ವಿಧ: Basic page
June 28, 2006
(ಸ್ವಲ್ಪ ದೊಡ್ಡದೇ ಆದ ಬರಹ ಇದು. ನಿಮಗೆ ಓದಲು ಹೆಚ್ಚು ಪುರುಸೊತ್ತು ಇಲ್ಲದಿದ್ದರೆ ಕೊನೆಗೆ ಸಾರಾಂಶವನ್ನು ಕೊಟ್ಟಿದ್ದೇನೆ , ಅದನ್ನು ತಪ್ಪದೇ ಓದಿ)
ನೀವು ಅಮೃತವರ್ಷಿಣಿ ಚಲನಚಿತ್ರ ನೋಡಿರಬಹುದು . ಅಲ್ಲಿ ಈ ಪ್ರಸಂಗದ ಉಲ್ಲೇಖ ಇದೆ. ಮೊನ್ನೆ ನಾನು ಸೆಕೆಂಡ್ ಹ್ಯಾಂಡ್ ಪುಸ್ತಕದ ಅಂಗಡಿಯಲ್ಲಿ ಸೇಡಿಯಾಪು ಕೃಷ್ಣಭಟ್ಟರ ಲೇಖನಗಳ ಸಂಗ್ರಹ 'ವಿಚಾರ ಪ್ರಪಂಚ' ಕೊಂಡುಕೊಂಡೆ.
ಅದರಲ್ಲಿ ಭಾನುಮತಿಯ ನೆತ್ತ ಎಂಬ ಲೇಖನದಲ್ಲಿ ಈ ಬಗ್ಗೆ ಇತ್ತು. ಪಂಪಭಾರತದಲ್ಲಿ ಈ ಕುರಿತಾದ ಪದ್ಯ ಭಾಗವಿದೆ .…
ವಿಧ: ಬ್ಲಾಗ್ ಬರಹ
June 28, 2006
ಈಚೆಗೆ ನಾನು ಓದಿದ ಎರಡು ಒಳ್ಳೆಯ ನಗೆಹನಿಗಳು .
೧) ಹರಿಕಥೆಯ ಸಮಯ . ಪ್ರವಚನಕಾರನು ಸೇರಿದ ಜನರಿಗೆ "ಸ್ವರ್ಗಕ್ಕೆ ಹೋಗಲು ಯಾರಿಗೆ ಆಸಕ್ತಿ ಇದೆ ಅವರೆಲ್ಲಾ ಕೈ ಎತ್ತಿ" ಎಂದು ಕೇಳಿಕೊಳ್ಳುತ್ತಾನೆ. ಆಗ ಎಲ್ಲರೂ ಕೈ ಎತ್ತುತ್ತಾರೆ . ಅಲ್ಲಿ ಇದ್ದ ಒಬ್ಬಳೇ ಮುದುಕಿ ಮಾತ್ರ ಮೊದಲು ಕೈ ಎತ್ತಿ ಆಮೇಲೆ ಕೈ ಕೆಳಗಿಳಿಸುತ್ತಾಳೆ.
ಪ್ರವಚನಕಾರ ಅವಳನ್ನು ಕೇಳುತ್ತಾನೆ " ಯಾಕಜ್ಜೀ , ಸ್ವರ್ಗಕ್ಕೆ ಹೋಗಲು ನಿನಗೆ ಆಸೆ ಇಲ್ಲವೇ? "
ಅಜ್ಜಿ ಹೇಳುತ್ತಾಳೆ " ಆಸೆ ಇದೆ ಕಣಪ್ಪ, ಆದರೆ ಇಷ್ಟೆಲ್ಲ ಗಂಡಸರ…
ವಿಧ: ಬ್ಲಾಗ್ ಬರಹ
June 27, 2006
೧) ಯಾರ ಕಣ್ಣಿಗೆ ಖಾರ ಎರಚುವನೊ ಎಲ್ಲೆಲ್ಲಿ ಹೋಗಿಈ vip ಮಹಾನುಭಾವ ತೆಲಗಿ!!ಕಣ್ಮುಚ್ಚಲಾಗದು ಹಾಸಿಗೆಗೆ ಒರಗಿಹಾಳಾಗಿ ಹೋಗಬಾರದೆ ಇವ ಎಲ್ಲದರೂ ತೊಲಗಿ??
೨)ಕೊಟ್ಟನು ವರವನು ಬಲು 'ದಕ್ಷಿಣೆ' ರೂಪದಲಿನೋಟಿನ ಕ೦ತೆಗಳ ನೀಟಾಗಿ ಜೋಡಿಸುತಲಿಗುಟ್ಟನು ಬಿಡದೇ stamp ಇಟ್ಟನು ತಲೆಗೆ,ಜಾಲವ ಹರಡಿದ ತಾನೇ ಬಿದ್ದನು cbi ಬಲೆಗೆ.
೩)ತೆಲಗಿಯೆ ತ೦ದೆಯು, ತೆಲಗಿಯೆ ತಾಯಿಯುತೆಲಗಿಯೆ ದೇವರು ರಾಜಕಾರಣಿಗಳಿಗೆಲ್ಲ....ತೆಲಗಿಯ ಎಡಬಿಡದೆ ಕಾಯುವರು ಅವರೆಲ್ಲಇಲ್ಲದೊಡೆ ತೆಲಗಿ, 'ಎರಡಲಗಿನ ಕತ್ತಿ' ಅವರಿಗೆಲ್ಲ.
೪)…
ವಿಧ: ಚರ್ಚೆಯ ವಿಷಯ
June 27, 2006
ನಮಸ್ಕಾರ ಗೆಳೆಯರೆ, ಬೆಂಗಳೂರಿನ ಖಾಸಗಿ ಎಫ಼್.ಎಮ್. ಒಂದರ ಉದ್ಧತತನವನ್ನು ಗಮನಿಸಿ. ಇವರು ಕನ್ನಡದ ಹಳೆಯ ಮತ್ತು ಈಗಿನ ಕಲಾವಿದರ ಧ್ವನಿಯನ್ನು ತಮ್ಮ ರೇಡಿಯೊ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಾರೆ, ಆದರೆ ಕನ್ನಡದ ಹಾಡುಗಳನ್ನು ಸಂಪೂರ್ಣ ಕಡೆಗಣಿಸಲಾಗಿದೆ. ನನ್ನ ಈ ಬ್ಲಾಗ್ ನೋಡಿ. http://obbakannadiga.blogspot.com.
ವಿಧ: ಬ್ಲಾಗ್ ಬರಹ
June 26, 2006
ಜೂನ್!
ವರ್ಷದಲ್ಲಿ ಇದು ಏಳಕ್ಕೇರದ ಐದಕ್ಕಿಳಿಯದ ಆರನೇ ತಿಂಗಳು. ನನ್ನಂತಹದೇ ಶುದ್ಧ ಮಧ್ಯಮ ವರ್ಗದ ತಿಂಗಳು! ಜೂನ್ ತಿಂಗಳು ಮುಂಗಾರನ್ನೂ ತನ್ನ ಬೆನ್ನಿಗೇ ಅಂಟಿಸಿಕೊಂಡು ಬರುತ್ತದೆ, ಈ ದಿನಗಳಲ್ಲಿ ರೈತರು ಬಿತ್ತುವ ಖುಷಿಯಲ್ಲಿದ್ದರೆ, ಸಹಕಾರಿ ಬ್ಯಾಂಕುಗಳು ಕೃಷಿಕರಿಗೆ ಎಷ್ಟು ಬೆಳೆ ಸಾಲ ನೀಡಿದರೆ ಎಷ್ಟು ಬಡ್ಡಿ ಬರುತ್ತದೆ ಎಂಬ ಲೆಕ್ಕಾಚಾರದಲ್ಲಿರುತ್ತವೆ, ಸಾಲದ ಮೇಲೆ ತೆಗೆದುಕೊಂಡು ಹೋದ ಗೊಬ್ಬರಕ್ಕೆ ಬೆಳೆ ಬಂದ ಮೇಲೆ ರೈತ ದುಡ್ಡು ಕೊಡುತ್ತಾನೋ ಅಥವಾ ಫಸಲು ಬರದೇ ಕೈ ಎತ್ತುತ್ತಾನೋ ಎಂಬ…
ವಿಧ: ಬ್ಲಾಗ್ ಬರಹ
June 26, 2006
ಈ ದೇಶದ ಭವಿಷ್ಯದ ಬಗ್ಗೆ
ನಾವು ಆಶಾವಾದಿಗಳು
ಪರಿಸರದಲಿ ಮಾಲಿನ್ಯದ ಹೊಗೆ ಎದ್ದಿರೆ
ನಾವು ಪವನ ಸುತರು
ವ್ಯವಸ್ಥೆಯಲಿ ಹಣವೇ ಮಾತನಾಡುತಿರೆ
ನಾವು ಪ್ರವಾದಿಗಳು...!
ಈ ನೆಲದ ಸಂಸ್ಕೃತಿ ಪರಂಪರೆಯಲಿ
ನಾವು ಹುಟ್ಟಿ ಬೆಳೆದು ಬಂದವರು
ಬಹುಕಾಲ ಭಾವೈಕ್ಯದಲಿ ಹೊರಗಿನವರೊಂದಿಗೆ
ಹೋರಾಡಿ ಗೆದ್ದವರು; ನಡು ರಾತ್ರಿಲಿ
ನಿದ್ರೆಗೆಟ್ಟರೂ ಸ್ವಾತಂತ್ ತ್ರ ಪಡೆದವರು.
ಹತ್ತಾರು ಯೋಜನೆಗಳ ಕನಸಿ
ನನಸಾಗಿಸಿದರೂ ಹತಾಶರಾದವರು;
ಇಲ್ಲೆ ದಿನವೂ ಇತಿಹಾಸ ರಚಿಸುತ್ತ
ಹಳೆ ಪುರಾಣಗಳ ಕೇಳಿ ಕಲಿಯುತ್ತ
ಕೆಚ್ಚೆದೆಯ…
ವಿಧ: ಬ್ಲಾಗ್ ಬರಹ
June 26, 2006
ಕಾಣುವುದೋ ಎರಡು ಕಣ್ಣುಗಳಲಿ
ಕೇಳುವುದೋ ಎರಡು ಕಿವಿಗಳಲಿ
ಹೌದು, ಇಲ್ಲಿ ಎರಡರಷ್ಟು ಕಂಡು ಕೇಳಿದ್ದೇ
ಯಾವಾಗಲೂ ಒಂದು ನಾಲಿಗೆ ನುಡಿಯೊಳಗಣ ರೀತಿ-ನೀತಿ ಪಾಠ;
ಆದರೆ, ಎತ್ತಲೂ ಹೊರಳುವ ನಾಲಿಗೆಗಳ
ಹಿಂಡಿನಲಿ ಸುಖದ ಕನಸುಗಳೆಲ್ಲ ಜಾರಿ
ಬೀಳುವಾಗ ಯಾವುದೂ ದಿಟವಲ್ಲ
ನೆಲೆ ಇಲ್ಲವೆಂದು ವೈರಾಗ್ಯವೇ....?
ಆಂತರ್ಯಕೆ ಮಣಿಯುವವರೇ
ಆಶ್ವಾಸನೆ ಕೊಟ್ಟು ಕೈಬಿಟ್ಟವರ ಹೆಡೆ ಮುರಿ
ಕಟ್ಟಲು ಹೆಣಗುವವರೇ...
ಹೌದು, ನೀವು ಕಾಣಿರೇ ಹೇಳಿ-
ಹಾಗೇ ನಿಮ್ಮೊಳಗೇ ಹುಡುಕಲಾರಿರಾ ಕೇಳಿ,
ಕಣ್ಣು ಎರಡು ಆದರೂ ನೋಟ ಒಂದೇ…
ವಿಧ: ಬ್ಲಾಗ್ ಬರಹ
June 26, 2006
ಪ್ರತ್ಯೇಕತೆಯ ಪರಮಾವಧಿ: ಕಂಪ್ಯೂಟರ್ ಎದುರು ಅಕ್ಕಪಕ್ಕದಲ್ಲೇ ಕೂತಿದ್ದರೂ ಪರಸ್ಪರ ಸಂಪರ್ಕಕ್ಕೆ ಇ-ಮೇಲ್ ಬಳಸುವುದು.
ಹೇಡಿತನದ ಪರಾಕಾಷ್ಠೆ: ಇಬ್ಬರು ಇ-ಮೇಲ್ ಮೂಲಕವೇ ಜಗಳ ಮಾಡುವುದು.
ಅಸಹಾಯಕತೆಯ ಪರಮಾವಧಿ: ಒಂದು ವಾರವಾದರೂ ಒಂದೇ ಒಂದು ಇ-ಮೇಲ್ ಬಾರದಿರುವುದು.
ಹತಾಶೆಯ ಪರಮಾವಧಿ: ಇ-ಮೇಲ್ ಸರ್ವರ್ ಡೌನ್ (ಸ್ಲೋ) ಆದಾಗ.
ನಿರ್ಲಕ್ಷ್ಯದ ಪರಮಾವಧಿ: ಪ್ರೇಮ ಸಂದೇಶದ ಇ-ಮೇಲ್ ಬರೆದು 'ಸೆಂಡ್ ಆಲ್' ಕ್ಲಿಕ್ ಮಾಡುವುದು.
ಸಾಧನೆಯ ಪರಮಾವಧಿ: ಫ್ರೆಂಡ್‌ಶಿಪ್‌ಗಾಗಿ ಹುಡುಗಿಯೊಬ್ಬಳಿಗೆ ಕಳುಹಿಸಿದ ಇ-…
ವಿಧ: ಬ್ಲಾಗ್ ಬರಹ
June 26, 2006
ಮೊನ್ನೆ ಮೊದಲ ಬಾರಿಗೆ ನನ್ನ ಮತದಾನದ ಗುರುತಿನ ಚೀಟಿ ಮನೆಗೆ ಬಂದಿತ್ತು ! ನನಗೀಗ ಮತದಾನದ ಹಕ್ಕು ಲಭಿಸಿದೆ ಎಂದಾಕ್ಷಣ ಏನೋ ಖುಷಿ , ಅದರ ಜೊತೆಗೆ ಕುತೂಹಲ !
ಖುಷಿ ಯಾಕಂದ್ರೆ ನನ್ನ ಜೀವನದಲ್ಲಿ ಮೊದಲನೇ ಬಾರಿಗೆ ನಾನು ನನ್ನ ಸ್ವೇಚ್ಛೆಯಿಂದ ಇಷ್ಟ ಬಂದವರಿಗೆ (...?) ಮತದಾನ ನೀಡಬಹುದಾಗಿತ್ತು . ಅಪ್ಪ - ಅಮ್ಮನ "permission" ಅಗತ್ಯ ಇರಲಿಲ್ಲ .
ಇನ್ನು ಕುತೂಹಲ - ಹೇಳಬೇಕು ಅಂದ್ರೆ A to Z ಕೂಡ ಗೊತ್ತಿರಲ್ಲಿಲ್ಲ ನನಗೆ ಈ "ಚುನಾವಣೆ" ಬಗ್ಗೆ . ಮತದಾನ ಮಾಡುವುದಕ್ಕೆ ಚುನಾವಣೆಯಾಗಲಿ…
ವಿಧ: ಬ್ಲಾಗ್ ಬರಹ
June 25, 2006
ಬೆಂಗಳೂರಿನಲ್ಲಿ ಮೊಟಾರು ಗಾಡಿ ಓಡಿಸಬೇಕಾದರೆ "ವಾಯು ಮಾಲಿನ್ಯ ಪರೀಕ್ಷಣ ಪ್ರಮಾಣ ಪತ್ರ" ಇರಬೇಕು. ಮೇಲ್ನೋಟಕ್ಕೆ ಇದು ಒಳ್ಳೆಯ ನಿಯಮದಂತೆಯೇ ಕಾಣುತ್ತದೆ. ಆದರೆ ಇದು ಬರಿ ಲಂಚ ಗಿಟ್ಟಿಸಿಕೊಳ್ಳುವುದಕ್ಕೆ ಮಾತ್ರ ಉಪಯೋಗಕ್ಕೆ ಬರುತ್ತೆ ಅಂತ ನನ್ನ ವಾದ. ಕಾರಣಗಳು ಇಂತಿವೆ:
೧. ಒಮ್ಮೆ ಪ್ರಮಾಣ ಪತ್ರ ಮಾಡಿಸಿದರೆ, ಆರು ತಿಂಗಳವರೆಗೆ ಅದು ಸಿಂಧು. ಇನ್ನು ಎರಡೆ ದಿನಗಳನಂತರ ಪೋಲೀಸರು ಕೇಳಿದರೂ ನೂರುರುಪಾಯಿ ದಂಡ. ಇದರಲ್ಲಿ ಅರ್ಥ ಇದೆಯೆ? ಎರಡೇ ದಿನದಲ್ಲಿ, ಗಾಡಿ ಅಷ್ಟು ಹದಗೆಡಲು ಸಾಧ್ಯವೆ? ಇದು…