ಎಲ್ಲ ಪುಟಗಳು

ಲೇಖಕರು: venkatesh
ವಿಧ: ಬ್ಲಾಗ್ ಬರಹ
May 08, 2006
ಮಾನ್ಯರೆ, ಸಿರಿಗನ್ನಡಮ್ ಗೆಲ್ಗೆ ! ನಾನು ವ್ರುತ್ತಿಯಲ್ಲಿ ಟೆಕ್ಸ್ಟೈಲ್ ಇಂಜಿನಿಯರು. ಓದಲು ಬರೆಯಲು ನನಗೆ ಬಹಳ ಆಸಕ್ತಿ. ಬಹುಶಃ ನಮ್ಮ ಮನೆಯಲ್ಲಿದ್ದ ವಿಶಾಲ ಪುಸ್ತಕ ಭಂಡಾರ ಒಂದು ಕಾರಣವಾದರೆ, ಇನ್ನೊಂದು ನಮ್ಮ ತಂದೆ, ಅಣ್ಣತಮ್ಮಂದಿರ 'ಬೌಧ್ಧಿಕ ಹಿನ್ನೆಲೆ' ಎಂದರೆ ತಪ್ಪಾಗಲಾರದು. ಎಲ್ಲಾ ಸಾಂಸ್ಕ್ರುತಿಕ ಸಮಾರಂಭಗಳಲ್ಲೂ ಪ್ರೇಕ್ಷಕನಾಗಿ ಪಾಲ್ಗೊಂಡಿದ್ದೇನೆ. ಮುಂಬೈ ಒಂದು ವಿಶಾಲವಾದ ಮಂಚ. ಬೆಂಗಳೂರಿನಲ್ಲಿ ಕೇಳಿರದಿದ್ದ ಮಹಾ ವ್ಯಕ್ತಿಗಳ ಮಾತುಗಳನ್ನು ಇಲ್ಲಿ- ನನ್ನ 40 ವರ್ಷಗಳ ಜೀವನದಲ್ಲಿ…
ಲೇಖಕರು: venkatesh
ವಿಧ: Basic page
May 08, 2006
ನಮ್ಮ ಪುಟ್ಟ ಪಾಪಚ್ಚಿ- ಸಂಪದೆ ! ಪ್ರತಿ ಕಾಲಘಟ್ಟದಲ್ಲಿ ನಿಂತು ಈ ವಿಸ್ಮಯ ಜಗತ್ತನ್ನು ವೀಕ್ಷಿಸಿದಾಗ ಅದರ ವಿಸ್ತಾರದ ಅರಿವಾಗುತ್ತದೆ. ಕೆಲವೊಂದು ವಿದ್ಯಮಾನಗಳಲ್ಲಿ ಪ್ರಕೃತಿದತ್ತವಾದ ಹಲವು ಮಾರ್ಪಾಟುಗಳು ನಮ್ಮ ಗಮನವನ್ನು ಸೆಳೆಯುತ್ತವೆ. ನಮ್ಮ ಅರಿವಿಲ್ಲದೆಯೇ ಆಗುವ ನಿರಂತರ ಬದಲಾವಣೆಗಳೊಂದೆಡೆಯಾದರೆ, ಇನ್ನು ಕೆಲವು ಮಾರ್ಪಟುಗಳನ್ನು ನಾವೇ ಕಾಲಕಾಲಕ್ಕೆ ಮಾಡುವ ಅನಿವಾರ್ಯತೆಯನ್ನು ಮನಗಾಣುತ್ತೇವೆ. ಎಲ್ಲಾ ಬೆಳೆಯುತ್ತಿರುವ ಜೀವಕೋಟಿಗಳೆಲ್ಲಾ ಮಾಡಲೇಬೇಕಾದ ಪ್ರಕ್ರಿಯೆ ಇದು ! ಇವನ್ನೇ ನಾವು…
ಲೇಖಕರು: hpn
ವಿಧ: ಚರ್ಚೆಯ ವಿಷಯ
May 07, 2006
...ಈಗ [:http://churumuri.wordpress.com/|ಅಂತರಜಾಲದಲ್ಲೇ‌ ಅದು ಲಭ್ಯವಿದೆ] ;) ಪ್ರತಿನಿತ್ಯ ಈ ಬ್ಲಾಗ್ನಲ್ಲಿ ಒಂದಷ್ಟು ಬಹಳ ಚೆನ್ನಾಗಿರುವ ಲೇಖನಗಳು ಮೂಡಿಬರುತ್ತಿವೆ. ಈ‌ ಬ್ಲಾಗು ಓದುವಾಗ ನಾನು ರೆಗ್ಯುಲರ್ ಆಗಿ ಓದುವ [:http://www.sepiamutiny.com/sepia/|sepia mutiny] ಜ್ಞಾಪಕಕ್ಕೆ ಬರುತ್ತದೆ. ಚುರುಮುರಿ ಬ್ಲಾಗ್ ಸಮೂಹವನ್ನು ಮೈಸೂರು ಮ್ಯುಟಿನಿ ಎನ್ನೋಣವೆ ಅಂತ ಅನ್ನಿಸಿದ್ದೂ ಉಂಟು ;)
ಲೇಖಕರು: hpn
ವಿಧ: ಚರ್ಚೆಯ ವಿಷಯ
May 07, 2006
[:http://harinigallery.blogspot.com/] ‌ನೋಡಿ :) ಈಗ 'ಸುಧಾ 'ತರಂಗ'ಗಳಲ್ಲಿ ಇವರು ಬರೆಯುತ್ತಾರೋ ಇಲ್ಲವೋ ತಿಳಿಯದು, ಆದರೆ ೫-೬ ವರ್ಷಗಳ ಹಿಂದೆ ಈ ಪತ್ರಿಕೆಗಳಲ್ಲಿ ಬರುತ್ತಿದ್ದ ಇವರ ವ್ಯಂಗ್ಯಚಿತ್ರಗಳನ್ನು ತುಂಬಾ ಫಾಲೋ ಮಾಡ್ತಾ ಇದ್ದೆ. ಮುಂದೆ ಜೇಮ್ಸ್ ವಾಚ್, ನಾಗನಾಥ್ ಇವರೆಲ್ಲರೂ ಜನಾರ್ಧನಸ್ವಾಮಿ, ಹರಿಣಿಯವರಂತೆ ತಮ್ಮ ವ್ಯಂಗ್ಯಚಿತ್ರಗಳನ್ನೂ ಆನ್ಲೈನ್ ಹಾಕಬಹುದು... ಕಾದು ನೋಡೋಣ :)
ಲೇಖಕರು: ashwin
ವಿಧ: ಚರ್ಚೆಯ ವಿಷಯ
May 07, 2006
ಕುವೆಂಪು ಅವರ ಕವಿತೆಗಳು ಇರುವ ತಾಣ ಯಾವುದಾದರು ಅಂತರ್ಜಾಲದಲ್ಲಿ ಇದೆಯೆ? ಗೂಗಲ್ನಲ್ಲಿ ಸಿಕ್ಕ ತಾಣಗಳೆಲ್ಲ ಬರೆ ಬೆರಳೆಣಿಕೆಯಷ್ಟು ಕವಿತೆಗಳನ್ನು ಹೊಂದಿದ್ದವು.
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
May 06, 2006
ನಾನು ಕಳೆದ ೩೭ ವರ್ಷಗಳಲ್ಲಿ ಹೆಚ್ಚಿನ ಸಮಯವನ್ನು ಓದುತ್ತಲೇ ಕಳೆದಿದ್ದೇನೆ. ( ಬರೆಯಲು ಜಾಣತನ ಬೇಕೇ ಹೊರತು ಓದಲು ಬೇಕಿಲ್ಲವಷ್ಟೆ? ) ಈವರೆಗೆ ಓದಿ ತಲೆಯಲ್ಲಿ ತುಂಬಿಕೊಂಡ ವಿಚಾರಗಳನ್ನು 'ಸಂಪದ'ದಲ್ಲಿ ಈವರೆಗೆ ಬರೆದು ತಲೆಯನ್ನು ಕೊಡವಿಕೊಂಡದ್ದಾಯಿತು. ಈ ಸಮಯದಲ್ಲಿ ಶ್ರೀ ಟಿ. ವಿ. ಶ್ರೀನಿವಾಸ ಅವರು ( ' ಸಂಪದ'ದ ಮೂಲಕವೇ ಅವರ ಪರಿಚಯವಾದದ್ದು ) ಕನ್ನಡಸಾಹಿತ್ಯ.ಕಾಂ ನ ಕುರಿತು ತಿಳಿಸಿದರು . ಅವರಿಗೆ ಬರಹಗಳನ್ನು ತಿದ್ದುವ ವಾಲಂಟೀರ್- ಸ್ವಯಂಸೇವಕರ ಅಗತ್ಯ ಇದೆ. ಎಂದು ತಿಳಿಸಿದರು…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
May 06, 2006
ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ , ಒಳ್ಳೆಯ ವ್ಯಂಗಚಿತ್ರಗಳ ಸಮೃದ್ಧಿಯಿತ್ತು. ಆಗ ಸುಧಾ , ಮಯೂರ , ತುಷಾರಗಳಲ್ಲಿ ಕೆ. ಆರ್. ಸ್ವಾಮಿ ,ನಾಡಿಗ್ , ಶ್ರೀಧರ್ , ರಾವ್ ಬೈಲ್ ಮುಂತಾದವರ ಶ್ರೇಷ್ಠ ವ್ಯಂಗ್ಯಚಿತ್ರಗಳು ಕಾಣಸಿಗುತ್ತಿದ್ದವು . ಪ್ರಜಾವಾಣಿಯಲ್ಲಿ ಆರ್‍.ಕೆ. ಮೂರ್ತಿಯವರ ರಾಜಕೀಯ ವ್ಯಂಗ್ಯಚಿತ್ರಗಳಿರುತ್ತಿದ್ದವು . ಈಗ ಅವರೆಲ್ಲ ಎಲ್ಲಿ ಹೋದರೋ ? ಹೊಸಬರು ಏಕೆ ಬರಲಿಲ್ಲವೋ ? ಈಗ ವ್ಯಂಗ್ಯಚಿತ್ರಗಳಲ್ಲಿ ಸಾಧಾರಣ ಎಂಬ ಮಟ್ಟದ್ದೂ ಕಾಣುವದಿಲ್ಲ. ನಮ್ಮ ಮನೆಯಲ್ಲಿ ವರ್ಷಗಟ್ಟಲೆಯ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
May 06, 2006
ಮೇ ೨೦೦೬ ತುಷಾರ ಹಾಸ್ಯ ವಿಶೇಷಾ?ಕವಾಗಿ ಬಂದಿದೆ. ಅದರೆ ಅದರಲ್ಲಿ ಹಾಸ್ಯವನ್ನು ಹುಡುಕಬೇಕು! ನನಗೆ ಎರಡೇ ಎರಡು ಪುಟ್ಟ ನಗೆಹನಿಗಳು ಸಿಕ್ಕವು!! ಅದರಲ್ಲಿ ತಮಿಳು ಸಾಹಿತಿ ಅಖಿಲನ್ ಅವರ ಒಂದು ಕಥೆ ಬಂದಿದೆ. ಜತೆಗಿರುವ ತಮಿಳು ಸಾಹಿತ್ಯದ ಕುರಿತಾದ ಚಿಕ್ಕ ಪರಿಚಯಾತ್ಮಕ ಲೇಖನದಲ್ಲಿ ಹೀಗಿದೆ- ' ತಮಿಳು ಸಾಹಿತ್ಯದಿಂದ ಪ್ರಭಾವಿತರಾದ ಬಿ. ಎಂ. ಶ್ರೀ. ಅವರು ತಮ್ಮ ವಿದ್ಯಾರ್ಥಿಗಳಿಗೆ ಪ್ರಾಚೀನ ತಮಿಳು ಕಾವ್ಯಗಳನ್ನು ಓದಿ ವಿವರಿಸುತ್ತಿದ್ದರಂತೆ. ಅವರ 'ಸಿರಿಗನ್ನಡಂ ಬಾಳ್ಗೆ, ಗೆಲ್ಗೆ' ಎಂಬ…
ಲೇಖಕರು: chandrakanthkg
ವಿಧ: ಚರ್ಚೆಯ ವಿಷಯ
May 05, 2006
ಸಂಪದ ನಿರ್ವಾಹಣ ಸಮೂಹಕ್ಕೆ ವಂದನೆಗಳು. ಸಂಪದದ ಹೊಸ ವಿನ್ಯಾಸ ಚೆನ್ನಾಗಿದೆ, ಶುಭಾಷಯಗಳು!!. ಆದರೆ ಈ ವಿನ್ಯಾಸ ಸಧ್ಯಕ್ಕೆ ಅತ್ಯಂತ ಜನಪ್ರಿಯ ಜಾಲದರ್ಶಕವೆಂದೆನಿಸಿಕೊಂಡಿರುವ ಮೈಕ್ರೋಸಾಫ್ಟ್ ಇಂಟರ್‌ನೆಟ್ ಎಕ್ಸ್‌ಪ್ಲೋರರ್‌ನಲ್ಲಿ ಸರಿಯಾಗಿ ಮೂಡಿ ಬರುತ್ತಿಲ್ಲ. ಸಂಪದದ ಹೊಸ ಆವೃತ್ತಿ ಇನ್ನೂ ನಿರ್ಮಾಣ ಹಂತದಲ್ಲಿರುವುದು ನನಗೆ ತಿಳಿದಿದೆ ಆದರೂ ಈ ವಿಷಯ ನಿಮ್ಮ ಗಮನಕ್ಕೆ ತರುವುದು ಸೂಕ್ತವೆಂದೆನಿಸಿತು. ಸಧ್ಯದಲ್ಲಿಯೆ ಈ ಬಗ್ಗೆ ಕ್ರಮ ಕೈಗೊಳ್ಳುವಿರೆಂದು ಆಶಿಸುತ್ತೇನೆ. ಧನ್ಯವಾದಗಳು ಚಂದ್ರಕಾಂತ್
ಲೇಖಕರು: hpn
ವಿಧ: ಬ್ಲಾಗ್ ಬರಹ
May 05, 2006
ಈಗ ಬೆಂಗಳೂರು ಬೇಸಿಗೆ = ಶಿವಮೊಗ್ಗ, ಮೈಸೂರು ಬೇಸಿಗೆ! ಬೆಂಗಳೂರಿನಲ್ಲಿ ಬೇಸಿಗೆಯೇ ಇರುತ್ತಿರಲಿಲ್ಲವಂತೆ! ಶಿವಮೊಗ್ಗಕ್ಕೆ ಬರುತ್ತಿದ್ದ ನಮ್ಮ cousinಉ ಯಾವಾಗಲೂ ಬೆಂಗಳೂರಿನ ಗುಣಗಾನ ಮಾಡುತ್ತಿದ್ದ. ಆದರೆ ನಾವುಗಳು ಬೆಂಗಳೂರು ಸೇರುವಷ್ಟರಲ್ಲಿ ಬೇಸಿಗೆಯಲ್ಲಿ ಬೆಂದು ಹೋಗುವಷ್ಟು ಬಿಸಿಲು ಬೆಂಗಳೂರಿನಲ್ಲಿಯೂ ಇತ್ತು. ಪಕ್ಕದ ಆಂಧ್ರದ ಕಡೆಗೆ ಇರುವ ಕೆಲವು ಬಡಾವಣೆಗಳು, ಏರ್ಪೋರ್ಟ್ ರೋಡು ಕಡೆ ಈಗಲೂ ಬಿಸಿಲು ಜೋರಾದರೆ ಕಾಲಿಡಲೂ ಕಷ್ಟವಾಗುವ ಹಾಗಿವೆ. ಜಯನಗರ, ಜೆ ಪಿ ನಗರ ಕೊನೆಗೆ ಮಲ್ಲೇಶ್ವರದ…