ಕನ್ನಡ ಬೇಗರಣ ಕಟ್ಟಳೆ ೨ ( 'ಇಸು' ವಿನ ಬಳಕೆಯ ಬಗ್ಗೆ)

ಕನ್ನಡ ಬೇಗರಣ ಕಟ್ಟಳೆ ೨ ( 'ಇಸು' ವಿನ ಬಳಕೆಯ ಬಗ್ಗೆ)

ಕನ್ನಡದಲ್ಲಿ 'ಇಸು' ವಿನ ಬಳಕೆ ಹೀಗಿದೆ, ನನಗೆ ಇದು ಮರೆತು ಹೋಗಿತ್ತು, ಮಹೇಶ್ ಬೋಗಾದಿ ನೆನಪು ಮಾಡಿದರು.

ಮಾಡು - ನಾನು ಮಾಡುವುದು.

ಮಾಡಿಸು - ಎರಡನೆಯವರು ಮಾಡುವಂತೆ ಮಾಡುವುದು.

ಮಾಡಿಸಿಸು - ಎರಡನೆಯವರು ಮೂರನೆಯವರಿಂದ ಮಾಡಿಸುವಂತೆ ಮಾಡುವುದು.

ಇದರಿಂದ ನಮಗೆ ಮೂರು ಹೆಸರುಪದಳು ಸಿಗುತ್ತವೆ. ಮಾಡುವಿಕೆ,ಮಾಡಿಸುವಿಕೆ,ಮಾಡಿಸಿಸುವಿಕೆ.

ಹಾಗೆಯೇ,

ಕೇಳು - ಮೊದಲ ಪುರುಸ ಕೇಳುವುದು. ಮಾದರಿ: ನಾನು ಗುರುಗಳನ್ನು ಕೇಳಿದೆನು

ಕೇಳಿಸು - ಎರಡನೆಯವರು ಕೇಳುವಂತೆ ಮಾಡುವುದು ;ನಾನು ರವಿಯ ಕಡೆಯಿಂದ ಗುರುಗಳನ್ನು ಕೇಳಿಸಿದೆನು

ಕೇಳಿಸಿಸು - ಎರಡನೆಯವರು ಮೂರನೆಯವರಿಂದ ಕೇಳಿಸುವಂತೆ ಮಾಡುವುದು. ;ನಾನು ರವಿಗೆ ಹೇಳಿ, ರಾಮನ ಕಡೆಯಿಂದ ಗುರುಗಳನ್ನು ಕೇಳಿಸಿಸಿದೆನು.

'ಪ್ರಶ್ನೆ' ಈ ಪದವು ಸಕ್ಕದದ 'ಪ್ರಶ್ನಾ' ದಿಂದ ಬಂದದ್ದು. ಇದಕ್ಕೆ ಇಸು ಸೇರಿಸಿ 'ಪ್ರಶ್ನಿಸು' ಮಾಡಿದ್ದೇವೆ.

ಕೇಳು - ಪ್ರಶ್ನೆ ಮಾಡು - ಪ್ರಶ್ನಿಸು

ಕೇಳಿಸು - ಪ್ರಶ್ನಿಸಿಸು.

ಕೇಳಿಸಿಸು - ?

ಕೇಳು ಎಂಬ ಪದವನ್ನು ಬಿಟ್ಟು ನಾವು 'ಪ್ರಶ್ನಿಸು' ಎಂದು ಬಳಕೆ ಮಾಡುತ್ತಾ ಹೋದರೆ, ಕೇಳಿಸಿಸು ಎಂಬ ಪದ ತನ್ನ ತಿಳಿವನ್ನು ಕಳೆದುಕೊಂಡು ಸಾಯುತ್ತದೆ. ಇದರಿಂದ ಸರಳವಾಗಿ ಹೇಳಬಹುದಾದನ್ನು ಕನ್ನಡದಲ್ಲಿ ಹೇಳಲು ಕಟಿಣವಾಗಿ ತೋರತೊಡಗುತ್ತದೆ.ಹೀಗೆಯೇ ಏಸೋ ಪದಗಳು ಕಳೆದೇ ಹೋಗಿವೆ. ಪದಗಳು ಕಳೆಯತೊಡಗಿದರೆ ನುಡಿಯೂ ಕಳೆಯತೊಡಗಿದಂತೆಯೇ.

ಸಕ್ಕದವು ತೇಟ್ ಈಗ ಇಂಗಲೀಸು ಸೇರಿಕೊಳ್ಳುತ್ತಿರುವಂತೆಯೇ ಆಗ ಬರಹದಲ್ಲಿ ಸೇರಿಕೊಂಡಿರುವುದು ತಿಳಿಯುತ್ತದೆ.

ಅಪ್ಪಿಕೊ - ಆಲಿಂಗನ ಮಾಡು - ಆಲಿಂಗಿಸು - ಹಗ್(hug) ಮಾಡು - ಹಗ್ಗಿಸು?

'ಪ್ರಯತ್ನಿಸು' ಎಂಬುದಕ್ಕಿಂತ 'try ಮಾಡು' ಎಂಬುದೇ ಬೇಗರಣಬದ್ದವಾಗಿದೆ. ಇಲ್ಲವೇ ಕನ್ನಡದಲ್ಲಿಯೇ ಹೇಳಬೇಕೆಂದವರು "ಆಗುತ್ತಾದಾ ನೋಡಬೇಕು' ಇಲ್ಲವೇ 'ಗುದ್ದಾಡಬೇಕು' ಹೀಗೆ ಸರಿಯಾಗಿ ಆಡುತ್ತಾರೆ. ಇನ್ನು ಮೇಲಾದರೂ ಕನ್ನಡದಲ್ಲಿ ಸರಿಯಾಗಿ ಬರೆಯುವ ಮನಸ್ಸು ಬರಹಗಾರರಲ್ಲಿ ಮೂಡೀತೆ? ( ಪೇಪರಿನೋರು, ಕಾದಂಬರಿಕಾರರು, ಬಲಾಗಿಗಳು, ಕತೆಗಾರರು, ಟಿ.ವಿ.ಗಳಲ್ಲಿ ಸುದ್ದಿ ಓದುವವರು, ಮತ್ತು ಸರಿಯಾದ ಕನ್ನಡವನ್ನು ಬಳಕೆಗೆ ತರಬೇಕೆಂಬ ಹಂಬಲ ಇರುವವರು, ಸಕಲ ಕನ್ನಡಿಗರನ್ನೂ,ನನ್ನನ್ನೂ ಸೇರಿಸಿಕೊಂಡು). 

Rating
No votes yet

Comments