ಎಲ್ಲ ಪುಟಗಳು

ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
June 05, 2006
ಉಳ್ಳವರು ಕಾಲ್ ಮಾಡುವರು , ನಾನೇನ ಮಾಡಲಿ ಬಡವನಯ್ಯಾ , ಮಿಸ್ ಕಾಲೇ ನನ್ನ ಆಸ್ತಿ , ಎಸ್ ಎಮ್ ಎಸ್ ನನ್ನ ಪಾಸ್ತಿ , ಕರೆನ್ಸಿ ಇದ್ದರೆ ಅದೇ ಜಾಸ್ತಿಯಯ್ಯಾ ಮತ್ತು ಕಳಬೇಡ, ಕೊಲಬೇಡ , ಕಾಲ್ ಮಾಡದೇ ಇರಬೇಡ , ಮಿಸ್ ಕಾಲ್ ಕೊಡಬೇಡ , ಎಸ್ ಎಮ್ ಎಸ್ ಕಳಿಸಲು ಮರೀಬೇಡ . ಇದೇ ನನ್ನ ಅಂತರಂಗದ ಸುದ್ದಿ , ಬರಲಿ ನಿನಗೆ ಫೋನ್ ಮಾಡುವ ಬುದ್ಧಿ! ಇವು ಸುಧಾ- ಯುಗಾದಿ ವಿಶೇಷಾಂಕ (೨೦೦೬) ರಲ್ಲಿ ಪ್ರಕಟವಾದ ಅನೇಕ ಖುಶಿ ಕೊಡುವ ಎಸ್ಸೆಮ್ಮೆಸ್ಸುಗಳಲ್ಲಿ ಎರಡು. ಮಕ್ಕಳ ಶಿಕ್ಷಣ ಪದ್ದತಿಯ ಕುರಿತಾದ…
ಲೇಖಕರು: prashanth kota
ವಿಧ: Basic page
June 04, 2006
ನನಗೊಬ್ಬ ಸರ್ದಾರ್ಜಿ ಸ್ನೇಹಿತ ಇದ್ದಾನೆ. ಹರ್ಪ್ರೀತ್ ಅಂತ. ನಾಲ್ಕು ತಿಂಗಳ ಹಿಂದೆ ಅವನ ಮನೆಯವರು ಬನ್ನೇರುಘಟ್ಟದಾಚೆಯ ಗೊಟ್ಟಿಗೇರೆ ಎಂಬಲ್ಲಿ ಹೊಸ ಮನೆಯೊಂದರಲ್ಲಿ ವಾಸಿಸ ತೊಡಗಿದರು. ಅಂದಿನಿಂದ ದಿನ ಬೆಳಗಾದರೆ ಅವನದೊಂದೇ ಗೋಳು. ಆಟೋಗಳು ಅವನ ಮನೆಗೆ ಬರೊದಿಲ್ಲ ಅಂತ. ಹಾಗೂ ಹೀಗು ಕಾಡಿ ಬೇಡಿದ ನಂತರ ಬಂದವರು ಮನ ಬಂದಂತೆ ಬಾಡಿಗೆ ಕೇಳುತ್ತಾರೆ. ಜಯನಗರ ೯ನೆ ಬ್ಲಾಕಿಂದ ಅಲ್ಲಿಗೆ ಇಪ್ಪತ್ತೈದು ರೂಪಾಯಿ ಮೀಟರಿನಲ್ಲಿ ಆದರೂ ನೂರೈವತ್ತರ ಕೆಳಗೆ ಯಾರು ಬರಲ್ಲವಂತೆ. ಈ ಆಟೊ ಚಾಲಕರ ಸುಲಿಗೆಯಿಂದ…
ಲೇಖಕರು: vnag
ವಿಧ: ಬ್ಲಾಗ್ ಬರಹ
June 04, 2006
ಕನ್ನಡದಲ್ಲಿ ಹ್ರುದಯ ಅಥವ ಹ್ರಿದಯ ಎ೦ದು ಬರೆಯಬೇಕೆ? ಸರಿಯಾಗಿ ಬರೆಯುವುದು ಹೇಗೆ೦ದು ದಯವಿಟ್ಟು ಯಾರಾದರೂ ತಿಳಿಸುವಿರಾ? ನಾನು ಬರಹ ೬.೦ ಉಪಯೋಗಿಸುತ್ತೇನೆ.  ಅದೇ ರೀತಿ ಸ್ರಿಷ್ಟಿ, ಮ್ರಿದು, ಇತ್ಯಾದಿ ಪದಗಳನ್ನು ಬರೆಯುವಾಗಲೂ ಕೀ ಬೋರ್ಡನ್ನು ಹೇಗೆ ಉಪಯೋಗಿಸಬೇಕೆ೦ದು ನನಗೆ ಗೊತ್ತಿಲ್ಲ.  ದಯವಿಟ್ಟು ತಿಳಿಸಿ. 
ಲೇಖಕರು: ahoratra
ವಿಧ: ಬ್ಲಾಗ್ ಬರಹ
June 04, 2006
ರೋಹಿಣಿ ರತ್ನದಂತ ಹುಡುಗಿ ಇವಳು ರಾಮ ಕೋಟ್ಟ ಉಡುಗೊರೆಕಪಟವರಿಯದ ಇವಳು ಕೃಷ್ಣ ಕೊಟ್ಟ ಉಡುಗೊರೆಶಿವನ ಕೊಡುಗೆ ಶಿವಾನಿಭಾಗ್ಯದಾತೆ ಭವಾನಿ ಮೃದುವಾದ ವಾಕ್ ಸಿರಿಯು ವಾಣಿ ಕೊಟ್ಟ ಉಡುಗೊರೆಬಡತನವ ಸರಿಸಿ ಹರಿಯ ಸಿರಿಯು ಕೊಟ್ಟ ಉಡುಗೊರೆಮಧುರ ಸ್ವರದ ಇನಿದನಿಮಾತಿನಲ್ಲಿ ಅರಗಿಣಿ ಉಡುಗೆ ತೊಡುಗೆಯಲ್ಲಿ ಇವಳ ನೋಟವೇ ಉಡುಗೊರೆಆಟಪಾಠದಲ್ಲಿ ಇವಳ ಮಾಟವೇ ಉಡುಗೊರೆಮನೆಯ ಹಸಿರು ತೋರಣಮನೆಗೆ ಬಂದ ಶ್ರಾವಣ ಹೊಂಬೆಳಕಿನ ಮೈಬಣ್ಣ ರವಿಯು ಕೊಟ್ಟ ಉಡುಗೊರೆಚಂದ್ರನಾ ಪಟ್ಟದರಸಿ ಹೆಸರು ಕೊಟ್ಟ ಉಡುಗೊರೆನಮ್ಮೆಲ್ಲರ…
ಲೇಖಕರು: Vijayasarathy
ವಿಧ: ಬ್ಲಾಗ್ ಬರಹ
June 03, 2006
ತೇರೇ ದಿಲ್ ಮೇಂ ಮೇರಿ ಸಾನ್ಸೋಂ ಕೋ ಪನಾಹ್ ಮಿಲ್ ಜಾಯೇಂತೇರಿ ಇಶ್ಕ್ ಮೇಂ ಮೇರಿ ಜಾನ್ ಫನಾ ಹೋ ಜಾಯೇಂ ಆಮೀರ್ ಖಾನ್, ಕಾಜೋಲ್ ಅಭಿನಯದ "ಫನಾ" ಚಿತ್ರವನ್ನು ಇತ್ತೀಚೆಗೆ ನೋಡಿದೆ. ಅದರಲ್ಲಿರುವ ಕೆಲವು ಶಾಯರಿಗಳು ನನ್ನ ಗಮನ ಸೆಳೆದವು. ಗಮನ ಸೆಳೆದದ್ದೇಕೆಂದರೆ ಚಿತ್ರ ನೋಡುವಾಗ ಆ ಶಾಯರಿಗಳು ಸರಿಯಾಗಿ ಅರ್ಥವಾಗಲಿಲ್ಲ. ಅರ್ಥ ಯಾಕಾಗಲಿಲ್ಲ ಎಂದರೆ ನನಗೆ ಹಿಂದಿ ಸರಿಯಾಗಿ ಬರುವುದಿಲ್ಲ. ಆದರೂ ನನಗೆ ಶಾಯರಿಗಳೆಂದರೆ ಇಷ್ಟ. ಏಕೆಂದರೆ ಅವುಗಳಲ್ಲಿರುವ ಲಯ ನನ್ನನ್ನು ಭಾವುಕನನ್ನಾಗಿಸುತ್ತದೆ. ಇ-ಮೇಲ್‌…
ಲೇಖಕರು: ವಿಶ್ವನಾಥ
ವಿಧ: ಬ್ಲಾಗ್ ಬರಹ
June 03, 2006
ಈಚೆಗೆ ಕನ್ನಡಪ್ರಭ ದ ಛಾಯಾಂಕಣವೊಂದರಲ್ಲಿ ತಾಯಿ ಹಂದಿ ತನ್ನ ಮುದ್ದುಮರಿಗಳಿಗೆ ಹಾಲುಣಿಸುತ್ತಿರುವ ಚಿತ್ರ ನೋಡಿದೊಡನೆಯೇ ನನ್ನ ಅತ್ಯಂತ ಮೆಚ್ಚಿನ ಇಂಗ್ಲಿಷ್ ಲೇಖಕ ಚಾರ್ಲ್ಸ್ ಲ್ಯಾಂಬ್ ನೆನಪಾದ. ಲ್ಯಾಂಬ್ ಬರವಣಿಗೆಯೇ ಹಾಗೆ. ನಮ್ಮ ಎಸ್.ಎಲ್. ಬೈರಪ್ಪ ಅವರ ಬರವಣಿಗೆಯಂತೆ. ಓದುತ್ತ ಹೋದರೆ ಅದು ನಮ್ಮದೇ ಕತೆಯೇನೋ ಎಂಬಂತೆ ಓದಿಸಿಕೊಂಡು ಹೋಗುತ್ತವೆ. ಸ್ವತಃ ಜೀವನದಲ್ಲಿ ಹೊರಲಾರದಷ್ಟು ಕಷ್ಟದ ಮೂಟೆಯನ್ನೇ ಹೊತ್ತರೂ ಲ್ಯಾಂಬ್‌ನ ಬರಹಗಳಲ್ಲಿ ಮಾನವೀಯತೆ, ವ್ಯಂಗ್ಯ, ಮೊನಚು, ಹಾಸ್ಯ ಹಾಸು…
ಲೇಖಕರು: BogaleRagale
ವಿಧ: ಬ್ಲಾಗ್ ಬರಹ
June 03, 2006
(ಬೊಗಳೂರು ಸಂದರ್ಶನ ಬ್ಯುರೋದಿಂದ) ಬೊಗಳೂರು, ಜೂ.3- ಕಾನೂನನ್ನು ಉಲ್ಲಂಘಿಸಿಯೇ ಜನ್ಮ ತಾಳಿದ್ದ ಮತ್ತು ಕಾನೂನು ಉಲ್ಲಂಘನೆಗಾಗಿಯೇ ಈ ಲೋಕದಲ್ಲಿ ಅವತಾರವೆತ್ತಿದ ಬಿಹಾರದ ಸಂಸದ ಶಹಾಬುದ್ದೀನ್ ಕಾನೂನು ಪದವಿ "ಗಿಟ್ಟಿಸಿ"ಕೊಂಡ ಹಿನ್ನೆಲೆಯಲ್ಲಿ ಆತನನ್ನು ಬೊಗಳೆ ರಗಳೆಗಾಗಿ ಮಾತನಾಡಿಸಲಾಯಿತು. ಬನ್ನಿ ಬನ್ನಿ, ಬೊಗಳೆ ಪಂಡಿತರೆ, ನನ್ನಿಂದೇನಾದರೂ ಕಾನೂನು ಉಲ್ಲಂಘನೆಯಾಗಬೇಕೆ ಎಂದು ಆತ್ಮೀಯತೆಯಿಂದಲೇ ಕೆಕ್ಕರಿಸಿ ನೋಡಿದರು ಶಹಾಬುದ್ದೀನ್. ಕತ್ತಿ, ಮಚ್ಚು, ಪಿಸ್ತೂಲು ಸಂಸ್ಕೃತಿಯಲ್ಲಿ ಇಷ್ಟೊಂದು…
ಲೇಖಕರು: shreenidhi
ವಿಧ: ಚರ್ಚೆಯ ವಿಷಯ
June 03, 2006
---ಆಶಯ-- ಪಯಣ ಸಾಗುತಲಿರಲಿ ಗುರಿಯ ಕಡೆಗೆ, ವಿನಯ ಸೂಸುತಲಿರಲಿ ಕೊನೆಯವರೆಗೆ, ತಾಳ್ಮೆ ತಪ್ಪದೆ ಇರಲಿ, ಜಯವೆ ನಿನಗೆ. ---ಸಾಮ್ಯ---- ಬೆಳ್ಳಿ ಬೆಳದಿಂಗಳಿಗೆ ಕಾಲಿಡಬೇಡಾ ಹುಡುಗಿ.. ನಿನಗೂ ಅದಕೂ ಸಾಮ್ಯವೆ ಎಲ್ಲಾ, ಸಾಕಾದೀತೂ ಹುಡುಕಿ!
ಲೇಖಕರು: ಸಂಗನಗೌಡ
ವಿಧ: ಚರ್ಚೆಯ ವಿಷಯ
June 02, 2006
ನಾನು ಸಂಪದದ ಹೊಸ ಸದಸ್ಯ. ನಾನು ಸಾಫ಼್ಟ್-ವೇರ್ ನಲ್ಲಿ ಕೆಲಸ ಮಾಡುತ್ತೇನೆ. ಇಂದು ಐ.ಇ.೬.೦ ನಲ್ಲಿ ಕನ್ನಡ ಅಕ್ಶರಗಳು ಒಳ್ಳೇ ಮುತ್ತಿನಂತೆ ಹೊಳೆಯುತ್ತಿರೋದನ್ನ ನೋಡಿ ನಾನು ಯಾಕೆ ಕನ್ನಡದಲ್ಲಿ ಕನ್ನಡಿಗರೊಂದಿಗೆ ಇಂಟರ್-ನೆಟ್ ಎಂಬ ಮಾಯಾಜಾಲದಲ್ಲಿ ಅನಿಸಿಕೆಗಳನ್ನು ಹಂಚಿಕೊಳ್ಳಬಾರದು? ಅನಿಸಿತಾದ್ದರಿಂದ ಸಂಪದಕ್ಕೆ ಸೇರಿದೆ. ಮುಂದೆ ನಮ್ಮ ಸಂಪದ ಕನ್ನಡಿಗರ ಅಚ್ಚುಮೆಚ್ಚಿನ ಇ-ತಾಣ ಆಗೊದರಲ್ಲಿ ಅನುಮಾನಾನೇ ಇಲ್ಲ. ಕನ್ನಡಿಗರು ನಾವು ಕನ್ನಡಾಭಿಮಾನವ ಬೆಳೆಸಿಕೊಳ್ಳೋಣ. ಧನ್ಯವಾದಗಳೊಂದಿಗೆ ನಿಮ್ಮ,…
ಲೇಖಕರು: vnag
ವಿಧ: ಬ್ಲಾಗ್ ಬರಹ
June 02, 2006
ಅಜ್ಜ ಮೊಮ್ಮಗನನ್ನು ಕೇಳುತ್ತಾನೆ : ನೀನು ಮದುವೆಯಾಗುವ ಹುಡುಗಿ ಏನು ಓದಿದ್ದಾಳೆ?ಮೊಮ್ಮಗ: ಎ೦.ಎಸ್ಸಿ. ಸೋಷಿಯಾಲಜಿಅಜ್ಜ: ಏನು ಕೆಲಸ?ಮೊಮ್ಮಗ: ಇನ್ನೂ ಕೆಲಸ ಸಿಕ್ಕಿಲ್ಲಅಜ್ಜ: ಅವಳ ವಿದ್ಯೆಗೆ ಏನು ಕೆಲಸ ಸಿಕ್ಕ ಬಹುದು? ಮೊಮ್ಮಗ: ಕಾಲೇಜಿನಲ್ಲಿ ಪ್ರಾಧ್ಯಾಪಕಳು, ಇಲ್ಲವೇ ಸಮಾಜ ಕಲ್ಯಾಣ ಇಲಾಖೆಯಲ್ಲಿ, ಅದೂ ಇಲ್ಲದಿದ್ದರೆ ಸ್ವತಹ ಸಮಾಜ ಪರಿವರ್ತನ ಕಾರ್ಯಗಳನ್ನು ಮಾಡಬಹುದು. ಅಜ್ಜ: ಅ೦ದರೆ, ಸಮಾಜ ಸೇವೆ ಅನ್ನು.ಮೊಮ್ಮಗ: ಒ೦ದು ತರಹ ಹೌದು.ಅಜ್ಜ: ಖ೦ಡಿತ ಆ ಹುಡುಗಿಯನ್ನು ಮದುವೆಯಾಗ ಬೇಡ.ಮೊಮ್ಮಗ:…