"ಚಾಂದ್ರಮಾನ ಉಗಾದಿಯ" ಶುಭಾರಂಭವಾಗಿದೆ.

"ಚಾಂದ್ರಮಾನ ಉಗಾದಿಯ" ಶುಭಾರಂಭವಾಗಿದೆ.

ಬರಹ

"ಚಾಂದ್ರಮಾನ ಉಗಾದಿಯ" ಶುಭಾರಂಭವಾಗಿದೆ. ಎಲ್ಲೆಲ್ಲೂ ಮಂಗಳಮಯ ವಾತಾವರಣ ತುಂಬಿದೆ. ಕವಿಯವರ್ಣನೆ ಎಷ್ಟು ಅನ್ವರ್ಥವಾಗಿದೆ. ಪ್ರಕ್ರುತಿಯ ಸೊಬಗು ಹೇಳತೀರದು. ಎಷ್ಟೋ ದಿನ ಎಲ್ಲೋ ಅಡಗಿದ್ದ ಕೋಗಿಲೆ, ವಸಂತದ ಆಗಮನವಾಗುತ್ತಿದ್ದಂತೆಯೇ ತನ್ನ ಮಧುರ ಗಾನವನ್ನು ಉಣಬಡಿಸುತ್ತಿದೆ. ಎಲ್ಲಕಡೆ ಹಸಿರು, ಬೀಸುವ ಗಾಳಿಯಲ್ಲೂ ಮಧುರತೆ ಕಾಣಬರುತ್ತಿದೆ. ಪಕ್ಷಿಗಳ ಚಿಲಿಪಿಲಿ ಗಾನದಲ್ಲೂ ಏನೋ ಸಂಭ್ರಮ ಇದೆಯಲ್ಲ !
ಯುಗಾದಿಯ ದಿನ ಶುರುವಾಗುವುದು ಹೀಗೆ:
ಇನ್ನು ಸ್ವಲ್ಪ ಹೊತ್ತಿನಲ್ಲೇ ಬಾಗಿಲಿಗೆ ಮಾವಿನತಳಿರಿನ ತೋರಣ ಕಟ್ಟಬೇಕು. ನಂತರ ಎಲ್ಲರೂ ಅಭ್ಯಂಜನ ಮಾಡುತ್ತಾರೆ. ದೇವರ ಪೂಜೆ, ಪಂಚಾಂಗ ಶ್ರವಣ,ಬೇವು -ಬೆಲ್ಲ ಪ್ರಸಾದದ ಸೇವನೆ, ಹಬ್ಬದ ಊಟ; ಪಾಯಸ, ಚಿತ್ರಾನ್ನ, ಕೋಸುಂಬರಿ, ಪಲ್ಯ ಇದ್ದರೂ, ಈ ದಿನದ ಪ್ರಾಮುಖ್ಯತೆ ಹೋಳಿಗೆ ಹಾಲು ಊಟದ್ದು ! ಇವತ್ತಂತೂ 'ಅಮ್ಮನ ಕೈಯಿನ ಹೋಳಿಗೆ ಯ ಸವಿ ನೆನಪು' ಬಂದೇ ಬರುತ್ತದೆ ! ಹೊಸ ವಸ್ತ್ರ ಧಾರಣೆ. ಕೊನೆಯಲ್ಲಿ 'ಚಂದ್ರ ದರ್ಶನ'ದೊಂದಿಗೆ ದಿನದ ಕಾರ್ಯಕ್ರಮ ಮುಕ್ತಾಯವಾಗುತ್ತದೆ.

ಬೇವು -ಬೆಲ್ಲ, ಸೇವಿಸುವಾಗ, ಈ ಶ್ಲೋಕ ಹೇಳಬೇಕು:

ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯಚ
ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಮ್
ಸದ್ರುಡ ಆರೋಗ್ಯ, ಎಲ್ಲ ಸಂಪತ್ತುಗಳನ್ನೂಕೊಟ್ಟು, ಅನಿಷ್ಟಗಳನ್ನು ನಿವಾರಿಸು. ಈ ಬೇವು ಬೆಲ್ಲದ ಸೇವನೆಯಿಂದ ನನ್ನ ಆಯಸ್ಸು ವ್ರುದ್ದಿಸಲಿ.
ಎಂದು ದೇವರಲ್ಲಿ ನಿವೇದಿಸಿಕೊಳ್ಳಿ.