ವಿಧ: ಚರ್ಚೆಯ ವಿಷಯ
June 08, 2006
ಈ ಪ್ರಶ್ನೆಯನ್ನು feedback section ನಲ್ಲಿ ಕೇಳಬೇಕೆಂದುಕೊಂಡೆ. ಆದರೆ, ಅದೇ ಪ್ರಶ್ನೆಯನ್ನು ಇಲ್ಲಿ ಕೇಳಿದರೆ ಎಲ್ಲ ಸದಸ್ಯರೂ ಭಾಗವಹಿಸುತ್ತಾರೇನೋ ಎಂದುಕೊಂಡು ಇಲ್ಲಿಡುತ್ತಿದ್ದೇನೆ.
ಯಾವಾಗಲೂ ಸಂಪದ.ಕಾಮ್ ಗೆ ಬಂದು ಬ್ಲಾಗ್ ಅಥವಾ ಫೋರಮ್ ಗೆ ಉತ್ತರಿಸುವುದು ಈಗಿರುವ ವಿಧಾನ. ಆದರೆ, ನನಗನ್ನಿಸುವಂತೆ ಸಂಪದದ ಹೆಮ್ಮೆ ಎನಿಸುವಂತೆ ಇರುವ ೧೦೦೦ ಸದಸ್ಯರೆಲ್ಲರಿಗೂ ಮೈಲ್ ಫೆಸಿಲಿಟಿ ಇದ್ದರೆ ಹಾಗೂ ಸಂಪದ.ಕಾಮ್ ಗೆ ಬರುವ ಬದಲು ಮೈಲ್ ಮಾಡುವ ವಿಧಾನ ಒಂದಿದ್ದರೆ, ಇಲ್ಲಿ ಪ್ರಕಟವಾಗುವ ಲೇಖನಗಳು…
ವಿಧ: ಬ್ಲಾಗ್ ಬರಹ
June 08, 2006
ಕಂದಮ್ಮ
ಅಳಬೇಡ ಕಂದಮ್ಮನಗುನಗುತಾ ಮಲಗಮ್ಮಕಣ್ಣ ಮುಚ್ಚು ಕಣ್ಣಮ್ಮಸುಖದ ಸ್ವಪ್ನ ಕಾಣಮ್ಮಚಂದಮಾಮ ಬರುವನುತಾರೆಗಳ ತೋರುವನುತಾರೆಗಳ ತೋಟದಲಿಬಾಲಕೃಷ್ಣನಿರುವನುನಿನ್ನೊಡನೆ ಆಡುವನುನಿನ್ನ ಹಾಡ ಕೇಳುವನುಮಾಧವನು ಹತ್ತಿರಮುರಳಿಗಾನ ಸುಮಧುರಆಡಿನಲಿದ ನಂತರಆಗುವುದು ಎಚ್ಚರ.
ಅಹೋರಾತ್ರ.
ವಿಧ: ಬ್ಲಾಗ್ ಬರಹ
June 08, 2006
ಓದುವವರಿಗೆ ನಮಸ್ಕಾರ,
ನಾನು ಸಂಪದಕ್ಕೆ join ಆಗಿ ಬಹಳ ದಿನಗಳಾಯಿತು. ಆದ್ರೆ, ವೆಬ್ ಪೇಜ್ ನಲ್ಲಿ type ಮಾಡಕ್ಕೆ ಆಗ್ದೆ, ಇಷ್ತು ದಿನ ಕಾಯಬೇಕಾಯ್ತು.
ಆದ್ರು, ಕನ್ನಡದಲ್ಲಿ ಬ್ಲಾಗ್ ಬರೆಯಕ್ಕೆ ತುಂಬ ಸಂತೋಷ ಆಗ್ತಾ ಇದೆ.
ನಾನು ಬೆಂಗಳೂರಿನವನು. ಬರಹ software ನ, ತುಂಬಾ ಮೊದಲಿಂದಾನೂ ಉಪಯೋಗಿಸಿದ್ದೇನೆ.
ಒಂದೆರಡು ಇನ್ಫರ್ಮೇಷನ್ ಕೊಟ್ಟು bye ಹೇಳ್ತೀನಿ.
ಕನ್ನಡ ವಿಜಯ ಕರ್ನಾಟಕ ಓದಲು ಈ ಲಿಂಕ್ ಗೆ ಹೋಗಿ: http://vijaykarnatakaepaper.com/login.php
ಕನ್ನಡ dictionary ನೋಡಲು…
ವಿಧ: Basic page
June 07, 2006
ಶೇಖರ್ ಪೂರ್ಣರವರು ತಮ್ಮ ಸಂಪಾದಕೀಯದಲ್ಲಿ ಸಂಪದವನ್ನು blogspotಗೆ ಹೋಲಿಸಿ 'ಸಂಪದದ ದೌರ್ಬಲ್ಯಗಳ' ಬಗ್ಗೆ ಬರೆದಿರುವುದು ನನಗೆ ಅಚ್ಚರಿ ತಂದಿತು.
ಕೆಲವು ವಿಚಾರಗಳು:
೧) ಸಂಪದವನ್ನು blogspotಗೆ ಹೋಲಿಸುವುದು ತೀರ ತಮಾಷೆಯ ಸಂಗತಿ, ಅಜ-ಗಜ ಹೋಲಿಕೆಯಂತೆ! ನೂರಾರು [w:Data center|Data center]ಗಳನ್ನಿಟ್ಟುಕೊಂಡು ನಡೆಸಲಾಗುವ blogspot ಎಲ್ಲಿ, ಇನ್ನೂ [w:Shared web hosting service|shared hostingನ] ಕೆಲವೇ ಕೆಲವು MB ಜಾಗದಲ್ಲಿ ಕೊಳೆಯುತ್ತಿರುವ ಸಂಪದ ಎಲ್ಲಿ!
೨) ಸಂಪದದಲ್ಲಿ…
ವಿಧ: Basic page
June 07, 2006
( ದಾಸನೆಂತಾಗುವೆನು ಧರೆಯೊಳಗೆ ನಾನು ಎಂಬಂತೆ)
ಲೆಂಕನೆಂತಾಗುವೆನು ಕನ್ನಡಕೆ ನಾನು
ಮಂಕುಮತಿ ನಾನು ಲೇಶ ಯೋಗ್ಯತೆ ಕಾಣೆ
ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ
ಕನ್ನಡದ ಕಲ್ಲೆನಗೆ ದೇವ ಸಾಲಿಗ್ರಾಮ
ಕನ್ನಡದ ನೀರೆನಗೆ ಪಾಪನಾಶಿನಿ ಗಂಗೆ
ಕನ್ನಡದ ನುಡಿಯೆನಗೆ ಗಾಯತ್ರಿ ಮಂತ್ರ
ಹಳೆಗನ್ನಡವ ನಾನು ಕುಳಿತು ಓದಿದ್ದಿಲ್ಲ
ಹಳ್ಳಿಗರೊಡನಾಡಿ ಬೆಳೆದದ್ದೂ ಇಲ್ಲ
ಬಲ್ಲೆ ಸ್ವಲ್ಪ ದಾಸರ ನುಡಿಯ
ಪಂಪ ರನ್ನ ಕುಮಾರವ್ಯಾಸರನು ಅರಿಯೆ
ದೇಶವನು ತಿರುಗಿಲ್ಲ ಕೋಶವನು ಓದಿಲ್ಲ
ಗುಂಪು ಸೇರಿಸಲಾರೆ ರಂಪ ಮಾಡಿಸಲಾರೆ…
ವಿಧ: ಬ್ಲಾಗ್ ಬರಹ
June 07, 2006
ನಿಮಗೆ ನೆನಪಿರಬಹುದು, 1997ರಲ್ಲಿ ಕರ್ನಾಟಕದಲ್ಲಿ ಅಂದಿನ ಜೆ.ಎಚ್. ಪಟೇಲ್ ಸರಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವೆಯಾಗಿದ್ದ ಬಿ.ಟಿ ಲಲಿತಾನಾಯಕ್ ಅವರ ಪುತ್ರ ವಿಶ್ವಜಿತ್, ಮದ್ಯದ ಅಮಲಿನಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮದ್ಯಾಭಿಷೇಕ ಮಾಡಿದ್ದು. ಈ ಘಟನೆ ಇಡೀ ರಾಜ್ಯಾದ್ಯಂತ ಭಾರಿ ಕೋಲಾಹಲವನ್ನೇ ಎಬ್ಬಿಸಿತ್ತು. ತಾಯಿ ಲಲಿತಾ ನಾಯಕ್ ರಾಜೀನಾಮೆ ಕೊಡುವುದರೊಂದಿಗೆ ಈ ಪ್ರಕರಣ ಅಂತ್ಯ ಕಂಡಿತ್ತು.
ಅದಾಗಿ ಎರಡು ವರ್ಷಗಳ ಬಳಿಕ ಹರಿಯಾಣಾದ ಪ್ರಭಾವಿ ಕಾಂಗ್ರೆಸ್ ನಾಯಕ ವಿನೋದ್ ಶರ್ಮಾ ಅವರ ಸು(ಕು)…
ವಿಧ: ಬ್ಲಾಗ್ ಬರಹ
June 07, 2006
(ಬೊಗಳೂರು ಜನಪರ ಬ್ಯುರೋದಿಂದ)
ಬೊಗಳೂರು, ಜೂ.6- ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಬಗ್ಗೆ ಕೇಂದ್ರದಲ್ಲಿರುವ Unprecedented Price Agenda ಸರಕಾರ ಸ್ಪಷ್ಟನೆ ನೀಡಿದ್ದು, ಕೃಷಿ ಆಧಾರಿತ ರಾಷ್ಟ್ರವಾದ ಭಾರತದಲ್ಲಿ ಕೃಷಿ ಸಂಪನ್ಮೂಲ ರಕ್ಷಣೆಗೆ ಇದು ಪೂರಕ ಎಂದು ಸ್ಪಷ್ಟಪಡಿಸಿದೆಯಲ್ಲದೆ ಬಡವರ ನಿರ್ಮೂಲನೆಯೇ ಸರಕಾರದ ಗುರಿ ಎಂದು (ಜನಸಾಮಾನ್ಯರನ್ನು ಕಾಲಿನಿಂದ) ಒತ್ತಿ ಒತ್ತಿ ಹೇಳಿದೆ.
ನಾವು ಅಧಿಕಾರಕ್ಕೆ ಬಂದ ಎರಡು ವರ್ಷದೊಳಗೆ ಪೆಟ್ರೋಲಿಯಂ ಉತ್ಪನ್ನದ ಬೆಲೆಯನ್ನು ದಾಖಲೆ 7ನೇ ಬಾರಿ…
ವಿಧ: ಬ್ಲಾಗ್ ಬರಹ
June 07, 2006
* ಜನಪ್ರಿಯ ಮೊಬೈಲ್ ಫೋನು ಕಂಪೆನಿ ನೋಕಿಯ ಪ್ರಾರಂಭದಲ್ಲಿ ಪೇಪರ್ ತಯಾರಿಕೆಯಲ್ಲಿ ತೊಡಗಿದ್ದ ಕಂಪೆನಿಯಾಗಿತ್ತಂತೆ. ಮಹಾಯುದ್ಧದ ಸಮಯದಲ್ಲಿ ಮಿಲಿಟರಿಗೆ ಬೂಟುಗಳನ್ನೂ ತಯಾರಿಸುತ್ತಿತ್ತಂತೆ! [:http://www.zfone.com/articles/a_id/54/history-of-nokia|(೧)]
* ಭಾರತದಲ್ಲಿ ಬ್ರಿಟಿಷ್ ಅಧಿಪತ್ಯ ಸ್ಥಾಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ರಾಬರ್ಟ್ ಕ್ಲೈವ್, ಎರಡು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದನಂತೆ. ಈಸ್ಟ್ ಇಂಡಿಯಾ ಕಂಪೆನಿಯಲ್ಲಿ ಗುಮಾಸ್ತನಾಗಿ ಮೊದಲು ಅವನು…
ವಿಧ: ಬ್ಲಾಗ್ ಬರಹ
June 06, 2006
ತಲೆಹರಟೆ ಹೆಸರಿನ ಈ ಲದ್ದಿಗಾರನಿಗೆ ಬಹಳ ಸಂತೋಷವಾಗಿದೆ. ತನ್ನ ಗಂಭೀರ ಮಾತುಗಳನ್ನು ತಮಾಷೆಯಾಗಿ, ತಮಾಷೆ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎಂದು ಸಿಕ್ಕಸಿಕ್ಕವರೆಲ್ಲಾ ಬಳಿ ಗೊಣಗುತ್ತಿದ್ದವನಿಗೆ ಇತ್ತಿಚಿಗೆ ಸಿಕ್ಕ ಪುಟ್ಟ ಸುದ್ಧಿಯೊಂದು ಈ ಸಂತೋಷಕ್ಕೆ ಕಾರಣ.
ಪೀಟರ್ ಕಾಸ್ಟಿಲ್ಲೊ ಎಂಬ ಆಸ್ಟ್ರೇಲಿಯದ ಪ್ರಮುಖ ವ್ಯಕ್ತಿ ಒಬ್ಬ ೧೯೯೨ ರಲ್ಲಿ ಆಸ್ಟ್ರೆಲಿಯನ್ ಜನತೆಯನ್ನು ಕುರಿತು "ದಂಪತಿಗಳು ಹೆಚ್ಚು ಹೆಚ್ಚು ಮಕ್ಕಳನ್ನು ಪಡೆಯಬೇಕು. ಒಂದು ಮಗು ಪಪ್ಪನಿಗೆ, ಒಂದು ಮಮ್ಮಿಗೆ ಇನ್ನೊಂದು…
ವಿಧ: ಬ್ಲಾಗ್ ಬರಹ
June 06, 2006
(ಬೊಗಳೂರು ಪರದೇಸಿ ಬ್ಯುರೋದಿಂದ)
ಬೊಗಳೂರು, ಜೂ.6- ಭಾರತದಲ್ಲಿ ಸಣ್ಣ ಪುಟ್ಟ ಅಪರಾಧಗಳನ್ನು ಮಾಡುತ್ತಾ, ಒಂದೆರಡು ಇರುವೆ, ನಾಯಿಮರಿ, ಬೆಕ್ಕಿನ ಮರಿಗಳನ್ನಷ್ಟೇ ಕೊಂದಿದ್ದ ದಾವೂದ್ ಇಬ್ರಾಹಿಂನನ್ನು ಅಮೆರಿಕವು ಪಾತಕಿ ಎಂದು ಘೋಷಿಸಿರುವುದು ವಿಶೇಷವಾಗಿ ಪಾತಕಿಸ್ತಾನದ ಹುಬ್ಬೇರಿಸಿದೆ.
ಭಾರತದಲ್ಲಿ ಒಂದೆರಡು ನೊಣಗಳನ್ನು ಕೊಂದು, ಮುಖಕ್ಕೆ ಹಾಕುವ ಬಿಳಿ ಪುಡಿ (ಅದಕ್ಕೆ ಹೆರಾಯ್ನ್, ಚರಸ್ ಇತ್ಯಾದಿ ಹಣೆಪಟ್ಟಿ), ಒಂದೆರಡು ಆಟಿಕೆ ಎ.ಕೆ.-47 ಬಂದೂಕುಗಳು ಇತ್ಯಾದಿಗಳನ್ನು ಸಾಗಿಸುತ್ತಿದ್ದರೂ…