ಎಲ್ಲ ಪುಟಗಳು

ಲೇಖಕರು: ismail
ವಿಧ: ಬ್ಲಾಗ್ ಬರಹ
April 08, 2006
ಸಂಪದ ಆಗಷ್ಟೇ ಆರಂಭವಾಗಿತ್ತು. ಇಷ್ಟೂ ಕಾಲವೂ ಕಚೇರಿ ಕಂಪ್ಯೂಟರ್‌ಗಳಲ್ಲಿಯೇ ನನ್ನ ಕಲಿಕಾ ಸಾಹಸವನ್ನು ನಡೆಸಿದ್ದ ನಾನು ಕೊನೆಗೂ ಒಂದು ಕಂಪ್ಯೂಟರ್‌ ಕೊಂಡಿದ್ದೆ. ಮನೆಯಲ್ಲಿದ್ದ ಕಂಪ್ಯೂಟರ್‌ನಲ್ಲಿ ಯೂನಿಕೋಡ್‌ ಸವಲತ್ತಿದ್ದರೂ ಅದರಲ್ಲಿ ಇಂಟರ್ನೆಟ್‌ ಇರಲಿಲ್ಲ. ಅದನ್ನು ಪಡೆಯುವ ಯೋಚನೆಯೂ ನನಗಾಗ ಇರಲಿಲ್ಲ. ಕಚೇರಿಯಲ್ಲಿ ಇಂಟರ್ನೆಟ್‌ ಸವಲತ್ತೇನೋ ಇತ್ತು. ಆದರೆ ಅಲ್ಲಿರುವ ಕಂಪ್ಯೂಟರ್‌ಗಳೆಲ್ಲವೂ ವಿಂಡೋಸ್‌-98 ಆಪರೇಟಿಂಗ್‌ ಸಿಸ್ಟಂನಲ್ಲಿ ಕಲೆಸ ಮಾಡುತ್ತಿದ್ದವು. ಇಷ್ಟರಲ್ಲೆ ಸಂಪದಕ್ಕೆ ಕೆಲವು…
ಲೇಖಕರು: hpn
ವಿಧ: ಚರ್ಚೆಯ ವಿಷಯ
April 08, 2006
ವಿಂಡೋಸ್ ನೊಂದಿಗೆ ಲಿನಕ್ಸ್ dual boot ಮಾಡಿ ಕೆಲವರು ಬಳಸಿದ್ದೀರಿ. ವಿಂಡೋಸ್ ನಲ್ಲಿ ಲಿನಕ್ಸ್ ಎಮ್ಯುಲೇಟರ್ ಬಳಸಿ ಕೆಲವರು ಉಪಯೋಗಿಸಿದ್ದೀರಿ. ಈಗ ನೋಡಿ, ಇವೆಲ್ಲದರಕ್ಕಿಂತ ಚೆಂದವಾದ ಒಂದು ಸವಲತ್ತು - ಮ್ಯಾಕ್ ವಿಂಡೋಸ್ ನೊಂದಿಗೆ ಬಳಸಬಹುದು! dual boot ಆಗಿ ಮಾತ್ರವಲ್ಲ, ಜೊತೆ ಜೊತೆಗೇ! ಹೆಚ್ಚೇನೂ ಸಂಪನ್ಮೂಲಗಳನ್ನೂ ತಿನ್ನೋದಿಲ್ಲ ಅನ್ನುತ್ತಾರಂತೆ, ಇದನ್ನು ಸಾಧ್ಯವಾಗಿಸಿದವರು: ವೈರ್ಡ್ ಪತ್ರಿಕೆಯಲ್ಲಿ ಬಂದಿರುವ ಈ‌ ಲೇಖನ ಓದಿ.
ಲೇಖಕರು: tvsrinivas41
ವಿಧ: Basic page
April 08, 2006
ಮಾಮೂಲಿನಂತೆ ಇಂದು ಬೆಳಗ್ಗೆ ೭.೧೫ಕ್ಕೆ ಬ್ಯಾಂಕಿಗೆ ಹೋಗಲು ಗೋರೆಗಾಂವ್ ರೈಲ್ವೇ ಸ್ಟೇಷನ್ನಿಗೆ ಹೋದೆನು. ಆಗ ೭.೧೦ರ ಫಾಸ್ಟ್ ಗಾಡಿ ಬರುತ್ತಿರುವುದು ಕಾಣಿಸಿತು. ಈ ಗಾಡಿಯಲ್ಲಿ ಹೋದರೆ ೭.೫೦ಕ್ಕೆ ಚರ್ಚ್‍ಗೇಟ್ ತಲುಪುತ್ತೇನೆ, ಅದರ ಬದಲಿಗೆ ನಂತರದ ೭.೧೪ ರ ಸ್ಲೋ ಗಾಡಿಯಲ್ಲಿ ಹೋದರೆ ೮.೦೦ ಘಂಟೆಗೆ ಚರ್ಚ್‍ಗೇಟ್ ತಲುಪುತ್ತೇನೆ. ಅಲ್ಲಿಂದ ನಮ್ಮ ಆಫೀಸಿಗೆ ಹೋಗಲು ಮೊದಲ ಬಸ್ಸು ಇರುವುದು ೮.೧೫ಕ್ಕೆ. ಯಾವುದರಲ್ಲಿ ಹೊರಟರೂ ತೊಂದರೆ ಇಲ್ಲ. ಆದರೆ ಸ್ಲೋ ಗಾಡಿಯಲ್ಲಿ ಹೊರಟರೆ ಗೋರೆಗಾಂವಿನಲ್ಲೇ…
ಲೇಖಕರು: ರಘುನಂದನ
ವಿಧ: ಬ್ಲಾಗ್ ಬರಹ
April 07, 2006
(ಮೊದಲನೆ ಭಾಗವನ್ನು ಓದಿರದಿದ್ದಲ್ಲಿ ಇಲ್ಲಿ ಕ್ಲಿಕ್ ಮಾಡಿರಿ http://sampada.net/node/1412) ಕೈ ಸೋಲಲು ಆರಂಭವಾಯ್ತು, ಒಂದೇ ಒಂದು ಅರೆಚಣ (fraction of a second?) ನಿಂತರೆ ಇನ್ನೊಂದಿಷ್ಟು ಜೋರಾಗಿ ಕೈಬೀಸಬಹುದು ಎನ್ನಿಸಿ ಕಾಲು ನೆಲಕ್ಕಿಡಲು ಪ್ರಯತ್ನಿಸಿದೆ ಎದೆ ಝಲ್ಲೆಂದಿತು! ನೆಲವೇ ತಾಕುತ್ತಿಲ್ಲ ಕಾಲಿಗೆ! ಮಾತ್ರವಲ್ಲ ಅಷ್ಟು ಮಾತ್ರದ ಈಜನ್ನು ನಿಲ್ಲಿಸಿದ ಪರಿಣಾಮ ನೀರಿನ ರಭಸಕ್ಕೆ ಕೊಚ್ಚಿ ಇನ್ನೆಲ್ಲಿಗೋ ಹೋಗತೊಡಗಿದೆ. "ಮುಗೀತಲೆ ಮಗನೆ ನಿನ್ ವ್ಯವಹಾರ!" ಅಂತ ಮನಸ್ಸಿನಲ್ಲಿ…
ಲೇಖಕರು: hpn
ವಿಧ: ಬ್ಲಾಗ್ ಬರಹ
April 07, 2006
ನನ್ನ ಬಳಿ ಉಬುಂಟುವಿನ ಹೊಸ ಆವೃತ್ತಿಯಾದ 'ಡ್ಯಾಪರ್' ಇಲ್ಲವಾದ್ದರಿಂದ ಅದರಲ್ಲಿ ಕನ್ನಡ ಕುರಿತ ಕೆಲವು ಸಮಸ್ಯೆಗಳನ್ನು ಟೆಸ್ಟ್ ಮಾಡಿ ನೋಡಲಾಗಿರಲಿಲ್ಲ. ಇಂದು ಹಳೆಯ ಸ್ನೇಹಿತನೊಬ್ಬ ಮಾತಿಗೆ ಸಿಕ್ಕಾಗ "ಅಯ್ಯೋ, ನನ್ನ ಕಂಪ್ಯೂಟರಿನಲ್ಲಿ ಇವತ್ತಿನ ಫ್ರೆಶ್ ಕಾಪಿ install ಮಾಡಿರುವೆ, ಅದರಲ್ಲೇ ಟೆಸ್ಟ್ ಮಾಡಿ ನೋಡು" ಎಂದ. ಈಗ ಅಮೇರಿಕದಲ್ಲಿ ಅವನ ಮನೆ. ಬೆಂಗಳೂರಿನಿಂದ ಅಮೇರಿಕದ ಅವನ ಕಂಪ್ಯೂಟರಿಗೇ ಲಾಗಿನ್ ಆಗಿದ್ದೆ. ಲಾಗಿನ್ ಆಗಲು ಬಳಸಿದ್ದ ಉಪಕರಣ - nxclient. ಸರಿ, ಇವೆಲ್ಲ ಯಾಕೆ ಇಲ್ಲಿ…
ಲೇಖಕರು: keshava
ವಿಧ: ಬ್ಲಾಗ್ ಬರಹ
April 07, 2006
ಸರ್ವಜ್ಞನೆ೦ಬುವನು ಗರ್ವದಿ೦ದಾದವನೆ ಸರ್ವರೊಳು ಒ೦ದು೦ದು ನುಡಿಗಲಿತು ವಿದ್ಯೆಯಾ ಪರ್ವತವೆ ಆದ ಸರ್ವಜ್ಞ ||
ಲೇಖಕರು: ಶ್ರೀಶಕಾರಂತ
ವಿಧ: ಬ್ಲಾಗ್ ಬರಹ
April 07, 2006
ಪ್ರೇಮದಾ ಹೊಳೆ ಹರಿಯೆ ಮೊದಲನೇ ನೋಟದಲೆ , ಬಿಸಿಯುಸಿರ ಉನ್ಮಾದ ನತರದಲಿ | ಕೊನೆಗೊಮ್ಮೆ ಕಳಚುವುದು ಹುಸಿ ಪ್ರೇಮದಾ ಕೊಂಡಿ, ಮೊದಲಿರಲಿ ಉಪ ತೀಕ್ಶ್ಣ ನೋಟ ಪಂಡಿತಪುತ್ರ || -- ಸಾಕ್ರೆಟಿಸನಿಗೆ ಅವನ ಶಿಷ್ಯನೊಬ್ಬ...ಗುರುವೇ...luv at first sight ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದಾಗ.... ಸಾಕ್ರೇಟಿಸನು....ಮುಗುಳ್ನಕ್ಕು...have a sensible second look ...ಎಂದನಂತೆ.... ನನಗೂ ನಿಜವೆನ್ನಿಸಿತು......ಅದಕ್ಕೆ ಯಾವಾಗಲೂ ಒಂದು ಉಪ ತೀಕ್ಶ್ಣ ನೋಟವಿರಲಿ ...ಅನ್ನುವುದು..ನನ್ನ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
April 07, 2006
ಶ್ರೀ ರಾಮಚಂದ್ರನ ಶ್ರೇಷ್ಠ ಗುಣ ಯಾವದು ನಿಮಗೆ ಗೊತ್ತೇ ? ಅದು ಮಾತಿಗೆ ಮೊದಲು ಮುಗುಳ್ನಗುವ ಗುಣ . ಸ್ಮಿತ ಪೂರ್ವಾಭಿಭಾಷೀ ಶ್ರೀ ರಾಮಚಂದ್ರನ ಈ ಗುಣ ನಾವೂ ಏಕೆ ಅಳವಡಿಸಿಕೊಳ್ಳಬಾರದು ? ನಮ್ಮ ಸಂವಹನ ಉತ್ತಮವಾಗುತ್ತದೆ . ಕಲಹಕ್ಕೆ ಅವಕಾಶ ಕಡಿಮೆಯಾಗಿ , ಸ್ನೇಹ ,ಪ್ರ್‍ಈತಿ ಹೆಚ್ಚುತ್ತವೆ . ಅನೇಕ ಸಮಸ್ಯೆಗಳು ಸುಲಭವಾಗಿ ಬಗೆ ಹರಿದಾವು.
ಲೇಖಕರು: ಶ್ರೀನಿಧಿ
ವಿಧ: ಬ್ಲಾಗ್ ಬರಹ
April 07, 2006
ನಾನು ಆಗ ಮೊದಲ ಪದವಿ ಪೂರ್ವ (೧೧ನೇ) ತರಗತಿ ಎಂದು ನೆನಪು. "ಹಂಸಗೀತೆ" ಚಿತ್ರದಲ್ಲಿ ಬಾಲಮುರಳಿಯ ಗೀತಗೋವಿಂದದ ಹಾಡುಗಳನ್ನು ಕೇಳಿ ಪುಳಕಿತನಾಗಿದ್ದೆ. ಸರಿ ಗೀತ ಗೀತ-ಗೋವಿಂದದ ಪುಸ್ತಕಕ್ಕೆ ಹುಡುಕತೊಡಗಿದೆ. ನನ್ನ ಅಜ್ಜಿಯ ಬಳಿ ಗೀತಗೋವಿಂದ ಓದಬೇಕು ಎಂದಾಗ ಅಷ್ಟು ದೊಡ್ಡವನಾಗಿದ್ದೀಯಾ ಎಂದು ನಕ್ಕಿದ್ದರು. ಪುಸ್ತಕವೇನೋ ಸಿಕ್ಕಿತು ಆದರೆ ನನ್ನ ಸೋಮಾರಿತನ ಪುಸ್ತಕವನ್ನು ಮೂಲೆಗೆ ಸರಿಸಿತು. ಮೊನ್ನೆ ಸಂಜಯ್ ಸುಬ್ರಹ್ಮಣ್ಯಂ ಅವರ ಕಛೇರಿ ಕೇಳಿದ ನಂತರ ಆಸಕ್ತಿ ಕೆರಳಿತು. ಅದನ್ನು ಸಂಪದದಲ್ಲಿ ಯಾವ…
ಲೇಖಕರು: venkatesh
ವಿಧ: Basic page
April 07, 2006
ಮಕ್ಕಳ ಸಾಹಿತ್ಯ, ಮತ್ತು ಅವರಿಗೆ ಬೇಕಾದ ಕಥೆಗಳು !  ಭಾರತದಲ್ಲಿ ಮಕ್ಕಳ ಸಾಹಿತ್ಯ ಪರಂಪರೆ ಬಹಳ ಪ್ರಾಚೀನವಾದದ್ದು ! ಇದು, ಬಹುಶಃ ವಿಷ್ಣು ಶರ್ಮರು ಬರೆದ 'ಪಂಚತಂತ್ರ,' ದಿಂದ ಪ್ರಾರಂಭವಾಗಿರಬಹುದು. ಇಲ್ಲಿ ಪ್ರಯೋಗಿಸುವ ತಂತ್ರವೆಂದರೆ, ಯವುದೋ ರಾಜಕುಮಾರನಿಗೆ, ಕಥೆಯ ರೂಪದಲ್ಲಿ ನೀತಿ ಬೊಧಿಸುವ ರೀತಿ; ಕಥೆಗಳಲ್ಲಿ ಕಾಡುಪ್ರಾಣಿಗಳು ತಮ್ಮ ಸಹಜ ಸ್ಥಿತಿಯಲ್ಲೂ ಮನುಷ್ಯರಂತೆಯೇ, ಯೋಚಿಸುತ್ತ ಮಕ್ಕಳ ಮನಸ್ಸನ್ನು ಸೆರೆಹಿಡಿಯುವ ಅದ್ಭುತ ರೀತಿ, ಅನನ್ಯವಾಗಿದೆ ! ಮಕ್ಕಳ ಕಲ್ಪನಾಲೋಕದಲ್ಲಿ…