ಎಲ್ಲ ಪುಟಗಳು

ಲೇಖಕರು: shreeharsha4u
ವಿಧ: Basic page
July 03, 2006
ನಮ್ಮ ಭಾರತದ dogಗಳ ಅದರಲ್ಲೂ ಕನ್ನಡದ ಕುನ್ನಿಗಳ speciality ಏನೆಂದರೆ ಅವುಗಳಿಗೆ ಯಾವುದೇ ಭಾರತೀಯ ಭಾಷೆಯನ್ನೂ ಮಾತನಾಡಲು ಬರುವುದಿಲ್ಲ. ಬೇಕಾದರೆ ನೀವೇ ಪರೀಕ್ಷಿಸಿ. ಈ ನಮ್ಮ dogಗಳು ಬೆಳಿಗ್ಗೆ ಆರು ಗಂಟೆಗೆ ಎದ್ದು garden city(?) ಬೆಂಗಳೂರಿನಲ್ಲಿ "walking" ಎನ್ನುವ ಹೆಸರಿಗೆ ಅವಮಾನ ಮಾಡುವಂತೆ ತೆವಳಿಕೊಂಡು ಸಾಗುವ ೪೦ ಇಂಚು ಸುತ್ತಳತೆಯ ಹೊಟ್ಟೆಯ ಯಜಮಾನನನ್ನು ದರದರನೆ ಎಳೆದುಕೊಂಡು ಹೋಗುತ್ತಿರುತ್ತವೆ. ಇಂಗ್ಲಿಷ್‌ನಲ್ಲಿ "estop" ಎಂದರೆ ಮಾತ್ರ ಬ್ರೇಕ್‌ ಹಾಕುವ ಇವು ಕನ್ನಡದಲ್ಲಿ…
ಲೇಖಕರು: suchara
ವಿಧ: ಬ್ಲಾಗ್ ಬರಹ
July 03, 2006
ನಾನು ಕಳೆದವಾರದಲ್ಲಿ ಮೂರು ದಿನಗಳವರೆಗೆ ಒಂದು ತರಹ ಗಾಂಧಿ ತತ್ವ ಪಾಲಿಸಿದೆ. ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ನೋಡಬೇಡ ಹಾಗೂ ಕೆಟ್ಟದ್ದನ್ನು ಹೇಳಬೇಡ - ಎಂಬುದನ್ನು ತೋರಿಸಿಕೊಡುವ ಮೂರು ಕೋತಿಗಳ ಚಿತ್ರ ನಿಮಗೆಲ್ಲ ಚಿರಪರಿಚಿತ. ಈಗ ನನ್ನ ಕಥೆ ಕೇಳಿ. ನಾನು ವಿದೇಶಕ್ಕೆ ಹೊರಟಿರುವುದರಿಂದ ಸಂಪೂರ್ಣವಾಗಿ ದೈಹಿಕ ಪರೀಕ್ಷೆ ಮಾಡಿಸ ಬೇಕೆಂದು ನಿರ್ಧರಿಸಿದೆ. ಇತರ ಪರೀಕ್ಷೆಗಳೆಲ್ಲ ಆದಮೇಲೆ ನನ್ನ ಗಮನ ಕಣ್ಣು ಕಿವಿ ಬಾಯಿಗಳ ಮೇಲೆ ಹರಿಯಿತು. ಸರಿ, ನನ್ನ ಜೀವನದಲ್ಲಿ ಪ್ರಥಮಬಾರಿಗೆ…
ಲೇಖಕರು: Manasina maatu
ವಿಧ: ಚರ್ಚೆಯ ವಿಷಯ
July 02, 2006
ಗೆಳೆಯರೇ, ಒಂದು ಭಾಷೆ ಸಮ್ರುಧ್ಧವಾಗಬೇಕಾದರೆ, ಜಗತ್ತಿನ ಸರ್ವ ವಿಷಯಗಳನ್ನು ಅದು ತನ್ನೊಳಗೆ ಅಡಗಿಸಿಕೊಳ್ಳಬೇಕು. ಆದರೆ ಕನ್ನಡ ಚಿತ್ರರಂಗದವರ ಸ್ವಾರ್ಥ ಮತ್ತು ಆತ್ಮವಿಶ್ವಾಸದ ಕೊರತೆಯಿಂದಾಗಿ ಕನ್ನಡ ಭಾಷೆಯೇ ಬಡವಾಗಿದೆ. ಶ್ರವಣ ಮತ್ತು ದ್ರುಶ್ಯ ಮಾಧ್ಯಮವು ಅಕ್ಷರ ಮಾಧ್ಯಮಕ್ಕಿಂತ ಪ್ರಭಾವಶಾಲಿಯಾಗಿದೆ. ಇದು ಎಲ್ಲರಿಗೂ ತಿಳಿದ ವಿಷಯ. ಈಗ ಕನ್ನಡವನ್ನು ಕಾಪಾಡಬೇಕಾಗಿರುವುದು, ಹೊರಗಿನವರಿಂದಲ್ಲ ಕನ್ನಡ ಚಿತ್ರರಂಗದವರಿಂದ. ಹೌದು. ನಾನು ಹೇಳುತ್ತಿರುವುದು ಕರ್ನಾಟಕದಲ್ಲಿ ಡಬ್ಬಿಂಗ ಚಿತ್ರಗಳನ್ನು…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
July 02, 2006
ಇದು ನಾನು ಇತ್ತೀಚೆಗೆ ಓದಿದ, ಸೇಡಿಯಾಪು ಕೃಷ್ಣಭಟ್ಟರು ಬರೆದ ಒಂದು ಲೇಖನದ ಸಂಗ್ರಹ . ಸಾಹಿತ್ಯ ಎಂದರೆ ಗ್ರಂಥ ಸಮುದಾಯ. ಗ್ರಂಥಗಳ ಅಧ್ಯಯನ ಮತ್ತು ಪಠನಗಳಿಂದ ಮನೋರಂಜನೆ ಮತ್ತು ಮನಃಸಂಸ್ಕಾರ ಆಗುತ್ತದೆ. ಸಂಸ್ಕಾರದ ಪರಿಣಾಮವೇ ಸಂಸ್ಕೃತಿ. ಹೀಗಾಗಿ ಸಾಹಿತ್ಯ ಎನ್ನುವದು ಸಂಸ್ಕೃತಿಯ ಸಾಧನ. ಯಾವ ಬರವಣಿಗೆ ಸಂಸ್ಕೃತಿಯನ್ನು ಪೋಷಿಸುವದಿಲ್ಲವೋ ಅದು 'ಸಾಹಿತ್ಯ' ಎನ್ನಿಸಿಕೊಳ್ಳುವದಕ್ಕೆ ಅರ್ಹವಲ್ಲವೆಂಬ ಮಾನದಂಡವು ಇದರಿಂದಾಗಿ ಲಭಿಸುತ್ತದೆ. ಸಂಸ್ಕಾರ್‍ಅವೆಂದರೆ ಅಶುದ್ಧವಾದದ್ದನ್ನು…
ಲೇಖಕರು: gvmt
ವಿಧ: ಬ್ಲಾಗ್ ಬರಹ
July 01, 2006
ನಿಮ್ಮಲ್ಲಿ ಹಲವರಿಗೆ ಇದು ಹಳಸಲು ಸುದ್ದಿಯೇನೊ ಆದರೆ ನನಗೆ ಇತ್ತೀಚಿಗೆ ತಿಳಿಯಿತು, ಇಸ್ರೋದವರು ಭಾರತಕ್ಕೆಂದೆ ಪ್ರತ್ಯೇಕವಾದ, ೮ ಉಪಗ್ರಹಗಳುಳ್ಳ ಜಿ.ಪಿ.ಎಸ್ ವ್ಯವಸ್ಥೆಯನ್ನು ನಿರ್ಮಿಸುವ ಯೋಜನೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ; ಅಂದಾಜು ವೆಚ್ಚ ೨೦೦೦ ಕೋಟಿ ರೂ. ಅಮೇರಿಕೆಯ ಜಿ.ಪಿ.ಎಸ್ ವ್ಯವಸ್ಥೆ ಭದ್ರವಾಗಿ ತಳವೂರಿದೆ; ಒಂದು ಕಾಲದಲ್ಲಿ ಅಮೇರಿಕೆಯ ಸೇನೆಯವರಿಗೆ ಮಾತ್ರ ಕೊಡಲಾಗುತ್ತಿದ್ದ ಕರಾರುವಾಕ್ಕಾದ ಮಾಹಿತಿಯನ್ನು ಎಲ್ಲರಿಗೂ ಕೊಡುವಂತೆ ಕ್ಲಿಂಟನ್ ಸರ್ಕಾರದವರು ಏರ್ಪಡಿಸಿಯಾಗಿದೆ…
ಲೇಖಕರು: ahoratra
ವಿಧ: Basic page
June 30, 2006
ಆರು ವೈರಿಗಳು. ಕಾಮ ಕ್ರೋಧ ಲೋಭಗಳುಮೊದಲ ಮೂರು ವೈರಿಗಳುಇದನು ಗೆದ್ದ ನಂತರಮೋಹ ಮದ ಮತ್ಸರ ಆಶೆಯೆಂಬ ಬೀಜವುಕಾಮಗಿಡದ ಮೂಲವುಗಿಡದ ನಾಶಕಿಂತಲೂಮೂಲನಾಶ ಶ್ರೇಷ್ಠವು ಕಾಮ ಪಲಿಸದಾಗ ಬರುವವೈರಿಯೇ ಕ್ರೋಧವುಕ್ರೋಧವೂ ನಡೆಯದಾಗಲೋಭ ಪ್ರ-ವೇಶವು. ಆಶೆ ಕೊಂದ ವ್ಯಕ್ತಿಗೇಭಕ್ತಿ ಕೊಡುವ ಶಕ್ತಿಯಿಂದಕಾಮ ಕ್ರೋಧ ಲೋಭವೆಂಬಶತೃ ನಾಶ ಸುಲಭವು ನಾಲ್ಕನೆಯ ಶತೃವುಮಾಯಾಮೋಹಪಾಶವುಮೋಹ ನಾಶ ಶಸ್ತ್ರಗಳುಸ್ನೇಹ ಪ್ರೇಮ ಕರುಣೆಗಳು ಕಂಸ ಜರಾಸಂಧರುಮದಕೆ ದಾಸರಾದರುಮಾಧವನಾ ದೆಸೆಯಿಂದಜೀವ ಕಳೆದುಕೊಂಡರು ಕೊನೆಯ ವೈರಿ…
ಲೇಖಕರು: ritershivaram
ವಿಧ: ಬ್ಲಾಗ್ ಬರಹ
June 30, 2006
ನಾನು ಹದಿನೇಳು ವರ್ಷಗಳೆ ನನ್ನ ಹೆಂಡತಿ ಮಕ್ಕಳೊಂದಿಗೆ ವಠಾರದ ಒಂದು ಬಾಡಿಗೆ ಮನೆಯಲ್ಲಿದ್ದೆ. ಆ ಮನೆ ವಾಸ್ತು ಪ್ರಕಾರ ಬಹಳ ದೋಷದಿಂದ ಕೂಡಿತ್ತು. ನೈರುತ್ಯಕ್ಕೆ ಮುಂಬಾಗಿಲು, ಈಶಾನ್ಯದಲ್ಲಿ ಕಕ್ಕಸು, ಆಡಿಗೆ ಮಾಡುತ್ತಿದ್ದುದು ದಕ್ಷಿಣಾಭಿಮುಖವಾಗಿ. ಹೀಗೆ ಹೇಳುತ್ತಾ ಹೋದರೆ ಇನ್ನೂ ಇದೆ. ಇಲ್ಲೇ ನನ್ನ ಮಕ್ಕಳು ಹುಟ್ಟಿ ಬೆಳೆದರು. ಎಲ್ಲ ಸಾಮಾನ್ಯರಂತೆ ನಮ್ಮ ಕುಟುಂಬವೂ ಕಾಯಿಲೆ ಕಸಾಲೆ, ಆರ್ಧಿಕ ಮುಗ್ಗಟ್ಟು ಇದನ್ನೆಲ್ಲ ಎದುರಿಸಿದರೂ ನಾನೆಂದೂ ವಾಸ್ತು ಬಗ್ಗೆ ತಲೆ ಕೆಡಿಸಿಕೊಂಡವನಲ್ಲ. ಕಡೆಗೂ…
ವಿಧ: Basic page
June 29, 2006
ಅಂತರಾಳದಿ ನಾ ಕರೆದೆ ಬಾನಿನ್ನಂತೆ ನನ್ನನ್ನು ನೀ ಮಾಡ ಬಾನಿನ್ನಯ ಶುದ್ಧ ಹೃದಯವ ನೀಡು ಬಾನಿನ್ನಯ ಸಧ್ಗುಣಗಳ ಕಲಿಸಲು ಬಾನಿನ್ನ ಹಾಗೆ ನಾ ಬಾಳಲು ತೋರು ಬಾ ಹಗಲಿರುಳು ದುಡಿಯಲು ನೆಮ್ಮಧಿಯ ತೋರಿದೆಕಣ್ಣಿಗೆ ಕಾಣುವಷ್ಟು ಐಶ್ವರ್ಯ ತೋರಿಸಿದೆಸುಖ ಸಂತೋಷದಿ ಬಾಳಲು ಮನೆಮಕ್ಕಳ ತೋರಿದೆಆಧರೆ ಪೂಜೆಗೆಂದು ನಾ ಬಂದರೆ ನಿನ್ನ ನಾ ಕಾಣದೆಮನನೊಂದು ನಿಜವ ತಿಳಿದಿರುವೆ ಮನದಾಳದಿ ನಾ ಬೇಡುವೆ ನಿನ್ನ ಧರ್ಶನ ತೋರು ಬಾನಿನ್ನಂತೆ ನನ್ನನ್ನು ನೀ ಮಾಡ ಬಾ ಸುಗುಣ ಪುಜಾರಿ
ವಿಧ: ಬ್ಲಾಗ್ ಬರಹ
June 29, 2006
ನನ್ನ ಅಪ್ಪ ಹಸಿರು ಹಸಿರು ಹಸಿರುಹಸಿರೊಂದಿಗೆ ಒಂದಾಗುತ್ತಿವೆ ನನ್ನ ಉಸಿರುದುಃಖದಿ ಬಂದು ಕುಳಿತಿರುವೆಕಂಬನಿಯ ಕಣ್ಣಲಿ ತಂದಿರುವೆಕನಸುಗಳ ಸಾಲನು ಕಟ್ಟಿರುವೆಜನ್ಮ ಕೊಟ್ಟ ತಂದೆಯುಜೊತೆ ಇಲ್ಲದೆ ಹೋದರಲ್ಲಪ್ರೀತಿಯ ತೋರಿಸಿನಾ ಪ್ರೀತಿಸಲು ಇಲ್ಲವಲ್ಲವಿದ್ಯೆಯು ಕೊಟ್ಟುನಾ ಕಲಿತ ವಿದ್ಯೆ ನೋಡಲಿಲ್ಲಸಿಹಿತಿನಿಸುಗಳನ್ನು ಕೊಟ್ಟರುಸಿಹಿಮಾತನಾಡಲು ಇಲ್ಲವಲ್ಲಆಣ್ಣ ತಮ್ಮ ಅಕ್ಕ ತಂಗಿಯರ ಕೊಟ್ಟರು ಅವರ ಸುಖ ಸಂತೋಷ ನೋಡಲಿಲ್ಲಆಸ್ತಿ ಆಂತಸ್ತು ಕೊಟ್ಟುಅದರ ಸುಖ ಅನುಭವಿಸಲಿಲ್ಲಒಂದನ್ನು ಮಾತ್ರ ಕೇಳುವೆ…
ಲೇಖಕರು: ಶ್ರೀಶಕಾರಂತ
ವಿಧ: ಚರ್ಚೆಯ ವಿಷಯ
June 29, 2006
ಮೊನ್ನೆ ಅ.ನಾ.ಮೂರ್ತಿರಾಯರ "ಪೂರ್ವಸೂರಿಗಳೊಡನೆ " ಓದಿದೆ... ಅದೊ೦ದು ವಿಮರ್ಶಾ ಕೃತಿ..ಬಹಳ ಅದ್ಭುತವಾದ ವಿಮರ್ಶೆಯಡಗಿದೆ ಅದರಲ್ಲಿ... ಸೀತಾಪರಿತ್ಯಾಗದ ವಿಷಯವನ್ನು ಯಾವ ಯಾವ ಕವಿ ಹೇಗೆ ಚಿತ್ರಿಸಿದ್ದಾರೆ೦ಬುದನ್ನು...ತರ್ಕಬದ್ಧವಾಗಿ ವಿಶ್ಲೇಷಿಸುವ ಒ೦ದು ಅದ್ಭುತ ಕೃತಿ... ವಿಮರ್ಶೆಯೆ೦ದರೆ ಕೇವಲ ಹುಳುಕನ್ನೇ ಹುಡುಕುವುದೋ ಅಥವಾ ಹೊಗಳುಭಟ್ಟರ೦ತೆ ಕೇವಲ ಉತ್ಪ್ರೇಕ್ಷೆ ಮಾಡುವುದನ್ನೋ ನೀವು ಇಲ್ಲಿ ಕಾಣುವುದಿಲ್ಲ...ಇಲ್ಲಿ ಟೀಕಿಸುವ ಉದ್ದೇಶವೂ ಇಲ್ಲ...ಬದಲಾಗಿ ವಸ್ತುಸ್ಥಿತಿಯ, ನೈಜತೆಯ…