ಎಲ್ಲ ಪುಟಗಳು

ಲೇಖಕರು: anilkumar
ವಿಧ: Basic page
August 02, 2006
ಫಿನ್ನಿಶ್ 'ಸಾನ'ವನ್ನು ಅಲ್ಲಿಗೆ ಹೋಗುವ ಭಾರತೀಯರು ಮಾಡುವುದಿಲ್ಲ. ಮಾಡದಿದ್ದರೆ ನೋಡಲು ಸಿಗುವುದೂ ಇಲ್ಲ. ಬಚ್ಚಲ ಮನೆಯಲ್ಲಿ ದೊಡ್ಡ ಹಗೇವು ಅಥವ ಉದ್ದನೆಯ ಹಂಡೆ ಇರುತ್ತದೆ. ಅದರೊಳಗೆ ಕಲ್ಲು ಗುಂಡುಗಳು. ಇಡೀ ಸಾನದ ಕೋಣೆಗೆ ಹಬೆ ಉಕ್ಕುವುದು ಆ ಅಲ್ಲಾದೀನನ ಮ್ಯಾಜಿಕ್ ಹಂಡೆಯಿಂದ. ಹೊರಗಿನ ಚಳಿಯಿಂದಾಗಿ ಹಬೆ ಬೇಗನೆ ತಣ್ಣಗಾಗ ತೊಡಗುತ್ತದೆ. ಕೋಣೆಯ ಕಾಲು ಭಾಗ ಆಕ್ರಮಿಸಿಕೊಂಡಿರುತ್ತದೆ ಆ ಹಂಡೆ. ಅದರ ಸುತ್ತಲೂ ಮರದ ಚಜ್ಜ ಮತ್ತು ಅದನ್ನು ಹತ್ತಿ ಹೋಗಲು ನಾಲ್ಕಾರು ಮೆಟ್ಟಿಲುಗಳು. ಮರದ ಚಜ್ಜೆಯ…
ಲೇಖಕರು: R M Rao
ವಿಧ: Basic page
August 02, 2006
ನಾಯಿಮರಿ ಲಿನಕ್ಸ್ ಅಥವಾ ಮುದ್ದುಕುನ್ನಿ ಲಿನಕ್ಸ್ಈಗ ವಿಂಡೋಸ್ ತಂತ್ರಾಂಶದಂತೆ ಕ್ಲಿಕ್ ಮಾಡಿ ಉಪಯೋಗಿಸಬಹುದಾದ ಲಿನಕ್ಸ್ ಇದು. ಇದನ್ನು ಅಂತರ್ಜಾಲದಲ್ಲಿ ಉಚಿತವಾಗಿ ಡೌನ್ಲೋಡ್ಮಾಡಬಹುದು. ಇದನ್ನೊಮ್ಮೆ ಸಿ.ಡಿ ಯಲ್ಲಿ ಬರೆದರಾಯಿತು. ಬೇಕಾದಾಗ ಸಿ.ಡಿ ಲೋಡ್ ಮಾಡಿ ನಿಮ್ಮ ಕೆಲಸ ಮಾಡಬಹುದು. ಕೇವಲ ೭೦ ಎಂ.ಬಿ. ಇರುವ ಈ ಲಿನಕ್ಸ ನಲ್ಲಿ ಅಬಿ ವರ್ಡ್, ಅಂತರ್ಜಾಲಸುತ್ತಲು ಬೇಕಾಗುವ ಎಲ್ಲ ಪ್ರೊಗ್ರಾಮ್ ಗಳನ್ನೂ ಹೊಂದಿದೆ. ವಿಂಡೋಸ್-೯೫/೯೮ನ್ನು ಉಪಯೋಗಿಸಿದವರಿಗೆಇದು ಬಹಳ ಸುಲಭ. ಹಳೆಯ ಕಂಪ್ಯುಟರ್…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
August 01, 2006
ಶ್ರೀ ಕೃಷ್ಣಮಾಚಾರ್ ಅವರ ಲೇಖನದ ಮೊದಲನೇ ಭಾಗವನ್ನು ಸುಮಾರು ಜನ ಓದಿದ್ದೀರಿ . ಮುಂದಲ ಭಾಗ ನಿಮಗೆ ಓದಬೇಕೆನಿಸಿದ್ದರೆ ಇಲ್ಲಿದೆ ...... ....ಯಾರೋ ಅಬ್ಬರಿಸಿದಂತಾಯ್ತು . ಹಿಂದೆ ನೋಡಿದೆ. ಓ , ಹೂವಮ್ಮ! ಯಾವನೋ ಎಂಭತ್ತರ ಹರೆಯದ ತರುಣ ತನ್ನ ತೊಡೆಯನ್ನ ಅವಳ ತೋಳಿಗೆ ಉಜ್ಜಿದನಂತೆ. ಘಾಸಿಗೊಂಡ ಹೂವಮ್ಮ ' ಒಸಿ ಇಂದ್ಕೆ ಓಗಲೇ ಓತಿಕ್ಯಾತ ' ಎಂದು ಸುದ್ದಗನ್ನಡದಲ್ಲಿ ಮುತ್ತುದುರಿಸಿದಳು ನೆರೆಯ ಮುದಿ ಹೂವಾಡಗಿತ್ತಿ ದುರದುರನೇ ನೋಡುತ್ತ - 'ಐ , ಅದ್ಯಾಕೆ , ಗಂಡಸ್ರ ಮೈ ತಾಕಾಕಿಲ್ಲ , ಅಂಗ್…
ಲೇಖಕರು: venkatesh
ವಿಧ: Basic page
August 01, 2006
ಬೆಂಗಳೂರಿನ 'ಇನ್ಫೋಸಿಸ್ ಸಂಸ್ಥೆ' ಮೈಸೂರಿನಲ್ಲಿ, ಬೆಳ್ಳಿ ಹಬ್ಬ ಆಚರಿಸುತ್ತಿದೆ. ರಂಗ ಸಜ್ಜಿಕೆ ಎಲ್ಲಾ ವ್ಯವಸ್ಥಿತವಾಗಿದೆ. ಸ್ಥಳ : ಮೈಸೂರಿನ ಇನ್ಫೋಸಿಸ್ ಸಂಸ್ಥೆಯ, ೩೦೦ ಎಕರೆ ವಿಶಾಲ ವಿಶಾಲ ಭವ್ಯಾಂಗಣ ! ಪ್ಲ್ಯಾನಿಂಗ್ ಕಮೀಶನ್ ಉಪ ಅಧ್ಯಕ್ಷ, ಮೋನ್ಟೆಕ್ ಸಿಂಗ್ ಅಹ್ಲು ವಾಲಿಯ, ಕರ್ನಾಟಕದ ಮುಖ್ಯ ಮಂತ್ರಿ, ಕುಮಾರಸ್ವಾಮಿ, ನ್ಯಾಸ್ಡಾಕ್ ಸಿ.ಇ.ಒ, ಗ್ರೆವೀಲ್ಡ್, ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಸಾ.೭-೩೦ ಕ್ಕೆ, ಶ್ರಿ. ನಾರಾಯಣಮೂರ್ತಿ ಯವರು, ಘಂಟೆ ಜಗ್ಗಿ ಬಾರಿಸಿದಾಗ, ನ್ಯೂಯಾರ್ಕ್ ನ…
ಲೇಖಕರು: anilkumar
ವಿಧ: Basic page
July 31, 2006
4 ಸಾಮಿ ಒಬ್ಬ ಪ್ರವಾದಿಯಂತೆ ಕಾಣುತ್ತಿದ್ದ ನನಗೆ. ತಾರು ಬಳಿಯುವ, ಮರ ಕಡಿಯುವ ಯಂತ್ರಗಳನ್ನು ಮಾತನಾಡಿಸಿದ ನಂತರ ಹಸುಗಳ ಫಾರ್ಮ್‌ಗೆ ಕರೆದುಕೊಂಡು ಹೋದ. ಮತ್ತೆ ಸ್ಕ್ರಿಪ್ಟ್ ಪುನರಾವರ್ತನೆಯಾದಂತಾಯ್ತು. ಐವತ್ತು ಹಸುಗಳು, ಒಬ್ಬನೇ ಮೇಲ್ವಿಚಾರಕ ಹಾಗೂ ಪ್ರತಿದಿನ ಆ ಐವತ್ತೂ ಜಾನುವಾರುಗಳ ಹಾಲು ಕರೆವ ಕ್ರಿಯೆ. ಹಸು ಯಂತ್ರೀಕೃತ ಕಟ್ಟೆಯ ಒಳಕ್ಕೆ ಬರುತ್ತದೆ, ಯಂತ್ರದ ಬಟ್ಟಲು ಯಾಂತ್ರಿಕವಾಗಿ ಅದರ ಕೆಚ್ಚಲನ್ನು ಹಿಂಡುತ್ತದೆ, ಹಾಲು ನಿಂತು ರಕ್ತ ಬರುವುದಕ್ಕೆ ಸ್ವಲ್ಪ ಮುಂಚೆಯೇ, ಮನುಷ್ಯರಿಗೆ…
ಲೇಖಕರು: Rohit
ವಿಧ: ಬ್ಲಾಗ್ ಬರಹ
July 31, 2006
ಈ ಮಾಹಿತಿ ತುಣುಕನ್ನು ಸಂಪದದಲ್ಲಿ ಎಲ್ಲಿ ಹಾಕುವುದೆಂದು ತೋಚದೆ, ನನ್ನ ವೈಯುಕ್ತಿಕ ಬ್ಲಾಗ್ ನಲ್ಲಿ ಸೇರಿಸುತ್ತಿದ್ದೇನೆ. ಈಚೆಗೆ, ಅಮೇರಿಕೆಯಲ್ಲಿ ಸಾಫ್ಟ್ ವೇರ್‍ ತಂತ್ರಜ್ಞರಾಗಿರುವ ಸತೀಶ್ ಕುಮಾರ್‍ ರವರು ವೃತಿಪರರಿಗಾಗಿ, ಅದರಲ್ಲೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸಮಾಡುವವರಿಗಾಗಿ ಉಪಯುಕ್ತವಾಗುವಂತಹ ವೃತಿಪರ ಮಾರ್ಗದರ್ಶನದ ಲೇಖನಗಳನ್ನು ದಾರಿ ದೀಪ ಬ್ಲಾಗ್ ತಾಣದಲ್ಲಿ ಪ್ರಕಟಿಸುತ್ತಿದ್ದಾರೆ. ಇನ್ನು ನಾಡಿಗರಲ್ಲೊಂದು ಮನವಿ, ಈ ರೀತಿಯ ಲಿಂಕುಗಳನ್ನು ಇತರರಿಗೆ ತಿಳಿಸುವ,…
ಲೇಖಕರು: shreeharsha4u
ವಿಧ: Basic page
July 31, 2006
ನನಗೆ ಎರಡು ವಿಷಯಗಳ ಬಗ್ಗೆ ಅತೀವ ದುಖಃವಿದೆ. ಮೊದಲನೆಯದು, ನಾನು ಉತ್ತಮ ಹಾಡುಗಾರನಲ್ಲನಾದ್ದರಿಂದ ಕಾಲೇಜಿನಲ್ಲಿ ಹುಡುಗಿಯರಿಂದ "He sings too good ಕಣೇ, so cute na" ಎಂದು ಹೇಳಿಸಿಕೊಳ್ಳಲು ಸಾಧ್ಯವಾಗದೇ ಇದ್ದಿದ್ದು ಮತ್ತು ಎರಡನೆಯದು ನಾನು ಸಸ್ಯಾಹಾರಿಯಾದ್ದರಿಂದ ಜಗತ್ತಿನ ನಾನಾ ಬಗೆಯ ಮಾಂಸಾಹಾರದ ರುಚಿಯನ್ನು ಸವಿಯುವ ಅವಕಾಶವನ್ನ ಕಳೆದುಕೊಂಡಿದ್ದು. ಇದರಲ್ಲಿ ಮೊದಲನೆಯ ವಿಷಯವನ್ನ ಸರಿಪಡಿಸುವುದು "ಸಂಗೀತಾಭ್ಯಾಸ" ಮುಂತಾದ ಕಷ್ಟಪಡಬೇಕಾದ ಮಾರ್ಗವನ್ನ ಒಳಗೊಂಡಿದೆ! "ಕಷ್ಟಪಡಬೇಕಾದ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
July 31, 2006
ಇತ್ತೀಚೆಗೆ ಜಯಂತ ಕಾಯ್ಕಿಣಿಯವರ ' ಶಬ್ದತೀರ' ಪುಸ್ತಕ ಬಂದಿದ್ದು ಅವರ Dots and lines ಜತೆ ಬೆಂಗಳೂರಿನಿಂದ ತರಿಸಿದ್ದೇನೆ. Dots and lines ಅನ್ನು ನನ್ನ ಅನೇಕ ಮಿತ್ರರು ಓದಿ ಸಂತೋಷಪಡುತ್ತಿದ್ದಾರೆ. ಅದರಲ್ಲಿನ ಮುನ್ನುಡಿಯಿಂದ ನನಗೆ ಒಂದು ಲಾಭವಾಯಿತು . ಅವರ ಕಥೆಗಳು ನನಗೆ ಬಹಳ ಸೇರಿವೆ. ಅವರ ಪುಸ್ತಕಗಳನ್ನು ಇನ್ನು ಕೆಲ ಪುಸ್ತಕಗಳ ಜತೆಗೆ ಕೈಗೆಟುಕುವ ಹಾಗೆ ಇಟ್ಟುಕೊಂಡಿರುತ್ತೇನೆ. ಏನಾದರೂ ಬೇಸರವಾಗಿದ್ದರೆ ಅವನ್ನು ತೆಗೆದು ಕೆಲ ಪುಟ ಓದಿದರೂ ಸಾಕು ಮನಸ್ಸು…
ಲೇಖಕರು: rajeshnaik111
ವಿಧ: ಬ್ಲಾಗ್ ಬರಹ
July 30, 2006
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೆಲವರಿದ್ದಾರೆ, ಜೀವನದಲ್ಲಿ ೮೦ ಶೇಕಡದಷ್ಟು ಸಮಯ ತುಳು ಭಾಷೆಯನ್ನು ಮಾತ್ರ ಮಾತನಾಡಿ ಗೊತ್ತಿದ್ದವರು. ಇವರಿಗೆ ಕನ್ನಡದ 'ಳ' ಉಚ್ಛಾರ ಯಾವತ್ತಿಗೂ ಮರೀಚಿಕೆಯೇ. 'ಳ' ಇದ್ದಲ್ಲಿ 'ಲ' ಹಾಕಿಯೇ ಇವರುಗಳು ಮಾತನಾಡುವುದು. ಇದರರ್ಥ ಎಲ್ಲಾ ತುಳುವರಿಗೆ 'ಳ' ಉಚ್ಛಾರ ಬರುದಿಲ್ಲವೆಂದೇನಿಲ್ಲ. ಅತಿ ಕಡಿಮೆ ಕನ್ನಡ ಬಳಸುವವರಲ್ಲಿ ಕನ್ನಡ ಮಾತನಾಡಿದರೆ 'ಳ' ಎಂಬಲ್ಲಿ 'ಲ' ಬಂದು ಮನೋರಂಜನೆ ಗ್ಯಾರಂಟೀಡ್. ಎಂತಹ ವಿಪರ್ಯಾಸ ನೋಡಿ, 'ತುಳು' ಎಂಬ ಶಬ್ದದಲ್ಲೇ 'ಳ'…
ಲೇಖಕರು: Kamalakar
ವಿಧ: ಬ್ಲಾಗ್ ಬರಹ
July 30, 2006
ವಾಸ್ತವ ಎನ್ನುವುದು ಮಾಯೆ ಎಂದು ನಂಬುವುದಿದೆ. ಅದೊಂದು ಆದಿಭೌತಿಕ ನಿಲುವು. ಆದರೆ ಭೌತಿಕ ನೆಲೆಯಲ್ಲೂ ಕೂಡ ಈ ಕುರಿತು ಅದೇ ತರಹದ ನೋಟ ನಾವು ಕಾಣುತ್ತೇವೆ. ಅಂದರೆ, ವಾಸ್ತವವಾಗಿ ವಾಸ್ತವವೆಂದರೆ ಕಥನಗಳ ಮೂಲಕ ನಾವು ಕಟ್ಟಿಕೊಳ್ಳುವ ನಂಬಿಕೆಗಳು ಎಂಬರ್ಥದಲ್ಲಿ. ನಾವು ಕಾಣುವುದೆಲ್ಲ ಇರುವಹಾಗೇ ನಮಗೆ ಅರಿವಿಗೆ ಬರುತ್ತದೆ ಎನ್ನುವುದು ಕಲ್ಪನೆಯೇ ಸರಿ. ಸಮಾಜ ಜೀವಿಗಳಾದ ನಮಗೆ, ಸಾಮಾಜಿಕ ಕಥನಗಳು ಕಟ್ಟಿಕೊಟ್ಟಿರುವ ತಿಳಿವಿನ ಪ್ರಕಾರಗಳ ಹೊರತು ಇನ್ನೇನೂ ಅರಿವಿನ ಸಾಧ್ಯತೆ ಇಲ್ಲ. ಹಾಗಾಗಿಯೇ ಭಾಷೆಯ…