ಎಲ್ಲ ಪುಟಗಳು

ಲೇಖಕರು: Satyaprakash.H.K.
ವಿಧ: ಚರ್ಚೆಯ ವಿಷಯ
March 28, 2006
೨೮-೩-೦೬ - ಮಂಗಳವಾರ - ೧೨-೧೫ ಗಂಟೆ ಆತ್ಮೀಯ ಸ್ನೇಹಿತರೇ, ನಿಮಗೂ, ನಿಮ್ಮ ಮನೆಯವರಿಗೂ ಮತ್ತು ಸಂಪದದ ಸ್ನೇಹಿತರೆಲ್ಲರಿಗೂ ನನ್ನ ಹೊಸ ವರುಷದ ಯುಗಾದಿ ಹಬ್ಬದ ಶುಭಾಶಯಗಳು. ಸತ್ಯಪ್ರಕಾಶ್.ಹೆಚ್.ಕೆ. ೯೮೮೬೩ ೩೪೬೬೭ arogyasathya@yahoo.co.in satyaprakash.hk@gmail.com satya.prakash@rhm.co.in
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
March 28, 2006
'ಕಸ್ತೂರಿ' ಮಾಸಪತ್ರಿಕೆಯ ಎಪ್ರಿಲ್ ೨೦೦೬ರ ಸಂಚಿಕೆ ಯುಗಾದಿ ವಿಶೇಷಾಂಕವಾಗಿ ೩೨೦ ಪುಟ (ಬೆಲೆ ೧೨ ರೂ) ಹೊಂದಿ ಬಂದಿದೆ. ಶ್ರೀ ರಾಮಚಂದ್ರನಿಗೆ ಚಿಕ್ಕವನಿದ್ದಾಗ ತೀರ್ಥಯಾತ್ರೆ ಹೋದಾಗ ವೈರಾಗ್ಯ ಉಂಟಾಗುತ್ತದೆ . ಆಗ ವಸಿಷ್ಠ ಮುನಿಗಳು ಅವನಿಗೆ ಮಾಡಿದ ಉಪದೇಶವೇ ಯೋಗವಾಸಿಷ್ಠ. ಇದಕ್ಕೆ ವಾಸಿಷ್ಠ ರಾಮಾಯಣ ಎಂಬ ಇನ್ನೊಂದು ಹೆಸರೂ ಇದೆ. ಈ ಬಗ್ಗೆ ಒಂದು ಲೇಖನ ಇದೆ. ಆಧ್ಯಾತ್ಮದಲ್ಲಿ ಆಸಕ್ತಿ ಹೊಂದಿದವರು ಇದನ್ನು ನೋಡಬಹುದು. ಮೊಘಲ್ ರಾಜಕುಮಾರ ಅನೇಕ ಉಪನಿಷತ್ತುಗಳ ಜತೆ ಇದನ್ನೂ ಪರ್ಶಿಯನ್…
ಲೇಖಕರು: venkatesh
ವಿಧ: Basic page
March 28, 2006
ಮಹತ್ವಾಕಾಂಕ್ಷೆ ,ಜೀವನಕ್ಕೆ ಒಂದು ಅರ್ಥ ಕೊಡುವ ಹಾಗಿದ್ದಲ್ಲಿ ಉಪಯುಕ್ತ ವಾಗುತ್ತದೆ. ಏಲ್ಲರೂ ಆಶಿಸುವುದು ಅದನ್ನೆ !ಏನನ್ನಾದರೂ ಸಾಧಿಸಲೇ ಬೇಕು. ಆದರೆ ಅತಿ ಮಹತ್ವಾಕಾಂಕ್ಷೆ ತರವೆ? ವಿಚಾರಮಾಡಿ. ಇಂದಿನ ಕೆಲವು ತಂದೆ ತಾಯಿಗಳು ಮಾಡುತ್ತಿರುವುದು ಇದನ್ನೆ. ತಮ್ಮ ಮಕ್ಕಳನ್ನು ಅರ್ಹ ವಯಸ್ಸಿಗೆ ಮೊದಲೇ ಶಾಲೆಗಳಿಗೆ ಸೇರಿಸಿ, ತಲೆಗೆ ಹಿಡಿಸಲಾರದಷ್ಟು ವಿದ್ಯಗಳನ್ನು, ಕೌಶಲಗಳನ್ನು ತುರುಕಿ, ಬಾಲ ಪ್ರತಿಭೆಗಳು ಹೆಣಗಾಡಿ ನರಳುವಂತೆ ಮಾಡುತ್ತಾರೆ. ತಾವು ಸಾಧಿಸಲಾಗದ್ದಿದ್ದ ಕ್ಷೇತ್ರಗಳಲ್ಲಿ ತಮ್ಮ…
ಲೇಖಕರು: muralihr
ವಿಧ: Basic page
March 27, 2006
ಐ.ಟಿ. ಬಿ.ಟಿ. ಬಿಟ್ಟು ಬಾರ ಮೂರ್ತಿ ಮುಷ್ಟಿ ಬಿಟ್ಟು ಬಾರ. ಸ್ಪೂರ್ತಿ ಬಾಳ ನಡೆಸು ಬಾರ. ಮಿಥ್ಯ ಲೋಕ ದಾಟಿ ಬಾರ. ಸತ್ಯ ಲೋಕ ಕಾಣ ಬಾರ. ಒ೦ದೇ ಬಾಳು ಬೇಡ ಬಾರ. ಮು೦ದೆ ಗೋಳು ಕ೦ಡು ಹಾರಾ.. ಸಾಕು ಬಾರ, ಬೇಗ ಬಾರ. ಆಳಾಗದೆ ನಿನ್ನಾತ್ಮವ ಆಳು ಬಾರ. ಐ.ಟಿ. ಬಿ.ಟಿ. ಬಿಟ್ಟು ಬಾರ *************** ಅರ್ಪಣೆ ನಾರಾಯಣ ಮೂರ್ತಿಗಳಿಗೆ.
ಲೇಖಕರು: venkatesh
ವಿಧ: Basic page
March 27, 2006
"ವಿವಾಹಕ್ಕೆ ಮೊದಲು "ಎಚ್.ಐ.ವಿ ಪರೀಕ್ಷಣಾ ಪತ್ರ" ಲಗತ್ತಿಸ ಬೇಕೆಂಬ ಕಾನೂನು ಮಾಡುವುದು ಒಳ್ಳೆಯದು." ಗೋವೆಯ ಆರೋಗ್ಯ ಮಂತ್ರಿ, ಶ್ರಿ.ಡಿ. ನಾರ್ವೇಕರ್ ಘೋಷಿಸಿದರು. ಈಗ ಇದೇ ಒಂದು ಬಿಸಿ ಸುದ್ದಿ, ಗೋವೆ ಯಲ್ಲಿ ಚರ್ಚೆಗೆ ಒಳಗಾಗಿದೆ. ಸದ್ಯದಲ್ಲೇ ಅವರ ಅಸೆಂಬ್ಲಿಯಲ್ಲಿ ಜಾರಿಗೆ ಬರಲೂ ಸಾದ್ಯ ! ಹಂತ ಹಂತ ವಾಗಿ ಕಳೆದ 2 ದಶಕ ಗಳಿಂದ ವಿಶ್ವದಾದ್ಯಂತ ಕಾಳ್ಗಿಚ್ಚಿನಂತೆ ಹಬ್ಬಿದ ಎಚ್.ಐ.ವಿ. ಪಿಡಿಗಿನ ಅಲೆಗಳು ನಮ್ಮ ಮನೆಗಳ ಹತ್ತಿರಕ್ಕೂ ಬಂದ್ದಿದ್ದು ಕರೆಗಂಟೆಯನ್ನು ಒತ್ತುವ ಸಿದ್ದತೆಯಲ್ಲಿವೆ. '…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
March 27, 2006
ಪತ್ರಿಕೆಗಳನ್ನೇ ಜನ ಹೆಚ್ಚಾಗಿ ಓದುವದು . ಪತ್ರಿಕೆಗಳಲ್ಲಿಯೇ ಭಾಷೆಯ ಬರಹ ಹೆಚ್ಚಾಗಿರುವದು . ಹೀಗಾಗಿ ಪತ್ರಿಕೆಗಳು ಭಾಷೆಯನ್ನು ರೂಪಿಸುವಲ್ಲಿ ಹೊಸಹೊಸ ಪದಗಳನ್ನು ಚಲಾವಣೆಗೆ ತರುವಲ್ಲಿ ಮುಖ್ಯ ಪಾತ್ರ ರೂಪಿಸುತ್ತವೆ. ಪತ್ರಿಕೆಗಳ ಭಾಷೆಯನ್ನು ಗಮನಿಸುತ್ತಿದ್ದರೆ. ಎಷ್ಟೋ ಕುತೂಹಲಕರ ವಿಷಯಗಳು ನಮ್ಮ ಲಕ್ಷ್ಯಕ್ಕೆ ಬರುತ್ತವೆ. ಉದಾಹರಣೆಗೆ - ಒಂದೊಮ್ಮೆ ಕೆಳಜಾತಿಯವರು ಹೊಲೆಯರೆಂದು ಕರೆಯಲ್ಪಡುತ್ತಿದ್ದರು ನಂತರ 'ಅಸ್ಪ್ರಶ್ಯ'ರಾಗಿ 'ಹರಿಜನ'ರಾದರು , ನಂತರ 'ಪರಿಶಿಷ್ಟ' ರಾದರು. ಮೊದಲು…
ಲೇಖಕರು: shreekant.mishrikoti
ವಿಧ: Basic page
March 27, 2006
ಸೀನಿ ಸನ್ಯಾಸಿಯಾದುದು - ಜಿ. ಪಿ. ರಾಜರತ್ನಂ ಅವರ ಕತೆ . ಆಕಾಶವು ಇದ್ದಕ್ಕಿದ್ದಂತೆ ಬರಸಿಡಿಲನ್ನು ಕಕ್ಕಿತು ! ಸೀನಿ ಸನ್ಯಾಸಿಯಾದ ! ಸುಖ ಸಂತೋಷಗಳ ಸಾಗರದಲ್ಲಿ ಹುಟ್ಟಿ ಬೆಳೆದ ಸೀನಿ ಸನ್ಯಾಸಿಯಾದ! ಲೋಕ ಬೆರಗಾಯ್ತು ! ಫೆಬ್ರುವರಿ ೪ ನೇ ತಾರೀಖು ಬೆಳಗ್ಗೆ ಹತ್ತು ಘಂಟೆಗೆ ಸೀನಿ ಅಸ್ವಸ್ಥನಾದ ತನ್ನ ಮಿತ್ರನನ್ನು ಆಸ್ಪತ್ರೆಗೆ ಕರೆದುಕೊಂದು ಹೋದ . " ಡಾಕ್ಟರ್, ಇವರನ್ನು ಇನ್ ಪೇಷಂಟಾಗಿ ಸೇರಿಸಿಕೊಳ್ಳಬೇಕು . " " ಯಾರು , ಇವರು ನಮ್ಮ ನಾರಾಯಣಪ್ಪ ಅಲ್ಲವೆ!" "ಹೌದು , ಅವರೇ ... ಬಂದೆ ,…
ಲೇಖಕರು: avlokana
ವಿಧ: ಬ್ಲಾಗ್ ಬರಹ
March 27, 2006
ಎಷ್ಟೋ ದಿನಗಳಿಂದ ಕನ್ನಡದಲ್ಲಿ ಏನಾದರೂ ಬರೆಯಬೇಕೆಂದು ಅಂದುಕೊಂಡಿದ್ದೆ. ಕನ್ನಡದಲ್ಲಿ ಬ್ಲಾಗ್ ಬರೆಯಬೇಕೆಂಬ ನನ್ನ ಕನಸು ಈಗ ನನಸಾಯಿತು. ಸಂಪದಕ್ಕೆ ಧನ್ಯವಾದಗಳು. ನಾನು ಹತ್ತನೇ ತರಗತಿಯವರೆಗೆ ಕಲಿತದ್ದು ಕನ್ನಡದಲ್ಲಿ. ಪತ್ರಿಕೆ, ಕಾದಂಬರಿಗಳನ್ನು ಒದಲು ತೊಡಗಿದ್ದು ನಾಲ್ಕನೇ ತರಗತಿಯಿಂದ ಎನ್ನಬಹುದು. ಹಾಗಾಗಿ ಕನ್ನಡವೆಂದರೆ ನನಗೆ ತುಂಬಾ ಪ್ರೀತಿ.
ಲೇಖಕರು: Satyaprakash.H.K.
ವಿಧ: ಬ್ಲಾಗ್ ಬರಹ
March 26, 2006
ವಕ್ರತುಂಡೋಕ್ತಿ ಆಲಸ್ಯವೇ ನಮ್ಮ ದೊಡ್ಡ ವೈರಿ ಎಂದರು ನೆಹರೂ, ನಮ್ಮ ವೈರಿಯನ್ನು ಪ್ರೀತಿಸಬೇಕೆಂದು ಗಾಂಧಿ. ಆದ್ದರಿಂದ ಆಲಸಿಯಾಗಿರುವುದು ತಪ್ಪಲ್ಲ. ಜೀವನದಲ್ಲಿ ಹಣಕ್ಕಿಂತ ಮುಖ್ಯವಾದದ್ದು ಪ್ರೀತಿ, ಆದರೆ ಎಲ್ಲರೂ ಹಣವನ್ನೇ ಪ್ರೀತಿಸುತ್ತಾರೆ. ಕಷ್ಟದಲ್ಲಿರುವವನಿಗೆ ಸಹಾಯ ಮಾಡಿದರೆ ಆತ ನೆನಪಿನಲ್ಲಿಟ್ಟುಕೊಳ್ಳುತ್ತಾನೆ ಹಾಗೂ ಮುಂದೊಮ್ಮೆ ಕಷ್ಟ ಬಂದಾಗ ಪುನಃ ನಿಮ್ಮಲ್ಲಿಗೆ ಬರುತ್ತಾನೆ. ಆಲ್ಕೋಹಾಲು ಸೇವನೆಯಿಂದ ಯಾವ ಸಮಸ್ಯೆಯೂ ಪರಿಹಾರವಾಗುವುದಿಲ್ಲ. ಈ ಮಾತು ಹಾಲಿಗೂ ಅನ್ವಯ…
ಲೇಖಕರು: chetana
ವಿಧ: ಬ್ಲಾಗ್ ಬರಹ
March 25, 2006
ನಮಸ್ತೆ ಯಾವ ಮುಜುಗರವೂ ಇಲ್ಲದೆ ಹೇಳಿಕೊಂಡುಬಿಡುತ್ತೇನೆ, ನನಗೆ ಹರನಾಣೆ ಹದಿನಾರಣೆ ಕಂಪ್ಯೂಟರ್ ಜ್ಞಾನ ಇಲ್ಲ. ಅದ್ರಲ್ಲು ನಿಮ್ಮ ಯೂನಿಕೋಡ್, ಫಾಂಟ್ಗಳ ರಗಳೆ ಅರ್ಥವೇ ಆಗೋಲ್ಲ. ನೀವು ಯಾರಾದ್ರು ಹೆಳಿಕೊಡ್ತಿರಂದ್ರೆ ಓ.ಕೆ. ಅಂಧಾಗೆ ನಂಗೆ ವಿಪರಿಇಇಇತ ಓದುವ ಹುಚ್ಚು. ಅದಕ್ಕೆ,ಸಂಪದದ ಸಂಪರ್ಕಕ್ಕೆ ಬಂದೆ. ಇತ್ತೀಚೆಗೆ ಪತ್ರಿಕೆನಲ್ಲಿ ಇದರ ಬಗ್ಗೆ ಓದಿ, ಹುಡುಕಿ ರೀಚ್ ಆಗೊ ಹೊತ್ತಿಗೆ ನಾನು ಹೈರಾಣಾಗಿದ್ದೆ. ಸರಿ ಮತ್ತೆ ಬರ್ತೀನಿ. ನೊಡೋಣ ಆ ಹೊತ್ತಿಗೆ ನನ್ನಲ್ಲಿ ಎನಾದ್ರು ಇಂಪ್ರೂವ್‍…