ಭಾಷೆ ಕಲಿತಶ್ಟೂ ಒಳ್ಳೆಯದು !

ಭಾಷೆ ಕಲಿತಶ್ಟೂ ಒಳ್ಳೆಯದು !

ಬರಹ

ಭಾಷೆ ಕಲಿತಶ್ಟೂ ಒಳ್ಳೆಯದು !

ಇಂದಿನ ಸ್ಪರ್ಧಾತ್ಮಕ ಜೀವನದಲ್ಲಿ ಹೊಸ ಹೊಸ ಭಾಷೆಗಳ ಆವಶ್ಯಕತೆ ಹೆಚ್ಚು ! ನವ ಯುಗದಲ್ಲಿ ಹಿಂದಿನಂತೆ ಕಟ್ಟುಪಾಡುಗಳಿಲ್ಲದಿರುವುದು ಒಂದು ಧನಾತ್ಮಕವಾದ ಸಂಗತಿ ! ಎಶ್ಟೇಹೇಳಿದರೂ ಒಂದು ಕಾಲದಲ್ಲಿ ಬ್ರಾಹ್ಮಣರಲ್ಲದೆ ಬೇರೆಜಾತಿಯವರು ಸಂಸ್ಕೃತ ಕಲಿಯುವುದು ಸುಲಭಸಾಧ್ಯವಾಗಿರಲಿಲ್ಲ. ಮುಸಲ್ಮಾನನೊಬ್ಬನು ಸಂಸ್ಕೃತ ಪಂಡಿತನಾದರೆ ಅದೊಂದು ಸುದ್ದಿಯಾಗುತ್ತಿತ್ತು. ಇಂದೂ ಹಾಗೆಯೇ ಸುದ್ದಿಯಲ್ಲಿರುವ ಪ್ರಸಂಗ ಇಲ್ಲಿದೆ :

'ಪಂಡಿತ ಗುಲಾಮ್ ದಸ್ತಗಿರ್ ಬಿರಾಜ್ ದರ್' ಅಂಥವರಲ್ಲಿ ಒಬ್ಬರು !
ಇವರು ಮುಂಬೈನಗರದ ವರ್ಲಿನಾಕಾದಲ್ಲಿ ತಮ್ಮ ಮುಸ್ಲಿಮ್ ಬಾಂಧವ ಸಮುದಾಯದ ಜೊತೆಗೆ ವಾಸಿಸುತ್ತಿರುವ ೭೨ ವರ್ಷ ವಯಸ್ಸಿನ 'ಸಂಸ್ಕೃತ ಭಾಷಾ ವಿಶಾರದ' ! ಬೆನಾರೆಸ್ ಸಂಸ್ಕೃತ ಸಮಿತಿಯು ಕೊಟ್ಟಿರುವ 'ಮಹಾಪಂಡಿತ್', 'ಪಂಡಿತೇಂದ್ರ' ಉಪಾಧಿಗಳು ಅವರ ವಿದ್ವತ್ತಿಗೆ ಸಾಕ್ಷಿಯಾಗಿವೆ. ವೇದ, ಪುರಾಣಗಳ ಪ್ರವಚನಮಾಡಲು ವಾರಣಾಸಿ, ಚೆನ್ನೈ, ಅಜ್ಮೀರ್, ವೃಂದಾವನ್ ಗಳಲ್ಲಿಗೆ ಹೋಗುವುದು ವಾಡಿಕೆಯಿದೆ ! ಮಹಾರಾಶ್ಟ್ರ ಸರ್ಕಾರ ಸಂಸ್ಕೃತ ಹಾಗೂ ಗೈಡುಗಳಿಗೆ ನೇಮಿಸಿರುವ ಸಮಿತಿಯಲ್ಲಿ ಅವರು ಕೆಲಸಮಾಡುತ್ತಿದ್ದಾರೆ. ಸಂಸ್ಕೃತ ಉಪಾಧ್ಯಾಯರುಗಳನ್ನು ನೇಮಕಾತಿಮಾಡುವಾಗ ಸರ್ಕಾರ ಇವರ ಸಹಾಯವನ್ನು ಪಡೆಯುತ್ತದೆ.

ಸೋಲಾಪುರದ ಒಬ್ಬ ಕೂಲಿಮಾಡಿಕೊಂಡು ಜೀವಿಸುತ್ತಿದ್ದ ವ್ಯಕ್ತಿಯಪುತ್ರನಾಗಿ ಜನಿಸಿದ ಬಿರಾಜ್ ದರ್ ಗೆ, ಅವರ ತಂದೆ ಮೃತಪಟ್ಟಾಗ ಕೇವಲ ೧೧ ವರ್ಷ ವಯಸ್ಸು. ಪಕ್ಕದ ಮನೆಯೊಂದರಲ್ಲಿ ರಾತ್ರಿಯವೇಳೆ ಸಂಸ್ಕೃತಾಭ್ಯಾಸ ನಡೆಯುತ್ತಿತ್ತು. ಅಲ್ಲಿ ಶ್ಲೋಕಗಳನ್ನು ಹೇಳಿಕೊಡುತ್ತಿದ್ದ ರೀತಿ ಹಾಗೂ ಅದರ 'ಮಾಧುರ್ಯ' ಅವರನ್ನು ಆಕರ್ಷಿಸಿತೆಂದು ಅವರು ನೆನೆಸಿಕೊಳ್ಳುತ್ತಾರೆ ! ಅಲ್ಲಿನ ಬ್ರಾಹ್ಮಣೋತ್ತಮರ ಅನುಗ್ರಹದಿಂದ, ಶಾಲೆಗೆ ಸೇರಿ ವಿದ್ಯಾರ್ಜನೆ ಮಾಡುತ್ತಾರೆ. ಮುಂದೆ ಮುಂಬೈನಲ್ಲಿ ಉಪಾಧ್ಯಾಯ ವೃತ್ತಿಯೂ ದೊರೆಯಿತು. ಅಂಚೆವ್ಯವಸ್ಥೆಯಿಂದ 'ಮಾಸ್ಟರ್ಸೂ' ಆಯಿತು. ಸಂಸ್ಕೃತ ಪ್ರಾದ್ಯಾಪಕರಾಗಿ ಕೆಲಸಮಾಡುತ್ತಿದ್ದ ಅವರು ಮುಂಬೈಯ 'ದಾದರ್'ಶಾಲೆಯಿಂದ ೧೦ ವರ್ಷಗಳ ಹಿಂದೆಯೇ ನಿವೃತ್ತರಾದರು ! ಹುಟ್ಟಿನಿಂದ ಮುಸಲ್ಮಾನರಾಗಿರುವ ಅವರು ಹಿಂದು ಇಸ್ಲಾಮ್ ಧರ್ಮಗಳ ಐಕ್ಯತೆಗೆ ಶ್ರಮಿಸುತ್ತಿದ್ದಾರೆ. ಸಾಯುವಮೊದಲು 'ಹಿಂದೂ ಇಸ್ಲಾಮ್ ಧರ್ಮಗಳ ಅಧ್ಯಯನ ಸಂಸ್ಥಾನ'ವನ್ನು ಪೂರ್ಣಗೊಳಿಸುವ ಕನಸು ಅವರದು ! ಒಂದೇ ಆತ್ಮದಲ್ಲಿ ಈ ಎರಡು ಪ್ರತ್ಯೇಕ ಸಾಂಸ್ಕೃತಿಕ ಹಿನ್ನೆಲೆಗಳು, ಸಮಾವೇಷ ಗೊಳ್ಳುವ ಸಾಧ್ಯತೆ ಇದೆ ಎನ್ನುವ ಸತ್ಯವನ್ನು ಅವರು ಮನಗಂಡಿದ್ದಾರೆ !

('ಟೈಮ್ಸ್ ಆಫ್ ಇಂಡಿಯ' ಮೇ, ೧೪, ೨೦೦೬ ರ ದಿನ ಪತ್ರಿಕೆಯ ಆಧಾರದಿಂದ.)