ಎಲ್ಲ ಪುಟಗಳು

ಲೇಖಕರು: tvsrinivas41
ವಿಧ: ಬ್ಲಾಗ್ ಬರಹ
May 27, 2006
ಹೌದು ಜೀವಿಸಬಹುದು, ಜೀವಿಸುತ್ತಿದ್ದಾರೆ, ಮುಂಬೈ ನಲ್ಲಿ ಇದು ಸಾಮಾನ್ಯವಾಗಿ ಕಂಡು ಬರುವ ಸಂಗತಿ. ಮುಂಬಯಿಯಲ್ಲಿ ಎಲ್ಲೆಲ್ಲಿ ನೋಡಿದರೂ ಭಿಕ್ಷುಕರು ಕಾಣುವುದು ಸಹಜ. ಹೂಂ! ಭಾರತದ ಎಲ್ಲ ನಗರಗಳಂತೆಯೇ ಇಲ್ಲಿಯೂ ಸಹ. ಆದರೆ ಮುಂಬಯಿಯಲ್ಲಿ ಏನೇ ಕೆಲಸ ಮಾಡಿದರೂ ಹೊಟ್ಟೆ ತುಂಬುವಷ್ಟು ಗಳಿಸಬಹುದು. ಇದೊಂದು ಮಾಯಾನಗರಿ. ಕನಸನ್ನು ತೋರಿಸುತ್ತದೆ, ಅದನ್ನು ನನಸಾಗಿಸಲು ಏನೆಲ್ಲಾ ಮಾಡಲು ಪ್ರೇರೇಪಿಸುತ್ತದೆ. ಮುಂಬಯಿಗೆ ಮೊದಲ ಬಾರಿಗೆ ಬಂದವರಿಗೆ, ಬಣ್ಣದ ಜಗತ್ತು ಅಂದ್ರೆ ಸಿನೆಮಾ ಕೈಬೀಸಿ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
May 26, 2006
ನಿನ್ನೆ ನಾನು ರಜೆಯ ಮೇಲಿದ್ದು ಸ್ವಲ್ಪ ಸಮಯ ಹೊಂದಿಸಿಕೊಂಡು ಇಲ್ಲಿ ( ಮುಂಬಯಿ)ಯಲ್ಲಿನ ದಾದರ್ ಹತ್ತಿರ ಇರುವ ಭಾರತೀಯ ಸಾಹಿತ್ಯ ಅಕಾಡೆಮಿ ಕಛೇರ್‍ಇಗೆ ಹೋದೆ . ಸಾಹಿತ್ಯ ಅಕಾಡೆಮಿ ಭಾರತೀಯ ಭಾಷೆಗಳ ಶ್ರೇಷ್ಠ ಪುಸ್ತಕಗಳನ್ನು ಭಾರತದ ಇಪ್ಪತ್ತೈದು ಭಾಷೆಗಳಲ್ಲಿ ಅನುವಾದಿಸಿ ಪ್ರಕಟಿಸುತ್ತದೆ. ಎಲ್ಲ ಭಾಷೆಗಳ ಪುಸ್ತಕಗಳೂ ಇಲ್ಲಿ ಲಭ್ಯವಿದ್ದವು . ( ಬೆಂಗಳೂರಿನಲ್ಲಿ ಅವರ ಶಾಖೆ ಅಂಬೇಡ್ಕರ್ ಬೀದಿಯಲ್ಲಿದೆ). ಸರಕಾರದ ಸಂಸ್ಥೆಯಾಗಿದ್ದರಿಂದ ಬೆಲೆಯೂ ಕಡಿಮೆ; ಶೇ. ೨೫ ರಷ್ಟು ರಿಯಾಯಿತಿಯನ್ನು…
ಲೇಖಕರು: venkatesh
ವಿಧ: Basic page
May 26, 2006
ಅಮೆರಿಕ, ಹಾಗೂ ವಶ್ವದ ಪ್ರಜೆಗಳ ದಿನಚರಿಯಲ್ಲಿ ೯/೧೧ ಹೇಗೆ ಭಯಾನಿಕ ದಿನವೋ, ಹಾಗೆಯೆ ಮುಂಬೈ ನಿವಾಸಿಗಳಿಗೆ ಏಪ್ರಿ ಲ್ ೨೬ ,೨೦೦೫, ಒಂದು ಅಂತಹ 'ದುರ್ದಿನ 'ವೆಂದರೆ ಕೌತುಕವಾಗದಿರಲಾರದು ! ಮುಂಬೈ ನಗರಕ್ಕೆ ವರುಣನಕೃಪೆಯಿಂದ ಜೂನ್ ತಿಂಗಳ ಮೊದಲೆನೆ ವಾರದಿಂದ ಶುರುವಾಗುವ 'ಮಾನ್ ಸೂನ್' ಸೆಪ್ಟೆಂಬರ್ ಕೊನೆಯವರೆಗೆ, ಹಾಗೂ ಮುಂದೆಯೂ ಕಂತುಗಳಲ್ಲಿ ಮಳೆಬಿದ್ದು, ವರ್ಷದ ಸರಾಸರಿ ೧,೮೦೦ ರಿಂದ ೨,೪೦೦ ಮಿ.ಮಿ.ವರೆಗೆ ಆಗುವುದು. ಆದರೆ ಜುಲೈ ೨೬ ರಂದು ಒಂದೇ ದಿನ, ೯೪೪ ಮಿ.ಮಿ. ಮಳೆ ಹಿಂದಿನ ೯೫…
ಲೇಖಕರು: ahoratra
ವಿಧ: Basic page
May 25, 2006
ನನ್ನ ತಮ್ಮ. ಹುಡುಕಿ ಹುಡುಕಿ ಸಾಕಾಗಿದೆಹುಡುಗಿ ನಮಗೆ ಬೇಕಾಗಿದೆ ನನ್ನ ತಮ್ಮ ವೆಂಕಟಇವನಿಗಿಲ್ಲ ಸಂಕಟಇವನ ಮಾತು ಪಟಪಟನಮ್ಮ ಮನೆಯ ಗೊಮ್ಮಟ ಆಗಾಗ ಕುಡಿಯುವನುಹೊಟ್ಟೆ ತುಂಬ ಜ್ಯೂಸನುಬೇಕಾದರೆ ಸೇದುವನುಬಾವಿಯಿಂದ ನೀರನು ನಮ್ಮ ಹುಡುಗ ಸುಂದರಇವನ ಮನಸು ಮಂಧಿರಮೈಯ್ಯ ಬಣ್ಣ ಬಂಗಾರನಡತೆಯಲ್ಲಿ ಗಂಭೀರ. ಜೇನಿನಂತ ಹುಡುಗನುಕೆದಕಿದರೆ ಕುಟುಕುವನುಕೆಲಸದಲ್ಲಿ ಜಾಣನುನಿದ್ದೆಯಲ್ಲಿ ಕೋಣನು ಬೇಕಾಗಿದೆ ವರದಕ್ಷಿಣೆಹುಡುಗಿ ಮುಖದ ಲಕ್ಷಣಅವಳು ಪಡೆದ ಶಿಕ್ಷಣಗುರು ಹಿರಿಯರ ರಕ್ಷಣ ಅಹೋರಾತ್ರ.
ಲೇಖಕರು: tvsrinivas41
ವಿಧ: ಬ್ಲಾಗ್ ಬರಹ
May 25, 2006
ನಮ್ಮ ದೇಶದಲ್ಲಿ ಬಹಳವಾಗಿ ಉಕ್ತವಾಗುವ ಮಾತೆಂದರೆ 'ಮೇರಾ ಭಾರತ್ ಮಹಾನ್'. ನಾನು ಅದಕ್ಕೆ ಇನ್ನೊಂದನ್ನು ಸೇರಿಸಬಯಸುವೆ, ಮೇರಾ ಸೋಪ್ ಹಮಾಮ್. ಏಕೆಂದರೆ ಈ ಎರಡೂ ಚಿರಂಜೀವಿಗಳು (ನನ್ನ ಮಟ್ಟಿಗೆ). ಸ್ವತಂತ್ರ ಬಂದು ೬೦ ವರುಷಗಳಾಗುತ್ತಿದ್ದರೂ ನಮ್ಮ ದೇಶದ ಜನಸಂಖ್ಯೆ ಒಂದೇ ಮೇಲೇರುತ್ತಿರುವುದು. ಇದೊಂದು ದೃಷ್ಟಿಯಿಂದ ನಮ್ಮ ದೇಶ ಎಂದಿಗೂ ಮಹಾನ್. ಹಾಗೆಯೇ ಹಮಾಮ್ ಸೋಪನ್ನು ಉಪಯೋಗಿಸುವವರು ಅದನ್ನೇ ಉಪಯೋಗಿಸುತ್ತಿದ್ದಾರೆ (ನನ್ನಂತಹವರು - ಅಪ್ಪ ಹಾಕಿದ ಹಳೆಯ ಆಲದ ಮರಕ್ಕೇ ಜೋತು ಬೀಳುವಂತಹವರು…
ಲೇಖಕರು: ismail
ವಿಧ: Basic page
May 25, 2006
ಸಂಪದದ ಗೆಳೆಯರಿಗಾಗಿ ಈ ಬಾರಿ ಕನ್ನಡದ ಜನಪ್ರಿಯ, ಸೃಜನಶೀಲ ನಿರ್ದೇಶಕ ಟಿ ಎನ್ ಸೀತಾರಾಂರವರ ಸಂದರ್ಶನ. ರಂಗಭೂಮಿ ಹಿನ್ನೆಲೆಯಿಂದ ಬಂದ ಸ್ಪಷ್ಟ ರಾಜಕೀಯ ನಿಲುವುಗಳನ್ನು ಹೊಂದಿರುವ ಸೀತಾರಾಂ ಒಂದು ಸುಖೀ ಸಮಾಜದ ಕನಸನ್ನು ಹೊತ್ತವರು. ಅವರ ಈ ಆದರ್ಶವೇ ಅವರ ಕೃತಿಗಳ ಸಾಮಾಜಿಕ ಕಾಳಜಿಗಳ ಪ್ರೇರಣೆ. ರಂಗಭೂಮಿಯಲ್ಲಿ ತಮ್ಮ ಪ್ರತಿಭೆಯನ್ನು ಮೆರೆದ ಅವರು ಮಾಯಾಮೃಗ, ಮನ್ವಂತರಗಳಂಥ ಯಶಸ್ವೀ ಧಾರಾವಾಹಿಗಳಲ್ಲಿ ಕಿರುತೆರೆಗೂ ಸೀತಾರಾಂ ಶೈಲಿಯನ್ನು ಪರಿಚಿಯಿಸಿದರು. ಗಂಭೀರ ರಂಗಪ್ರಯೋಗಗಳಲ್ಲಿ…
ಲೇಖಕರು: ರಾಮಕುಮಾರ್
ವಿಧ: Basic page
May 25, 2006
೧. ಊರಿಗೆ ಬಂದವಳು ನೀರಿಗೆ ಬರದೆ ಇರುತ್ತಾಳೆಯೆ? ೨. ಮನೆಗೆ ಮಾರಿ ಊರಿಗೆ ಉಪಕಾರಿ. ೩. ಯಾರದೊ ದುಡ್ಡು ಎಲ್ಲಮ್ಮನ ಜಾತ್ರೆ. ೪. ಓಡ್ಹೋಗುವನ ಚಡ್ಡಿ ಹರಕಂಡಷ್ಟೆ ಲಾಭ. ೫. ಬರಗಾಲದಲ್ಲಿ ಅಧಿಕಮಾಸ ಬಂದ ಹಾಗೆ. ೬. ತಾನೂ ತಿನ್ನ, ಪರರಿಗೂ ಕೊಡ. ೭. ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು. ೮. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ? ೯. ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದ. ೧೦. ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ.
ಲೇಖಕರು: ahoratra
ವಿಧ: Basic page
May 25, 2006
ಚಲನೆ. ಚಲನೆ ಚಲನೆ ಚಲನೆ ಚಲನೆ, ನಿರಂತರದ ಜಗದ ಚಲನೆ, ಅಚಲನಾದ ಹರಿಯಲ್ಲಿಗೆ ಚರಾಚರದ ಚಲನೆ.//ಪ//. ಆಕಾಶದಿ ಹುಟ್ಟಿ ಬಂದ ಶಬ್ದ ತರಂಗಗಳ ಹೊತ್ತ ಗಾಳಿಯಿಂದ ಜ್ವಲಿಸುತಿರುವ ಅಗ್ನಿ ನಡೆಸೊ ನೀರಚಕ್ರ ಮಣ್ಣ…
ಲೇಖಕರು: ರಾಮಕುಮಾರ್
ವಿಧ: Basic page
May 25, 2006
೧. ನಾಯಿಗೆ ಹೇಳಿದರೆ ನಾಯಿ ತನ್ನ ಬಾಲಕ್ಕೆ ಹೇಳಿತು. ೨. ದಾನಕ್ಕೆ ಕೊಟ್ಟ ಎಮ್ಮೆಯ ಹಲ್ಲು ಎಣಿಸಿದರು. ೩. ಬಂದಷ್ಟು ಬಂತು ಬರಡೆಮ್ಮೆ ಹಾಲು. ೪. ಮೂರು ಕೋಟಿ ಜನ ಸೇರಲ್ಲಿಲ್ಲ ಮೈಲಾರಲಿಂಗನ ಜಾತ್ರೆ ನಡೀಲ್ಲಿಲ್ಲ. ೫. ಮೂರೂ ಬಿಟ್ಟವರು ಊರಿಗೆ ದೊಡ್ಡವರು. ೬. ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೀತು. ೭. ಎಮ್ಮೆ ತಪ್ಪಿದರೆ ಕಪ್ಪೆ ಹೊಂಡ. ೮. ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣಸಂಕಟ. ೯. ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ. ೧೦. ಕೋತಿ ತಾನು ಕೆಡೋದಲ್ಲದೆ ವನನೆಲ್ಲ ಕೆಡಿಸಿತ್ತು.…
ಲೇಖಕರು: ahoratra
ವಿಧ: ಬ್ಲಾಗ್ ಬರಹ
May 25, 2006
ನನ್ನ ಭಾಗ್ಯ. ದೇವ್ರಾಣೆ ನಿನ್ನಂಥ ಮಡದಿ ಸಿಗೋಲ್ಲಸಿಕ್ಕಾಗ ನಿನ್ಬೆಲೆ ಗೊತ್ತೇ ಇರಲಿಲ್ಲ/ನನ್ನಾಣೆ ನನ್ಬೆಲೆ ನಾಲ್ಕಾಣೆ ಇಲ್ಲನಿನ್ನಾಣೆ ನನ್ಮಾತು ನಂಬು ಸುಳ್ಳಲ್ಲ// ಕಲಿಕೆಯ ವಯಸಲಿ ಕುಲಗಳ ತೊರೆದುಹಿರಿಯರನೆದುರಿಸಿ ನನ್ನಲಿ ಬೆರೆತು/ಬಂಗಾರವಿಲ್ಲದ ಬಡತನದಲ್ಲಿಬಂಗಾರವಾಗಿ ನನ್ನನೀ ಸೇರಿದೆ// ಹುಟ್ಟೂರು ಬೆಳೆದೂರು ಕಲೆತೂರು ತೊರೆದುಹೊರನಾಡ ಬಂದು ನನ್ನೊಡನೆ ನಿಂತೆ/ಆಶಾಶೂನ್ಯದ ನಿನ್ನೊಡಗೂಡಿ ಭವಭಾರದಲೂ ನಾ ನಾಕವ ಕಂಡೆ// ಸಿಂಧೂರ ಶಿವಗಂಗ ರೋಹಿಣಿ ಪ್ರಣತಿಶಿವ ನಮಗೆ ಕೊಡುತಿರುವ ಸಂಹಿತೆ ಸೇರಿ/…