ವಿಧ: ಬ್ಲಾಗ್ ಬರಹ
March 30, 2006
ಡಾ. ಯು.ಬಿ.ರಾವ್- ಒಂದು ಸವಿನೆನಪು !
ನನಗೆ ಪರಿಚಯವಿದ್ದ ಮೂರು ಯು.ಬಿ.ರಾವ್ ಗಳಲ್ಲಿ, ಒಬ್ಬರು ವ್ಯಾಪಾರಿ, ; ಇನ್ನೊಬ್ಬರು ಸಂಶೋಧಕರು, ಮತ್ತು ಕೊನೆಯವರೇ ಡಾ. ಯು.ಬಿ.ರಾವ್, ಇಲ್ಲಿ ನಾನು ಹೇಳಬಯಸುತ್ತಿರುವ ವ್ಯಕ್ತಿ ! ಇವರು ನಮ್ಮ ಆಫೀಸ್ ನ 'ಪೇನಲ್ ಡಾಕ್ಟರ್'. ಮುಂಬೈ ನ ಮಾಟುಂಗಾದಲ್ಲೇ ಬಹಳ ಜನಪ್ರಿಯ ವೈದ್ಯರು !
ಒಮ್ಮೆ ನಾನು ನನ್ನ ಹೆಂಡತಿ, ನಮ್ಮ ಮಗು ರವಿ ಯನ್ನು ಅವರಬಳಿ ತೋರಿಸಲೆಂದು ಕರೆದುಕೊಂಡು ಹೋಗಿದ್ದೆವು. ರವಿ, ಸ್ಪಲ್ಪ ಸಪೂರಾಗಿದ್ದ. ಆದರೆ ಆಟ ಆಡಿಕೊಂದಿದ್ದ; ಗೆಲುವಾಗಿದ್ದ…
ವಿಧ: Basic page
March 30, 2006
"ಚಾಂದ್ರಮಾನ ಉಗಾದಿಯ" ಶುಭಾರಂಭವಾಗಿದೆ. ಎಲ್ಲೆಲ್ಲೂ ಮಂಗಳಮಯ ವಾತಾವರಣ ತುಂಬಿದೆ. ಕವಿಯವರ್ಣನೆ ಎಷ್ಟು ಅನ್ವರ್ಥವಾಗಿದೆ. ಪ್ರಕ್ರುತಿಯ ಸೊಬಗು ಹೇಳತೀರದು. ಎಷ್ಟೋ ದಿನ ಎಲ್ಲೋ ಅಡಗಿದ್ದ ಕೋಗಿಲೆ, ವಸಂತದ ಆಗಮನವಾಗುತ್ತಿದ್ದಂತೆಯೇ ತನ್ನ ಮಧುರ ಗಾನವನ್ನು ಉಣಬಡಿಸುತ್ತಿದೆ. ಎಲ್ಲಕಡೆ ಹಸಿರು, ಬೀಸುವ ಗಾಳಿಯಲ್ಲೂ ಮಧುರತೆ ಕಾಣಬರುತ್ತಿದೆ. ಪಕ್ಷಿಗಳ ಚಿಲಿಪಿಲಿ ಗಾನದಲ್ಲೂ ಏನೋ ಸಂಭ್ರಮ ಇದೆಯಲ್ಲ !
ಯುಗಾದಿಯ ದಿನ ಶುರುವಾಗುವುದು ಹೀಗೆ:
ಇನ್ನು ಸ್ವಲ್ಪ ಹೊತ್ತಿನಲ್ಲೇ ಬಾಗಿಲಿಗೆ ಮಾವಿನತಳಿರಿನ…
ವಿಧ: Basic page
March 29, 2006
ಬಾಗಿಲು ಮುರಿದು ಹೋಗುವವರಿಗೆ ಬೀಗದ ಕೈ ಏಕೆ?
ಬಾವಿ ಬಳಸದೆ ಕೆಟ್ಟಿತು ; ನೆಂಟಸ್ತಿಕೆ ಹೋಗದೆ ಕೆಟ್ಟಿತು.
ತಾಯಿ ಹೊಟ್ಟೆ ನೋಡಿದಳು , ಹೆಂಡತಿ ಮೊಟ್ಟೆ( ಹಣದ ಗಂಟು) ನೋಡಿದಳು.
ಜರೆದು ಕೊಳ್ಳಬೇಕು ; ಹೊಗಳಿ ಮಾರಬೇಕು. ( ವ್ಯಾಪಾರದ ಗುಟ್ಟು)
ಗುಡಿಸಿದ ಮೇಲೆ ಕಸವಿರಬಾರದು , ಬಡಿಸಿದ ಮೇಲೆ ಹಸಿವಿರಬಾರದು.
ಕೆಟ್ಟ ಅಡಿಗೆ ಅಟ್ಟವಳೇ ( ಸರಿಪಡಿಸಿದವಳೇ) ಜಾಣೆ.
ಕಾಲು ಬಿದ್ದು ಕಾಲುಂಗುರ ಉಚ್ಚಿಕೊಂಡರಂತೆ.
ಜೀನ ಗಳಿಸಿದ , ಜಾಣ ಉಂಡ.
ಕಡುಕೋಪ ಬಂದಾಗ ತಡಕೊಂಡವನೇ ಜಾಣ.
ಒಲ್ಲೆನೆಂದು ಹೇಳಿ , ವಲ್ಲಿ…
ವಿಧ: ಬ್ಲಾಗ್ ಬರಹ
March 29, 2006
ಜೇನ್ ಪಾಲ್ ಸಾರ್ತ್ರ್ ಫ್ರಾನ್ಸಿನಲ್ಲಿ ಹುಟ್ಟಿದ್ದು . ಅವನೊಬ್ಬ ತತ್ವಜ್ಞಾನಿ , ವಿಚಾರವಾದಿ , ಕಾದಂಬರಿಕಾರ , ನಾಟಕಕಾರ , ಸಾಹಿತ್ಯ ವಿಮರ್ಶಕ, ಜೀವನ ಚರಿತ್ರಕಾರ , ಪ್ರಬಂಧಕಾರ , ಪತ್ರಕರ್ತ , ಮಾರ್ಕ್ಸವಾದಿ , ಪ್ರಮುಖ ರಾಜಕಾರಣಿ , ಮತ್ತು ಫ್ರೆಂಚ್ ಅಸ್ತಿತ್ವವಾದದ ಜನಕ.
ಅವನು ಪ್ರತಿಪಾದಿಸಿದ ಅಸ್ತಿತ್ವವಾದದ ತಿರುಳು ಹೀಗಿದೆ-
ಮನುಷ್ಯ ದೇವರ ಸೃಷ್ಟಿ ಅಲ್ಲ; ಮನುಷ್ಯ ಮೊದಲೇ ಏನೋ ಆಗಿ ಹುಟ್ಟಿರುವದಿಲ್ಲ .ಮೊದಲು ಬರೇ ಇರುತ್ತಾನೆ ನಂತರ ತನ್ನ ಸ್ವತಂತ್ರ ನಿಶ್ಚಯ ಮತ್ತು ಆಯ್ಕೆ ಗಳ…
ವಿಧ: ಬ್ಲಾಗ್ ಬರಹ
March 29, 2006
(ಆಗಿನ ಹುಬ್ಬಳ್ಳಿ ಶಾಖೆಯಲ್ಲಿ ಮುದ್ರಿತ, ’ಸಂಯುಕ್ತ ಕರ್ನಾಟಕ ದಿನಪತ್ರಿಕೆ’ ಯ ವರದಿಗಾರರು ನಮ್ಮ ಮನೆಗೆ ಬಂದು ಮಾಡಿದ ’ಸಂವಾದ’ ದ ಕೆಲವು ಅಳಿ-ದುಳಿದ ಲೇಖನದ ತುಣುಕುಗಳನ್ನು ಜೋಡಿಸಿ, ’ ಸ್ಕಾನ್ ಮಾಡಿ’ ಸೇರಿಸಿದ್ದೇನೆ.)
ಮೇಲಿನ ವರದಿ ಮಾಡಿದ್ದು 'ಸಂಯುಕ್ತ ಕರ್ನಾಟಕ' ದಿನ ಪತ್ರಿಕೆ. ಅವರು ಪ್ರಕಟಿಸುತ್ತಿದ್ದ, ತಮ್ಮ ದಿನ-ಪತ್ರಿಕೆಯ ಆ ಕಾಲದ ಪ್ರಖ್ಯಾತ ಕಾಲಂ, " ಅರಳುವ ಪ್ರತಿಭೆ " ಯಲ್ಲಿ ! ವರ್ಷ: ೧೯೬೨. ಆ ದಿನ ಬೆಳಿಗ್ಯೆ ತಾನೆ ಎಸ್.ಎಸ್.ಎಲ್.ಸಿ. ಪರೀಕ್ಷೆಯ…
ವಿಧ: Basic page
March 29, 2006
ಒಂದು ಊರಿನಲ್ಲಿ ಒಬ್ಬ ಪ್ರಕಾಂಡ ಸಂಸ್ಕೃತ ಪಂಡಿತನಿದ್ದನಂತೆ.ಅಪ್ಪಾಭಟ್ಟ ಎಂದು ಹೆಸರು. ಅವನಿಗೆ ಒಬ್ಬಳು ಮಗಳು. ಅಪ್ಪ ಪಂಡಿತನಾದರೂ ಮಗಳು ಅಷ್ಟಕ್ಕಷ್ಟೆ. ತನ್ನ ಮಗಳನ್ನು ತಿಪ್ಪಾಭಟ್ಟ ಎಂಬ ಇನ್ನೊಬ್ಬ ಪಂಡಿತನ ಮಗನಿಗೆ ಕೊಟ್ಟು ಮದುವೆ ಮಾಡಿದ. ಮದುವೆ ಆದಮೇಲೆ ಗಂಡನ ಮನೆಯಲ್ಲಿ ಔತಣ. ಬೀಗರೂಟಕ್ಕೆ ಬಂದವರೆಲ್ಲಾ ಪಂಡಿತರೇ. ಮಗಳು ಬಡಿಸಲು ನಿಂತಳಂತೆ.
ಒಬ್ಬ ವಯಸ್ಸಾದ ಪಂಡಿತ ಊಟದ ಮಧ್ಯದಲ್ಲಿ " ಅಮ್ಮ, ಲವಣ ಇದೆಯೇ" ಅಂತ ಕೇಳಿದ. ಆಕೆಗೆ ಅರ್ಥ ಆಗಲಿಲ್ಲ ಪಾಪ. ಪಲ್ಯ ತಂದಳಂತೆ.
"ಇಲ್ಲಮ್ಮಾ ಲವಣ..…
ವಿಧ: Basic page
March 29, 2006
ದಿನ ವೆಶೇಷ: ಪಂಚಾಂಗದ ಪ್ರಕಾರ ಈ ದಿನ ಅಂದರೆ, 29-03-2006,ಬುಧವಾರ, ಫಾಲ್ಗುಣ ಕ್ರುಷ್ಣ ಅಮಾವಾಸ್ಯೆ. 'ಸೂರ್ಯ ಗ್ರಹಣವು' ಕರ್ನಾಟಕ ಮೊದಲ್ಗೊಂಡು ಡಕ್ಷಿಣ ಭಾರತಕ್ಕೆ ಕಾಣಿಸುವುದಿಲ್ಲವಾಗಿ ಗ್ರಹಣಾಚರಣೆ ಇಲ್ಲ. ಭಾರತದ ಉಳಿದ ಭಾಗಗಳಲ್ಲಿ ಕಾಣಿಸುವುದರಿಂದ ಸ್ಪರ್ಶ ಮತ್ತು ಮೋಕ್ಷ ಕಾಲಗಳನ್ನು ಕೊಡಲಾಗಿದೆ.
ಸ್ಪರ್ಶ ಕಾಲ : ಸಾಯಂಕಾಲ 4-21 ಘಂಟೆ ಐ.ಎಸ್.ಟಿ.
ಮಧ್ಯ ಕಾಲ : ಸಾಯಮ್ : 5-15 ಘಂಟೆ ಐ.ಎಸ್.ಟಿ.
ಮೋಕ್ಷ ಕಾಲ : ಸಾಯಮ್ : 6-09 ಘಂಟೆ ಐ.ಎಸ್.ಟಿ.
ಆದ್ಯಂತ ಪುಣ್ಯ ಕಾಲ : 1-48 ಘಂಟೆ.…
ವಿಧ: Basic page
March 29, 2006
ವಿನಾಯಕನಿಗರ್ಪಿಸುವ ಪಂಚಕಜ್ಜಾಯ
ನಂಬಿದವರಿಗೆಂದಿಗೂ ಅವನದೇ ದಯಾ
ಧರ್ಮ ನಂಬಿದವಗೆಂದಿಗೂ ಜಯ
ರಿಪುಗಳಿಗಷ್ಟೇ ಕಾದಿಹುದು ಪರಾಜಯ
ಹೊಸ ವರುಷ ಹೇಳುತಿದೆ ತಾನು ವ್ಯಯ
ನಿರೀಕ್ಷಿಸುತಿದೆ ಎಲ್ಲರಿಂದ ಅಪವ್ಯಯ
ಸುಳ್ಳು ಮಾಡಲಾಗಲಿ, ಎಲ್ಲರಿಂದ ಮಿತವ್ಯಯ
ಜೀವ ದೀಪ ಪ್ರಜ್ವಲಿಸಿ ಸೂಸುತಿದೆ ಆಶಯ
ತೋರಿದರೇನು ತಳೆದರೇನು ಅಸಹ್ಯ
ಬಾಳ ಬಂಡಿ ಸಾಗಲಿ, ತೋರಲಿ ನಿರ್ಭಯ
ತ್ರಿಲಿಂಗಗಳಲೂ ಅಲುಗಾಡದ ಅವ್ಯಯ *
ವಿಚಲಿತವಾಗದೇ ಭದ್ರವಾಗಲಿ ಅಡಿಪಾಯ
ಕಾದಿಹುದು ಸೇವಿಸಲು ಬೇವು ಬೆಲ್ಲ
ಕಹಿಯ ಅರಿತವಗೆ ಹಿರಿದಾಗುವುದು ಬೆಲ್ಲ…
ವಿಧ: ಬ್ಲಾಗ್ ಬರಹ
March 29, 2006
ಸಾಮಾನ್ಯವಾಗಿ ಎಲ್ಲಾ ರಾಷ್ಟೀಯ ನ್ಯೂಸ್ ಚಾನೆಲ್ ಗಳು ದಕ್ಷಿಣ ಭಾರತವನ್ನು ಅಲಕ್ಷ್ಯಿಸುತ್ತಿವೆ ಎಂದು ನಾವು ಕೊರಗುತ್ತಿರುವಾಗ, ರಾಜ್ ದೀಪ್ ರವರ ಈ ಲೇಖನ ಓದಿ ಸ್ವಲ್ಪ ಸಮಾಧಾನವಾಯಿತು..
--ಸ್ಮಿತಾ
ವಿಧ: Basic page
March 28, 2006
ಹೋಗದ ಊರಿಗೆ ದಾರಿ ಕೇಳಿದ ಹಾಗೆ
ಹೋಗು ಅನ್ನಲಾರದೆ ಹೊಗೆ ಹಾಕಿದರಂತೆ
ತೀಟೆ ತೀರಿದ ಮೇಲೆ ಲೌಡಿ ಸಂಗವೇನು?
ಹೊತ್ತಿರುವಾಗಲೇ ಗೊತ್ತು ಸೇರಬೇಕು
ಹುಲ್ಲಿನ ಉರಿ , ಕನಸಿನ ಸಿರಿ ( ಬೇಗನೆ ಮುಗಿದು ಹೋಗುತ್ತವೆ)
ಹುಲಿ ಬಡವಾದರೆ ಹುಲ್ಲು ಮೇಯುವದಿಲ್ಲ.
ಹುತ್ತ ಬಡಿದೊಡೆ ಹಾವು ಸಾಯುವುದೇ ?
ಹುಣ್ಣು ಮಾದರೂ ಕಲೆ ಹೋಗಲಿಲ್ಲ
ಹಾಲು ಎಟುಕದಿರುವಾಗ ಬೆಕ್ಕೂ ಪ್ರಾಮಾಣಿಕ .
ಹಸನ್ಮುಖೀ ಸದಾ ಸುಖೀ