರಾಸಾಯನಿಕ ಕೀಟನಾಶಕಗಳ ಬದಲಾಗಿ ಪರಿಸರದ ಮೇಲೆ ದುಷ್ಪರಿಣಾಮ ಬೀರದ ಯಾವುದಾದರೂ ಕೀಟನಾಶಕಗಳಿದ್ದರೆ ದಯವಿಟ್ಟು ತಿಳಿಸುವಿರಾ?
ವಿಧ: Basic page
September 01, 2006
ಒಬ್ಬ ಶಿಷ್ಯ ಗುರುವಿನ ಬಳಿ ಹೋಗಿ
"ಗುರುಗಳೇ ನನ್ನಿಂದ ಏಕಾಗ್ರತೆಯನ್ನು ಸಾಧಿಸಲಾಗುತ್ತಿಲ್ಲ ; ಧ್ಯಾನ ಮಾಡಲಾಗುತ್ತಿಲ್ಲ ; ಸಾಧನೆ ಮಾಡಲು ನನ್ನಲ್ಲಿ ಯೋಗ್ಯತೆ ಇಲ್ಲವೇನೋ ಅನಿಸುತ್ತಿದೆ. ಬಹಳ ನಿರಾಶೆಯಾಗಿದೆ" ಎಂದು ಹೇಳುತ್ತಾನೆ.
ಆಗ ಗುರು
" ಚಿಂತಿಸಬೇಡ , ಒಮ್ಮೊಮ್ಮೆ ಹಾಗನಿಸುವದುಂಟು , ಅದಕ್ಕೆಲ್ಲ ಗಮನ ಕೊಡಬೇಡ" ಎನ್ನುತ್ತಾನೆ
ಸ್ವಲ್ಪ ದಿನಗಳ ನಂತರ ಶಿಷ್ಯನು ಮತ್ತೆ ಗುರುವಿನ ಬಳಿ ಹೋಗಿ
"ಗುರುಗಳೆ , ನನ್ನ ಧ್ಯಾನ ಯಶಸ್ವಿಯಾಗಿದೆ, ಸಾಧನೆ ಅದ್ಭುತವಾಗಿದೆ, ಜ್ಞಾನ ನನಗೆ ಲಭಿಸಿದೆ…
ವಿಧ: ಬ್ಲಾಗ್ ಬರಹ
September 01, 2006
ಇತ್ತೀಚೆಗೆ ಬೆಂಗಳೂರ್‍ಇಗೆ ಹೋದಾಗ ಸಪ್ನ ಪುಸ್ತಕದಂಗಡಿಗೆ ಹೋಗಿದ್ದೆ . ಅಂಗಡಿ ಮುಚ್ಚಲು ಹತ್ತೇ ನಿಮಿಷಗಳು ಇದ್ದವು . ಅವಸರದಲ್ಲಿ ನಾನು ತೆಗೆದುಕೊಂಡ ಪುಸ್ತಕಗಳಲ್ಲಿ OLN ರವರ ಪುಸ್ತಕ ವೂ ಒಂದು .
ಪುಸ್ತಕದ ಹೆಸರು 'ಲೋಕಾಂತ ಏಕಾಂತ' ( ಅಥ್ವಾ ' ಏಕಾಂತ ಲೋಕಾಂತ' ಇರಬಹುದು . ಆ ಪುಸ್ತಕ ಓದಿ ಊರಲ್ಲಿಯೇ ಬಿಟ್ಟು ಬಂದೆ. ಈಗ ನನ್ನ ಹತ್ತಿರ ಇಲ್ಲ) . ಅದು ಒಳ್ಳೆಯ ಪುಸ್ತಕ .
ಮುದ್ರಣ ಮುದ್ದಾಗಿದೆ. ಪತ್ರಿಕೆಯಲ್ಲಿ ಪ್ರಕಟವದ ಅಂಕಣ ಬರಹಗಳ ಸಂಕಲನ ಇದು. ಅನೇಕ ಹೊಸ ವಿಷಯಗಳು ನನಗೆ…
ವಿಧ: Basic page
August 30, 2006
ಒಂದು ದಿನ ಮಧ್ಯಾಹ್ನ ಊಟ ಮುಗಿಸಿ ಕಿಟಕಿಯಾಚೆ ನೋಡುತ್ತಾ ಕುಳಿತಿದ್ದೆ.
ಸ್ಥಳ: ಮುಂಬೈಯ ದಾದರ್‌ನಲ್ಲಿರುವ ಹಳೆಯ ಕಟ್ಟಡವೊಂದರ ಮೂರನೆಯ ಮಹಡಿ. ಕಿಟಕಿಯಿಂದ ಹೊರಕ್ಕೆ ನೋಡಿದರೆ ಅಹ್ಲಾದ ತರುವಂಥದ್ದೇನೂ ಅಲ್ಲಿರಲಿಲ್ಲ. ಆದರೆ ಒಳ್ಳೆಯ ಗಾಳಿ ಬರುತ್ತಿತ್ತು. ಹಾಗಾಗಿ ಕಿಟಕಿಯಿಂದ ಆಕಾಶ ನೋಡುತ್ತಾ ಕುಳಿತುಕೊಳ್ಳುವುದು ಖುಷಿ ಕೊಡುತ್ತಿತ್ತು.
ಈ ಹೊತ್ತಿನಲ್ಲಿ ಒಂದು ಅಸಾಧಾರಣ ವಿದ್ಯಮಾನ ಘಟಿಸಿತು. ಕಪ್ಪಗಿನ ಸ್ಥೂಲ ದೇಹಿಯೊಬ್ಬ ನನ್ನೆದುರು ನಿಂತಿರುವಂತೆ ಭಾಸವಾಯಿತು. ಆತ ಕಿಟಕಿಯ ಹೊರಗಿದ್ದುದರಿಂದ…
ವಿಧ: Basic page
August 30, 2006
ಸ್ನೇಹಿತರೆ,
ಈ ವಾರಾಂತ್ಯ ಕೆಲವು maintenance ಕೆಲಸಗಳನ್ನು ಹಮ್ಮಿಕೊಂಡಿರುವ ಸಲುವಾಗಿ ಸಂಪದ
ಎರಡು ದಿನಗಳ ಮಟ್ಟಿಗೆ ಲಭ್ಯವಿರುವುದಿಲ್ಲ. ಆದರೆ ಸಂಪದ ಸರ್ವರ್ ನಲ್ಲಿ ಇರುವ ಇತರೆ
ತಾಣಗಳು ಕಾರ್ಯನಿರ್ವಹಿಸುತ್ತಿರುತ್ತವೆ.
ವಿಧ: Basic page
August 29, 2006
ಹಿಂದೀ ಚಿತ್ರರಂಗದ ಮಹಾನ್ ಹಸ್ತಿ, ಶ್ರೇಷ್ಟ ನಿರ್ದೇಶಕ, 'ಹೃಷಿದಾ', ತಮ್ಮ ೮೪ ನೆಯ ವಯಸ್ಸಿನಲ್ಲಿ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ರವಿವಾರ, ೨೭ನೆ ಆಗಸ್ಟ್, ೨೦೦೬ ರಂದು ನಿಧನರಾದರು. ಅವರು ಸುಮಾರು ೩ ತಿಂಗಳಿನಿಂದ ಲೀಲಾವತಿಯಲ್ಲಿ ಚಿಕಿತ್ಸೆ ಪಡೆಯುತ್ತಲೇ ಇದ್ದರು. 'ಡಯಾಲಿಸಿಸ್' ನಿರಂತರವಾಗಿ ಮಾಡಿಸಿಕೊಳ್ಳುತ್ತಲೇ ಇದ್ದರು. ಹೋದವಾರ 'ನ್ಯುಮೋನಿಯ ಜ್ವರ'ದಿಂದ ಅವರ ಆರೋಗ್ಯ ತೀರ ಹದಗೆಟ್ಟಿತ್ತು. ಉಲ್ಬಣಗೊಂಡ ಜ್ವರ, ಈ ಬಾರಿ ಅವರ ಜೀವವನ್ನೇ ಆಹುತಿ ತೆಗೆದುಕೊಂಡಿತು. ಬಾರತೀಯ…
ವಿಧ: ಕಾರ್ಯಕ್ರಮ
August 28, 2006
ಮೈಸೂರಿನ ಒಂಟಿಕೊಪ್ಪಲ್ ೮ನೇ ಕ್ರಾಸಿನಲ್ಲಿ ಕಳೆದ ೪೫ ವರ್ಷಗಳಿಂದ ಗಣಪತಿ ಮಹೋತ್ಸವವನ್ನು ಆಚರಿಸುತ್ತಿದ್ದಾರೆ. ಇದರ ವೈಶಿಷ್ಟ್ಯ ಏನೆಂದರೆ ಕರ್ನಾಟಕ ಶಾಸ್ತ್ರೀಯ ಪದ್ದತಿಯ ಖ್ಯಾತ ನಾಮರೆಲ್ಲಾ ಇಲ್ಲಿ ಬಂದು ಹಾಡಿರುವುದು, ಈಗಲೂ ಬಂದು ಹಾಡುುವುದು. ಇದರ ಬಗ್ಗೆ ಇನ್ನೂ ಮಾಹಿತಿಗಾಗಿ [:http://8thcross.org/] ಜಾಲಪುಟವನ್ನು ತಯಾರಿಸಿದ್ದೇವೆ. ಅದರಲ್ಲಿ ಕಚೇರಿಗಳ ವೇಳಾಪಟ್ಟಿಯನ್ನು ಪಡೆಯಬಹುದು.
ವಿಧ: ಬ್ಲಾಗ್ ಬರಹ
August 28, 2006
ಈ ತಲೆಬರಹದ ಬರಹವು ('ಶೀರ್ಷಿಕೆ'ಗೆ ಬದಲಾಗಿ 'ತಲೆಬರಹ', 'ಲೇಖನ'ದ ಬದಲಾಗಿ 'ಬರಹ' ಬಳಸಿದ್ದೇನೆ- 'ಉಪಯೋಗಿ'ಸಿಲ್ಲ . ಇಂದಿನ ಆಂಡಯ್ಯಗೆ ಧನ್ಯವಾದಗಳು. ಈ 'ತಲೆಬರಹದ ಬರಹ ' ಎಂಬುದು ವಿಚಿತ್ರವಾಗಿ ಕಾಣಿಸುವದು ಅಲ್ಲವೇ ? 'ತಲೆಕಟ್ಟಿನ' ಎನ್ನಬೇಕಿತ್ತೇನೋ . ಇರಲಿ ) ನಿನ್ನೆಯ ಪ್ರಜಾವಾಣಿ (೨೭-೮-೦೬) ನಲ್ಲಿದೆ . ಓದಿ. ಅಲ್ಲಿ ಹೇಳಿರುವದೇನೆಂದರೆ - ಕನ್ನಡಿಗರು ಯಾವತ್ತೂ ದ್ರಾವಿಡರೊಂದಿಗೆ , ದ್ರಾವಿಡ ಭಾಷೆಯೊಂದಿಗೆ ಗುರುತಿಸಿಕೊಂಡಿಲ್ಲ . ಮತ್ತು ಕಾಲ್ಡ್ ವೆಲ್ ಮಹಾಶಯನು ಕನ್ನಡ ತೆಲುಗು…
ವಿಧ: ಬ್ಲಾಗ್ ಬರಹ
August 27, 2006
ಬಸವಣ್ಣನವರ ವಚನ:ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆಅಂಬುಜಕೆ ಭಾನುವಿನ ಉದಯದ ಚಿಂತೆಭ್ರಮರಂಗೆ ಪರಿಮಳದ ಬಂಡುಂಬ ಚಿಂತೆಎನಗೆ ನಮ್ಮ ಕೂಡಲಸಂಗಮದೇವನ ನೆನವುದೆ ಚಿಂತೆ(ಸ. ಸ. ಮಾಳವಾಡ, ಬಸವಣ್ಣನವರ ವಚನ ಸಂಗ್ರಹ, ೧೯೯೬)
ಬಸವಣ್ಣನವರ ಈ ಪ್ರಖ್ಯಾತ ವಚನ ಓದುವಾಗ ಏಳುವ ಕೆಲವು ಸಮಸ್ಯಗಳನ್ನು ಚರ್ಚಿಸುವುದು ಇಲ್ಲಿ ನನ್ನ ಉದ್ದೇಶ. ಚೆ. ಎ. ಕವಲಿಯವರ ಕನ್ನಡ ಕಸ್ತೂರಿ ಕೋಶದ ಪ್ರಕಾರ ಚಕೋರವೆಂದರೆ ಬೆಳದಿಂಗಳನ್ನು ಸೇವಿಸಿ ಬದುಕುವ ಕಲ್ಪಿತ ಪಕ್ಷಿ. ಅಂಬುಜವೆಂದರೆ ಕಮಲ. ಬಂಡು ಎಂದರೆ ಮಧು. ಶೆಲ್ಡನ್…