ವಿಧ: ಬ್ಲಾಗ್ ಬರಹ
May 31, 2006
ಟೀವಿಯಲ್ಲಿ ಮಹಾಭಾರತ ಧಾರಾವಾಹಿಯೊಂದಿಗೆ 'ಮಹಾ' ಶಬ್ದ ಹೆಚ್ಚು ಚಲಾವಣೆಗೆ ಬಂದಿತು . ಮಹಾಚುನಾವಣೆ ....ಇತ್ಯಾದಿ. ಹೋದ ವರುಷದ ಮುಂಬೈ ಮತ್ತು ಬೆಂಗಳೂರಿನ ಮಳೆಯ ಹಾವಳಿ ನಂತರ 'ಮಹಾಮಳೆ' ಶಬ್ದವೂ ಸೃಷ್ಟಿಯಾಯಿತು.
ಮುಂಬೈಗೆ ನಿನ್ನೆ ಮಾನ್ಸೂನು ಆಗಮಿಸಿತು . ರಾತ್ರಿ ಬಹಳ ಮಳೆ ಆಯಿತು, ಮಧ್ಯಾಹ್ನ ಕೂಡ ಆಯಿತು. ಮೊಬೈಲುಗಳಲ್ಲಿ ಮುಂದಿನ ನಲವತ್ತೆಂಟು ಗಂಟೆಗಳಲ್ಲಿ ಬಹಳ ಮಳೆಯಾಗಲಿದೆ ಎಂಬ ಎಚ್ಚರಿಕೆ ಸಂದೇಶಗಳು ಹರಿದಾಡಿದವು. ನಾನು ಕಚೇರಿಯಿಂದ ಹೆಂಡತಿಗೆ ಫೋನ್ ಮಾಡಿ ಕೇಳಿದೆ ಏನು…
ವಿಧ: ಬ್ಲಾಗ್ ಬರಹ
May 31, 2006
ಹೊತ್ತಿ ಉರಿಯುತ್ತಿರುವ ಮೀಸಲಾತಿಯು ಭಾರತದ ಪ್ರಜಾತಾಂತ್ರಿಕತೆಯ ಕಣ್ಣರೆಪ್ಪೆ ಮುಚ್ಚದಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಕೋಮುಗಲಭೆ, ಜಾತಿಕಲಹ, ಭಾಷೆಕಲಹ ಇವಿಷ್ಟೇ ಕೆಲ ಮಹದ್ವಿಷಯಗಳು ನಮ್ಮ ದೇಶವನ್ನು ಜಾಗೃತಗೊಳಿಸಲು ಸಮರ್ಥವಾಗಿರುವುವು. ಶಿಕ್ಷಣದ ಬಗ್ಗೆ ಕಾಳಜಿ, ಭ್ರಷ್ಟಾಚಾರದ ವಿರುದ್ಧ ಹೋರಾಟ, ಆರ್ಥಿಕ ವ್ಯವಸ್ಥೆಯ ಬಗ್ಗೆ ಅಭಿಪ್ರಾಯ ಇತ್ಯಾದಿ ವಿಷಯಗಳಿಗೆ ಮನಸು, ತಲೆ ಕೆಡಿಸಿಕೊಳ್ಳುವಷ್ಟು ನಮಗೆ ವ್ಯವಧಾನವಿಲ್ಲ. ಜಾತಿ, ಭಾಷೆ, ಧರ್ಮಗಳ ಸತ್ವಗಳನೇ ಉಂಡು ಬೆಳೆದಿರುವ ನಮಗೆ ಆ ವಿಷಯಗಳಲ್ಲಿ…
ವಿಧ: ಚರ್ಚೆಯ ವಿಷಯ
May 31, 2006
ಕನ್ನಡ ಅಂತರ್ಜಾಲ ತಾಣದಲ್ಲಿ ಹೊಸದೊಂದು ಮಾರ್ಜಾಲ ಸನ್ಯಾಸಿಯ ಉದಯವಾಗಿದೆ. ಪ್ರಚಲಿತ ವಿದ್ಯಮಾನದ ಕ್ಷಿಪ್ರ "ಆಸ್ವಾದನೆ"ಗೆ http://bogaleragale.blogspot.com ಸಂದರ್ಶಿಸಿ.
ವಿಧ: Basic page
May 31, 2006
ಓಂಕಾರ,
ವೇದದ ಮಾತಿದು ಗಾದೆಯ ಹಾಗಿದೆ, ವಿಶ್ವದ ಉಗಮದ ವರ್ಣನೆ ಹೀಗಿದೆ, ಸುಲಭದಿ ಅರಿಯಲು ಶ್ರಮಿಸೋಣ.ಹಿಂದೆಯ ಹಿಂದಿಗು, ಮೊಟ್ಟೆಗು ಮೊದಲು, ಅಣುವಿನ ಕಣದ ಹುಟ್ಟಿಗು ಮುಂಚೆ, ಕಿರಣದ ತಾಯಿ ಕತ್ತಲ ಬಾಯಿ[ ಬ್ಲಾಕ್ ಹೋಲ್], ಜನಿಸಿದ ಜಾಗಕೆ ನಿರ್ಗುಣ ನಿರಾಕಾರನೆನ್ನೋಣ.
ಈ ಶೂನ್ಯದ ಗರ್ಭದಿಹುಟ್ಟಿದ ಶಬ್ದವುಓಂಕಾರದ ನಾಧವ ಹರಡಿತ್ತುಪಂಚಭೂತಗಳಹಿರಿಯಣ್ಣನ ಜನುಮದಸೊನ್ನೆಗೆ ಹುಟ್ಟಿದ ಒಂದರಕಥೆಯು ಹೀಗಿತ್ತು.
ಒಂದರ ಕನಸು ಎರಡಾಗುವುದುಪ್ರಕೃತಿ ಪುರುಷರ ನಿರ್ಮಾಣಸದ್ಗುಣ ಸಾಕಾರದ್ವಿಗುಣನಾದ ಬಗೆ…
ವಿಧ: ಬ್ಲಾಗ್ ಬರಹ
May 31, 2006
(ಬೊಗಳೂರು ಆರೋಗ್ಯ ಬ್ಯುರೋದಿಂದ)
(http://bogaleragale.blogspot.com)
ಬೊಗಳೂರು, ಮೇ 31- ವಿಶ್ವಾದ್ಯಂತ 40 ಮಿಲಿಯ ಮಂದಿಯನ್ನು ಪ್ರೀತಿಯಿಂದ ಸೋಕಿ, 25 ಮಿಲಿಯ ಮಂದಿಗೆ ಪರಲೋಕ ಯಾನ ಸೌಲಭ್ಯ ಕಲ್ಪಿಸಿರುವ ಏಡ್ಸ್ ರೋಗ ಕೂಡ ಡಾರ್ವಿನ್ನನ ವಿಕಾಸವಾದದಿಂದ ಪ್ರೇರಣೆಗೊಂಡು ಮಾನವನಿಗೆ ತಗುಲಿದೆ ಎಂಬ ಅಂಶ ಇಲ್ಲಿ ಬಯಲಾಗಿದೆ.
ಈ ವರ್ಷ ಎಚ್ಐವಿ ವೈರಸ್ ಪತ್ತೆಯಾದ ಬೆಳ್ಳಿ ಹಬ್ಬ (25ನೇ ವರ್ಷ) ಆಚರಿಸಲಾಗುತ್ತಿದೆ. ಇಂಥ ಶುಭ ಸಂದರ್ಭದಲ್ಲಿ ಚಿಂಪಾಂಜಿಯಲ್ಲೂ ಏಡ್ಸ್ ವೈರಸ್‌ಗಳು ಪತ್ತೆಯಾಗಿರುವುದು…
ವಿಧ: ಚರ್ಚೆಯ ವಿಷಯ
May 31, 2006
ಈ ತಾಣವನ್ನು ನೋಡಿ,
http://www.sahiti.org/index.jsp?l=kn_IN
ವಿಧ: Basic page
May 31, 2006
ಫುಟ್‍ಪಾತ್ ಇಲ್ಲದ ರಸ್ತೆಗಳು
ಸಾಲು ಮರಗಳಿಲ್ಲದ ಹೆದ್ದಾರಿಗಳು
ಒಡೆಯ(ತಿ) ಇರದ ಮನೆಗಳು
ಚಿಂತನೆಗಳಿಲ್ಲದ ಮನಗಳು
ಇದ್ದರೆಷ್ಟು ಬಿಟ್ಟರೆಷ್ಟು
ಕೊನರದ ಬೋಳು ಮರಗಳು
ಚಿಗುರದ ಬಕ್ಕ ತಲೆಗಳು
ಪುಟಿಯದ ಚೆಂಡುಗಳು
ಮನತಣಿಸದ ನಗೆ ಬುಗ್ಗೆಗಳು
ಇದ್ದರೆಷ್ಟು ಬಿಟ್ಟರೆಷ್ಟು
ನೀರಿರದ ಬಾವಿಗಳು
ಪ್ರಜೆಗಳಿಲ್ಲದ ಊರುಗಳು
ಉಣಲು ಬಾರದ ತಿನಿಸುಗಳು
ನಡೆ ಇಲ್ಲದ ನುಡಿಗಳು (ನಡೆ = ನಡತೆ)
ಇದ್ದರೆಷ್ಟು ಬಿಟ್ಟರೆಷ್ಟು
ಜೋಡಿ ಇಲ್ಲದ ಎತ್ತುಗಳು
ರಿಕಾಪಿಲ್ಲದ ಕುದುರೆಗಳು
ಚಲನೆಯಿರದ ಕೈ ಕಾಲುಗಳು
ಎಣ್ಣೆ ಬತ್ತಿ ಇರದ…
ವಿಧ: Basic page
May 31, 2006
ಚೈನ್ ಮೈಲ್‍ಗಳು ಬರುವುದು ಸರ್ವೇ ಸಾಮಾನ್ಯ. ಅದರಲ್ಲಿಯೂ ಅಡ್ವರ್ಟೈಸ್‍ಮೆಂಟ್‍ಗಳ ಹಾವಳಿಯಂತೂ ಬಹಳ. ಮೊದಲು ಒಬ್ಬರಿಗೆ ಅಂಚೆ ಕಳುಹಿಸಿ, ಇದನ್ನು ಇನ್ನಿತರ ಹತ್ತು ಜನಗಳಿಗೆ ಕಳುಹಿಸಿದರೆ ನಿಮಗೆ ಇಂತಹ ವಸ್ತು ಪುಕ್ಕಟೆ ಎಂದು ತಿಳಿಸುತ್ತಾರೆ. ಕೆಲವರು ಇವುಗಳನ್ನು ಸ್ಪ್ಯಾಮ್ ಮೈಲ್‍ಗಳು ಎಂದೂ ಪರಿಗಣಿಸುವರು. ಇವರ ಚಟುವಟಿಕೆಗಳು ಹೇಗಿರುತ್ತದೆ ಎಂಬುದು ಬಹಳ ಕೌತುಕವಾದ ವಿಷಯ.
ಮೊದಲಿಗೆ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಯಾರೂ ಪುಕ್ಕಟೆ ಊಟ ಕೊಡುವುದಿಲ್ಲ. ಎಲ್ಲರೂ ಎಲ್ಲ…
ವಿಧ: Basic page
May 30, 2006
ನಿರಾಕಾರ.
ನಿರಾಕಾರನು ಸಾಕಾರನಾದದ್ದುಚಮತ್ಕಾರ,ಸಾಕಾರನಿಗೆ ಕಂಡ ನಿರಾಕಾರವೇಸಾಕ್ಷಾತ್ಕಾರ,ವಿಕಾರನಿಗೆ ಸಾಕಾರನು ತೋರುವ ನಿರಾಕಾರವೇಪರೋಪಕಾರ,ವಿಕಾರನನ್ನು ನಿರ್ವಿಕಾರಗೊಳಿಸಿ ಸಾಕಾರನನ್ನಾಗಿಸುವ ಕ್ರಿಯೆಯೇಸಂಸ್ಕಾರ.ನಿರಾಕಾರನಅಸಮಾನತೆಯೇ 'ಅ' ಕಾರ,ಉತ್ತುಂಗವೇ 'ಉ' ಕಾರ,ಮಮಕಾರವೇ 'ಮ' ಕಾರ.ಈ ಮೂರರಗುಣಾಕಾರವೇ'ಓಂ'ಕಾರ.ಪ್ರಣವನಾದಓಂಕಾರದಭಾಗಾಕಾರವೇಚತುರ್ವೇದದ ಜಗದಾಕಾರ.{ಅಹೋರಾತ್ರ}
ವಿಧ: Basic page
May 30, 2006
“ಶ್ರೀಮತ್ವೆಕಟನಾಥಾರ್ಯ ಕವಿತಾಲಯಃ ಕೇಸರಿ” ಎಂದು ಧ್ಯಾನ ಶ್ಲೋಕವನ್ನು ಹೇಳಿ , ಉಪಾಕರ್ಮದ ಮಾರನೇ ದಿನ ಗಾಯತ್ರಿ ಜಪವನ್ನು ಮಾಡಲು ಕುಳಿತಾಗ, ಅಷ್ಟೋತ್ತರ ಸಹಸ್ರ ಬಾರಿ ಮಂತ್ರವನ್ನು ಜಪಿಸಬೇಕಿದ್ದರೂ, ಸಮಯದ ಅಭಾವದಿಂದ, ಜೊತೆಗೆ ಸೋಮಾರಿತನದಿಂದ ಅಷ್ಟೋತ್ತರ ಶತಕ್ಕೆ ಇಳಿಸಿದೆ.ಸಂಕಲ್ಪದಲ್ಲಿ ಆ ದಿನ ನಾನಿದ್ದ ಸ್ಥಳ ಹಾಗು ಸಮಯದ ಸಂಪೂರ್ಣ ಪರಿಚಯಕೊಟ್ಟು (ಅಂದ್ರೆ ಶ್ವೇತವರಾಹಕಲ್ಪದ, ಕಲಿಯುಗದ,ಪಾರ್ಥಿವ ಸಂವತ್ಸರದ, ದಕ್ಷಿಣಾಯನದ, ವರ್ಷಋತುವಿನ, ಸಿಂಹಮಾಸದ, ಪೌರ್ಣಮಿಯಂದು, ಭರತಖಂಡದ…