ಎಲ್ಲ ಪುಟಗಳು

ಲೇಖಕರು: venkatesh
ವಿಧ: Basic page
April 04, 2006
ಜೊತೆಗೇ ಬಂದ ಮುದುಕ. (ಶ್ರೀ.ಎಚ್.ಎಸ್.ವಿ ರವರ,'ಎಷ್ಟೊಂದು ಮುಗಿಲು,'ಕವನ ಸಂಗ್ರಹ ದಿಂದ.) 'ಉದ್ಯಾನ,* ದಲ್ಲಿ ಬರುವಾಗ ಬೊಂಬಾಯಿಂದ ನಮ್ಮ ಕಂಪಾರ್ಟ್ ಮೆಂಟಿಗೊಮ್ಮೆಗೇ ನುಗ್ಗಿದರು ಹತ್ತಾರು ಮಂದಿ. ಇದ್ದದ್ದು ಮೂರೇ ಬರ್ತು. ನಮಗೆ ತ್ರುಣವೂ ತಿಳಿಯದಿರುವ ಭಾಷೆಯ ಬಳಸಿ ಬೊಬ್ಬೆಯೋ ಬೊಬ್ಬೆ ! ಕಾದಿರಿಸಿರುವ ಬರ್ತಲ್ಲಿ ಯಾಕೋ ಸುಮ್ಮಗೆ ಕೂತ ವ್ಯಕ್ತಿಯೊಂದಿಗೆ ಏರು ಗಂಟಲಿನ ಕೂಗಟ. ಇನ್ನೇನು ಟ್ರೇನು ಹೊರ- ಟಿತು.ಈಗ ಎಲ್ಲರೂ ನುಗ್ಗಿದರು ಹೊರಗೆ ಮೊದ- ಲಂತೆಯೇ. ಹೊರಟವರು ಮೂರುಜನ. ಬೀಳ್ಕೊಡೆಗೆ…
ಲೇಖಕರು: manjunath32
ವಿಧ: ಬ್ಲಾಗ್ ಬರಹ
April 04, 2006
when i use sampada net the is getting strucked and i cann't see any kannada fonts. i want to know about using sampada, i am getting worried .
ಲೇಖಕರು: ಶ್ರೀನಿಧಿ
ವಿಧ: ಬ್ಲಾಗ್ ಬರಹ
April 02, 2006
"I want only strawberry, no apple" ಎಂದು ಇಲ್ಲಿ ಒಂದು ಮಗು ಅಳುತ್ತಿದ್ದಾಗ ನೆನಪಿಗೆ ಬಂದದ್ದು ನಾನು ತಿಂದ ಹಣ್ಣುಗಳಲ್ಲಿ ಎಂದಿಗೂ ಮರೆಯಲಾಗದಂಥದ್ದು, ಸ್ವಲ್ಪವಾದರೂ ಅಪರೂಪ ಎನ್ನುವವು. ೧೦ ವರ್ಷಗಳ ಹಿಂದೆ ನಾನು ಶಿವಮೊಗ್ಗದಲ್ಲಿದ್ದಾಗ ಪಕ್ಕದ ಮನೆಯಲ್ಲಿ ಅಪರೂಪದ "ರಾಮಫಲ" ಮರ ಇತ್ತು. ನಮಗೆ ದಿನಾ ಎಲ್ಲಾ ಅದರ ಸುತ್ತಲೇ ಆಟ. ರಾಮಫಲದ ಹಣ್ಣಿನ ರುಚಿ ಹೇಗೆ ತಿಳಿಸಲಿ?? ಆಗ ತಿಂದ ರಾಮಫಲ ಶಿವಮೊಗ್ಗ ಬಿಟ್ಟ ಮೇಲೆ ತಿಂದೇ ಇಲ್ಲ. ರಾಮಫಲ ಸೀತಾಫಲಕ್ಕಿಂತ ಸ್ವಲ್ಪ ದೊಡ್ಡದಿರುತ್ತದೆ. ಸ್ವಲ್ಪ…
ಲೇಖಕರು: venkatesh
ವಿಧ: Basic page
April 02, 2006
ಹಳೇ ಗಾದೆಗಳು: ಇದ್ದಿದ್ ಇದ್ದಂಘೇಳಿದ್ರೆ ಎದ್ ಬಂದು ಎದೆಗೊದ್ನಂತೆ. ನಿಜ ಹೇಳೋದ್ ಯಾರಿಗೂ ಹಿತವಾಗೋಲ್ಲ. ಹಿಟ್ಟು ಹಳಸಿತ್ತು, ನಾಯಿ ಕಾದಿತ್ತು. ಪರಿಸ್ಥಿತಿ ತೀರ ಕೆಟ್ಟು ಹೋದ ಮೇಲೆ ಇದೇ ಬೇಕು ಅದೇ ಬೇಕು ಅನ್ನುವಂತಿಲ್ಲ. ಉಪ್ಗಿಂತ ರುಚಿ ಇಲ್ಲ, ತಾಯಿಗಿಂತ ಆಪ್ತರಿಲ್ಲ. ಉಪ್ಪಿಲ್ಲದ ಅಡುಗೆ ತಿಂದೋರ್ಗೇ ಗೊತ್ತು. ತಾಯಿಗಿಂತ ಹಿತವಂತರು ಯಾರು, ಸಾಧ್ಯವೇ ಇಲ್ಲ.! ಕಂಕ್ಳಲ್ಲಿ ಮಗು ಇಟ್ಕೊಂಡು, ಊರೆಲ್ಲ ಹುಡುಕಿದ್ಳಂತೆ. ವಸ್ತು ಕಣ್ಮುಂದಿದ್ದರೂ, ಗಮನ ಎಲ್ಲೋ ಇದೆ. ವೆಂಕಟೇಶ್.
ಲೇಖಕರು: venkatesh
ವಿಧ: Basic page
April 01, 2006
ಹಳೆಯ ಗೆಳೆಯ : ಗೆಳೆತನ ಅಪೂರ್ವ. ಎಳೆಯಂದಿನಿಂದಿಂದಿಗೂ ಒಂದೆ ಥರ. ಹಲವಾರು ವರ್ಷ ಉರುಳಿದಮೇಲೆ ಮುಂಬಯಿಯಲೊಮ್ಮೆಗೇ ಸಿಕ್ಕ ಆ ಹಳೆ ಗೆಳೆಯ ಕೇಳಿದನು: 'ನಾನು ಯಾರೆಂದು ತಿಳಿಯಿತೆ ನಿನಗೆ ?' ಕಣ್ಣಲ್ಲಿ ಕಣ್ಣು. ಹುಡುಕಿಡೆ ಬೆನ್ನ ಹಿಂದುಗಡೆ. ಮರಳ ಹುದುಲಲ್ಲಿ ಬಚ್ಚಿಟ್ಟ ಹೆಜ್ಜೆಗಳನ್ನು ಬಗೆದೆ ಒಂದೊಂದಾಗಿ ಪುಟ ತೆಗೆದು. ಕತೆಗೆ ಕೊನೆ- ಯಿರುವಂತೆಯೇ ಉಂಟು ಒಂದೆ ಗ್ರಂಥದಲ್ಲದರ ಆರಂಭ, ಬೆಳವಣಿಗೆ. ಅಲ್ಲಲ್ಲಿ ನೆನಪಿಗೆಂ- ದಿರಿಸಿ ಮರೆತಿರುವಂಥ ನವಿಲುಗರಿ.ಬಿಡಿಸಿ ನೋ- ಡಿದರೆ ಈವತ್ತಿಗೂ ಜೀವಂತ…
ಲೇಖಕರು: shreekant.mishrikoti
ವಿಧ: Basic page
April 01, 2006
ಹುಟ್ಟಾ ಸತ್ತಿಲ್ಲ , ಸ್ವರ್ಗ ಕಂಡಿಲ್ಲ. ಹಾದಿ ಬಿಟ್ಟವನಿಗೆ ಹದಿನೆಂಟು ಹಾದಿ ಹತ್ತು ಆಡಬಹುದು , ಒಂದು ಬರೆಯಲಾಗದು. ( ಆಡಿದ್ದನ್ನು ಅಲ್ಲಗಳೆಯಬಹುದು , ಬರೆದದ್ದನ್ನು ಅಲ್ಲಗಳೆಯಲಾಗದು) ಹಂಗಿನರಮನೆಗಿಂತ ಇಂಗಡದ ಗುಡಿ ಲೇಸು. ಸೆಟ್ಟರೇ ನಿಮ್ಮ ಮಗ ಬಿದ್ದ ಅಂದರೆ ಫಾಯದೇ ಕಾಣದೆ ಬಿದ್ದಿರಲಾರ ಅಂದರಂತೆ. ಸೌಟು ಬಲ್ಲದೆ ಸಾರಿನ ರುಚಿಯ ? ಸೆಟ್ಟಿ ಸಿಂಗಾರವಾಗುವದರೊಳಗೆ ಪಟ್ಟಣ ಹಾಳಾಯಿತಂತೆ. ಸುಂಕದವನ ಹತ್ತಿರ ಸುಖ ದು:ಖ ಹೇಳಿದರೆ , ಕಂಕುಳಲ್ಲಿ ಇರೋದು ಏನು ಅಂದನಂತೆ. ಸಿಪ್ಪೆ ತಿಂದವ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
April 01, 2006
ಬೆಂಗಳೂರು ( ಚಂದನ) ದೂರದರ್ಶನದಲ್ಲಿ ಆಗಾಗ ಕನ್ನಡ ಹವ್ಯಾಸಿ ನಾಟಕಗಳು ಬರುತ್ತವೆ, 'ಹೂ ಹುಡುಗಿ' ಮತ್ತು 'ಶೋಕಾಂತಿಕ' ನಾನು ಮೆಚ್ಚಿದ ನಾಟಕಗಳು. ಎಷ್ಟು ಬಾರಿಯಾದರೂ ನೋಡಬಹುದು . ಇತರ ವಾಹಿನಿಗಳಲ್ಲಿ ನಾಟಕಗಳನ್ನು ಈವರೆಗೆ ನೋಡಿದಿಲ್ಲ . ಆದರೆ ಈ ಟೀವಿ ಕನ್ನಡ ವಾಹಿನಿಯಲ್ಲಿ ನಾಟಕಗಳ ಕುರಿತು ಕಾರ್ಯಕ್ರಮಗಳು ಶುರುವಾದ ಹಾಗಿವೆ. ಇವತ್ತು ಶನಿವಾರ ಸಂಜೆ ೬ ಗಂಟೆಗೆ ನಾಟಕ ಅಕಾಡೆಮಿಯ ಒಂದು ಕಾರ್ಯಕ್ರಮ ಇದೆ. ಬಹುಶ: ರಂಗ ಗೀತೆಗಳ ಬಗ್ಗೆ ಇರಬಹುದು . ನೋಡಿ . ಇದು ಪುನರ್‍ ಪ್ರಸಾರವಂತೆ .…
ಲೇಖಕರು: venkatesh
ವಿಧ: Basic page
April 01, 2006
ಹಳೇ ಗಾದೆಗಳು : ಕದ ತಿನ್ನೋನ್ಗೆ ಹಪ್ಳ ಈಡೆ ? ಹೊಟ್ಟೆ ಬಾಕನಿಗೆ ಏನು ಕೊಟ್ಟರೂ ಕಡಿಮೆಯೆ. ಹೋದ್ಯ 'ಶನೀಶ್ವರ' ಅಂದ್ರೆ ಬಂದೆ ಗವಾಕ್ಷೀಲಿ, ಅಂದ. ಕಷ್ಟಗಳು ಪದೆ ಪದೆ ಬರುತ್ತವೆ. ಇಳಿವಯಸ್ ನಲ್ಲಿ ಸೂಳೆನೂ ಗರತಿ ಅದ್ಲಂತೆ. ಪರಿಸ್ಥಿತಿ ಒಂದೇಸಮನಾಗಿರಲ್ಲ. ಹೊಳೆನೀರ್ ಮುಟ್ಟಕ್ಕೆ, ಗೊಣೆನಾಯ್ಕನ್ ಅಪ್ಪಣೆಯೇ ? ಪ್ರಕ್ರುತಿಯಲ್ಲಿ ಕಾಣುವ ನದಿ, ತೊರೆಗಳು ಸರ್ವರಿಗೂ ಲಭ್ಯ.
ಲೇಖಕರು: venkatesh
ವಿಧ: Basic page
April 01, 2006
ನಂಬಿಕೆಯೇ ನೆಮ್ಮದಿಗೆ ಮೂಲ, ಬದುಕಿಗೆ ಆಧಾರ. 'ನಂಬಿ ಕೆಟ್ಟವರಿಲ್ಲವೋ ರಂಗಯ್ಯನ, ನಂಬದೆ ಕೆಟ್ಟಾರೆ ಕೆಡಲಿ.' ದಾಸರು ಹೇಳಿರುವಂತೆ ನಾವು ಈ ಗೊಂದಲಮಯ, ಜಗತ್ತಿನಲ್ಲಿ ವಯಸ್ಸಾಗುತ್ತಿದಂತೆ, ದೇಹ, ಮನಸ್ಸು ಪಕ್ವವಾದಂತೆ, ಯಾವುದೋ ಒಂದು 'ಅಗೋಚರ ಶಕ್ತಿ' ಎಲ್ಲ ವಹಿವಾಠುಗಳನ್ನೂ ನಿಯಂತ್ರಿಸುತ್ತಿದೆ ಎಂದು ಅನ್ನಿಸುತ್ತದೆ.ಅದನ್ನು ನಂಬುತ್ತೇವೆ. ಇಹದಲ್ಲೂ, ಪರದಲ್ಲೂ ನಮ್ಮನ್ನು ಕಾಯುವುದು ನಂಬಿಕೆಯೆ. 'ನಾಳೆ ಬೆಳಿಗ್ಯೆ ನಾನು ಏಳ್ತೇನೆ' ಎಂಬುವ ವಿಶ್ವಾಸ, ನಂಬಿಕೆ, ನನಗೆ ಭಯ ತರುವುದಿಲ್ಲ !…
ಲೇಖಕರು: venkatesh
ವಿಧ: Basic page
March 31, 2006
'ವಿಕೆಟ್' ಅಲ್ಲ 'ವಿಟೆಟ್' ! 'ಅಂದ್ರೆ ಏನಿದ್ರರ್ಥ' ? ತಾಳಿ. 'ಕೋಪಮಾಡ್ಕೋಬೇಡಿ'. ಇದನ್ನ ನಾನು ಯಾವರ್ಥದಲ್ಲಿ ಹೇಳ್ತಿದೀನಿ ಅಂದ್ರೆ, ನೆನ್ನೆ, ಟಾಟರವರ, 'ಯೆಲ್ಲೋ ಪೇಜಸ್' ನೋಡ್ತಿದ್ದೆ. ಮುಂಬೈನಲ್ಲಿ ನೋಡುವ ಸ್ಥಳಗಳನ್ನೆಲ್ಲಾ ಕೊಟ್ಟಿದ್ದರು.' ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯೆಮ್,' ಕಟ್ಟಿದ ವ್ಯಕ್ತಿ, 'ಜಾನ್.ವಿಕೆಟ್', ಎಂದಿತ್ತು. ಇದನ್ನು ಓದಿದ ಮೇಲೆ, ಬೇಸರವಾಯ್ತು ನೋಡಿ ! ಅದನ್ನು ನಿರ್ಮಿಸಿದ ಶ್ರೇಷ್ಠ 'ಇನ್ ಡೋ ಸರಿಸಿನಿಕ್ ಶ್ಯಲಿಯ' ಭವ್ಯ 'ಶಿಲ್ಪಿ', 'ಜಾನ್ ವಿಟೆಟ್'. (…