ಪರೀಕ್ಷೆ
ಪರೀಕ್ಷೆ.
ಶ್ರದ್ದೆಯಿಂದ ಬೇಡಬೇಕು ವಿನಾಯಕನ ಸುರಕ್ಷೆ,
ವರುಷ ಪಡೆದ ಶಿಕ್ಷಣಕೆ ಬಂತು ಈಗ ಪರೀಕ್ಷೆ.
ಆದರ್ಶದಿ ನಡೆಯಲೆಂದು ಉತ್ತರಗಳ ಸಮೀಕ್ಷೆ,
ಆವೇಗದಿ ಕಾಯುತಿರುವ ನಮ್ಮೆಲ್ಲರ ನಿರೀಕ್ಷೆ.//ಪ//.
ಬೇಕು ಸತತ ಅಭ್ಯಾಸ,
ಮನಸಿನಲ್ಲಿ ಉಲ್ಲಾಸ,
ಬರವಣಿಗೆಯ ವಿನ್ಯಾಸ,
ನನಸಾಗಲು ಕನಸ.//೧//.
ಸೂರ್ಯೋದಯ ನೋಡಬೇಕು,
ಚಂದ್ರೋದಯ ಕಾಣಬೇಕು,
ನಡುವೆ ನಾವು ಓದಬೇಕು,
ಬಿಡುವಿನಲ್ಲಿ ಆಡಬೇಕು.//೨//.
ಗಣಿತ ಬರೆದು ಕಲಿಯೋಣ,
ವಿಜ್ಞಾನ ಮಾಡಿ ನೋಡೊಣ
ಭೂಗೋಳ ನೋಡಿ ನಲಿಯೋಣ,
ಚರಿತ್ರೆ ಕೇಳಿ ತಿಳಿಯೋಣ.//೩//.
ಕಲಿಯಬೇಕು ಕನ್ನಡ,
ರಾಷ್ಟ್ರಭಾಷೆ ಹಿಂದಿಯ,
ವಿಶ್ವಭಾಷೆ ಆಂಗ್ಲವ,
ದೇವಭಾಷೆ ಸಂಸ್ಕೃತ.//೪//.
ಊಟದಿಂದ ಚೇತನ,
ಆಟದಿಂದ ಸಾಧನ,
ಪಾಠದಿಂದ ಚಿಂತನ,
ವಿದ್ಯಾರ್ಥಿಯ ಜೀವನ.//೫//.
ವಿನಯದಿಂದ ವರ್ತಿಸು,
ಅಹಂಕಾರ ವರ್ಜಿಸು,
ಗುರುಗಳನ್ನು ಪ್ರೀತಿಸು,
ದೇವರನ್ನು ಅರ್ಚಿಸು.//೬//.
-:ಅಹೋರಾತ್ರ.
[೦೮-೦೪-೨೦೦೪]