ಎಲ್ಲ ಪುಟಗಳು

ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
May 30, 2006
ಮಾನ್ಸೂನು ಕೇರಳಕ್ಕೆ ಆಗಮಿಸಿದೆ . ಕರ್ನಾಟಕದಲ್ಲಿ ಮಳೆಯಾಗುತ್ತಿದೆ. ಇಲ್ಲಿ ಮುಂಬೈಯಲ್ಲಿ ಮಾನ್ಸೂನಿನ ಮುನ್ಸೂಚನೆಯಾಗಿ ಇವತ್ತು ಬೆಳಗ್ಗೆಯೇ ಮೋಡ ಮುಸುಕಿದ ವಾತಾವರಣವಿದೆ. ಯಥಾ ಪ್ರಕಾರ ಇರುವ ಧಗೆಯೂ ಹೆಚ್ಚಾಗಿದೆ. ಟೀವಿಯಲ್ಲಿ ಸಂಗೀತದ ಚ್ಯಾನೆಲ್ಲುಗಳೆಲ್ಲವೂ ಮೋಡ, ಮಳೆ, ಗಾಳಿಯ ಹಾಡುಗಳನ್ನು ಹೊರತೆಗೆದಿವೆ. ನಾನೂ ಕೂಡ ಕಾಳಿದಾಸನ ಮೇಘದೂತವನ್ನು ಹೊರತೆಗೆದೆ. ನೂರಿಪ್ಪತ್ತು ಪದ್ಯಗಳು ಇಲ್ಲಿವೆ . ಕಛೇರಿಗೆ ಬರುವ ದಾರಿಯಲ್ಲಿ ಓದತೊಡಗಿದೆ. ಸುಮಾರು ೧೦ ಪದ್ಯ ; ಮೂಲ ; ಭಾವಾನುವಾದ; ವಿವರಣೆ…
ಲೇಖಕರು: prashanth kota
ವಿಧ: ಚರ್ಚೆಯ ವಿಷಯ
May 30, 2006
ಮುಂದಿನ ವರ್ಷದೊಳಗೆ ಹತ್ತು ಸಾವಿರ ಸದಸ್ಯರ ಗುರಿ ಮುಟ್ಟೋಣ. ಇಂದೇ ನಾವೆಲ್ಲರೂ ಒಬ್ಬೊಬ್ಬರು ಹತ್ತು ಜನರಿಗೆ ಸಂಪದದ ವಿಚಾರ ತಿಳಿಸೋಣ. ಹಾಗೆಯೆ, ಲೆಖನಗಳ ಸಂಖ್ಯೆಕೂಡ ಬೆಳೆಯುವಂತೆ ಮಾಡೋಣ. ಈ ಕೆಲವು ದಿನಗಳಿಂದ ನಮಗೆಲ್ಲಾ ಒಳ್ಳೆ ಕವಿತೆ, ಕಥೆ, ಪ್ರಬಂಧಗಳನ್ನು ಓದಲು ಕೊಡುತ್ತಿರುವ ಬೆನಕ, ವೆಂಕಟೇಶ, ಸುನೀಲ, ಅಹೋರಾತ್ರ, ಮಹೇಶ ಮುಂತಾದ ಎಲ್ಲರಿಗೂ ಧನ್ಯವಾದಗಳು. ನಮಗೆ ಸಂಪದ ವನ್ನು ತಂದು ಕೊಟ್ಟ ನಾಡಿಗರಿಗೆ ವಿಶೇಷ ಕೃತಜ್ಞತೆಗಳು. ಪ್ರಶಾಂತ.
ಲೇಖಕರು: ramesh1069
ವಿಧ: ಬ್ಲಾಗ್ ಬರಹ
May 30, 2006
ಸ್ನೇಹಿತರೆ, ಕನ್ನಡ ಸಾಹಿತ್ಯದ ಬಗ್ಗೆ ನಮ್ಮ ಜನರಲ್ಲಿ ಅರಿವು ಮೂಡಿಸಬೆಕಾದ ಕಾಲ ಇದು. ಹಾಗೆ ಮಾಡದೇ ಇದ್ದ ಪಕ್ಷದಲ್ಲಿ ನಮ್ಮ ಮಕ್ಕಳ ಕಾಲಕ್ಕೆ ನಮ್ಮ ಅಮೂಲ್ಯ ಸಾಹಿತ್ಯ ಮತ್ತು ಸಾಹಿತಿಗಳ ಜಾಗ, ವಸ್ತು ಸಂಗ್ರಹಾಲಯವಾಗುವುದೆಂದರೆ ಅತಿಶಯವಾಗುವುದಿಲ್ಲ. ಈಗಿನ ಜನಾಂಗದವರು ನಮ್ಮ ಸಾಹಿತ್ಯವನ್ನು ಓದುವಂತೆ ಪ್ರೇರೇಪಿಸಬೇಕು. ಸಂಪದ ಮತ್ತು ಇತ್ತೀಚೆಗೆ ನಡೆದಂತಹ ವಿಕಿಪೀಡಿಯ ಸಮಾರಂಭಗಳು ಈ ಪ್ರಯತ್ನಕ್ಕೆ ವೇದಿಕೆಯಾಗಬಹುದು.  ದಯವಿಟ್ಟು ತಮ್ಮ ಅಮೂಲ್ಯವಾದ ಸಲಹೆಗಳನ್ನು ಈ ಬ್ಲಾಗ್ನಲ್ಲಿ ಮಂಡಿಸಬೇಕಾಗಿ…
ಲೇಖಕರು: Gopinath Rao
ವಿಧ: Basic page
May 29, 2006
ಒಂದು ಸಣ್ಣ ಲೆಕ್ಕ ನಾವು ಎಕೌಂಟೆಂಟುಗಳು ನೋಡಿ.. ಬೇಕಾದ, ಬೇಡವಾದ ಲೆಕ್ಕಗಳೆಲ್ಲ ತಲೆಯೊಳಗೆ ಹೋಗುತ್ತವೆ. ಕೆಲವು ಅಲ್ಲೇ ಉಳಿದರೆ ಕೆಲವು ಹೊರಗೆ ಹಾಕಲ್ಪಡುತ್ತವೆ! ಇಂತಹ ಒಂದು ಸಮಸ್ಯೆ ತಲೆಯಲ್ಲಿ ಉಳಿದುಕೊಂಡಿದೆ. ಹೊರಗೆ ಹಾಕಲು ಶ್ರಮಿಸಿದರೂ ಜಗ್ಗದೆ ಕುಳಿತುಕೊಂಡಿದೆ. ಬಲ್ಲವರು ಹೊರಗೆ ಸಾಗಿಸಲು ಸಹಾಯಮಾಡಬೇಕು. ಸಮಸ್ಯೆ ಇಷ್ಟೇ.. ನೂರಾರು ಅಂದರೆ ಸಾವಿರಾರು ಎನ್ನುವುದಕ್ಕಿಂತ ಎಷ್ಟು ಕಡಿಮೆ? ಅಥವಾ "ಅಲ್ಲಿ ಸಾಹಿತ್ಯದ ಸಭೆಯಲ್ಲಿ ನೂರಾರು ಜನ ಸೇರಿದ್ದರು" ಎಂದು ಒಂದು ಕಡೆ ಬರೆದ…
ಲೇಖಕರು: ರಾಮಕುಮಾರ್
ವಿಧ: Basic page
May 29, 2006
೧. ಅಂಗೈ ತೋರಿಸಿ ಅವಲಕ್ಷಣ ಅನ್ನಿಸಿಕೊಂಡ ಹಾಗೆ. ೨. ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಂಡ. ೩. ಕಳ್ಳನ ಮನಸ್ಸು ಹುಳ್ ಹುಳ್ಳಗೆ. ೪. ಸಮುದ್ರದ ನೆಂಟಸ್ತನ ಉಪ್ಪಿಗೆ ಬಡತನ. ೫. ದಿನಾ ಸಾಯೋರಿಗೆ ಅಳೋರು ಯಾರು. ೬. ಅಕ್ಕನ ಚಿನ್ನವಾದರೂ ಅಕ್ಕಸಾಲಿಗ ಬಿಡ. ೭. ರಾಮೇಶ್ವರಕ್ಕೆ ಹೋದರೂ ಶನೀಶ್ವರ ಬಿಡ. ೮. ಎತ್ತಿಗೆ ಜ್ವರ, ಎಮ್ಮೆಗೆ ಬರೆ. ೯. ಕೆಲಸವಿಲ್ಲದ ಆಚಾರಿ ಮಗಳ ಕಾಲು ಕೆತ್ತಿದ. ೧೦. ಸಾವಿರ ಕಾಲ ಸಾಮ ಓದಿದ ಮಗ ಮನೆ ಅಜ್ಜಿ ಸೊಂಟ ಮುರಿದ.
ಲೇಖಕರು: ahoratra
ವಿಧ: ಬ್ಲಾಗ್ ಬರಹ
May 28, 2006
ಓದಿದ ದಿನಗಳು ಹೇಗೆ ಮರೆಯಲಿ ನಾನುಸಾವಿರದ ದಿನಗಳನುಭಾಗೇಪಲ್ಲಿಯ ಎರಡುಸಾವಿರದ ದಿನಗಳನು ಸಾಸಿವೆಯ ನನ್ನನ್ನುಸಾಗರವ ಮಾಡಿರುವನಿಮ್ಮ ನೆರಳಿನ ಎರಡುಸಾವಿರದ ದಿನಗಳನು ಮನೆಯಲ್ಲಿ ರಸದೂಟಶಾಲೆಯಲಿ ಗುರುಪಾಠಸಂಘದಾ ಶಾಖೆಗಳಸವಿಯಾದ ದಿನಗಳನು ಚಿಕ್ಕಪ್ಪನಾ ಯೋಗಚಿಕ್ಕಮ್ಮನಾ ತ್ಯಾಗತಮ್ಮನಾ ಜತೆಗಿನಾತಂಪಾದ ದಿನಗಳನು ಪುಟ್ಟ ಮನೆಯಲಿ ಹೆಚ್ಚುಆನಂದ ತೋರಿಸಿದರಾಮನಾ ಸನಿಹದಾನೋವಿರದ ದಿನಗಳನು. ಅಹೋರಾತ್ರ.
ಲೇಖಕರು: ahoratra
ವಿಧ: Basic page
May 28, 2006
ಬ್ರಹ್ಮ ಕಮಲ. ಬ್ರಹ್ಮ ಕಮಲ ಪುಷ್ಪದಂತೆ ಅರಳಿ ಬಂದ ಮಗುವಿದುನಮ್ಮ ಮನೆಯ ಬೆಳಗಲೆಂದು ದೇವ ಕೊಟ್ಟ ವರವಿದು `ಅ' ಕಾರದಿಂದ ರಾಗ ಹಾಡಿ ನಮ್ಮ ಹರಸಿ ಜನಿಸುತು`ಉ' ಕಾರದಿಂದ ಹಾಲ ಕೇಳಿ ತಾಯ ತಂಪು ಗೊಳಿಸಿತು`ಮ' ಕಾರದಿಂದ ಮನೆಯಲ್ಲಿ ಮಮತೆಯನ್ನು ಹರಡಿತುಪ್ರಣವನಾದ `ಓಂ' ಕಾರಕೆ ನಮಿಸಿ ಬಂದ ಮಗುವಿದು ಬ್ರಹ್ಮ ತನ್ನ ಕೈಗಳಿಂದ ತಾನೆ ಮಾಡಿ ಕಳುಹಿದವಿಷ್ಣು ಇವಳ ಬೆಳೆಯಲೊಸುಗ ಪ್ರಥಮ ಉಸಿರ ನೀಡಿದಮಹೇಶ್ವರನ ಮಹಿಮೆಯಿಂದ ಮಗುವು ಬೆಳೆಯುತಿರುವುದುತ್ರಿಮೂರ್ತಿಯರ ಒಲವು ಗಳಿಸಿ ಧರೆಗೆ ಬಂದ ಮಗುವಿದು ದೇವರಿಂದ…
ಲೇಖಕರು: taleharate
ವಿಧ: ಬ್ಲಾಗ್ ಬರಹ
May 27, 2006
ಹಾಲಿ ಮಾಜಿ ಪ್ರಧಾನಿ ಡಿ ಗೌಡರಿಗೆ ಪತ್ರಕರ್ತರೆಂದರೆ ಅಷ್ಟಕಷ್ಟೆ. ಅವರ ಪ್ರಕಾರ ಪತ್ರಕರ್ತರೆಲ್ಲಾ ತಲೆಹರಟೆಗಳು. ಅದರಲ್ಲೂ ನನ್ನ ಹೆಸರೇ ತಲೆಹರಟೆ ಎಂದಿರುವಾಗ ಕೇಳಬೇಕೆ? ಅಂತು ಇಂತು ಕಷ್ಟಪಟ್ಟು ಸಂದರ್ಶನ ಪಡೆಯುವಷ್ಟರಲ್ಲಿ ನನ್ನ ತಲೆ ಹನ್ನೆರಡಾಣೆ ಆಗಿ 'ತಲೆಹರಟೆ'ಗೆ ತಲೆಯೇ ಇಲ್ಲ ಎನ್ನುವ ಹಾಗಾಗಿದೆ. ಆದರೆ ಸಂದರ್ಶನ ವೇಳೆ ಆಡಿದ ಮಾತುಗಳೆಲ್ಲಾ ಆಫ್ ದಿ ರೆಕಾರ್ಡ್!! ಆದರೂ ಧೈರ್ಯ ಮಾಡಿ ಸಂದರ್ಶನದ ಒಂದೆರಡು ತುಣುಕುಗಳನ್ನು ಇಲ್ಲಿ ನೀಡಿದ್ದೀನಿ. ತಲೆಹರಟೆ: ಗೌಡ್ರೇ ನಿಮ್ಮ ಇದುವರೆಗಿನ…
ಲೇಖಕರು: hpn
ವಿಧ: ಚರ್ಚೆಯ ವಿಷಯ
May 27, 2006
ಸದಸ್ಯರೆಲ್ಲರ ಗಮನಕ್ಕೆ, 'joshsatish' ಎಂಬ ಐಡಿಯಿಂದ ಲಾಗಿನ್ ಆಗುತ್ತಿರುವವರು ಸಂಪದದ ಇತರ ಸದಸ್ಯರ ಬ್ಲಾಗ್ ಬರಹಗಳನ್ನು ಹಾಗೂ ಲೇಖನಗಳನ್ನು ಕಾಪಿ ಹೊಡೆದು ತಮ್ಮ ಬ್ಲಾಗಿನಲ್ಲಿ ಸೇರಿಸಿಕೊಳ್ಳುತ್ತಿರುವುದರಿಂದ ಈ‌ ಐಡಿಯನ್ನು ಬಹಿಷ್ಕರಿಸಲಾಗಿದೆ. ಇಂತಹ plagiarism ಮತ್ತೆ ಕಂಡುಬಂದಲ್ಲಿ ಸಂಪದದ ಸದಸ್ಯರು ನಿರ್ವಾಹಕರ ಗಮನಕ್ಕೆ ತರುವಿರೆಂದು ನಂಬುತ್ತೇನೆ.
ಲೇಖಕರು: tvsrinivas41
ವಿಧ: ಬ್ಲಾಗ್ ಬರಹ
May 27, 2006
ಹೌದು ಜೀವಿಸಬಹುದು, ಜೀವಿಸುತ್ತಿದ್ದಾರೆ, ಮುಂಬೈ ನಲ್ಲಿ ಇದು ಸಾಮಾನ್ಯವಾಗಿ ಕಂಡು ಬರುವ ಸಂಗತಿ. ಮುಂಬಯಿಯಲ್ಲಿ ಎಲ್ಲೆಲ್ಲಿ ನೋಡಿದರೂ ಭಿಕ್ಷುಕರು ಕಾಣುವುದು ಸಹಜ. ಹೂಂ! ಭಾರತದ ಎಲ್ಲ ನಗರಗಳಂತೆಯೇ ಇಲ್ಲಿಯೂ ಸಹ. ಆದರೆ ಮುಂಬಯಿಯಲ್ಲಿ ಏನೇ ಕೆಲಸ ಮಾಡಿದರೂ ಹೊಟ್ಟೆ ತುಂಬುವಷ್ಟು ಗಳಿಸಬಹುದು. ಇದೊಂದು ಮಾಯಾನಗರಿ. ಕನಸನ್ನು ತೋರಿಸುತ್ತದೆ, ಅದನ್ನು ನನಸಾಗಿಸಲು ಏನೆಲ್ಲಾ ಮಾಡಲು ಪ್ರೇರೇಪಿಸುತ್ತದೆ. ಮುಂಬಯಿಗೆ ಮೊದಲ ಬಾರಿಗೆ ಬಂದವರಿಗೆ, ಬಣ್ಣದ ಜಗತ್ತು ಅಂದ್ರೆ ಸಿನೆಮಾ ಕೈಬೀಸಿ…