ಎರಡು ಒಳ್ಳೆಯ ನಗೆಹನಿಗಳು .

ಎರಡು ಒಳ್ಳೆಯ ನಗೆಹನಿಗಳು .

ಈಚೆಗೆ ನಾನು ಓದಿದ ಎರಡು ಒಳ್ಳೆಯ ನಗೆಹನಿಗಳು .

೧) ಹರಿಕಥೆಯ ಸಮಯ . ಪ್ರವಚನಕಾರನು ಸೇರಿದ ಜನರಿಗೆ "ಸ್ವರ್ಗಕ್ಕೆ ಹೋಗಲು ಯಾರಿಗೆ ಆಸಕ್ತಿ ಇದೆ ಅವರೆಲ್ಲಾ ಕೈ ಎತ್ತಿ" ಎಂದು ಕೇಳಿಕೊಳ್ಳುತ್ತಾನೆ. ಆಗ ಎಲ್ಲರೂ ಕೈ ಎತ್ತುತ್ತಾರೆ . ಅಲ್ಲಿ ಇದ್ದ ಒಬ್ಬಳೇ ಮುದುಕಿ ಮಾತ್ರ ಮೊದಲು ಕೈ ಎತ್ತಿ ಆಮೇಲೆ ಕೈ ಕೆಳಗಿಳಿಸುತ್ತಾಳೆ.
ಪ್ರವಚನಕಾರ ಅವಳನ್ನು ಕೇಳುತ್ತಾನೆ " ಯಾಕಜ್ಜೀ , ಸ್ವರ್ಗಕ್ಕೆ ಹೋಗಲು ನಿನಗೆ ಆಸೆ ಇಲ್ಲವೇ? "
ಅಜ್ಜಿ ಹೇಳುತ್ತಾಳೆ " ಆಸೆ ಇದೆ ಕಣಪ್ಪ, ಆದರೆ ಇಷ್ಟೆಲ್ಲ ಗಂಡಸರ ಮಧ್ಯೆ ನಾನೊಬ್ಬಳೇ ಹೆಂಗಸು ಹೇಗೆ ಇರಲಿ?"

೨). ಗಂಡ ಹೆಂಡತಿ ವನವಿಹಾರಕ್ಕೆ ಹೋಗಿರುತ್ತಾರೆ. ಅಲ್ಲಿ ಒಮ್ಮೆಲೇ ಒಂದು ಗೊರಿಲ್ಲಾ ಕಾಣಿಸಿಕೊಂಡು ಹೆಂಡತಿಯ ಮೇಲೆ ಆಕ್ರಮಣ ಮಾಡುತ್ತದೆ . ಅವಳು 'ಕಾಪಾಡಿ ಕಾಪಾಡಿ' ಎಂದು ಕಿರುಚಿಕೊಳುತ್ತಾಳೆ.
ಆಗ ಅವಳ ಗಂಡ " ನನಗೆ ಹೇಳ್ತಾ ಇರ್ತೀಯಲ್ಲ - ನನಗೆ ಸುಸ್ತು , ನಿದ್ದೆ ಬಂದಿದೆ ತಲೆನೋವು ಅಂತೆಲ್ಲ . ಹಾಗೆ ಅದಕ್ಕೂ ಹೇಳು , ಬಿಟ್ಟು ಬಿಡುತ್ತದೆ!" ಅಂತ ಹೇಳಿ ಓಡಿ ಹೋಗುತ್ತಾನೆ .

ಒಳ್ಳೆಯ ನಗೆಹನಿಗಳು . ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು . ಇಲ್ಲಿ ಬರೆದಿದ್ದೇನೆ.

Rating
No votes yet