ಎಲ್ಲ ಪುಟಗಳು

ಲೇಖಕರು: hpn
ವಿಧ: Basic page
July 21, 2006
ಇಂದಿನಿಂದ ಸಂಪದ ಕುರಿತು ಚರ್ಚೆಗಾಗಿ [:http://www.sampada.info/cgi-bin/mailman/listinfo|ಹೊಸ ಅಂಚೆಪೆಟ್ಟಿಗೆಗಳು (Mailing lists) ಲಭ್ಯ]. ಸಂಪದವನ್ನು ಪ್ರತಿನಿತ್ಯ ಸಾವಿರಾರು ಓದುಗರಿಗೆ ತಲುಪಿಸುವಲ್ಲಿ, ಮತ್ತಷ್ಟು ಉತ್ತಮಪಡಿಸುವಲ್ಲಿ ಸಾಕಷ್ಟು ಶ್ರಮ ಹಿನ್ನೆಲೆಯಲ್ಲಿ ನಡೆಯುತ್ತ ಬಂದಿದೆ. ಸರ್ವರ್‌ ನಿರ್ವಹಣೆ, ಆಕರದ ಬದಲಾವಣೆಗಳು - ಸಂಪದದೊಂದಿಗೆ ನಡೆದುಕೊಂಡು ಬಂದಿರುವ [:http://learning.sampada.net|ಲರ್ನಿಂಗ್ ಸೆಂಟರ್], [:http://kannada.sf.net|ಕನ್ನಡ…
ಲೇಖಕರು: Anandarao
ವಿಧ: ಬ್ಲಾಗ್ ಬರಹ
July 21, 2006
ನಾನು ಇಂದು ಹೊಸ ಸಧಸ್ಯ ನಾಗಿದ್ದೇನೆ. ನಾನು ಸುಲೇಖ.ಕಾಂ ನಲ್ಲಿ ಆಂಗ್ಲ ದಲ್ಲಿ ಬರಹಗಳನ್ನು ಬರೆಯುತ್ತಿದ್ದೇನೆ. ಕನ್ನಡದ ಬಾಲಭೋದೆ ತುಂಬ ಹಳೇಯ ಚಿಕ್ಕಮಕ್ಕಳ ಕನ್ನಡ ಕಅಯುವ ಪುಸ್ತಕ. ಇದರ ರಚನೆಕಾರರು ಶ್ರೀಮಾನ್. ಚಾ. ವಾಸುದೇವಯ್ಯ ಅವರು. ಸಮಸ್ತ ಕನ್ನಡಿಗರೆಲ್ಲರು ಅವರನ್ನು ಮರೆತ್ತಿದ್ದೇವೆ. ಅವರ ಬಗ್ಗೆ ಹೆಚ್ಚು ತಿಳಿದವರು ನನಗೆ ಬರೆದು ತಿಳಿಸಿ. ಕನ್ನಡದಲ್ಲಿ ತಪ್ಪಿದ್ಡರೆ ಮನ್ನಿಸಿ.  ಆನಂದ ರಾವ್.
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
July 21, 2006
....ಇದಕ್ಕೆ ಕಾರಣಗಳನ್ನು ಶ್ರೀ ದ. ರಾ. ಬೇಂದ್ರೆಯವರು ಹೀಗೆ ಕೊಡುತ್ತಾರೆ . "ಎಷ್ಟೋ ದಿವಸಗಳಿಂದ ರಾಜಾಶ್ರಯವನ್ನು ಕಳೆದುಕೊಂಡು ತೊಳಲುತ್ತಿರುವ ಕರ್ನಾಟಕವು ಇಂಗ್ಲೀಷರ ಆಳ್ವಿಕೆಯಲ್ಲಿ ಭಿನ್ನಭಿನ್ನವಾಗಿರುವದು ಮೊದಲನೆಯದು. ಪೇಶ್ವೆಯರ ಆಳ್ವಿಕೆ ತೀರಿದ ಮೇಲೆ ಆರೇ ಅಮಲದಾರರ ಆಳ್ವಿಕೆಯು ಎರಡನೆಯದು.ರಾಜಾಶ್ರಯ ದೊರೆತ ಮೈಸೂರ ಕನ್ನಡವು ಯಾವುದೋ ಕಾರಣದಿಂದ ನಮ್ಮ ಕೂಡ ಬಳಕೆ ಮಾಡದೇ ಇದ್ದದ್ದು ಮೂರನೆಯ ಕಾರಣ. ಕಾಲಪ್ರತಿಕೂಲತೆಯು ನಾಲ್ಕನೇ ಕಾರಣ. ಮೊದಲನೆಯ ತರಗತಿಯ ಕರ್ತೃತ್ವಶಾಲಿಗಳು…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
July 21, 2006
ಗುಂಡನ ಮದುವೆ ನಿಶ್ಚಯವಾಯಿತು. ತನ್ನ ಹೆಂಡತಿಯ ಹೆಸರನ್ನು ಹೇಗೆ ಬರೆಯಬೇಕು ? ಭಾಗೀರತಿ ಸರಿಯೊ ? ಅಥವಾ ಭಾಗೀರಥಿ ಸರಿಯೊ? ಕನ್ನಡ ಪಂಡಿತರನ್ನು ಕೇಳಿದ . ಅವರು ಹೇಳಿದರು - " ನೋಡಪ್ಪಾ , ನಿನಗೆ ಗ್ರಾಮರ್ ಬೇಕಾದರೆ ಭಾಗೀರಥಿ ಅಂತ ಬರಿ , ಗ್ಲ್ಯಾಮರ್ ಬೇಕಾದರೆ ಭಾಗೀರತಿ ಅಂತ ಬರಿ!"
ಲೇಖಕರು: rajeshnaik111
ವಿಧ: ಬ್ಲಾಗ್ ಬರಹ
July 21, 2006
ಬೆಳಗಾವಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗ ನನಗುಂಟಾದ ಆಡುಭಾಷೆಯ ಪ್ರಾರಂಭಿಕ ತೊಂದರೆಗಳನ್ನು ನೆನೆಸಿಕೊಂಡರೆ ಈಗಲೂ ನಗು ಬರದೇ ಇರದು. ಒಂದೆರಡು, ಆಗ 'ವಿಚಿತ್ರ'ವೆನಿಸಿದ ಶಬ್ದಗಳ ಬಗ್ಗೆ ನಾನು ತಲೆ ಕೆಡಿಸಿಕೊಂಡ ಪರಿಯನ್ನು ಇಂದಿಗೂ ನೆನೆಸಿ ಗೆಳೆಯರು ಜೋಕ್ ಮಾಡುತ್ತಾ ಇರುತ್ತಾರೆ. ಬಾಗಲಕೋಟೆಯ ಅನಿಲ್ ಢಗೆ ನನ್ನ 'ರೂಮ್ ಮೇಟ್' ಆಗಿದ್ದ. ಈ ಮರಾಠ ಹುಡುಗನ ಕನ್ನಡವೇ ವಿಚಿತ್ರವಾಗಿತ್ತು. ಅತ್ತ ಹುಬ್ಬಳ್ಳಿದ್ದೂ ಅಲ್ಲದ, ಇತ್ತ ಬಾಗಲಕೋಟೆಗೂ ಸಲ್ಲದ, ಮಧ್ಯೆ ಬೆಳಗಾವಿಗೂ ಹೊಂದದ ಕನ್ನಡವನ್ನು…
ಲೇಖಕರು: ಭರದ್ವಾಜ
ವಿಧ: ಬ್ಲಾಗ್ ಬರಹ
July 20, 2006
೧) ಸಾವಿನ೦ಚಿನಲಿ ನಿ೦ತಿರುವ ರೋಗಿಯನು ಉಳಿಸುವರುಕಾವ ದೇವರ೦ದದಲಿ ದೇಹವನು ಕಾಪಾಡುವರು.ದೇವರೇ ಅವರುಆವ ಪಾಪದ ಫಲವೋ! ಉಗುರಿನಲಿ ಕಳೆವ೦ಥ ಸಣ್ಣ ಶುಶ್ರೂಷೆ ರಣವಾಗಿ, bill ಗಳೇ 'ಬಾಣ'ವಾಗಿ,ಆಯ್ತು ಜೀವನದ ಕಡೆಯ ಪರಿಷೆ. ೨) ಈ ಮಾತ್ರೆಗಳ ದಿನಕೆ ತಿನ್ನಿರಿ ಮೂರುಬಾರಿ'ಶಕ್ತಿವರ್ಧಕ' ಇದನು ತಿನ್ನಿರಿ ಎರಡು ಬಾರಿಹಾಗೆಯೇ ವಿಟಮಿನ್ನು ಮಿನರಲ್ಲು, ಗ್ಯಾಸು- ರಕ್ತದೊತ್ತಡಕೆಮಧುಮೇಹ,ಹೃದಯಕ್ಕೆ೦ದು ವೈದ್ಯರು ಕೊಟ್ಟ ಮಾತ್ರೆಗಳ--- ನು೦ಗೀರಿ ಜೋಕೆ
ಲೇಖಕರು: ಸಂಗನಗೌಡ
ವಿಧ: ಚರ್ಚೆಯ ವಿಷಯ
July 20, 2006
ಕನ್ನಡಕ್ಕೆ ಡಬ್ಬಿಂಗ್ ಬೇಕೆ? ಬೇಡವೇ? ಈ ಕೊಂಡಿ ಯಲ್ಲಿ ಚರ್ಚೆ ಪ್ರಾರಂಭಿಸಿದ್ದೇನೆ, ನಿಮ್ಮ ಅಭಿಪ್ರಾಯ ನೀಡಿ, ಧನ್ಯವಾದಗಳೊಂದಿಗೆ, ಸಂಗನಗೌಡ.
ಲೇಖಕರು: shreekant.mishrikoti
ವಿಧ: Basic page
July 20, 2006
ಕವಿತೆಗಳನ್ನು ಅರ್ಥೈಸಿಕೊಳ್ಳುವದು ಹೇಗೆ ? ಈ ಬಗ್ಗೆ ಹಿಂದೊಂದು 'ಎಲ್ಲೋ ಹುಟ್ಟಿ ಎಲ್ಲೋ ಬೆಳೆದು' ಸಣ್ಣ ಲೇಖನವನ್ನು ಬರೆದಿದ್ದೆ . ಮೊನ್ನೆ ಸಂಪದದಲ್ಲಿ ಬೇಂದ್ರೆಯವರ 'ಪರಾಗ' ಕವಿತೆಯ ಕುರಿತು ಒಂದು ಒಳ್ಳೆಯ ಲೇಖನ ನೋಡಿದೆ . ಇತ್ತೀಚೆಗೆ ಶ್ರೀ ಎಚ್. ಎಸ್. ವೆಂಕಟೇಶಮೂರ್ತಿಯವರ 'ಮೂವತ್ತು ಮಳೆಗಾಲ' ( ಸಮಗ್ರ ಕಾವ್ಯ ) - ಭಾಗ ಒಂದರಲ್ಲಿ ಈ ಕೆಳಗಿನ ಕವನ ನೋಡಿದೆ. ಕವನ ತುಂಬ ಸರಳವಾಗಿದೆ . ಅದರೆ ಅದು ಕಾವ್ಯವನ್ನು ಅರ್ಥೈಸಿಕೊಳ್ಳುವ ಕುರಿತಾಗಿರುವದರಿಂದ ಕಾವ್ಯಾಸಕ್ತರಿಗೆ…
ಲೇಖಕರು: Rohit
ವಿಧ: ಚರ್ಚೆಯ ವಿಷಯ
July 20, 2006
ಸಂಪದದ ಹೊಸ ಹೊದಿಕೆ ಆಕರ್ಷಕವಾಗಿದೆ. ಹಿಂದಿದ್ದ ಇಂಟರ್‍ಫೇಸ್ ಸೋಬರ ಎನ್ನಿಸುತ್ತಿತ್ತು. ಈಗಿನದ್ದು ಚೆನ್ನಾಗಿ ಕಾಣುತ್ತಿದೆ.
ಲೇಖಕರು: rajeshnaik111
ವಿಧ: Basic page
July 19, 2006
ಉದುಪಿ ಜಿಲ್ಲೆ ನಕ್ಸಲ್ ಪಿಡುಗಿಗೊಳಗಾಗಿರುವ ಜಿಲ್ಲೆಗಳಲ್ಲೊಂದು. ಇದೇ ಕಾರಣವನ್ನು ಮಂದಿಟ್ಟುಕೊಂಡು ಅತ್ತ ಆಗುಂಬೆ ಮತ್ತು ಇತ್ತ ಅಮಾಸೆಬೈಲು ಪ್ರದೇಶಗಳಲ್ಲಿ ಪೊಲೀಸ್ ಇಲಾಖೆಯಿಂದ ಚಾರಣಪ್ರಿಯರಿಗೆ ಕಿರಿಕಿರಿ. ಕುದ್ರೆಮುಖದ ಬದಿಗೆ ತಿರುಗಿದರೆ ಅರಣ್ಯ ಇಲಾಖೆಯಿಂದ ಚಾರಣಕ್ಕೆ ಅನುಮತಿ ಇಲ್ಲ. ಒಟ್ಟಾರೆ ಉಡುಪಿ ಜಿಲ್ಲೆಯ ಚಾರಣಿಗರಿಗೆ ಕೈ ಕಾಲು ಕಟ್ಟಿ ಹಾಕಿದ ಪರಿಸ್ಥಿತಿ. ಆದರೂ 'ಕ್ಯಾಲ್ಕ್ಯುಲೇಟೆಡ್ ರಿಸ್ಕ್' ತಗೊಂಡು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇವರಿಬ್ಬರ ಕಣ್ತಪ್ಪಿಸಿ, ಸ್ಥಳೀಯರ ನೆರವು…