ಎಲ್ಲ ಪುಟಗಳು

ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
April 07, 2006
ಶ್ರೀ ರಾಮಚಂದ್ರನ ಶ್ರೇಷ್ಠ ಗುಣ ಯಾವದು ನಿಮಗೆ ಗೊತ್ತೇ ? ಅದು ಮಾತಿಗೆ ಮೊದಲು ಮುಗುಳ್ನಗುವ ಗುಣ . ಸ್ಮಿತ ಪೂರ್ವಾಭಿಭಾಷೀ ಶ್ರೀ ರಾಮಚಂದ್ರನ ಈ ಗುಣ ನಾವೂ ಏಕೆ ಅಳವಡಿಸಿಕೊಳ್ಳಬಾರದು ? ನಮ್ಮ ಸಂವಹನ ಉತ್ತಮವಾಗುತ್ತದೆ . ಕಲಹಕ್ಕೆ ಅವಕಾಶ ಕಡಿಮೆಯಾಗಿ , ಸ್ನೇಹ ,ಪ್ರ್‍ಈತಿ ಹೆಚ್ಚುತ್ತವೆ . ಅನೇಕ ಸಮಸ್ಯೆಗಳು ಸುಲಭವಾಗಿ ಬಗೆ ಹರಿದಾವು.
ಲೇಖಕರು: ಶ್ರೀನಿಧಿ
ವಿಧ: ಬ್ಲಾಗ್ ಬರಹ
April 07, 2006
ನಾನು ಆಗ ಮೊದಲ ಪದವಿ ಪೂರ್ವ (೧೧ನೇ) ತರಗತಿ ಎಂದು ನೆನಪು. "ಹಂಸಗೀತೆ" ಚಿತ್ರದಲ್ಲಿ ಬಾಲಮುರಳಿಯ ಗೀತಗೋವಿಂದದ ಹಾಡುಗಳನ್ನು ಕೇಳಿ ಪುಳಕಿತನಾಗಿದ್ದೆ. ಸರಿ ಗೀತ ಗೀತ-ಗೋವಿಂದದ ಪುಸ್ತಕಕ್ಕೆ ಹುಡುಕತೊಡಗಿದೆ. ನನ್ನ ಅಜ್ಜಿಯ ಬಳಿ ಗೀತಗೋವಿಂದ ಓದಬೇಕು ಎಂದಾಗ ಅಷ್ಟು ದೊಡ್ಡವನಾಗಿದ್ದೀಯಾ ಎಂದು ನಕ್ಕಿದ್ದರು. ಪುಸ್ತಕವೇನೋ ಸಿಕ್ಕಿತು ಆದರೆ ನನ್ನ ಸೋಮಾರಿತನ ಪುಸ್ತಕವನ್ನು ಮೂಲೆಗೆ ಸರಿಸಿತು. ಮೊನ್ನೆ ಸಂಜಯ್ ಸುಬ್ರಹ್ಮಣ್ಯಂ ಅವರ ಕಛೇರಿ ಕೇಳಿದ ನಂತರ ಆಸಕ್ತಿ ಕೆರಳಿತು. ಅದನ್ನು ಸಂಪದದಲ್ಲಿ ಯಾವ…
ಲೇಖಕರು: venkatesh
ವಿಧ: Basic page
April 07, 2006
ಮಕ್ಕಳ ಸಾಹಿತ್ಯ, ಮತ್ತು ಅವರಿಗೆ ಬೇಕಾದ ಕಥೆಗಳು !  ಭಾರತದಲ್ಲಿ ಮಕ್ಕಳ ಸಾಹಿತ್ಯ ಪರಂಪರೆ ಬಹಳ ಪ್ರಾಚೀನವಾದದ್ದು ! ಇದು, ಬಹುಶಃ ವಿಷ್ಣು ಶರ್ಮರು ಬರೆದ 'ಪಂಚತಂತ್ರ,' ದಿಂದ ಪ್ರಾರಂಭವಾಗಿರಬಹುದು. ಇಲ್ಲಿ ಪ್ರಯೋಗಿಸುವ ತಂತ್ರವೆಂದರೆ, ಯವುದೋ ರಾಜಕುಮಾರನಿಗೆ, ಕಥೆಯ ರೂಪದಲ್ಲಿ ನೀತಿ ಬೊಧಿಸುವ ರೀತಿ; ಕಥೆಗಳಲ್ಲಿ ಕಾಡುಪ್ರಾಣಿಗಳು ತಮ್ಮ ಸಹಜ ಸ್ಥಿತಿಯಲ್ಲೂ ಮನುಷ್ಯರಂತೆಯೇ, ಯೋಚಿಸುತ್ತ ಮಕ್ಕಳ ಮನಸ್ಸನ್ನು ಸೆರೆಹಿಡಿಯುವ ಅದ್ಭುತ ರೀತಿ, ಅನನ್ಯವಾಗಿದೆ ! ಮಕ್ಕಳ ಕಲ್ಪನಾಲೋಕದಲ್ಲಿ…
ಲೇಖಕರು: keshava
ವಿಧ: ಬ್ಲಾಗ್ ಬರಹ
April 06, 2006
ಅಕ್ಕರವು ಲೆಕ್ಕಕ್ಕೆ ತರ್ಕ ತಾ ವಾದಕ್ಕೆ ಮಿಕ್ಕ ಓದುಗಳು ತಿರುಪೆಗೆ ಮೋಕ್ಷಕ್ಕೆ ಎರಡಕ್ಕರವೆ ಸಾಕೆ೦ದ ಸರ್ವಜ್ಞ
ಲೇಖಕರು: Satyaprakash.H.K.
ವಿಧ: ಬ್ಲಾಗ್ ಬರಹ
April 06, 2006
೦೬-೪-೨೦೦೬ - ಗುರುವಾರ - ಮಧ್ಯಾನ್ಹ ೧-೦೦ ಗಂಟೆ ಆತ್ಮೀಯ ಸಂಪದದ ಸ್ನೇಹಿತರೇ, ಬೇಸಿಗೆ ಬಂದಿದೆ. ಆಹಾರದಲ್ಲಿ ಎಚ್ಚರ ವಹಿಸಿ. ಹೊರಗಡೆ ಏನನ್ನೂ ತಿನ್ನಲು ಹೋಗಬೇಡಿ. ಅದರಲ್ಲೂ ಎಣ್ಣೆ ಹಾಕಿದ ತಿಂಡಿಗಳು, ಮಸಾಲೆ ದೋಸೆ ಇತ್ಯಾದಿ, ಪಾನೀ ಪೂರಿ ಇತ್ಯಾದಿ, ಐಸ್ ಕ್ರೀಂ ಇವನ್ನೆಲ್ಲಾ ತಿನ್ನಲು ಹೋಗಬೇಡಿ. ಧಾರಾಳವಾಗಿ ಸಿಹಿ ಹಣ್ಣಿನ ರಸ ಕುಡಿಯಿರಿ. ಶುದ್ಧವಾದ ನೀರು ಯಥೇಚ್ಚವಾಗಿ ಕುಡಿಯಿರಿ. ಇಲ್ಲದಿದ್ದರೆ ಚೆನ್ನಾಗಿ ಕಾಯಿಸಿ ಆರಿಸಿರುವ ನೀರನ್ನೂ ಬೇಕಾದರೂ ಕುಡಿಯಬಹುದು. ಹೊಟ್ಟು ಸಮೇತ ಇರುವ…
ಲೇಖಕರು: ಅಜೇಯ
ವಿಧ: ಚರ್ಚೆಯ ವಿಷಯ
April 06, 2006
ಸಂಪದಕ್ಕೆ ನನ್ನ ರಂಗ ಪ್ರವೇಶ ಇಂದೇ.. ಅದಕ್ಕೆ ಈ ಸ್ವ-ಪರಿಚಯ... ನನ್ನ ಹೆಸರು: ಅಜೇಯ ಕುಮಾರ ... ಚಿಕ್ಕಮಗಳೂರು ಜಿಲ್ಲೆ.. ಬಾಲ್ಯ ಕಳೆದಿದ್ದೆಲ್ಲ ಬಾಳೆಹೊನ್ನೂರಿನ ಹತ್ತಿರದ ಜೇನುಗದ್ದೆಯ ಕಾಫಿ ತೋಟದ ಕಾಡಿನ ಮಡ್ಯದ ಒಂದು ಹಳ್ಳಿಯಲ್ಲಿ...ನಮ್ಮ ಹಳ್ಳಿಯಿಂದ ಬಸ್ ಗಾಗಿ ಸಹ ೭-೮ ಮೈಲಿ ಕಾಡಲ್ಲಿ ನಡೆದು ಬರಬೇಕು.. ಹಾಗಂತ ಕಾಡು ಮನುಷ್ಯ ಎಂದುಕೊಳ್ಬೇಡಿ... ಓದಿದ್ದೆಲ್ಲ ಸರಕಾರಿ ಶಾಲೆಗಳಲ್ಲೆ... ಮೊದಲು ನಮ್ಮ ಹಳ್ಳಿಯ ಸರಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ...ಏಕೊಪಾಧ್ಯಾಯ ಶಾಲೆ...…
ಲೇಖಕರು: ಅಜೇಯ
ವಿಧ: ಬ್ಲಾಗ್ ಬರಹ
April 06, 2006
ಮೊದಲ ಬ್ಲೊಗ್ ಎಂದೂ ಸಪ್ಪೆಯಾಗಿರಬೇಕು :-) ಬ್ಲಾಗ್ ಮಾಡುವುದಕೆ ಸಾಕಷ್ಟು ಮುಂಚೆಯೆ ಶುರು ಮಾಡಿದ್ದರೂ ಕನ್ನಡದಲ್ಲಿ ಇತ್ತೀಚೆಗೆ ಮಾತ್ರ.... ಹೊಸದಾಗಿ ಕನ್ನಡದ ನನ್ನ ಬ್ಲಾಗ್ ಸಹ ತೆರೆದಿರುವೆ ... ಇಲ್ಲಿಗೆ ಯೋಗ್ಯ ಅನಿಸಿದ ಬರಹಗಳು ಬರೆದಾಗ.. ಇಲ್ಲಿ ಹಾಕುವೆ
ಲೇಖಕರು: venkatesh
ವಿಧ: Basic page
April 05, 2006
ಗ್ರೆಗೊರಿ ಪೆಕ್ : ಒಂದು ಸ್ಮರಣೆ. 'ಗನ್ಸ್ ಆಫ್ ನವರೊನ್', 'ಮೆಕೆನ್ನಾಸ್ ಗೋಲ್ಡ್,' ನಂತಹ ಪ್ರಸಿದ್ದ ಚಿತ್ರಗಳಲ್ಲಿ ಭಿನಯಿಸಿದ 'ದೀಮಂತ' ನಟ,ಬದುಕಿದ್ದಿದ್ದರೆ, ಈ ದಿನ ಅವನಿಗೆ 90 ಅರ್ಷ ತುಂಬುತ್ತಿತ್ತು ! 'ಪೆಕ್' ಹುಟ್ಟಿದ್ದು ಅಮೆರಿಕದ ಕ್ಯಾಲಿಫೋರ್ನಿಯ,ದಲ್ಲಿ. ಮುಂದೆ ಅವನು ಥಿಯೇಟರ್ ಗಳಲ್ಲಿ ದುಡಿದು, ನಂತರ ಹಾಲಿವುಡ್ ಸಿನಿಮಾ ರಂಗವನ್ನು ಪ್ರವೇಶಿಸುತ್ತಾನೆ. 5 ಬಾರಿ 'ಆಸ್ಕರ್ ಪ್ರಶಸ್ತಿ'ಗೆ ನೇಮಕಾತಿಯಾಗಿದ್ದು, 1962 ರಲ್ಲಿ ರಿಲೀಸ್ ಆದ 'ಆಟಿಕಸ್ ಫಿಂಚ್' ಎಂಬ ಚಿತ್ರದಲ್ಲಿ…
ಲೇಖಕರು: keshava
ವಿಧ: ಚರ್ಚೆಯ ವಿಷಯ
April 05, 2006
ಈವರೆಗೆ ತು೦ಬಾ ಸೀರಿಯಸ್ ವಿಶಯಗಳು ಪ್ರಸ್ತಾಪವಾಗಿವೆ. ಈಗ ಸ್ವಲ್ಪ ಫನ್ ಟೈ೦ಮ್ ಉ.ದಾ ಹೆತ್ತವಳ ಸ೦ಕಟ ಸಿಝೇರಿಯನ್ ಆದವಳಿಗೆ ಏನು ಗೊತ್ತು ವೆಬ್ ಸೈಟ್ ಮಾಡುವವನಿಗೆ ವರುಷ ಹ್ಯಾಕರ್-ಗೆ ನಿಮಿಷ. .............................. ......................................ಇದಕ್ಕೆ ನಿಮ್ಮದನ್ನು ಸೇರಿಸುತ್ತಾ ಹೋಗಿ
ಲೇಖಕರು: keshava
ವಿಧ: ಬ್ಲಾಗ್ ಬರಹ
April 05, 2006
ಕೆಲವ೦ ಬಲ್ಲವರಿ೦ದ ಕಲ್ತು ಕೆಲವ೦ ಮಾಳ್ಪವರಿ೦ದ ಕ೦ಡು ಮತ್ತೆ ಹಲವ೦ ತಾನೆ ಸ್ವತಃ ಮಾಡಿ ತಿಳಿ ಎ೦ದ ಸರ್ವಜ್ಞ