ಸಂಪದದಲ್ಲಿ ಮತ್ತಷ್ಟು ಹೊಸತು

ಸಂಪದದಲ್ಲಿ ಮತ್ತಷ್ಟು ಹೊಸತು

ಬರಹ

ಇಂದಿನಿಂದ ಸಂಪದ ಕುರಿತು ಚರ್ಚೆಗಾಗಿ [:http://www.sampada.info/cgi-bin/mailman/listinfo|ಹೊಸ ಅಂಚೆಪೆಟ್ಟಿಗೆಗಳು (Mailing lists) ಲಭ್ಯ]. ಸಂಪದವನ್ನು ಪ್ರತಿನಿತ್ಯ ಸಾವಿರಾರು ಓದುಗರಿಗೆ ತಲುಪಿಸುವಲ್ಲಿ, ಮತ್ತಷ್ಟು ಉತ್ತಮಪಡಿಸುವಲ್ಲಿ ಸಾಕಷ್ಟು ಶ್ರಮ ಹಿನ್ನೆಲೆಯಲ್ಲಿ ನಡೆಯುತ್ತ ಬಂದಿದೆ.

ಸರ್ವರ್‌ ನಿರ್ವಹಣೆ, ಆಕರದ ಬದಲಾವಣೆಗಳು - ಸಂಪದದೊಂದಿಗೆ ನಡೆದುಕೊಂಡು ಬಂದಿರುವ [:http://learning.sampada.net|ಲರ್ನಿಂಗ್ ಸೆಂಟರ್], [:http://kannada.sf.net|ಕನ್ನಡ ಲೋಕಲೈಸೇಶನ್] ಹಾಗೂ [:http://planet.sampada.net|ಪ್ಲಾನೆಟ್ ಕನ್ನಡಗಳಂತಹ] ತಾಣಗಳು ಹಾಗೂ ಪ್ರಾಜೆಕ್ಟುಗಳ ನಿರ್ವಹಣೆ - ಇವೆಲ್ಲ ನಮ್ಮಲ್ಲಿ ಕೆಲವರು ದಿನನಿತ್ಯದ ಕೆಲಸದ ಮಧ್ಯೆ ಬಿಡುವುಮಾಡಿಕೊಂಡು ನಡೆಸಿಕೊಂಡು ಹೋಗುತ್ತಿರುವ ಕೆಲಸಗಳು. ಇನ್ನು ಮುಂದೆ ಈ ಕೆಲಸಗಳನ್ನು ಉತ್ಸಾಹವಿದ್ದವರೊಂದಿಗೆ ಹಂಚಿಕೊಂಡು ನಿಜವಾದ ಸಮುದಾಯವೊಂದರಂತೆ ಮುಂದುವರೆಯುವ ಕನಸು ಹೊತ್ತು ಹೊಸ ಅಂಚೆಪಟ್ಟಿಗಳನ್ನು ಪ್ರಾರಂಭಿಸಲಾಗಿದೆ.

ಈ ಹಿಂದೆ ಹಲವರು ಸಂಪದದ ಹಿನ್ನೆಲೆಯ ಕೆಲಸಗಳಲ್ಲಿ ಭಾಗವಹಿಸಲು ಆಸಕ್ತಿ ತೋರಿ ನನಗೆ ಪತ್ರ ಬರೆದದ್ದುಂಟು. ದಿನನಿತ್ಯದ ಈ-ಮೇಯ್ಲುಗಳ ರಾಶಿಯಲ್ಲಿ ಓದಿ ಉತ್ತರಿಸಬೇಕೆಂದುಕೊಂಡ ಪತ್ರಗಳು ಹಾಗೆಯೇ ಕರಗಿ ಹೋಗಿ ಕಳೆದುಹೋದವು. ಉತ್ಸಾಹ ತೋರಿದವರು ಅದರಿಂದ ನಿರಾಶರಾಗದೆ ಈ ಅವಕಾಶ ಬಳಸಿಕೊಂಡು ಸಮುದಾಯದೊಂದಿಗೆ ಕೂಡಿ ಪಾಲ್ಗೊಳ್ಳುವರೆಂದು ಆಶಿಸುತ್ತೇನೆ.

ಹೊಸ ಅಂಚೆಪಟ್ಟಿಗಳು ಇಂತಿವೆ:

೧) ಸಂಪದವನ್ನು ಉತ್ತಮಗೊಳಿಸುವ ಸಲಹೆಗಳು ಮತ್ತು [:http://www.sampada.info/cgi-bin/mailman/listinfo/ideas|ಐಡಿಯಗಳನ್ನು ಮುಂದಿಡಲು] [:http://www.sampada.info/cgi-bin/mailman/listinfo/ideas|{Ideas} ಅಂಚೆಪಟ್ಟಿ].

೨) {[:http://www.sampada.info/cgi-bin/mailman/listinfo/sampada-dev|Sampada-dev]} ಅಂಚೆಪೆಟ್ಟಿಗೆ ಸಂಪದ ಬಳಸುವ ತಂತ್ರಾಂಶವನ್ನು ಉತ್ತಮಪಡಿಸುವುದರಲ್ಲಿ ಪಾಲ್ಗೊಳ್ಳಲು ಆಸಕ್ತಿಯುಳ್ಳವರಿಗಾಗಿ.*

೩) ಮುಕ್ತ ತಂತ್ರಾಂಶವನ್ನು ಕನ್ನಡಕ್ಕೆ ಅನುವಾದ ಮಾಡಲು, ಭಾಷಾಂತರ ಮಾಡುವಾಗ ಮುಂದಾಗುವ ಸಮಸ್ಯೆಗಳನ್ನು ಚರ್ಚಿಸಲು {[:http://www.sampada.info/cgi-bin/mailman/listinfo/translators|Translators]} ಅಂಚೆಪಟ್ಟಿ.

ಸಂಪದದ ಸರ್ವರ್‌ನಲ್ಲಿರುವ ಅಂಚೆಪೆಟ್ಟಿಗೆಗಳ [:http://www.sampada.info/cgi-bin/mailman/listinfo|ಸಂಪೂರ್ಣ ಪಟ್ಟಿ ಇಲ್ಲಿದೆ].

* - ತಂತ್ರಾಂಶವನ್ನು ಉತ್ತಮಪಡಿಸುವ ದೆಸೆಯಲ್ಲಿ ನಡೆಯುವ ಕೆಲಸಗಳಿಗೆ ತಂತ್ರಜ್ಞಾನದ ಜ್ಞಾನ ಸಂಪೂರ್ಣವಾಗಿ ಇರಲೇಬೇಕೆಂದೇನಿಲ್ಲ - ಉತ್ಸಾಹವಿದ್ದರಾಯಿತು, ಉಳಿದದ್ದು ಕಲಿಯಲು ಕಷ್ಟವಾಗುವುದಿಲ್ಲ.