ವಿಧ: ಬ್ಲಾಗ್ ಬರಹ
March 22, 2006
ನಾರು-ಬೇರುಗಳು
ಏನು ಈ ನಾರು-ಬೇರುಗಳು ? ಕಾರ್ಬೋಹೈಡ್ರೇಟ್ ನಲ್ಲಿ ಎರಡು ವಿಧ. ಒಂದು, ದೊರಕುವ ಕಾರ್ಬೋಹೈಡ್ರೇಟ್ (ಅವೈಲಬಲ್), ಮತ್ತೊಂದು, ದೊರಕದ ಕಾರ್ಬೋಹೈಡ್ರೇಟ್(ಅನ್ ಅವೈಲಬಲ್), ದೊರಕುವ ಕಾರ್ಬೋಹೈಡ್ರೇಟ್-ಶರ್ಕರ ಪಿಷ್ಟ, ನಾರು-ಬೇರುಗಳು ದೊರಕದ ಕಾರ್ಬೋಹೈಡ್ರೇಟ್ ಗಳು.
ಸಸ್ಯಗಳಲ್ಲಿನ ಜೀವಕಣತಂತುಕ(ಸೆಲ್ಯೂಲೋಸ್), ಅರೆಜೀವಕಣತಂತುಕ(ಹೆಮಿಸೆಲ್ಯೂಲೋಸ್), ಹಣ್ಣಂಟು(ಪೆಕ್ಟಿನ್), ಸಸ್ಯಗೋಂದು(ಪ್ಲಾಂಟ್ ಗಂ)-ಇವೆಲ್ಲಾ ಸೇರಿ ನಾರು-ಬೇರುಗಳಾಗುತ್ತವೆ…
ವಿಧ: ಚರ್ಚೆಯ ವಿಷಯ
March 22, 2006
ಭಾಷಾ ಇಂಡಿಯಾದವರು ಬೆಸ್ಟ್ ಇಂಡಿಕ್ ಬ್ಲಾಗ್ ಎಂಬ ಸ್ಪರ್ಧೆ ನಡೆಸುತ್ತಿದ್ದಾರೆ. ನೀವು ನಿಮ್ಮ ಸ್ವಂತ ಬ್ಲಾಗ್‌ಗಳನ್ನು ಸೂಚಿಸಬಹುದು ಹಾಗೂ ಇತರರ ಬ್ಲಾಗ್‌ಗಳನ್ನೂ ಸೂಚಿಸಬಹುದು. ವಿವರಗಳಿಗೆ ಭಾಷಾ ಇಂಡಿಯಾದ [http://bhashaindia.com/contests/iba/|ಅಂತರಜಾಲ ತಾಣವನ್ನು] ವೀಕ್ಷಿಸಬಹುದು.
ಸಿಗೋಣ,
ಪವನಜ
ನನ್ನ ಬ್ಲಾಗ್ - [http://www.vishvakannada.com/Blog|www.vishvakannada.com/Blog]
ವಿಧ: Basic page
March 22, 2006
ದು:ಖ ಸಾಗರದಲ್ಲಿ ಸುಖದ ಬಿಂದಿಗೆ
ಹಿಡಿದು ,ನೆಲಸಿಗದೆ ನಿಲಲು ,
ಉಸಿರ್ಗಟ್ಟಿ ತಿಣುಕಾಡಿ, ಕೈಕೊಡವ ಬಿಡಲು,
ಪ್ರತಿಹನಿಯು ಸುಖವೋ ಪಂಡಿತಪುತ್ರ ||
--ಬಹಳಶ್ಟು ಮಂದಿ... ಸುಖವು ಎಲ್ಲೋ ಇದೆ ಎಂದು ತಿಳಿದು...ಸಾಹಸ ಮಾಡಿ ಅದನ್ನು ಪಡೆಯಲು ಹೋಗುತ್ತೇವೆ...ಸುತ್ತಲಿರುವುದೆಲ್ಲಾ ದು:ಖ..ಸುಖ ಬೇರೆಲೋಕದಲ್ಲೆಲ್ಲೋ ಇದೆಯೆಂದು, ಅದನ್ನು ಪಡೆಯಲು ಏನೆಲ್ಲಾ ಸಾಹಸ ಮಾಡುತ್ತೇವೆ...ಸಾಧ್ಯವಾಗದಿದ್ದರೆ ಮತ್ತೆ ದು:ಖಿತರಾಗುತ್ತೇವೆ....ಅದರಬದಲು ನಮ್ಮಲ್ಲೇ ಅಡಗಿರುವ ಸುಖದ ಪ್ರಜ್ನೆಯನ್ನು ಜಾಗ್ರುತ…
ವಿಧ: Basic page
March 22, 2006
ಇಬ್ಬರು ಸನ್ಯಾಸಿಗಳು ಒಂದು ತುಂಬಿ ಹರಿಯುತ್ತಿರುವ ಹೊಳೆಯನ್ನು ದಾಟುತ್ತಿರುವಾಗ ಒಬ್ಬ ಹರೆಯದ ಸುಂದರ ತರುಣಿ ಹೊಳೆಯನ್ನು ದಾಟಲು ಅವರ ಸಹಾಯ ಕೇಳಿದಳು. ಅವರಲ್ಲೊಬ್ಬ ಸಹಾಯ ಮಾಡಲು ಒಪ್ಪಿ ಅವಳನ್ನು ಹೊತ್ತುಕೊಂಡು ನದಿಯನ್ನು ದಾಟಿಸಿ ಅವಳನ್ನು ಇಳಿಸಿದ.
ಅವರು ಮುಂದೆ ಹೊರಟರು . ಎರಡನೇ ಸನ್ಯಾಸಿ ಏನನ್ನೋ ಯೋಚಿಸುತ್ತಿದ್ದ. ಹೀಗಾಗಿ ಅವರು ಮೌನವಾಗಿ ಸ್ವಲ್ಪ ದೂರ ಸಾಗಿದ ನಂತರ ಎರಡನೇ ಸನ್ಯಾಸಿ ಮೊದಲನೇಯವನನ್ನು ಕೇಳಿದ. - "ನೀನು ಮಾಡಿದ್ದು ತಪ್ಪಲ್ಲವೆ? " . ಮೊದಲನೇಯವನಿಗೆ ಪ್ರಶ್ನೆ…
ವಿಧ: Basic page
March 22, 2006
ಸಂಚಾರದಲ್ಲಿದ್ದ ಸನ್ಯಾಸಿ ಒಂದು ಬೌದ್ಧ ಮಂದಿರದಲ್ಲಿ ರಾತ್ರಿಗೆಂದು ಉಳಿದುಕೊಳ್ಳುತ್ತಾನೆ. ಚಳಿ ಬಹಳ ಇತ್ತು. ಅಗ್ಗಿಷ್ಟಿಕೆ ಬೆಂಕಿ ಆರತೊಡಗಿತ್ತು. ಅಲ್ಲಿ ಕಟ್ಟಿಗೆಯೂ ಇರಲಿಲ್ಲ . ಸನ್ಯಾಸಿ ಅಲ್ಲಿದ್ದ ಬುದ್ಧನ ಕಟ್ಟಿಗೆಯ ಮೂರ್ತಿಯೊಂದನ್ನು ತೆಗೆದುಕೊಂಡು ಬೆಂಕಿಗೆ ಚಾಚಿದ . ಇದನ್ನು ನೋಡಿದ ಮಂದಿರದ ಪೂಜಾರಿಗೆ ಅಘಾತವಾಯಿತು. ಸನ್ಯಾಸಿ ಅದನ್ನು ಗಮನಿಸಿದ. ಒಂದು ಕಡ್ಡಿಯನ್ನು ತೆಗೆದುಕೊಂಡು ಬೆಂಕಿಯನ್ನು ಕೆದರುತ್ತ ಏನನ್ನೊ ಹುಡುಕತೊಡಗಿದ ಪೂಜಾರಿ .ಕುತೂಹಲದಿಂದ 'ಏನನ್ನು ಹುಡುಕುತ್ತ…
ವಿಧ: Basic page
March 22, 2006
ಹೊಸಬನಾದ ಒಬ್ಬ ಭಿಕ್ಷು ಗುರುವಿನ ಹತ್ತಿರ ಬಂದ. ಹೇಳಿದ - "ಈಗಷ್ಟೆ ನಾನು ಸಂಘದಲ್ಲಿ ಸೇರಿಕೊಂಡಿದ್ದೇನೆ. ಜ಼ೆನ್ ನ್ ಪ್ರಥಮ ತತ್ವವನ್ನು ತಿಳಿಯಲು ಕಾತರನಾಗಿದ್ದೇನೆ. ನನಗೆ ಅದನ್ನು ಬೋಧಿಸುತ್ತೀರ, ಗುರುವೆ? "
"ಸಂಜೆ ಊಟ ಮಾಡಿದೆಯ ?" ಎಂದು ಗುರು ಅವನನ್ನು ಪ್ರಶ್ನಿಸಿದ .
"ಮಾಡಿದ್ದೇನೆ" ಎಂದ, ಆತ.
ಆಗ ಗುರು ಹೇಳಿದ- " ಈಗ ನಿನ್ನ ತಟ್ಟೆಯನ್ನು ತೊಳೆದು ಸ್ವಚ್ಛ ಮಾಡು".
ವಿಧ: Basic page
March 22, 2006
ಗುರುವಿನ ಪ್ರವಚನ ನಡೆದಿತ್ತು . ಬೇರೆ ಧರ್ಮದ ಪುರೋಹಿತನೊಬ್ಬ ನಡುವೆ ಬಾಯಿ ಹಾಕಿ ತನ್ನ ದರ್ಮಸಂಸ್ಥಾಪಕನ ಪವಾಡಗಳನ್ನು ಹೇಳಿ "ನೀವು ಅಂಥ ಪವಾಡ ಮಾಡಬಲ್ಲಿರ ?" ಎಂದು ಪ್ರಶ್ನಿಸಿದ.
ಗುರು ಶಾಂತವಾಗಿ ಉತ್ತರಿಸಿದ. - "ಇಲ್ಲಪ್ಪ ಅಂತ ದೊಡ್ಡ ದೊಡ್ಡ ಪವಾಡ ನನಗೆ ಸಾಧ್ಯವಿಲ್ಲ. ಕೆಲವು ಚಿಕ್ಕ ಚಿಕ್ಕ ಪವಾಡ ಮಾಡುತ್ತೇನೆ. ಉದಾಹರಣೆಗೆ ಹಸಿವೆಯಾದಾಗ ತಿಂದುಬಿಡುತ್ತೇನೆ; ನೀರಡಿಕೆಯಾದಾಗ ಕುಡಿದುಬಿಡುತ್ತೇನೆ; ಯಾರಾದರೂ ನನಗೆ ಅವಮಾನ ಮಾಡಿದರೆ ಅವರನ್ನು ಕ್ಷಮಿಸಿಬಿಡುತ್ತೇನೆ".
ವಿಧ: Basic page
March 22, 2006
ಜ಼ೆನ್ ಗುರು ಹಕುಇನ್ ಪರಿಶುದ್ಧ ಚರಿತ್ರನೆಂದು ಎಲ್ಲರೂ ಹೇಳುತ್ತಿದ್ದರು . ಹೀಗಿರುವಾಗ ಒಂದು ಘಟನೆ ನಡೆಯಿತು . ಸಮೀಪದಲ್ಲಿ ಇದ್ದ ಒಬ್ಬ ಎಳೆಯ ಅವಿವಾಹಿತ ಹುಡುಗಿ ಗರ್ಭಿಣಿಯಾದಳು . ತಂದೆ ತಾಯಿ ಅವಳನ್ನು ಅದಕ್ಕೆ ಕಾರಣ ಯಾರು ಎಂದು ತಿಳಿಯಲು ಪ್ರಯತ್ನಿಸಿದರು. ಆಕೆ ಮೊದಲು ಬಾಯಿ ಬಿಡಲಿಲ್ಲ . ಅವಳಿಗೆ ಹಿಂಸೆ ಕೊಟ್ಟಾಗ ಗುರು ಹಕುಇನ್ ನ ಹೆಸರು ಹೇಳಿದಳು.
ತಂದೆ ತಾಯಿ ಹಕುಇನ್ ಬಳಿಗೆ ಹೋಗಿ ಅವನ್ನನು ಶಪಿಸಿದರು . ಮರು ಮಾತಾಡದ ಅವನನ್ನು ಕಂಡು ಅವರ ಸಿಟ್ಟು ಇನ್ನೂ ಹೆಚ್ಚಾಯಿತು. ಮಗುವನ್ನು…
ವಿಧ: Basic page
March 22, 2006
ಇವತ್ತು ಮುಂಬೈಯಲ್ಲಿ ನಾನು ಮನೆ ಬಿಟ್ಟು ಹೊರಬೀಳುವಾಗ 'ಹೊಸಗನ್ನಡ ಸಾಹಿತ್ಯದ ಉದಯಕಾಲ( ಉತ್ತರ ಕರ್ನಾಟಕವನ್ನು ಅನುಲಕ್ಷಿಸಿ)' ಎಂಬ ಪುಸ್ತಕವೊಂದನ್ನು ಇಟ್ಟುಕೊಂಡೆ. ಅದರಲ್ಲಿನ ಅನೇಕವಿಷಯಗಳು ಬಹುತೇಕ ಕನ್ನಡಿಗರಿಗೆ ಗೊತ್ತಿಲ್ಲ. ಅದನ್ನು ಸಂಪದದಲ್ಲಿ ಹಾಕಬೇಕೆಂದು ರೈಲಿನಲ್ಲಿ ಓದಲು ಹೊರತೆಗೆದೆ. ಅದರಲ್ಲಿ ಮುಖ್ಯವಾಗಿ ಕನ್ನಡ ಭಾಷೆಯ ಪ್ರಾರಂಭಿಕ ಬೆಳವಣಿಗೆಯ ಸಂಕ್ಷಿಪ್ತ ಪರಿಚಯದ ನಂತರ ೩-೪ ಶತಮಾನ ಹೇಗೆ ಕತ್ತಲಯುಗವನ್ನು ಕಂಡಿತು ( ವಿಶೇಷತ: ಉತ್ತರ ಕರ್ನಾಟಕದಲ್ಲಿ ) , ಅದರಿಂದ ಹೇಗೆ…
ವಿಧ: Basic page
March 22, 2006
ಗಾಳಿ ಬಲವಾಗಿ ಬೀಸುತ್ತಿತ್ತು. ದ್ವಜ ಗಾಳಿಗೆ ಪಟಪಟಿಸುತ್ತಿತ್ತು. ಅಲ್ಲಿ ಇಬ್ಬರು ಭಿಕ್ಷುಗಳು ನಿಂತಿದ್ದರು . ಒಬ್ಬ ಹೇಳಿದ. " ಚಲಿಸುತ್ತಿರುವದು ಗಾಳಿಯಲ್ಲ, ದ್ವಜ." .
ಅದನ್ನು ವಿರೋಧಿಸಿ ಇನ್ನೊಬ್ಬ ಅಂದ - " ಅಲ್ಲ, ಗಾಳಿಯೇ ಚಲಿಸುತ್ತಿರುವದು, ಧ್ವಜ ಅಲ್ಲ."
ಅಷ್ಟರಲ್ಲಿ ಅಲ್ಲಿ ಹಾದು ಹೋಗುತ್ತಿದ್ದ ಮೂರನೆಯ ಭಿಕ್ಷು ತೀರ್ಮಾನ ಹೇಳಿದ - " ಚಲಿಸುತ್ತಿರುವದು ಎರಡೂ ಅಲ್ಲ , ನಿಮ್ಮ ಬುದ್ಧಿ".