ಎಲ್ಲ ಪುಟಗಳು

ಲೇಖಕರು: tvsrinivas41
ವಿಧ: Basic page
April 22, 2006
ಈ ಬದುಕೊಂದು ತನಗೆ ತಾನೇ ಬ್ಯಾಲೆನ್ಸಾಗುವ ಶೀಟು ಒಂದೆಡೆ ಏರಿಸಿದರೆ ಹ್ಯಾಟು ಇನ್ನೊಂದೆಡೆ ಸೇರುವುದು ಬೂಟು ಅಪ್ಪ ಅಮ್ಮ ನೀಡಿದುದೇ ಅಸಲು ಬಂಡವಾಳ ಕರ್ಮಗಳಿಗನುಸಾರವಾಗುಳಿಯುವುದು ನಿವ್ವಳ ಪಾಲಕರು ನೀಡುವುದೇ ಪ್ರಿಫರೆನ್ಸ್ ಶೇರ್‍ಸು ಋಣ ತೀರಿಸಲು ಮೊದಲು ಅವರನು ಪಾಲಿಸು ಮುಂದೆ ಹಾದಿ ತೋರುವವರೇ ಡಿಬೆಂಚರ್‍ಸು ಕೈ ಹಿಡಿದು ನಡೆಸಿದವರ ನೀನೆಂದೂ ನೆನೆಸು ಕೈ ನಡೆಸುವ ಹೆಂಡತಿ ಮಕ್ಕಳೇ ಕ್ಯಾಷ್ ಬ್ಯಾಲೆನ್ಸು ಮುಂದಿನ ಬಾಳಿಗೆ ಹಾದಿ ತೋರುವವರೇ ಬ್ಯಾಂಕ್ ಬ್ಯಾಲೆನ್ಸು ಕೆಲಸಕ್ಕೆ ಫಲ ನೀಡಿದವರೇ ಎನ್.…
ಲೇಖಕರು: honnung
ವಿಧ: ಚರ್ಚೆಯ ವಿಷಯ
April 21, 2006
ಇದನ್ನು ನೋಡಿ. ಇದು ಭಾರತ ಸರಕಾರ ಹಾಗೂ ಪ್ರೈವೇಟ್ ಕಂಪನಿಗಳು ಕೂಡಿ ತಯಾರಿಸಿದ ಅಂತರ್ಜಾಲ ತಾಣ. ಇದರಲ್ಲಿ ಇತ್ತೀಚಿನ ವಾತಾಮಾನ ವರದಿ ಪಡೆಯಬಹುದು. [http://www.indiaweatherwatch.org/|ಹವಾಮಾನ ವರದಿ] ಉಳಿದ ಸರಕಾರಿ ತಾಣಗಳಿಗೆ ಹೋಲಿಸಿದರೆ ಉತ್ತಮವೇ ಅನ್ನಬಹುದು. ಇಲ್ಲಿ ಅನೇಕ ನಗರಗಳ, ಪ್ರಾಂತ್ಯಗಳ ಉಷ್ಣತೆ, ಮಳೆ ಪ್ರಮಾಣ ಲಭ್ಯವಿದೆ. ವೈಪರಿತ್ಯಗಳ ಬಗ್ಗೆ ಎಚ್ಚರಿಕೆ ಸಹ ಲಭ್ಯವಿದೆ. ಇನ್ನೂ ಅನೇಕ ಪ್ರಾಂತ್ಯಗಳು, ನಗರಗಳು ಇದರಲ್ಲಿ ಸೇರಿಸಿ ವಿಸ್ತರಿಸಬಹುದು. ಉದಾಹರಣೆಗೆ ನಮ್ಮ…
ಲೇಖಕರು: Rohit
ವಿಧ: ಚರ್ಚೆಯ ವಿಷಯ
April 20, 2006
 ಗೆಳೆಯರೆ,  Personal Computing  ಗೆ ಅಗತ್ಯ ತಂತ್ರಾಂಶಗಳನ್ನು ಪೂರೈಸುವ ಅಗ್ರಗಣ್ಯ ಸಂಸ್ಥೆ, ಮೈಕ್ರೋಸಾಫ್ಟಿನ ಜನಪ್ರಿಯ ಆಪರೇಟಿಂಗ್ ಸಿಸ್ಟಂ ವಿಂಡೋಸ್ XP. ಇದರಲ್ಲಿ ಇತ್ತೀಚೆಗೆ ಕನ್ನಡವೂ ಸೇರಿದಂತೆ ಇತರ ಭಾರತೀಯ ಭಾಷೆಗಳನ್ನು ಸೇರಿಸುವ ಪ್ರಯತ್ನಗಳು ನಡೆಯುತ್ತಿವೆ. ಈಗಾಗಲೇ ಕನ್ನಡದ ಒಂದು ಆವೃತ್ತಿ ಬಿಡುಗಡೆಯಾಗಿದೆ. ಹಿಂದೆ ಕನ್ನಡವನ್ನು ಬಳಸಲು ಪರಿಮಿತ ಸೌಲಭ್ಯವಿತ್ತು. ಆದರೆ ಈಗಿನ ಆವೃತ್ತಿಯಲ್ಲಿ ಹೆಚ್ಚಿನ ಸೌಲಭ್ಯಗಳು ಇವೆ ಎಂದು ಬೀಗುತ್ತ, 'ತುಂಗಾ' ಫಾಂಟಿನಲ್ಲಿಯ ದೋಷಗಳನ್ನು ಅವರು…
ಲೇಖಕರು: shreekant.mishrikoti
ವಿಧ: Basic page
April 19, 2006
ಆರಿದ್ರ ವೇಳೆಗೆ ಆದೋನೇ ಗ೦ಡ! (ಚಿಟಿ ಚಿಟಿ ಮಳೆ ಬಿಡದೇ ಸುರಿಯುತ್ತಿದಾಗ, ಮನೆ ಬಿಟ್ಟು ಎಲ್ಲೂ ಹೊರಗೆ ಹೋಗದೇ ಇರುವಾಗ, ನಡೆದಿರಬಹುದಾದ ಚಟುವಟಿಕೆಯ ಕಥೆ ಹೇಳುತ್ತಾ ಇದು?, ಎ೦ದು ರಸಿಕರ ಪ್ರಶ್ನೆ!) ಅದೇ ಉ೦ಡೇನು ಕದ ತೆಗೀರಿ ಅತ್ತೆಮ್ಮನವರೇ. ಆಚಾರ್ಯರ ಮಗನಾಗಿ, ಪುರಾಣಿಕರ ಅಳಿಯನಾಗಿ ಘೃತ ಎ೦ದರೇನು? ಅಂದನಂತೆ ಅಪಾರ ಪತಿವ್ರತೆ ಅಪ್ಪನ್ನ ಗ೦ಡ ಅ೦ತ ತಬ್ಬಿಕೊ೦ಡಳ೦ತೆ. ಇಣುಕಿ ಇಣುಕಿ ನೋಡಿದ ಒಣಕಲು ವನಜನ್ನ. ಊರೆಲ್ಲಾ ಉಗಿದರೂ ನನ್ನ ಮೂರೇ ಜನ ಉಗಿದರು ಅ೦ದ೦ತೆ. ಉ೦ಡೆ ಕದ್ದವನು ಒಡವೆಗೆ ಕೈ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
April 19, 2006
ಪ್ರಜಾವಾಣಿ (೧೮ ಎಪ್ರಿಲ್ ೨೦೦೬) ರಲ್ಲಿ ನಾನು ಗಮನಿಸಿದ ವಾರ್ತೆಗಳು. ೧. ಕನ್ನಡದ ಆದಿಕವಿ ಪಂಪ ಅಲ್ಲ ಎಂದು ಚರ್ಚೆ ನಡೆದಿದೆ ; ದೇವರ ದಾಸಿಮಯ್ಯ , ಜೇಡರ ದಾಸಿಮಯ್ಯ ಇಬ್ಬರೂ ಒಬ್ಬನೇ ವ್ಯಕ್ತಿ ಎಂಬ ವಾದವೂ ಇದ್ದು ಈ ಪಟ್ಟ ಅವರಿಗೆ ಸಲ್ಲಬೇಕು ಎಂದು ವಾಚಕರವಾಣಿಯಲ್ಲಿ ಪತ್ರ ಬರೆದಿದ್ದಾರೆ . ೨. ಇಂದು ಬೆಂಗಳೂರಿನಲ್ಲಿ ಚಿತ್ರರಂಗದಿಂದ ಡಾ. ರಾಜ್‍ಗೆ ಶೃದ್ಧಾಂಜಲಿ ಕಾರ್ಯಕ್ರಮ ನಡೆಯಲಿದೆ ೩. ಪ್ರತಿದಿನ ಐವತ್ತು ಸಾವಿರ ಜನ ಡಾ. ರಾಜ್ ಸಮಾಧಿಯನ್ನು ಸಂದರ್ಶಿಸುತ್ತಿದ್ದಾರೆ. ೪. ರಾಜ್ ಸ್ಮಾರಕ…
ಲೇಖಕರು: ರಘುನಂದನ
ವಿಧ: ಚರ್ಚೆಯ ವಿಷಯ
April 19, 2006
ರಸವತ್ತಾದ ಪ್ರಶ್ನೆಗಳು 1) gear ಹಾಕುವ ಸೊಪ್ಪಿನಿಂದ ನೀರು ಬೀಳುವ ಜಾಗ ಎಲ್ಲಿದೆ? 2) power ಇದ್ರೂನೂ ಇತ್ತೀಚೆಗೆ ಅಬುಧಾಬಿಯಲ್ಲಿ ಧಬಧಬ ಎಂದು ದಬ್ಬಿಸಿಕೊಂಡವರು ಯಾರು? 3) ಉಪ್ಪಿನ ಸತ್ಯಾಗ್ರಹದಲ್ಲಿ ಕನ್ನಡನಾಡಿನಗಲದ ಕಿವಿಯವರೊಬ್ರು ಅರೆಸ್ಟಾಗಿದ್ರು. ಯಾರವ್ರು? 4) ಭಿಕ್ಷೆಬೇಡ್ಕೊಂಡೇ, ಮೈಕೈ ಬಗ್ಗಿಸ್ಕೊಂಡೇ ಬರೀತಿದ್ದವ್ರು ಯಾರು? 5) ಎಲ್ರಿಗಿಂತ್ಲೂ ಮೊದ್ಲು ಬಿಸಿಬಿಸಿಪತ್ರ ಕಳ್ಸೋ ವ್ಯವಸ್ಥೆ ಮಾಡಿದ್ದು ಯಾರು? (ಕ್ಲೂ: ಮುಂದೆ ಭಾರಿ ಸೂಕ್ಷ್ಮಬುದ್ಧಿಯವರಿಗೆ ಈ ಪತ್ರಾನ ಮಾರಿಬಿಟ್ರಂತೆ…
ಲೇಖಕರು: venkatesh
ವಿಧ: Basic page
April 19, 2006
ಬದುಕು ನನಗೇನು ಕಲಿಸಿದೆ ? ಡಾ. ಎಚ್.ಎನ್. ಹೀಗೆ ಹೇಳುತ್ತಾರೆ. ಬುದ್ಧ, ಸ್ವಾಮೀವಿವೇಕಾನಂದ, ಗಾಂಧೀಜಿ, ಜವಹರ್ ಲಾಲ್ ನೆಹ್ರೂ ಮತ್ತು ಐನ್ ಸ್ಟೈನ್ ರ ವಿಚಾರಗಳು ನನ್ನ ಮೇಲೆ ಅಗಾಧ ಪ್ರಭಾವ ಬೀರಿವೆ. ಗುರಿಯಶ್ಟೇ ಸಾಧನಗಳೂ ಮುಖ್ಯ ಎಂಬುದನ್ನು ನಾನು ಈ ಮಹಾನ್ ವ್ಯಕ್ತಿಗಳಿಂದ ಕಲಿತೆ. ದೇವರ ಇರುವಿಕೆ, ಇಲ್ಲದಿರುವಿಕೆ, ಜೀವನ ಮೂಲ ಆಕಸ್ಮಿಕವೇ, ಬದುಕಿಗೊಂದು ಉದ್ದೇಶ್ಯ ವಿದೆಯೇ, ಸಾವು ಬದುಕಿನ ಕೊನೆಯೇ ? ಮರಣಾ ನಂತರ ವ್ಯಕ್ತಿತ್ವ ಉಳಿಯಬಲ್ಲುದೇ ? ಎನ್ನುವ ತತ್ವ ಶಾಸ್ತ್ರದ ಸಮಸ್ಯೆಗಳು…
ಲೇಖಕರು: ಶಿವ
ವಿಧ: ಬ್ಲಾಗ್ ಬರಹ
April 19, 2006
ಡಾ. ರಾಜ್‍ಕುಮಾರ್‍ಗೆ ದೇವಸ್ಥಾನ ಕಟ್ಟಬೇಕಂತೆ.ಡೆಕ್ಕನ್ ಹೆರಾಲ್ಡ್ ನ ಈ ವರದಿ ನೋಡಿ.http://www.deccanherald.com/deccanherald/apr192006/city2110502006418.asp ರಾಜ್ ಅಭಿಮಾನಿಗಳ ಸಂಘ ಇದನ್ನು ತಡಿಬೇಕು.ಯಾವತ್ತು ರಾಜ್ ಪ್ರೀತಿಯ ಅಣ್ಣಾವ್ರು ಆಗಿಯೇ ನಮ್ಮ ಜೊತೆ ಇರಲಿ.. ಇ-ಟಿವಿಯಲ್ಲಿ 'ರಸ ಋಷಿಗೆ ನಮಸ್ಕಾರ" ಎನ್ನುವ ಕಾರ್ಯಕ್ರಮ ಬರುತಿತ್ತು.ಆ ಕಾರ್ಯಕ್ರಮದ ಕೊನೆಯ ಸಂಚಿಕೆಯಲ್ಲಿ ತೇಜಸ್ವಿಯವರ ಸಂದರ್ಶನ ಇತ್ತು.ವೀರಪ್ಪ ಮೊಯಿಲಿಯವರು ಮುಖ್ಯಮಂತ್ರಿಯಾಗಿದ್ದ ಕಾಲ,…
ಲೇಖಕರು: Satyaprakash.H.K.
ವಿಧ: ಬ್ಲಾಗ್ ಬರಹ
April 19, 2006
ಆರೋಗ್ಯಸತ್ಯ ಪ್ರಕೃತಿ ಕೇಂದ್ರ ಪಾಲೀಶ್ ಮಾಡಿದ ಅಕ್ಕಿ "ಆಸಿಡ್" ಮಯ. ಪ್ರಕೃತಿ ನಮಗೆಲ್ಲ ಜನ್ಮ ಕೊಟ್ಟಿರುವುದು ನಮಗೆಲ್ಲಾ ತಿಳಿದೇ ಇದೆ. ಪ್ರಕೃತಿ ನಮಗೆ ಏನೇನು ಆಹಾರಗಳನ್ನು ಕೊಟ್ಟಿದೆಯೋ ಅದನ್ನೆಲ್ಲಾ ಸಂಸ್ಕರಿಸದೆ ಅದು ಕೊಟ್ಟಿರುವ ರೂಪದಲ್ಲೇ ಅಂದರೆ ಉದಾಹರಣೆಗೆ: ಅಕ್ಕಿಯನ್ನು ಅದರ ಮೇಲಿನ ಭತ್ತವನ್ನು ಮಾತ್ರ ತೆಗೆದು ಬರುವ ಪೂರ್ಣಧಾನ್ಯವನ್ನು ಊಟ ಮಾಡಿದರೆ ಸಂಪೂರ್ಣ ಆರ್‍ಓಗ್ಯವು ಲಭಿಸುವುದು. ನಾವು ಊಟ ಮಾಡುವುದು ಏತಕ್ಕಾಗಿ? ನಾವು ಊಟ ಮಾಡುವುದು ಶಕ್ತಿ ಬರುವುದಕ್ಕೋ ಅಥವ ಖಾಯಿಲೆ…
ಲೇಖಕರು: Satyaprakash.H.K.
ವಿಧ: ಬ್ಲಾಗ್ ಬರಹ
April 19, 2006
ನಾರಿನಿಂದ ಸ್ತನ ಕ್ಯಾನ್ಸರ್ ಗೆ ತಡೆ ಬಾಲಕಿಯರು ಬೇಗನೇ ಋತುಮತಿಯಾಗುವುದಕ್ಕೂ ಸ್ತನ ಕ್ಯಾನ್ಸರ್ ಗೂ ಏನಾದರೂ ಸಂಬಂಧವಿದೆಯಾ ? ಕೆನಡಾದ ಟೊರಂಟೋ ವಿವಿಯ ತಜ್ನರ ಪ್ರಕಾರ ಉತ್ತರ 'ಹೌದು' ಹದಿ ವಯಸ್ಸಿಗೂ ಮುಂಚಿನ ಹಲವಾರು ಬಾಲಕಿಯರ ಮೇಲೆ ನದೆಸಿದ ಸಂಶೋಧನೆಗಳಿಂದ ಈ ಸಂಗತಿಯನ್ನು ಕಂಡುಕೊಂಡಿರುವ ಅವರು ಹೆಣ್ಣುಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ ಇಂಥ ಅನೇಕ ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಯಾವ ಹುಡುಗಿಯರು ಚಿಕ್ಕಂದಿನಿಂದಲೇ ನಾರುಯುಕ್ತ ಆಹಾರವನ್ನು ಹೆಚ್ಚು ತಿನ್ನುತ್ತಾರೋ, ಅವರ ಮುಟ್ಟು…