ವಿಧ: ಬ್ಲಾಗ್ ಬರಹ
April 18, 2006
ನಿನ್ನೆಯ ಪ್ರಜಾವಾಣಿಯಲ್ಲಿ ಗಮನಿಸಿದ ವಿಷಯಗಳು :
೧. ರಾಹುಲ್ ದ್ರಾವಿಡ್ ಮತ್ತು ರಾಬಿನ್ ಉತ್ತಪ್ಪ ಇತ್ತೀಚೆಯ ಕ್ರಿಕೆಟ್ ಪಂದ್ಯವಾಡುವಾಗ ರಾಜ್ ನಿಧನದ ಶೋಕಸೂಚಕವಾಗಿ ಕಪ್ಪು ಬ್ಯಾಂಡ್ ಧರಿಸಿದ್ದರು
೨. ಕನ್ನಡ ಪಠ್ಯಕ್ರಮದಲ್ಲಿ ಕೇಶಿರಾಜನ ಶಬ್ದಮಣಿದರ್ಪಣದ ಅಧ್ಯಯನ ಕೈಬಿಡಲು ಶಿಕ್ಷಣತಜ್ಞರು ಸೂಚಿಸಿದ್ದಾರೆ .
೩. ಕಾಲೇಜುಗಳಲ್ಲಿ ಪದವಿಪೂರ್ವ ತರಗತಿಗಳಲ್ಲಿ ಕನ್ನಡವನ್ನು ಆಡಳಿತಗಾರರು ಕೈಬಿಡುತ್ತಿದ್ದಾರೆ.
ಮೇ ೨೦೦೬ ಕಸ್ತೂರಿಯಲ್ಲಿ ಭಾಷೆಯ ಕುರಿತಾದ ಲೇಖನ ಇರುವದು . ಅದರಲ್ಲಿ ಒಂದು…
ವಿಧ: Basic page
April 17, 2006
ಕಂಡ ಕಂಡ ದೇವರಿಗೆಲ್ಲ ಕೈ ಮುಗಿದರೂ ಗಂಡನಿಲ್ಲದೆ ಮಕ್ಕಳಾಗವು.
ಏಟು ಬೀಳದ ಹೊರತು ದೆವ್ವ ಬಿಡುವದಿಲ್ಲ ;
ಎಲ್ಲ ಬಲ್ಲಪ್ಪ ಕೇಳಿದರೆ ಕಲ್ಲಪ್ಪ
ಎಲೆ ತುದಿಗೆ ಪಲ್ಯ ಇರಬೇಕು ; ಹಾಸಿಗೆ ತುದಿಗೆ ಹೆಂಡತಿ ಇರಬೇಕು.
ಎಮ್ಮೆಯ ಉಚ್ಚೆ ಇರುವೆಗೆ ಜಲಪ್ರಳಯ
ಎತ್ತು ಮಾರಿದವನಿಗೆ ಹಗ್ಗದ ಆಸೆಯೇ ?
ಎತ್ತಿಗೆ ಭತ್ತದ ಚಿಂತೆ ಯಾತಕ್ಕೆ?
ಎತ್ತನ್ನು ಕದ್ದ ಕಳ್ಳ ಹಗ್ಗ ಮರೆಯುವನೇ?
ಕದ್ದ ರೊಟ್ಟಿ ಬೇರೆ , ದೇವರ ಪ್ರಸಾದ ಬೇರೆ.
ಕಸ ತಿನ್ನುವದಕ್ಕಿಂತ ತುಸ ತಿನ್ನುವದು ಮೇಲು.
ಕಳ್ಳನನ್ನ ಕಾವಲಿಗಿಟ್ಟ ಹಾಗೆ
'ಕುರಿ…
ವಿಧ: Basic page
April 16, 2006
'ನಲ್ಲೀ ತಾವ್ ನಂ ಮಲ್ಲೀ' 'ಶತಮಾನದ ಕಾವ್ಯ' ದಿಂದ, ಶ್ರೀ. ಜೀ.ಪಿ.ರಾಜರತ್ನಂ, ಅವರ ಕವಿತೆಗಳಲ್ಲಿ ನನಗೆ 'ಪ್ರಿಯವೆನಿಸಿದ' ಕೆಲವು ಪದ್ಯಗಳನ್ನು ಕೆಳಗೆ ಕೊಟ್ಟಿದ್ದೇನೆ. ಸಂಪಾದಕರು: ಶ್ರೀ. ಎಚ್. ಎಸ್. ವೆಂಕಟೇಶಮೂರ್ತಿಗಳು. ಹೆಸರಾಂತ ಕವಿ, ರಾಜರತ್ನಂ ಕವಿತೆಗಳಲ್ಲಿ ರಸಿಕತೆಗೇನೂ ಕಡಿಮೆ ಇಲ್ಲ ! ಮಲ್ಲಿಯ ಮೇಲಿನ ಪ್ರೀತಿ, ಗೌರವ, ಹಾಗೂ ಮೆಚ್ಚುಗೆಯನ್ನು ಅವರ ಕಾವ್ಯಗಳಲ್ಲಿ ಕಾಣಬಹುದು !
"ನಲ್ಲೀ ತಾವ್ ನಂ ಮಲ್ಲೀ" ನಿಂತ್ರೊಂ ಚಂದ !
ಕುಂತ್ರೊಂ ಚಂದ !
ನಡೀತಾ ನಿದ್ರ್, ಒಂ ಚಂದ !
ಮಲ್ಲಿ…
ವಿಧ: ಚರ್ಚೆಯ ವಿಷಯ
April 15, 2006
ಆತ್ಮೀಯರೇ,
ನಿಮಗೆ ಸಮಯ ಸಿಕ್ಕಾಗ ನನ್ನ "ಅಂತರಂಗ"ಕ್ಕೆ ಭೇಟಿ ಕೊಡಿ, ನಿಮ್ಮ ಅನಿಸಿಕೆಗಳನ್ನು ಬರೆದರೆ ಒಳ್ಳೆಯದು.
[:http://antaranga.blogspot.com/]
ಧನ್ಯವಾದಗಳು.
ಇತಿ,
ನಿಮ್ಮವ ನಾನು
ವಿಧ: Basic page
April 14, 2006
'ಅಶ್ರು ತರ್ಪಣ,' 'ನೆತ್ತರು ತರ್ಪಣ,'ವಾಗದಿರಲಿ ! ತಪ್ಪುಗಳಿಂದ ಎಚ್ಚೆತ್ತುಕೊಳ್ಳೋಣ ! ಸಾವು ಆಕಸ್ಮಿಕ ಹಾಗು ಅನಿವಾರ್ಯ ಕೂಡ:
ರಾಜ್ ಅವರು ಮರಣ ಹೊಂದಿದ ಘಳಿಗೆಯಲ್ಲಿ ಬಳಿ ಅವರ ಪುತ್ರ ಶಿವರಾಜ್ ಕುಮಾರ್ ಇರಲಿಲ್ಲ. ಶಿವಣ್ಣಾಅವರು ತಮ್ಮ ಚಿತ್ರೀಕರಣದ 'ಸೆಟ್' ನಲ್ಲಿ ಇದ್ದಾಗ ತಂದೆಯ ಸಾವಿನ ಸುದ್ದಿ ಅವರಿಗೆ ಬರ ಸಿಡಿಲಿನಂತೆ ಅಪ್ಪಳಿಸಿ, ಅವರು ಅಲ್ಲಿಂದ ಓಡಿ ಬೆಂಗಳೂರಿಗೆ ಬಂದರಂತೆ ! ಮುಖ್ಯ ಮಂತ್ರಿ, ಕುಮಾರ ಸ್ವಾಮಿ ಬರಲಾಗಲಿಲ್ಲ : ರಾಜ್ ಕುಮಾರ್ ಅವರ 'ಅಂತ್ಯ ಕ್ರಿಯೆ' ಯಲ್ಲಿ ಭಾಗವಹಿಸಲು…
ವಿಧ: ಬ್ಲಾಗ್ ಬರಹ
April 14, 2006
೧೯೬೮ನೆಯ ಇಸವಿ. ನಾವು ಆಗ ಚಾಮರಾಜನಗರದಿಂದ (ನಗರ) ಮೂರು ಮೈಲು ದೂರವಿರುವ ಹರದನಹಳ್ಳಿಯಲ್ಲಿ ವಾಸವಾಗಿದ್ದೆವು. ಆಗ ನಾನಿನ್ನೂ ೩ನೆಯ ತರಗತಿ ಓದುತ್ತಿದ್ದೆ. ಆ ದಿನದ ಒಂದು ದೃಶ್ಯ ಮಾತ್ರ ಈಗಲೂ ಕಣ್ಣಿಗೆ ಕಟ್ಟಿದಂತಿದೆ.
ನಾವಿದ್ದ ಹರದನಹಳ್ಳಿಯೊಂದು ಪುಟ್ಟ ಹಳ್ಳಿ. ಸಣ್ಣ ಪುಟ್ಟ ವಸ್ತುಗಳು ಮಾತ್ರ ಸಿಗುತ್ತಿತ್ತು. ತಿಂಗಳಿಗೊಮ್ಮೆ ಅಂಗಡಿ ಸಾಮಾನುಗಳನ್ನು ತರಲು ನಗರಕ್ಕೇ ಬರಬೇಕಿತ್ತು. ನಗರದಲ್ಲಿ ನಮ್ಮ ದೊಡ್ಡಪ್ಪನವರು ವಾಸವಾಗಿದ್ದರು. ಅಂದು ನಾನು ನನ್ನ ತಾಯಿ ಮತ್ತು ತಂಗಿ (ನನಗಿಂತ ೨…
ವಿಧ: Basic page
April 13, 2006
ಡಾ. 'ರಾಜ್' ಅಮರರಾದರು ! ಮುಂಬೈ, ಘಾಟ್ಕೋಪರ್.
ಕನ್ನಡದ 'ಮೇರು ನಟಸಾರ್ವಭೌಮ' 'ಡಾ.ರಾಜ್ ಕುಮಾರ್' ಅವರ ಪಾರ್ಥಿವ ದೇಹವನ್ನು ಇಂದು,ಗುರುವಾರ, ಏಪ್ರಿಲ್,13, 2006, ರ ಸಾಯಂಕಾಲ ವೇಳೆ, 6 ರ ಒಳಗೇ,ನೆರವೇರಿದ 'ಅಂತಿಮ ಸಂಸ್ಕಾರದ ವಿಧಿ ಗಳನ್ನು' ನಾವು ಈ-ಟೀ.ವಿ.ಯಲ್ಲಿ ನೋಡಿ 'ಮೂಕವಿಸ್ಮಿತರಾದೆವು' ! ಅದೊಂದು 'ಹೃದಯ ವಿದ್ರಾವಕ'ವಾದ ದೃಶ್ಯ ! ಸರಕಾರಿ ವಿಧಿ ವಿಧಾನಗಳಿಂದ (ಅವರ ಮನೆಯ ಸಂಪ್ರದಾಯದಂತೆ),ಅವರ ಮೆಚ್ಚಿನ ಕಂಠೀರವ ಸ್ಟುಡಿಯೊ, ಬಳಿಯ ಮೈದಾನದಲ್ಲಿ ಸಾಯಂಕಾಲ 6 ಘಂಟೆಗೇ ಪ್ರಚಂಡ…
ವಿಧ: ಬ್ಲಾಗ್ ಬರಹ
April 12, 2006
ತತ್ವಜ್ಞಾನಿಯೊಬ್ಬ ಬಡತನದಲ್ಲಿದ್ದ. ಒಂದು ದಿನ ಬರೀ ರೊಟ್ಟಿಯನ್ನು ತಿನ್ನುತ್ತಿರುವಾಗ ಅವನ ಗೆಳೆಯ ಅಲ್ಲಿಗೆ ಬಂದು ಅದನ್ನು ನೋಡಿ ' ನೀನು ರಾಜನನ್ನು ಸ್ವಲ್ಪ ಮೆಚ್ಚಿಸುವದನ್ನು ಕಲಿತಿದ್ದರೆ ಬರೀ ರೊಟ್ಟಿಯನ್ನು ತಿಂದು ಬದುಕುವ ಪರಿಸ್ಥಿತಿ ಬರುತ್ತಿದ್ದಿಲ್ಲ ' ಎಂದ .
ಅದಕ್ಕೆ ಪ್ರತಿಯಾಗಿ ತತ್ವಜ್ಞಾನಿ ಹೇಳಿದ - ' ನೀನು ಬರೀ ರೊಟ್ಟಿ ತಿಂದು ಬದುಕುವದನ್ನು ಕಲಿತಿದ್ದಿದ್ದರೆ ರಾಜನನ್ನು ಮೆಚ್ಚಿಸುವ ಪರಿಸ್ಥಿತಿ ಬರುತ್ತಿದ್ದಿಲ್ಲ '
ವಿಧ: Basic page
April 12, 2006
ಡಾ. ರಾಜಕುಮಾರ್. ಒಳ್ಳೆಯ ನಟ, ಹಾಗೂ ಗಾಯಕರೂ ಕೂಡ ! ಮುಂಬೈ,12, ಏಪ್ರಿಲ್, ೨೦೦೬
ಅವರ ಹಲವಾರು ಚಿತ್ರಗಳನ್ನು ನಾನು ನೊಡಿದ್ದೇನೆ. 'ಗಂಧದ ಗುಡಿ' ನನ್ನ ಪ್ರಿಯವಾದ ಚಿತ್ರಗಳಲ್ಲೊಂದು ! ಅವರು ಹೇಳಿದ 'ಯಾರೇ ಕೂಗಾಡಲೀ' ಹಾಡೂ, ಬಹಳ ಇಷ್ಟ. ಅವರ ಹಲವಾರು ಗೀತೆಗಳ 'ಕ್ಯಾಸೆಟ್ ಸುರಳಿಗಳು' ನನ್ನಬಳಿ ಇವೆ.
ಅವರು ಬಹಳ ಹಿಂದೆ, ಮುಂಬೈಗೆ ಬಂದಿದ್ದಾಗ, 'ಕರ್ನಾಟಕ ಸಂಘ,' ಮಾಹೀಮ್, ಅವರು 'ರಾಜ್,'ಅವರಿಗೆ ಅಭಿನಂದನೆ ಸಲ್ಲಿಸಲು ಆಯೋಜಿಸಿದ್ದ ಸಮಾರಂಭದಲ್ಲಿ ಸ್ಟೇಜಿನಮೇಲೆ ಭಾವ ಪರವಶರಾಗಿ…
ವಿಧ: ಚರ್ಚೆಯ ವಿಷಯ
April 12, 2006
ಇದೀಗ ಬಂದ ಸುದ್ದಿ.
ವರನಟ ಡಾ| ರಾಜಕುಮಾರ್ ಹೃದಯಾಘಾತದಿಂದ ಎಮ್.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ೨.೦೦ ಗಂ ನಿದನರಾಗಿದ್ದಾರೆ