ಸಮಯ .

ಸಮಯ .

ಓಡುತಿರುವೆ ಓಡುತಿರುವೆ ಸತತ ಎಲ್ಲಿಗೆ ?
ಕರಗುತಿದೆ ಸವಿಯುತಿದೆ ಬಂಡೆ ಮೆಲ್ಲಗೆ .

ಸೂರ್ಯ ಸೃಷ್ಟಿ ಭುವಿಯ ಸೃಷ್ಟಿ ಪ್ರತ್ಯಕ್ಶ ನೋಡಿದೆ ,
ಜೀವ ಸೃಷ್ಟಿಯಾಗಲು ನೀನು ಬಹಳ ಕಾದಿದೆ .
ಅರಿಯದೆ ಮನುಜ ನಿನಗೆ ಆಪ್ತನಾದನು ,
ಹುಟ್ಟಿದ ದಿನಕೆ ಕ್ಷಣದ ಸುಖಕೆ ಧನ್ಯನಾದನು ;
ಸಾವು - ನೋವು ನರಳಿದಾತ ದೂರವಾದನು ,
ನಿಜವನರಿಯದೇ ಏಕೆ ಹೀಗೆ ದಿಕ್ಕು ಕೆಟ್ಟನು ?

ಲಕ್ಷ ಲಕ್ಷ ಸಂತತಿಗಳು ಬಂದು ಹೋದವು ,
ನಿನ್ನ ಜೊತೆ ನಡೆಯಲಾಗದೆ ಇತಿಹಾಸವಾದವು .
ಕಾಲ ಕಾಲ ನಿನ್ನ ಶಕ್ತಿ ಮುಂದೆ ಇರಿಸಿದೆ ,
ಜಂಭ ತೋರಿದವರ ಕುಂಭ ಸಂಪೂರ್ಣ ನಶಿಸಿದೆ .
ಇದನು ಅರಿತು ಮನುಜ ದಾರಿ ಹಿಡಿದನಾದರೆ ,
ಕಷ್ಟಗಳು ಎರಗೀತು ನಿನ್ನ ಮರೆತುದಾದರೆ .

ಆಯಿತು ಆಟಿಕೆ ನಿನ್ನ ಕೈಯಲಿ ಪ್ರಸಿದ್ಧ " ಹಾಳು " - ಹಂಪಿಯೇ !
ಉನ್ಮತ್ತ ಮನುಜಗೆ ಸ್ವಲ್ಪವು ಕನಿಕರ ತೋರೆಯೇ ?
ದುಃಖ ಕಳೆಸಿ ವಿಶ್ವಾಸ ಬೆಳೆಸಿ ಮುಂದೆ ಸಾಗಿದೆ ,
ಕೈಯ ಹಿಡಿದು ನಡೆಸು ಎಂದು ಕೇಳಬಾರದೆ ?
ಸವೆಸಿ ಸವೆಸಿ ಚೆಂದ ರೂಪು ಕೊಟ್ಟೆ ಕಲ್ಲಿಗೆ ,
ಚಾಚು ಹಸ್ತ ಮುಂದೆ ಮುಂದೆ ಎನಗೆ ಮೆಲ್ಲಗೆ .

ಅತ್ತ - ಇತ್ತ ಜೀವನದಿಯು ಹರಿದು ಸಾಗಿದೆ ,
ಸಾಗರದಿ ನವ್ಕೆಯಾಗಿ ಪಾರುಮಾಡು ಪ್ರಾರ್ಥನೆ ಇಂತಿದೆ -
ತೋರು ದಾರಿ ಆಗಲು ಪರಮಾತ್ಮನಾಪ್ತನು ;
ಓಡುತಿರುವೆ ಓಡುತಿರುವೆ ಸತತ ಎಲ್ಲಿಗೆ ?
ಕರಗುತಿದೆ ಸವಿಯುತಿದೆ ಬಂಡೆ ಮೆಲ್ಲಗೆ .

Rating
No votes yet