ಭೂಮಿ ತಾಯಿ
ಭೂಮಿ ತಾಯಿ
ಗಂಗ:- ಅಮ್ಮ ಅಮ್ಮ ಹೇಳಮ್ಮ, ಭೂಮಿ ಹೇಗೆ ನಮ್ಮಮ್ಮ?
ಅಮ್ಮ:- ಕಣ್ಣ ತೆರೆದು ನೋಡಮ್ಮ, ಪುಟ್ಟ ಕಂದ ಗಂಗಮ್ಮ,
ನಮ್ಮೆಲ್ಲರ ಅಮ್ಮ ಇಳೆಯಮ್ಮ, ಸೀತಮ್ಮಮ್ಮನ ಹೆತ್ತಮ್ಮ.//೧//.
ಗಂಗ:- ಕೈಯಿಲ್ಲಾ, ಕಾಲಿಲ್ಲ, ಇವಳ್ಯ್ಹಾಗಾದಳು ನಮ್ಮಮ್ಮ?
ಅಮ್ಮ:- ಸೂರ್ಯನ ಸುತ್ತ ಸುತ್ತಿಸುತ್ತಿ, ಕಾಲು ಕಳೆದುಕೊಂಡಳಮ್ಮ.
ತಿಂಗಳನೊಡನೆ ಆಡಿ ಆಡಿ ಕೈಗಳ ಕಳೆದುಕೊಂಡಳಮ್ಮ.//೨//.
ಅಷ್ಟೇ ಅಲ್ಲ ಕೇಳಮ್ಮ, ನಮ್ಮಮ್ಮನ ಅಮ್ಮ ಗಂಗಮ್ಮ.
ಗಿಡಗಳೆ ಇವಳ ಕೇಶವಮ್ಮ, ನದಿಗಳು ರಕ್ತನಾಳಗಳಮ್ಮ,
ಕಾಯಕವಿವಳ ಉಸಿರಮ್ಮ, ಸಾಗರವಿವಳ ಬೆವರಮ್ಮ.//೩//.
ಗಂಗ:- ಕಲ್ಲು ಮಣ್ಣು ನೀರಿರುವ, ಇವಳ್ಯ್ಹಾಗಾದಳು ನಮ್ಮಮ್ಮ?
ಅಮ್ಮ:- ಕಲ್ಲು ಮಣ್ಣು ದ್ವೀಪಗಳು, ಮೂಳೆ ಮಾಂಸ ಖಂಡಗಳು.
ನೀರು ಪರ್ವತ ಶ್ರೇಣಿಗಳು, ತಾಯೀ ಮಮತೆಯ ರೂಪಗಳು.//೪//.
ಗಂಗ:- ಹೌದಮ್ಮ! ನಿಜವಮ್ಮ! ಭೂಮಿ ತಾಯಿ ನಮ್ಮಮ್ಮ.//ಸ//.
-:ಅಹೋರಾತ್ರ.
[೦೬ ಎಪ್ರಿಲ್ ೨೦೦೪]