ಮೆದುಳಿಗೆ ಮೇವು ಇನ್ನಷ್ಟು ಗಾದೆಮಾತುಗಳು
ಬರಹ
ಸನ್ಯಾಸಿಗೆ ತೆಕ್ಕೆಬಿದ್ದರೆ ಮೈಎಲ್ಲ ಬೂದಿ
ಸನ್ಯಾಸಿಯ ಮದುವೆಗೆ ಜುಟ್ಟು-ಜನಿವಾರದಿಂದ ಸಿದ್ಧತೆ.
ಸಗಣಿಯಲ್ಲಿ ಸಾವಿರ ಹುಳ ಇದ್ದರೂ ಸಂಜೆ ಹೊತ್ತಿಗೆ ಮರಣ
ಸಟೆಗಾರನ ಮಾತು ದಿಟವಾದರೂ ನಂಬರು.
ಲಲಾಟದಲ್ಲಿಲ್ಲದ್ದು ಲಾಗ ಹಾಕಿದರೂ ಸಿಕ್ಕದು.
ಮೊದಲು ಹೊಟ್ಟೆಪ್ಪ , ಆಮೇಲೆ ಹೊಟ್ಟೆಪ್ಪ.
ಮುನ್ನೋಡಿ ಉಣ್ಣೋ ಮೂಳ ಎಂದರೆ , ಯಾವ ಹೊಲದ ಜೋಳ ಎಂದನಂತೆ.
ಮೀಸೆ ಬಂದವನಿಗೆ ದೇಶ ಕಾಣದು , ಎದೆ ಬಂದೋಳಿಗೆ ನೆಲ ಕಾಣದು.
ಮನೆ ದೀಪವೆಂದು ಮುದ್ದಿಡಬಹುದೆ?
ಮನೆ ತಿನ್ನೋರಿಗೆ ಕದ - ಹಪ್ಪಳ.
ಮಣ್ಣಿನ ದೇವರಿಗೆ ಮಜ್ಜನದಲ್ಲಿ ಮರಣ.
ಎಣ್ಣೆ ಕಂಡ ಕಡೆ ಮಕ್ಕಳನ್ನು ಹೆತ್ತರು.