ಓಂಕಾರ

ಓಂಕಾರ

ಬರಹ

ಓಂಕಾರ,

ವೇದದ ಮಾತಿದು
ಗಾದೆಯ ಹಾಗಿದೆ,
ವಿಶ್ವದ ಉಗಮದ
ವರ್ಣನೆ ಹೀಗಿದೆ,
ಸುಲಭದಿ ಅರಿಯಲು
ಶ್ರಮಿಸೋಣ.
ಹಿಂದೆಯ ಹಿಂದಿಗು,
ಮೊಟ್ಟೆಗು ಮೊದಲು,
ಅಣುವಿನ ಕಣದ
ಹುಟ್ಟಿಗು ಮುಂಚೆ,
ಕಿರಣದ ತಾಯಿ
ಕತ್ತಲ ಬಾಯಿ[ ಬ್ಲಾಕ್ ಹೋಲ್],
ಜನಿಸಿದ ಜಾಗಕೆ
ನಿರ್ಗುಣ
ನಿರಾಕಾರನೆನ್ನೋಣ.

ಈ ಶೂನ್ಯದ ಗರ್ಭದಿ
ಹುಟ್ಟಿದ ಶಬ್ದವು
ಓಂಕಾರದ ನಾಧವ
ಹರಡಿತ್ತು
ಪಂಚಭೂತಗಳ
ಹಿರಿಯಣ್ಣನ ಜನುಮದ
ಸೊನ್ನೆಗೆ ಹುಟ್ಟಿದ ಒಂದರ
ಕಥೆಯು ಹೀಗಿತ್ತು.

ಒಂದರ ಕನಸು ಎರಡಾಗುವುದು
ಪ್ರಕೃತಿ ಪುರುಷರ ನಿರ್ಮಾಣ
ಸದ್ಗುಣ ಸಾಕಾರ
ದ್ವಿಗುಣನಾದ ಬಗೆ
ಹೇಳಿತ್ತು

ದ್ವಿಗುಣಗಳೊಟ್ಟೆಯಳುಟ್ಟಿದ
ಸತ್ವರಜೋತಮಸ್ಸುಗಳೆಂಬ
ಜಗದಲಿ ಮೂರರ ಆರಂಭ.

ಮೂರರ ಹಿರಿಯ
ಹರಿಯೊಕ್ಕಳದಿಂದ
ಮೂಡಿದ ಮಗುವಿಗೆ
ನಾಲ್ಕು ಮುಖ.

ಐದರ ಒಡೆಯ
ನಾಲ್ಕರ ತನಯ
ಗುಣದಲಿ ವಿನಯ
ಕೈಲಾಸದ ನಿಲಯ

ಆರುಮುಖಗಳ
ವೀರನು ಬಂದ
ಆರು ವೈರಿಗಳ
ಮುರಿಯಲು ನಿಂದ

ಋಷಿಗಳು ಏಳು
ಸ್ವರಗಳು ಏಳು
ಬೆಳಕನು ಮಾಡಿದ
ಬಣ್ಣಗಳೇಳು.

ಬೆಳೆಯುತ ಹೋಯಿತು
ಸಂಖ್ಯೆಯ ಸಾಲು
ಅಗಣಿತ ಗಣಿತದ
ನಿತ್ಯ ನಿರಂತರ
ವೇದದ ನೂಲು.

ಅಹೋರಾತ್ರ.
೧೫:೨೫
೩೧/೦೫೨೦೦೬
ಮುಂಬೈ.