ಎಲ್ಲ ಪುಟಗಳು

ಲೇಖಕರು: venkatesh
ವಿಧ: Basic page
April 23, 2006
ಡಾ. ರಾಜ್ ಕುಮಾರ್ ರವರಿಗೆ ನಮ್ಮ ಭಾವಪೂರ್ಣ ಶ್ರಧ್ಧಾಂಜಲಿಗಳು ! ಈ ತಿಂಗಳ ೨೪ ರಂದು ಡಾ. ರ್‍ಆಜ್ ಕುಮಾರ್ ಹುಟ್ಟಿದಹಬ್ಬ. ೭೭ ವರ್ಷಗಳು ತುಂಬಿ ೭೮ ಕ್ಕೆ ಕಾಲಿರಿಸುತ್ತಾರೆ. ಕನ್ನಡದ ಕೋಟಿ ಕೋಟಿ ಜನರ ಹೃದಯ ಸಿಂಹಾಸನದಲ್ಲಿ ಅವರು ನಟ ರಾಜ್ ಆಗಿ ಮೆರೆದ ವರ್ಷಗಳು ಅನನ್ಯ. ಅವರೀಗ ಭೌತಿಕವಾಗಿ ಕಾಣಿಸದಿದ್ದರೂ ನಮ್ಮೆಲ್ಲರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತಾರೆ ! ಆ ಕ್ಷಣಗಳನ್ನು ಸ್ಮರಿಸಲು ಬರೆದ ಭಾವಪೂರ್ಣ 'ಶ್ರಧ್ಧಾಂಜಲಿ' ಇದು. ಪಾರ್ಕಿನೊಳು ಕುಳಿತೆದ್ದೆ ಥಟ್ಟನು ಲಿಯಿತು ಮನವು…
ಲೇಖಕರು: ಶ್ರೀನಿಧಿ
ವಿಧ: ಚರ್ಚೆಯ ವಿಷಯ
April 23, 2006
ಹಾಲು ಚೆಲ್ಲಿದಂತಿದ್ದ ವಿಶಾಲವಾದ ಅಂಗಳ. ತಾಯಿಯ ನೀಲಿ ಸೀರೆಯ ಹಿಂದೆ ಅಡಗಿಕೊಳ್ಳುವ ಮುದ್ದು ಮಗುವಿನಂತೆ ಕಾರ್ಮೋಡಗಳಡೆಯಿಂದ ಬೆಳದಿಂಗಳನ್ನು ಚೆಲ್ಲುತ್ತಿರುವ ಹುಣ್ಣಿಮೆ ಚಂದ್ರ. ಈ ಸನ್ನಿವೇಶದಲ್ಲಿ ನನಗೇ ಗೊತ್ತಿಲ್ಲದಂತೆ ನನ್ನ ಕಿವಿ-ಮನಸ್ಸುಗಳನ್ನು ಅವಳು ಸೂರೆಗೊಂಡಳು. ನಂತರ ತಿಳಿಯಿತು ಅವಲ ಹೆಸರು ಸುಚರಿತ್ರಾ ಎಂದು. ಇದೇನಿದು ಯಾವುದೋ ಪ್ರೇಮಕಥೆ ಅಂದ್ಕೋಬೇಡಿ ಮತ್ತೆ. ಹಿಂದಿನ ತಿಂಗಳು ಸಂಜಯ್ ಸುಬ್ರಮಣ್ಯಂ ಅವರ ಕಛೇರಿಯಲ್ಲಿ ಕೇಳಿದ ರಾಗ. ವಿಶೇಷ ಏನು ಅಂತಿರಾ?? ಇದನ್ನು ನಾನು ಮುಂಚೆ…
ಲೇಖಕರು: aithalsandy
ವಿಧ: Basic page
April 22, 2006
ಶಂಕರ್ ನಾಗ್ ,ಮಂಜು & ಆಗುಂಬೆ ಇಲ್ದಿದ್ರೆ ನಮಗೆ,ಮಾಲ್ಗುಡಿ ಮನಸ್ಸಿಗೆ ನಾಟ್ತಾ ಇರ್ಲಿಲ್ವೇನೋ... ಮಲ್ಲೇಶ್ವರಂ + ಬಸವನಗುಡಿ = ಮಾಲ್ಗುಡಿ ಮೈಲಾಪುರ + ಲಾಲ್ಗುಡಿ = ಮಾಲ್ಗುಡಿ ಮಾಲ್ಗುಡಿ ಹೆಸರಿನ ಸ್ಪೂರ್ತಿ ಬೇರೆ ಯಾವ್ದಾದ್ರು ಇದ್ರೆ ತಿಳಿಸಿ... Netಲ್ಲಿ ಸಿಕ್ಕಿದ್ದು, ಮಾಲ್ಗುಡಿ ಮಾಂತ್ರಿಕನಿಗೆ ವಿಶ್ವದ ಅತ್ಯುತ್ತಮ ಪತ್ರಿಕೆಗಳಲ್ಲಿ ಒಂದಾದ ನ್ಯೂಯಾರ್ಕ್ ಟೈಮ್ಸ್ ನ ನಮನಗಳು http://www.nytimes.com/2001/05/14/obituaries/14NARA.html?ei=5070&en=ebc04998d356a939…
ಲೇಖಕರು: shreekant.mishrikoti
ವಿಧ: Basic page
April 22, 2006
ಎತ್ತು ಚಲೋದಾದರೆ ಇದ್ದ ಊರಲ್ಲೇ ಗಿರಾಕಿ. ಕಟ್ಟಲಿಲ್ಲ ಬಿಚ್ಚಲಿಲ್ಲ ಹಿ೦ಡಿಕೊಳ್ಳೋಕೆ ಹೊತ್ತಾಯ್ತು ಅ೦ದಳು. ಕತ್ತೆ ತಪ್ಪಿಸಿಕೊ೦ಡರೆ ಹುಡುಕುತಾರ್‍ಯೇ? ಆಕಳಿದ್ದವನಿಗೆ ವ್ಯಾಕುಲವಿಲ್ಲ. ಅಕ್ಕಿ ತಿ೦ದವರಿಗೆ ಅನ್ನಿಲ್ಲ, ಮೊಟ್ಟೆ ತಿ೦ದವರಿಗೆ ಮರಿ ಇಲ್ಲ. ಆಕಳ ಹೊಟ್ಟೆಯಲ್ಲಿ ಅಚ್ಚೇರು ಬ೦ಗಾರ. ಉಳೋ ಎತ್ತಾದರೆ ಇರೋ ಊರಿನಲ್ಲಿ ಬೆಲೆಯಾಗದೇ. ಗುಡ್ಡದ ಮೇಲೆ ಕಪಿ ಸತ್ತರೆ ಊರಿಗೆಲ್ಲಾ ಸೂತಕ. ಯಾರ ಹೆ೦ಡ್ತಿ ಎಲ್ಲಿಯಾದರೂ ಹೋಗಲಿ ನಮ್ಮ ಹೆ೦ಡ್ತಿ ನಮ್ಮನೇಲಿರಲಿ ಯಾವ ದೇವರು ವರ ಕೊಟ್ಟರೂ ಗ೦ಡನಿಲ್ಲದೆ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
April 22, 2006
ನೀವು ಪುರಂದರದಾಸರ 'ಹರಿದಾಸರ ಸಂಗ ದೊರಕಿತು ಎನಗೆ , ಇನ್ನೇನಿನ್ನೇನು ? ' ಹಾಡನ್ನು ಕೇಳಿದ್ದೀರಾ? . ನಾನು ಬಾಲಮುರಳಿಕೃಷ್ಣ ಅವರ ಧ್ವನಿಯಲ್ಲಿ ಕೇಳಿದ್ದೇನೆ. ಇತ್ತೀಚೆಗೆ ನಾನು ನಮ್ಮ ಸಂಸ್ಥೆಯಲ್ಲಿ ಇಪ್ಪತ್ತು ವರ್ಷಗಳ ಸೇವೆಯನ್ನು ಪೂರ್‍ಐಸಿದೆ . ಆ ಕಾರಣದಿಂದ ನಿವೃತ್ತಿವೇತನ ( ಅದು ಎಷ್ಟೇ ಇರಲಿ , ಆ ಮಾತು ಬೇರೆ) ಸೌಲಭ್ಯಕ್ಕೆ ಹಕ್ಕುದಾರನಾದೆ . ಇದು ಒಂದು ಪ್ರಮುಖ ಮೈಲಿಗಲ್ಲೇ ಸರಿ . ಆ ಸಂತೋಷದಲ್ಲಿ ನಾನು ಹೀಗೆ ಹಾಡಿಕೊಂಡೆ. ಇಪ್ಪತ್ತು ವರುಷ ಆಯಿತು ಸರ್ವೀಸು,…
ಲೇಖಕರು: shreekant.mishrikoti
ವಿಧ: Basic page
April 22, 2006
ಕಾಸಿಗೆ ತಕ್ಕ ಕಜ್ಜಾಯ ಹೆತ್ತೋರ್ಗೆ ಹೆಗ್ಗಣ ಮುದ್ದು, ಕಟ್ಗೊಂಡೋರ್ಗೆ ಕೋಡಂಗಿ ಮುದ್ದು ಅಡುಗೆ ಮಾಡಿದವಳಿಗಿಂತ ಬಡಿಸಿದವಳೆ ಮೇಲು ಕೋಣೆಯ ಕೂಸು ಕೊಳೆಯಿತು; ಓಣಿಯ ಕೂಸು ಬೆಳೆಯಿತು ಕೂರೆಗೆ ಹೆದರಿ ಸಂತೆಯಲ್ಲಿ ಸೀರೆ ಬಿಚ್ಚಿದರಂತೆ ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಕೋಪದಲ್ಲಿ ಕೊಯ್ದ ಮೂಗು ಶಾಂತವಾದ ಮೇಲೆ ಬರುತ್ತದೆಯೆ ? ಕದ ತಿನ್ನೋವನಿಗೆ ಹಪ್ಪಳ ಈಡಲ್ಲ ಕಣ್ಣರಿಯದಿದ್ದರೂ ಕರುಳರಿಯುತ್ತದೆ ಹಳೇ ಚಪ್ಪಲಿ, ಹೊಸಾ ಹೆಂಡತಿ ಕಚ್ಚುಲ್ಲ ನಮಸ್ಕಾರ ಮಾಡಲು ಹೋಗಿ ದೇವಸ್ಥಾನದ ಗೋಪುರ ತಲೇ ಮೇಲೆ…
ಲೇಖಕರು: shreenidhi
ವಿಧ: ಚರ್ಚೆಯ ವಿಷಯ
April 22, 2006
ಎಲ್ಲರಿಗೂ ನಮಸ್ತೆ.... ನಾನು ಸಂಪದ ದ ಸದಸ್ಯನಾಗಿ ಒಂದು ತಿಂಗಳಾಯ್ತು.... ಇನ್ನೂ ಪರಿಚಯಿಸಿಕೊಂಡಿರಲಿಲ್ಲ.. ಕಾರಣ, ಸೋಮಾರಿತನ ! ನಾನು ಸಾಹಿತ್ಯಾಸಕ್ತ,ಬರಹಗಾರ. ಕತೆ , ಕವನಗಳು, ನನಗೆ ಖುಷಿ ಕೊಡುವ ಪ್ರಕಾರಗಳು.ಈವರೆಗೆ ಅಲ್ಪ-ಸ್ವಲ್ಪ ಬರೆದು, ಹಾಗೇ ಇಟ್ಟಿದ್ದೇನೆ. ಇನ್ನಾದರೂ ಹಂಚಿಕೊಳ್ಳುವ ಪ್ರಯತ್ನ ಮಾಡುತ್ತೇನೆ.ಸಂಪದ ದ ಗೊಂಚಲಿನ ಹೀಚುಕಾಯಿ ನಾನು,ನೀವು ಬೆಳೆಯಲು ಪ್ರೋತ್ಸಾಹಿಸುತ್ತೀರಿ ಎಂಬ ವಿಶ್ವಾಸದೊಂದಿಗೆ, ಶ್ರೀನಿಧಿ.ಡಿ.ಎಸ್.
ಲೇಖಕರು: tvsrinivas41
ವಿಧ: Basic page
April 22, 2006
ಈ ಬದುಕೊಂದು ತನಗೆ ತಾನೇ ಬ್ಯಾಲೆನ್ಸಾಗುವ ಶೀಟು ಒಂದೆಡೆ ಏರಿಸಿದರೆ ಹ್ಯಾಟು ಇನ್ನೊಂದೆಡೆ ಸೇರುವುದು ಬೂಟು ಅಪ್ಪ ಅಮ್ಮ ನೀಡಿದುದೇ ಅಸಲು ಬಂಡವಾಳ ಕರ್ಮಗಳಿಗನುಸಾರವಾಗುಳಿಯುವುದು ನಿವ್ವಳ ಪಾಲಕರು ನೀಡುವುದೇ ಪ್ರಿಫರೆನ್ಸ್ ಶೇರ್‍ಸು ಋಣ ತೀರಿಸಲು ಮೊದಲು ಅವರನು ಪಾಲಿಸು ಮುಂದೆ ಹಾದಿ ತೋರುವವರೇ ಡಿಬೆಂಚರ್‍ಸು ಕೈ ಹಿಡಿದು ನಡೆಸಿದವರ ನೀನೆಂದೂ ನೆನೆಸು ಕೈ ನಡೆಸುವ ಹೆಂಡತಿ ಮಕ್ಕಳೇ ಕ್ಯಾಷ್ ಬ್ಯಾಲೆನ್ಸು ಮುಂದಿನ ಬಾಳಿಗೆ ಹಾದಿ ತೋರುವವರೇ ಬ್ಯಾಂಕ್ ಬ್ಯಾಲೆನ್ಸು ಕೆಲಸಕ್ಕೆ ಫಲ ನೀಡಿದವರೇ ಎನ್.…
ಲೇಖಕರು: honnung
ವಿಧ: ಚರ್ಚೆಯ ವಿಷಯ
April 21, 2006
ಇದನ್ನು ನೋಡಿ. ಇದು ಭಾರತ ಸರಕಾರ ಹಾಗೂ ಪ್ರೈವೇಟ್ ಕಂಪನಿಗಳು ಕೂಡಿ ತಯಾರಿಸಿದ ಅಂತರ್ಜಾಲ ತಾಣ. ಇದರಲ್ಲಿ ಇತ್ತೀಚಿನ ವಾತಾಮಾನ ವರದಿ ಪಡೆಯಬಹುದು. [http://www.indiaweatherwatch.org/|ಹವಾಮಾನ ವರದಿ] ಉಳಿದ ಸರಕಾರಿ ತಾಣಗಳಿಗೆ ಹೋಲಿಸಿದರೆ ಉತ್ತಮವೇ ಅನ್ನಬಹುದು. ಇಲ್ಲಿ ಅನೇಕ ನಗರಗಳ, ಪ್ರಾಂತ್ಯಗಳ ಉಷ್ಣತೆ, ಮಳೆ ಪ್ರಮಾಣ ಲಭ್ಯವಿದೆ. ವೈಪರಿತ್ಯಗಳ ಬಗ್ಗೆ ಎಚ್ಚರಿಕೆ ಸಹ ಲಭ್ಯವಿದೆ. ಇನ್ನೂ ಅನೇಕ ಪ್ರಾಂತ್ಯಗಳು, ನಗರಗಳು ಇದರಲ್ಲಿ ಸೇರಿಸಿ ವಿಸ್ತರಿಸಬಹುದು. ಉದಾಹರಣೆಗೆ ನಮ್ಮ…
ಲೇಖಕರು: Rohit
ವಿಧ: ಚರ್ಚೆಯ ವಿಷಯ
April 20, 2006
 ಗೆಳೆಯರೆ,  Personal Computing  ಗೆ ಅಗತ್ಯ ತಂತ್ರಾಂಶಗಳನ್ನು ಪೂರೈಸುವ ಅಗ್ರಗಣ್ಯ ಸಂಸ್ಥೆ, ಮೈಕ್ರೋಸಾಫ್ಟಿನ ಜನಪ್ರಿಯ ಆಪರೇಟಿಂಗ್ ಸಿಸ್ಟಂ ವಿಂಡೋಸ್ XP. ಇದರಲ್ಲಿ ಇತ್ತೀಚೆಗೆ ಕನ್ನಡವೂ ಸೇರಿದಂತೆ ಇತರ ಭಾರತೀಯ ಭಾಷೆಗಳನ್ನು ಸೇರಿಸುವ ಪ್ರಯತ್ನಗಳು ನಡೆಯುತ್ತಿವೆ. ಈಗಾಗಲೇ ಕನ್ನಡದ ಒಂದು ಆವೃತ್ತಿ ಬಿಡುಗಡೆಯಾಗಿದೆ. ಹಿಂದೆ ಕನ್ನಡವನ್ನು ಬಳಸಲು ಪರಿಮಿತ ಸೌಲಭ್ಯವಿತ್ತು. ಆದರೆ ಈಗಿನ ಆವೃತ್ತಿಯಲ್ಲಿ ಹೆಚ್ಚಿನ ಸೌಲಭ್ಯಗಳು ಇವೆ ಎಂದು ಬೀಗುತ್ತ, 'ತುಂಗಾ' ಫಾಂಟಿನಲ್ಲಿಯ ದೋಷಗಳನ್ನು ಅವರು…