'ವಿಕೆಟ್' ಅಲ್ಲ 'ವಿಟೆಟ್' !

'ವಿಕೆಟ್' ಅಲ್ಲ 'ವಿಟೆಟ್' !

ಬರಹ

'ವಿಕೆಟ್' ಅಲ್ಲ 'ವಿಟೆಟ್' ! 'ಅಂದ್ರೆ ಏನಿದ್ರರ್ಥ' ? ತಾಳಿ. 'ಕೋಪಮಾಡ್ಕೋಬೇಡಿ'. ಇದನ್ನ ನಾನು ಯಾವರ್ಥದಲ್ಲಿ ಹೇಳ್ತಿದೀನಿ ಅಂದ್ರೆ, ನೆನ್ನೆ, ಟಾಟರವರ, 'ಯೆಲ್ಲೋ ಪೇಜಸ್' ನೋಡ್ತಿದ್ದೆ. ಮುಂಬೈನಲ್ಲಿ ನೋಡುವ ಸ್ಥಳಗಳನ್ನೆಲ್ಲಾ ಕೊಟ್ಟಿದ್ದರು.' ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯೆಮ್,' ಕಟ್ಟಿದ ವ್ಯಕ್ತಿ, 'ಜಾನ್.ವಿಕೆಟ್', ಎಂದಿತ್ತು. ಇದನ್ನು ಓದಿದ ಮೇಲೆ, ಬೇಸರವಾಯ್ತು ನೋಡಿ ! ಅದನ್ನು ನಿರ್ಮಿಸಿದ ಶ್ರೇಷ್ಠ 'ಇನ್ ಡೋ ಸರಿಸಿನಿಕ್ ಶ್ಯಲಿಯ' ಭವ್ಯ 'ಶಿಲ್ಪಿ', 'ಜಾನ್ ವಿಟೆಟ್'. (೧೮೭೮-೧೯೨೬) ಈತ ಹುಟ್ಟಿದ್ದು ಸ್ಕಾಟ್ಲ್ಯಂಡಿನ ಬ್ಲೇರ್ ಅಥೋಲ್ ನಲ್ಲಿ. ಬಾಲ್ಯದಿಂದಲೇ ನಿರ್ಮಾಣದಲ್ಲಿ ಅತೀವ ಆಸಕ್ತಿ, ಶ್ರದ್ಧೆ. 'ಎಡಿನ್ಬರ' ಮತ್ತು 'ಯಾರ್ಕ್' ಗಳಲ್ಲಿ ನಡೆಯುತ್ತಿದ್ದ ಸ್ಕಾಟ್ಲ್ಯಾಂಡಿನ 'ಪರ್ತ್' ನಿಂದ ಬಂದ, ಮಿ.ಹೇಟನ್, ನ ಜೊತೆ, ಕಾರ್ಯದಲ್ಲಿ ಸಹಾಯಕನಾಗಿ ಕೆಲಸ ಮಡುತ್ತಿದ್ದು, ೧೯೦೪, ರಲ್ಲಿ ಬೊಂಬಾಯಿಗೆ ಬಂದ. ಆಗ ಬೊಂಬಾಯಿ ಸರ್ಕಾರದ ಪ್ರಮುಖ ಆರ್ಕಿಟೆಕ್ಟ್, ಜಾನ್ ಬೇಗರ ಸಹಾಯಕನಾಗಿ ಸೇರಿದ. ಬೇಗರು, 'ಇನ್ಡೋಸೆರಿಸಿನಿಕ್' ಎಂಬ ಹೊಸ ಶೈಲಿಯ ನಿರ್ಮಾಣವನ್ನು ಹುಟ್ಟು ಹಾಕಿ, 'ಜನರಲ್ ಪೋಸ್ಟ್ ಆಫೀಸ್' ನಂತಹ ಹಲವು ಭವ್ಯ ಕಟ್ಟಡ ಗಳಿಗೆ ಸಲಹೆಕಾರರಾಗಿ ದುಡಿಯುತ್ತಿದ್ದರು. ಜಾನ್ ಬೇಗರ ಗರಡಿಯಲ್ಲಿ ಪಳಗಿದ ವಿಟೆಟ್, ಕಟ್ಟಿದ ಹಲವು ಅಪರೂಪದ ಕಟ್ಟಡಗಳು, ಇಂದು ಜನಮನದಲ್ಲಿವೆ. ಅವುಗಳನ್ನು ಕೆಳಗೆ ನಮೂದಿಸಿದ್ದೇನೆ. ಪ್ರತಿ ಕಟ್ಟಡದ ಇತಿಹಾಸ ಬಹಳ ಅನನ್ಯ.

೧. ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಮ್,

೨. ಗೇಟ್ ವೆ ಆಫ್ ಇಂಡಿಯ,

೩. ಇನ್ಸ್ಟಿಟ್ಯೂಟ್ ಆಫ್ ಸಾಯಿನ್ಸ್,

೪. ಸ್ಮಾಲ್ ಕಾಸೆಸ್ ಕೋರ್ಟ್,

೫. ವಾಡಿಯ ಹೆರಿಗೆ ಆಸ್ಪತ್ರೆ,

೬. ಕೆ.ಇ.ಎಮ್ ಆಸ್ಪತ್ರೆ,

ಬ್ರಿಟೀಶ್ನವ್ನಾದರೇನಂತೆ, ನಿರ್ಮಾಣಕಾರ್ಯದಲ್ಲಿ ಒಂದು ಹೊಸ ಅಧ್ಯಾಯವನ್ನೇ ನಿರ್ಮಾಣ ಮಾಡಿದ್ದಾನೆ. ೮೦ ವರ್ಷಗಳ ಮೇಲೂ, ಈ ವಾಸ್ತುಶಿಲ್ಪಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತಿದೆ. ಅವನ ಗುರು, 'ಜಾನ್ ಬೇಗ್,' ಗಿಂತ ಮೊದಲೇ ಈ ಭವ್ಯ ವಾಸ್ತು ಶಿಲ್ಪಿ, ನಿರ್ಮಪಕ, 'ಆಮಶ್ಯಂಕೆ ಭೇದಿ" ಯಿಂದ ನರಳಿ, ೧೯೨೬ ರಲ್ಲಿ, ಬೊಂಬಾಯಿನಲ್ಲೇ ಕೊನೆಯುಸಿರೆಳೆದ. ಅವನ ದೇಹ ವನ್ನು 'ಸಿವ್ರಿಯ ಕಬರಸ್ಠಾನ'ದಲ್ಲಿ ಮಣ್ಣು ಮಾಡಿದರು. ಅವನ ಬಗ್ಗೆ ಓದಲು ಸಾಧ್ಯವಾಗದೆ ಇರಬಹುದು. ಆದರೆ, ಅವನ ಹೆಸರನ್ನೇ ಸರಿಯಾಗಿ ಮುದ್ರಿಸದಿರುವುದು ನಾಚಿಕೆಗೇಡು ! ಅದೂ 'ಯೆಲ್ಲೋ ಪೇಜಸ್' ನಲ್ಲಿ ಕೂಡ ! ಇನ್ನೇನು ಮುಂಬೈ ಟೆಲಿಫೋನ್ ನಿಗಮ- ಇದನ್ನ ಕೇಳಲೇಬೇಕಾಗಿಲ್ಲ ? ನಾನು ಹೇಳ್ತಾ ಇರೋದು ೨೦೦೫ ರ ವಿಶಯ. 'ಹೊಸ ಡಿರೆಕ್ಟೊರಿ' ನೋಡೋಣ; ಇದೇ ಪುನರಾವರ್ತನೆ ಇರುತ್ತೋ !

ಹೌದು ಸ್ವಾಮಿ, ನಾನು ಈ ಎರಡು ಸಂಸ್ಠೆಗಳಿಗೆ ಬರದೂ ಇದ್ದೆ. ಚಲ್ತಾ ಹೈ- "ಹೋಗ್ಲಿ ಬಿಡಿ ಸಾರ್." ! !