ಒಲ್ಲೆನೆಂದು ಹೇಳಿ , ವಲ್ಲಿ ಒಡ್ಡಿದಳಂತೆ.

ಒಲ್ಲೆನೆಂದು ಹೇಳಿ , ವಲ್ಲಿ ಒಡ್ಡಿದಳಂತೆ.

ಬರಹ

ಬಾಗಿಲು ಮುರಿದು ಹೋಗುವವರಿಗೆ ಬೀಗದ ಕೈ ಏಕೆ?
ಬಾವಿ ಬಳಸದೆ ಕೆಟ್ಟಿತು ; ನೆಂಟಸ್ತಿಕೆ ಹೋಗದೆ ಕೆಟ್ಟಿತು.
ತಾಯಿ ಹೊಟ್ಟೆ ನೋಡಿದಳು , ಹೆಂಡತಿ ಮೊಟ್ಟೆ( ಹಣದ ಗಂಟು) ನೋಡಿದಳು.
ಜರೆದು ಕೊಳ್ಳಬೇಕು ; ಹೊಗಳಿ ಮಾರಬೇಕು. ( ವ್ಯಾಪಾರದ ಗುಟ್ಟು)
ಗುಡಿಸಿದ ಮೇಲೆ ಕಸವಿರಬಾರದು , ಬಡಿಸಿದ ಮೇಲೆ ಹಸಿವಿರಬಾರದು.
ಕೆಟ್ಟ ಅಡಿಗೆ ಅಟ್ಟವಳೇ ( ಸರಿಪಡಿಸಿದವಳೇ) ಜಾಣೆ.
ಕಾಲು ಬಿದ್ದು ಕಾಲುಂಗುರ ಉಚ್ಚಿಕೊಂಡರಂತೆ.
ಜೀನ ಗಳಿಸಿದ , ಜಾಣ ಉಂಡ.
ಕಡುಕೋಪ ಬಂದಾಗ ತಡಕೊಂಡವನೇ ಜಾಣ.
ಒಲ್ಲೆನೆಂದು ಹೇಳಿ , ವಲ್ಲಿ ಒಡ್ಡಿದಳಂತೆ.