ಎಲ್ಲ ಪುಟಗಳು

ಲೇಖಕರು: ನಿರ್ವಹಣೆ
ವಿಧ: Basic page
June 06, 2006
Sampada collects some personal information to prevent misuse of the website. No information collected on Sampada is shared with third parties or sold. We may auto-add email addresses of Sampada community members to the announce only mailing list periodically. Those who wish to unsubscribe, can do so using the link provided in the email. The announce-only list updates you with the Kannada related…
ಲೇಖಕರು: Rohit
ವಿಧ: ಚರ್ಚೆಯ ವಿಷಯ
June 05, 2006
ಸಂಪದ ಬಳಗದ ಗೆಳೆಯರೆಲ್ಲರಿಗೂ ನಮಸ್ಕಾರ. ಕನ್ನಡಸಾಹಿತ್ಯ.ಕಾಂ ಅಂತರ್ಜಾಲ ತಾಣದ ಹೊಸ ಆವೃತ್ತಿ ಹೊರಬಂದಿದೆ. ಈ ಆವೃತ್ತಿಯಲ್ಲಿ ಇದೇ ಇಲ್ಲೇ ಸಂಪದದಲ್ಲಿ ನಮ್ಮೆಲ್ಲರಿಗೂ ಪರಿಚಿತವಾಗಿರುವ ಶ್ಯಾಮ ಕಶ್ಯಪರೂ ಲೇಖಕ ಬಳಗಕ್ಕೆ ಸೇರ್ಪಡೆಯಾಗಿದ್ದಾರೆ. ಅಂತೆಯೇ ಮುಂಬಯಿಯ ಲೇಖಕರಾದ ಕೆ.ಟಿ. ವೇಣುಗೋಪಾಲರು,ಸಂತೋಷ್ ಮೆಹಂದಳೆ, ವಿಕ್ರಮ್ ಹತ್ವಾರ್, ಸಚ್ಚಿದಾನಂದ ಹೆಗಡೆ, ರವಿಶಂಕರ್ ಆರ್ ಇವರುಗಳೂ ಲೇಖಕ ಬಳಗಕ್ಕೆ ಸೇರಿರುವ ಹೊಸಬರು. ಕನ್ನಡಸಾಹಿತ್ಯ.ಕಾಂ ನ ಅಭಿಮಾನಿ ಗೆಳೆಯರೊಲ್ಲಬ್ಬರಾದ ಶ್ರೀ…
ಲೇಖಕರು: shreekant.mishrikoti
ವಿಧ: Basic page
June 05, 2006
ಈಜು ಮರೀಬೇಡ, ಜೂಜು ಕಲೀಬೇಡ . ಇಬ್ಬರಲ್ಲಿ ಗುಟ್ಟು , ಮೂವರಲ್ಲಿ ರಟ್ಟು. ಇರುವೆಗೆ ರೆಕ್ಕೆ ಬರುವದು , ದೀಪದಲ್ಲಿ ಬಿದ್ದು ಸಾಯಲಿಕ್ಕೇ . ಇರೋದು ಕಳೆಯೋದು ಸುಲಭ , ಇಲ್ಲದ್ದು ಕೂಡಿಸೋದು ಕಷ್ಟ . ಬೆಂಕಿಗೆ ಕರಗದ್ದು ಬಿಸಿಲಿಗೆ ಕರಗೀತೇ? ಬಿಸಿ ಹಾಲಿಗೆ ಬಾಯ್ಸುಟ್ಟುಕೊಂಡು ಮಜ್ಜಿಗೆಯನ್ನು ಊದಿ ಊದಿ ಕುಡಿದರಂತೆ. ಬೀಜ ಸಣ್ಣದಾದರೆ ಮರ ಸಣ್ಣದೋ? ಬೀದಿಯ ಕೂಸು ಬೆಳೆಯಿತು ; ಕೋಣೆಯ ಕೂಸು ಕೊಳೆಯಿತು. ಬೆಕ್ಕಿಗೆ ಬೆಣ್ಣೆ ಕಂಡಿತು ; ಬಡಿಗೆ ಕಾಣಲಿಲ್ಲ. ಮಂದ್ಯಾಗ ಮಚ್ಚೀಲೆ ಹೊಡೆದು ಸಂದ್ಯಾಗ ಕಾಲು…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
June 05, 2006
ಉಳ್ಳವರು ಕಾಲ್ ಮಾಡುವರು , ನಾನೇನ ಮಾಡಲಿ ಬಡವನಯ್ಯಾ , ಮಿಸ್ ಕಾಲೇ ನನ್ನ ಆಸ್ತಿ , ಎಸ್ ಎಮ್ ಎಸ್ ನನ್ನ ಪಾಸ್ತಿ , ಕರೆನ್ಸಿ ಇದ್ದರೆ ಅದೇ ಜಾಸ್ತಿಯಯ್ಯಾ ಮತ್ತು ಕಳಬೇಡ, ಕೊಲಬೇಡ , ಕಾಲ್ ಮಾಡದೇ ಇರಬೇಡ , ಮಿಸ್ ಕಾಲ್ ಕೊಡಬೇಡ , ಎಸ್ ಎಮ್ ಎಸ್ ಕಳಿಸಲು ಮರೀಬೇಡ . ಇದೇ ನನ್ನ ಅಂತರಂಗದ ಸುದ್ದಿ , ಬರಲಿ ನಿನಗೆ ಫೋನ್ ಮಾಡುವ ಬುದ್ಧಿ! ಇವು ಸುಧಾ- ಯುಗಾದಿ ವಿಶೇಷಾಂಕ (೨೦೦೬) ರಲ್ಲಿ ಪ್ರಕಟವಾದ ಅನೇಕ ಖುಶಿ ಕೊಡುವ ಎಸ್ಸೆಮ್ಮೆಸ್ಸುಗಳಲ್ಲಿ ಎರಡು. ಮಕ್ಕಳ ಶಿಕ್ಷಣ ಪದ್ದತಿಯ ಕುರಿತಾದ…
ಲೇಖಕರು: prashanth kota
ವಿಧ: Basic page
June 04, 2006
ನನಗೊಬ್ಬ ಸರ್ದಾರ್ಜಿ ಸ್ನೇಹಿತ ಇದ್ದಾನೆ. ಹರ್ಪ್ರೀತ್ ಅಂತ. ನಾಲ್ಕು ತಿಂಗಳ ಹಿಂದೆ ಅವನ ಮನೆಯವರು ಬನ್ನೇರುಘಟ್ಟದಾಚೆಯ ಗೊಟ್ಟಿಗೇರೆ ಎಂಬಲ್ಲಿ ಹೊಸ ಮನೆಯೊಂದರಲ್ಲಿ ವಾಸಿಸ ತೊಡಗಿದರು. ಅಂದಿನಿಂದ ದಿನ ಬೆಳಗಾದರೆ ಅವನದೊಂದೇ ಗೋಳು. ಆಟೋಗಳು ಅವನ ಮನೆಗೆ ಬರೊದಿಲ್ಲ ಅಂತ. ಹಾಗೂ ಹೀಗು ಕಾಡಿ ಬೇಡಿದ ನಂತರ ಬಂದವರು ಮನ ಬಂದಂತೆ ಬಾಡಿಗೆ ಕೇಳುತ್ತಾರೆ. ಜಯನಗರ ೯ನೆ ಬ್ಲಾಕಿಂದ ಅಲ್ಲಿಗೆ ಇಪ್ಪತ್ತೈದು ರೂಪಾಯಿ ಮೀಟರಿನಲ್ಲಿ ಆದರೂ ನೂರೈವತ್ತರ ಕೆಳಗೆ ಯಾರು ಬರಲ್ಲವಂತೆ. ಈ ಆಟೊ ಚಾಲಕರ ಸುಲಿಗೆಯಿಂದ…
ಲೇಖಕರು: vnag
ವಿಧ: ಬ್ಲಾಗ್ ಬರಹ
June 04, 2006
ಕನ್ನಡದಲ್ಲಿ ಹ್ರುದಯ ಅಥವ ಹ್ರಿದಯ ಎ೦ದು ಬರೆಯಬೇಕೆ? ಸರಿಯಾಗಿ ಬರೆಯುವುದು ಹೇಗೆ೦ದು ದಯವಿಟ್ಟು ಯಾರಾದರೂ ತಿಳಿಸುವಿರಾ? ನಾನು ಬರಹ ೬.೦ ಉಪಯೋಗಿಸುತ್ತೇನೆ.  ಅದೇ ರೀತಿ ಸ್ರಿಷ್ಟಿ, ಮ್ರಿದು, ಇತ್ಯಾದಿ ಪದಗಳನ್ನು ಬರೆಯುವಾಗಲೂ ಕೀ ಬೋರ್ಡನ್ನು ಹೇಗೆ ಉಪಯೋಗಿಸಬೇಕೆ೦ದು ನನಗೆ ಗೊತ್ತಿಲ್ಲ.  ದಯವಿಟ್ಟು ತಿಳಿಸಿ. 
ಲೇಖಕರು: ahoratra
ವಿಧ: ಬ್ಲಾಗ್ ಬರಹ
June 04, 2006
ರೋಹಿಣಿ ರತ್ನದಂತ ಹುಡುಗಿ ಇವಳು ರಾಮ ಕೋಟ್ಟ ಉಡುಗೊರೆಕಪಟವರಿಯದ ಇವಳು ಕೃಷ್ಣ ಕೊಟ್ಟ ಉಡುಗೊರೆಶಿವನ ಕೊಡುಗೆ ಶಿವಾನಿಭಾಗ್ಯದಾತೆ ಭವಾನಿ ಮೃದುವಾದ ವಾಕ್ ಸಿರಿಯು ವಾಣಿ ಕೊಟ್ಟ ಉಡುಗೊರೆಬಡತನವ ಸರಿಸಿ ಹರಿಯ ಸಿರಿಯು ಕೊಟ್ಟ ಉಡುಗೊರೆಮಧುರ ಸ್ವರದ ಇನಿದನಿಮಾತಿನಲ್ಲಿ ಅರಗಿಣಿ ಉಡುಗೆ ತೊಡುಗೆಯಲ್ಲಿ ಇವಳ ನೋಟವೇ ಉಡುಗೊರೆಆಟಪಾಠದಲ್ಲಿ ಇವಳ ಮಾಟವೇ ಉಡುಗೊರೆಮನೆಯ ಹಸಿರು ತೋರಣಮನೆಗೆ ಬಂದ ಶ್ರಾವಣ ಹೊಂಬೆಳಕಿನ ಮೈಬಣ್ಣ ರವಿಯು ಕೊಟ್ಟ ಉಡುಗೊರೆಚಂದ್ರನಾ ಪಟ್ಟದರಸಿ ಹೆಸರು ಕೊಟ್ಟ ಉಡುಗೊರೆನಮ್ಮೆಲ್ಲರ…
ಲೇಖಕರು: Vijayasarathy
ವಿಧ: ಬ್ಲಾಗ್ ಬರಹ
June 03, 2006
ತೇರೇ ದಿಲ್ ಮೇಂ ಮೇರಿ ಸಾನ್ಸೋಂ ಕೋ ಪನಾಹ್ ಮಿಲ್ ಜಾಯೇಂತೇರಿ ಇಶ್ಕ್ ಮೇಂ ಮೇರಿ ಜಾನ್ ಫನಾ ಹೋ ಜಾಯೇಂ ಆಮೀರ್ ಖಾನ್, ಕಾಜೋಲ್ ಅಭಿನಯದ "ಫನಾ" ಚಿತ್ರವನ್ನು ಇತ್ತೀಚೆಗೆ ನೋಡಿದೆ. ಅದರಲ್ಲಿರುವ ಕೆಲವು ಶಾಯರಿಗಳು ನನ್ನ ಗಮನ ಸೆಳೆದವು. ಗಮನ ಸೆಳೆದದ್ದೇಕೆಂದರೆ ಚಿತ್ರ ನೋಡುವಾಗ ಆ ಶಾಯರಿಗಳು ಸರಿಯಾಗಿ ಅರ್ಥವಾಗಲಿಲ್ಲ. ಅರ್ಥ ಯಾಕಾಗಲಿಲ್ಲ ಎಂದರೆ ನನಗೆ ಹಿಂದಿ ಸರಿಯಾಗಿ ಬರುವುದಿಲ್ಲ. ಆದರೂ ನನಗೆ ಶಾಯರಿಗಳೆಂದರೆ ಇಷ್ಟ. ಏಕೆಂದರೆ ಅವುಗಳಲ್ಲಿರುವ ಲಯ ನನ್ನನ್ನು ಭಾವುಕನನ್ನಾಗಿಸುತ್ತದೆ. ಇ-ಮೇಲ್‌…
ಲೇಖಕರು: ವಿಶ್ವನಾಥ
ವಿಧ: ಬ್ಲಾಗ್ ಬರಹ
June 03, 2006
ಈಚೆಗೆ ಕನ್ನಡಪ್ರಭ ದ ಛಾಯಾಂಕಣವೊಂದರಲ್ಲಿ ತಾಯಿ ಹಂದಿ ತನ್ನ ಮುದ್ದುಮರಿಗಳಿಗೆ ಹಾಲುಣಿಸುತ್ತಿರುವ ಚಿತ್ರ ನೋಡಿದೊಡನೆಯೇ ನನ್ನ ಅತ್ಯಂತ ಮೆಚ್ಚಿನ ಇಂಗ್ಲಿಷ್ ಲೇಖಕ ಚಾರ್ಲ್ಸ್ ಲ್ಯಾಂಬ್ ನೆನಪಾದ. ಲ್ಯಾಂಬ್ ಬರವಣಿಗೆಯೇ ಹಾಗೆ. ನಮ್ಮ ಎಸ್.ಎಲ್. ಬೈರಪ್ಪ ಅವರ ಬರವಣಿಗೆಯಂತೆ. ಓದುತ್ತ ಹೋದರೆ ಅದು ನಮ್ಮದೇ ಕತೆಯೇನೋ ಎಂಬಂತೆ ಓದಿಸಿಕೊಂಡು ಹೋಗುತ್ತವೆ. ಸ್ವತಃ ಜೀವನದಲ್ಲಿ ಹೊರಲಾರದಷ್ಟು ಕಷ್ಟದ ಮೂಟೆಯನ್ನೇ ಹೊತ್ತರೂ ಲ್ಯಾಂಬ್‌ನ ಬರಹಗಳಲ್ಲಿ ಮಾನವೀಯತೆ, ವ್ಯಂಗ್ಯ, ಮೊನಚು, ಹಾಸ್ಯ ಹಾಸು…
ಲೇಖಕರು: BogaleRagale
ವಿಧ: ಬ್ಲಾಗ್ ಬರಹ
June 03, 2006
(ಬೊಗಳೂರು ಸಂದರ್ಶನ ಬ್ಯುರೋದಿಂದ) ಬೊಗಳೂರು, ಜೂ.3- ಕಾನೂನನ್ನು ಉಲ್ಲಂಘಿಸಿಯೇ ಜನ್ಮ ತಾಳಿದ್ದ ಮತ್ತು ಕಾನೂನು ಉಲ್ಲಂಘನೆಗಾಗಿಯೇ ಈ ಲೋಕದಲ್ಲಿ ಅವತಾರವೆತ್ತಿದ ಬಿಹಾರದ ಸಂಸದ ಶಹಾಬುದ್ದೀನ್ ಕಾನೂನು ಪದವಿ "ಗಿಟ್ಟಿಸಿ"ಕೊಂಡ ಹಿನ್ನೆಲೆಯಲ್ಲಿ ಆತನನ್ನು ಬೊಗಳೆ ರಗಳೆಗಾಗಿ ಮಾತನಾಡಿಸಲಾಯಿತು. ಬನ್ನಿ ಬನ್ನಿ, ಬೊಗಳೆ ಪಂಡಿತರೆ, ನನ್ನಿಂದೇನಾದರೂ ಕಾನೂನು ಉಲ್ಲಂಘನೆಯಾಗಬೇಕೆ ಎಂದು ಆತ್ಮೀಯತೆಯಿಂದಲೇ ಕೆಕ್ಕರಿಸಿ ನೋಡಿದರು ಶಹಾಬುದ್ದೀನ್. ಕತ್ತಿ, ಮಚ್ಚು, ಪಿಸ್ತೂಲು ಸಂಸ್ಕೃತಿಯಲ್ಲಿ ಇಷ್ಟೊಂದು…