ಕನ್ನಡ ಪತ್ರದಲ್ಲಿ ಕನ್ನಡ ಬರೆಯಬೇಕು...ಮರಾಠಿಯಲ್ಲಿ ಸಹಿ ಮಾಡುವದು ಅವಶ್ಯವಿಲ್ಲ ( ಉ.ಕ.ಕ-೧೧)
ಡೆಪ್ಯುಟಿ ಚನ್ನಬಸಪ್ಪನವರ ಸೂಕ್ಷ್ಮ ದೃಷ್ಟಿಯಿಂದ ಯಾವ ಸಣ್ಣ ವಿಷಯವೂ ಮರೆಯಾಗಲಿಲ್ಲ . ಶಾಲಾ ಮಾಸ್ತರರು ಸಹಿ ಮಾಡುವದು , ಪತ್ರ ಬರೆಯುವದು - ಮೊದಲಾದ ಎಲ್ಲ ಅಂಶಗಳನ್ನು ಗಮನಿಸಿ ಪರಿಪತ್ರಗಳ ಮೂಲಕ ಎಚ್ಚರಿಕೆಗಳ ಮೂಲಕ ಅವರಿಗೆ ಶಿಕ್ಷಣವನ್ನಿತ್ತರು.
ಆ ಕಾಲಕ್ಕೆ ಶಾಲಾ ಮಾಸ್ತರರು ವರಿಷ್ಠಾಧಿಕಾರಿಗಳ ಕೂಡ ಪತ್ರ ವ್ಯವಹಾರ ಮಾಡುವಾಗ್ಗೆ ಸಮಗ್ರ ಪತ್ರವನ್ನೆಲ್ಲ ಕನ್ನಡದಲ್ಲಿ ಬರೆದು ಕೊನೆಗೆ 'ಮೋಡಿ'ಯಲ್ಲಿ ಬರೆಯುತ್ತಿದ್ದ ಪರಿಪಾಠವಿತ್ತು. ಚನ್ನಬಸಪ್ಪನವರು ಒಂದು ಪರಿಪತ್ರ ಹೊರಡಿಸಿ ಹೀಗೆ ಆದೇಶವಿತ್ತರು
" ಬೆಳಗಾವಿ ಜಿಲ್ಲೆದೊಳಗಿನ ಯಾವತ್ತೂ ಸ್ಕೂಲ ಮಾಸ್ತರರಿಗೆ ತಿಳುಹಿಸುವದೇನಂದರೆ - ಕೆಲವು ಮಾಸ್ತರರು ಕನ್ನಡ ಪತ್ರಗಳನ್ನು ನಮ್ಮ ಕಡಿಗೆ ಬರದು , ಅವುಗಳಲ್ಲಿ ಕಡಿಗೆ 'ಶಶೈ ಶೃತವಿದ್ಯಯೇಯಯೇ ವಿನಂತಿ (?)' ಅಥವಾ ಹೀಗೆ ಮತ್ತೇನಾದರೂ ಬರೆಯುತ್ತಿರುತ್ತಾರೆ . ಆದರೆ ಈ ವಹಿವಾಟು ಬಂದ ಮಾಡಬೇಕು . ಕನ್ನಡ ಪತ್ರಗಳಲ್ಲಿ ಯಾವತ್ತೂ ಕನ್ನಡ ಬರಿಯಬೇಕು. ಅದೇ ಆರೇ ಪತ್ರಗಳಲ್ಲಿ ಆರೇ ಬರಿಯಬೇಕು .
ಡಿ.ಇ.ಇ. ಜಿಲ್ಲಾ ಬೆಳಗಾಂವಿ
ತಾ|| ೧೨ನೇ ಸಪಟಂಬರ ಸಂನ ೧೮೬೮ ಯಿ|| ಮುಕ್ಕಾಂ ಬೆಳಗಾಂವಿ
ಇನ್ನೊಂದು ಪತ್ರ ಹೀಗಿದೆ
ನೊ. ೭೩೩_೧೮೬೮_೬೯
ಪ್ರಿಯ ಭುಜಂಗರಾವ ,
ಮರಾಠಿಯಲ್ಲಿ ಸಹಿ ಮಾಡುವದು ಅವಶ್ಯವಿಲ್ಲೆಂದು ನಿಮ್ಮ ವಿದ್ಯಾರ್ಥಿಗಳಿಗೆ ತಿಳಿಸಬೇಕು. ಅವರ ಅಂಕಿತವು ಕನ್ನಡದಲ್ಲಿಯೇ ಇರುವದು ಅವಶ್ಯವಿದೆ .
ನಿಮ್ಮ
ಚನಬಸಪ್ಪ ಧಾರವಾಡ
ಡೆ. ಎ. ಇ. ಬೆಳಗಾಂವ.
೨೨-೮-೧೮೬೮
೧೮೭೦ ರ ಇನ್ನೊಂದು ಪತ್ರ ಹೀಗಿದೆ.
ಪ್ರಿಯ ಭುಜಂಗರಾವ ,
ಈಗ ನಮ್ಮ ಶಾಲೆಗಳಲ್ಲಿ ಮರಾಠಿಯನ್ನು ಕಲಿಸುವದು ಅವಶ್ಯವಿಲ್ಲ . ಶಿಕ್ಷಕರ ಯಶಸ್ಸು ಕೇವಲ ಅವರು ಕನ್ನಡವನ್ನು ಹೇಗೆ ಕಲಿಸುವರೆಂಬುದನ್ನು ಅವಲಂಬಿಸಿರುತ್ತದೆ. ಇದನ್ನು ಎಲ್ಲ ವಿದ್ಯಾರ್ಥಿಗಳ ಗಮನಕ್ಕೆ ಸ್ಪಷ್ಟವಾಗಿ ತರಬೇಕು .
ನಿಮ್ಮ
ಚನಬಸಪ್ಪ ಧಾರವಾಡ
ಡೆ. ಎ. ಇ. ಬೆಳಗಾಂವ.
Comments
ಉ: ಕನ್ನಡ ಪತ್ರದಲ್ಲಿ ಕನ್ನಡ ಬರೆಯಬೇಕು...ಮರಾಠಿಯಲ್ಲಿ ಸಹಿ ಮಾಡುವದು ...
In reply to ಉ: ಕನ್ನಡ ಪತ್ರದಲ್ಲಿ ಕನ್ನಡ ಬರೆಯಬೇಕು...ಮರಾಠಿಯಲ್ಲಿ ಸಹಿ ಮಾಡುವದು ... by sm.sathyacharana
ಉ: ಕನ್ನಡ ಪತ್ರದಲ್ಲಿ ಕನ್ನಡ ಬರೆಯಬೇಕು...ಮರಾಠಿಯಲ್ಲಿ ಸಹಿ ಮಾಡುವದು ...