'ಅಶ್ರು ತರ್ಪಣ,' 'ನೆತ್ತರು ತರ್ಪಣ,'ವಾಗದಿರಲಿ ! ತಪ್ಪುಗಳಿಂದ ಎಚ್ಚೆತ್ತುಕೊಳ್ಳೋಣ !

'ಅಶ್ರು ತರ್ಪಣ,' 'ನೆತ್ತರು ತರ್ಪಣ,'ವಾಗದಿರಲಿ ! ತಪ್ಪುಗಳಿಂದ ಎಚ್ಚೆತ್ತುಕೊಳ್ಳೋಣ !

ಬರಹ

'ಅಶ್ರು ತರ್ಪಣ,' 'ನೆತ್ತರು ತರ್ಪಣ,'ವಾಗದಿರಲಿ ! ತಪ್ಪುಗಳಿಂದ ಎಚ್ಚೆತ್ತುಕೊಳ್ಳೋಣ ! ಸಾವು ಆಕಸ್ಮಿಕ ಹಾಗು ಅನಿವಾರ್ಯ ಕೂಡ:

ರಾಜ್ ಅವರು ಮರಣ ಹೊಂದಿದ ಘಳಿಗೆಯಲ್ಲಿ ಬಳಿ ಅವರ ಪುತ್ರ ಶಿವರಾಜ್ ಕುಮಾರ್ ಇರಲಿಲ್ಲ. ಶಿವಣ್ಣಾಅವರು ತಮ್ಮ ಚಿತ್ರೀಕರಣದ 'ಸೆಟ್' ನಲ್ಲಿ ಇದ್ದಾಗ ತಂದೆಯ ಸಾವಿನ ಸುದ್ದಿ ಅವರಿಗೆ ಬರ ಸಿಡಿಲಿನಂತೆ ಅಪ್ಪಳಿಸಿ, ಅವರು ಅಲ್ಲಿಂದ ಓಡಿ ಬೆಂಗಳೂರಿಗೆ ಬಂದರಂತೆ ! ಮುಖ್ಯ ಮಂತ್ರಿ, ಕುಮಾರ ಸ್ವಾಮಿ ಬರಲಾಗಲಿಲ್ಲ : ರಾಜ್ ಕುಮಾರ್ ಅವರ 'ಅಂತ್ಯ ಕ್ರಿಯೆ' ಯಲ್ಲಿ ಭಾಗವಹಿಸಲು ಬೆಂಗಳೂರಿನಲ್ಲಿ ಇದ್ದಾಗ್ಯೂ ಕುಮಾರಸ್ವಾಮಿಯವರಿಗೆ ಲಭ್ಯವಾಗಲಿಲ್ಲ.ದೂರ ದರ್ಶನದಲ್ಲೇ ನೋಡಿ 'ನಮನಗಳನ್ನು' ಸಲ್ಲಿಸಿದರಂತೆ !

ಗಣ್ಯರು ಬೆಂಗಳೂರಿನಲ್ಲಿದ್ದರೂ, ಕಂಠೀರವ ಸ್ಟೇಡಿಯಮ್ ಗೆ ಹೋಗಲಾಗಲಿಲ್ಲ : ಚಂದ್ರ ಬಾಬು ನಾಯ್ಡು, ಮತ್ತು ಎಲ್.ಕೆ.ಆಡ್ವಾನಿ ಬೆಂಗಳೂರಿಗೆ ಬಂದಿದ್ದರೂ ಕಂಠೀರವ ಸ್ಟೇಡಿಯಂ ಗೆ ಹೋಗಿ 'ರಾಜ್'ಅವರ ಅಂತಿಯ ಕ್ರಿಯೆಯಲ್ಲಿ ಭಾಗವಹಿಸಲು ಆಗಲಿಲ್ಲ. ಗಣ್ಯರ ಹೇಳಿಕೆ: ಮಹಾರಾಶ್ಟ್ರದ ರಾಜ್ಯಪಾಲ, ಎಸ್.ಎಮ್.ಕೃಷ್ಣರವರು "ಕನ್ನಡದ ಒಬ್ಬ ಮೇರು ವ್ಯಕ್ತಿ, ವಿಶಾಲ ಹೃದಯಿ" ನಮ್ಮನ್ನು ಅಗಲಿದರು," 'ಇದು ಕನ್ನಡಕ್ಕೊದಗಿದ ದೊಡ್ಡ ಆಘಾತ,' ವೆಂದು, ಹೇಳಿದ ಮಾತು, ಸಹಸ್ರ್‍ಆರು ಕನ್ನಡಿಗರ ಹೃದಯದಿಂದ ಹೊರಟ ಪ್ರತಿಧ್ವನಿ ಎನ್ನಬಹುದು.

ಯುವಕನ ಪ್ರತಿಕ್ರಿಯೆ:  ಮೈಸೂರಿನ ಯುವಕ ಮಹೇಷ್, ರಾಜ್ ಮರಣದ ಸುದ್ದಿಯನ್ನು ಕೇಳಿದ ಕೂಡಲೆ 'ಅಣ್ಣಾವ್ರೆ', 'ಅಣ್ಣಾವ್ರೆ' 'ನಮ್ಮನ್ ಅಗಲಿದ್ರಾ', ಎಂದು ಅಳುತ್ತಾ, ತನ್ನ ಕೈಯನ್ನು ಕತ್ತರಿಸಿಕೊಂಡನಂತೆ  !

ರಾಜ್ ಕುಮಾರ್ ಮತ್ತು ಅವರ ವೃತ್ತಿ ಜೀವನ:

ಅವರು ತಮ್ಮ ವೃತ್ತಿ ಜೀವನದಲ್ಲಿ, ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿದ್ದಕ್ಕೆ ೯ ಬಾರಿ 'ಶ್ರೇಶ್ಠ ನಟ'ಅಭಿನಯ ಪ್ರಶಸ್ತಿ ಪಡೆದಿದ್ದಾರೆ. ಅವರಿಗೆ 'ಬಾಬಾಸಾಹೇಬ್ ಫಾಲ್ಕೆ ಪುರುಸ್ಕಾರ,' ದೊರೆತದ್ದು, ದೇವೇಗೌಡರು ಪ್ರಧಾನಿಯಾಗಿದ್ದ ಸಮಯದಲ್ಲಿ. ಅಭಿನಯದಂತೆಯೇ ಅವರು ಹಾಡಿದ ಸುಂದರ, ಸುಮಧುರ, ಸುಲಲಿತ ಹಾಡುಗಳು ಲಕ್ಷಾಂತರ ಜನರ ಮನಸ್ಸನ್ನು ಸೂರೆಗೊಂಡಿವೆ ! ಬೀಡಿ ಸಿಗರೇಟ್ ಸೇದದ, ಮದ್ಯಪಾನ ಮಾಡದ ನಾಯಕ ! ಮೇಲೆ ತಿಳಿಸಿದ ಯಾವ 'ವ್ಯಸನಗಳಿಗೂ' ಮಣಿಯದ, ರಾಜ್ ಕುಮಾರ್ ತಾವು ಸಿಗರೇಟ್ ಸೇದುವುದಿರಲಿ 'ಸೆಟ್' ನಲ್ಲಿ ಬೇರೆಯವರನ್ನು ನೋಡಿದಾಗ ಮುಲಾಜಿಲ್ಲದೇ ಅವರನ್ನು ತರಾಟೆಗೆ ತೆಗೆದು ಕೊಳ್ಳುತ್ತಿದ್ದರು. ಆದರೆ ಎಂದೂ ಸಂಯಮದ ಎಲ್ಲೆಮೀರಲಿಲ್ಲ.

ಒಮ್ಮೆ ಅವರ ಆಪ್ತ ಗೆಳೆಯ, ನಿರ್ದೇಷಕ, ಶಿವಯ್ಯ, ಕೈಯಲ್ಲಿ ಸಿಗರೇಟ್ ಹಿಡಿದು, ಅವರಿಗೆ ಚಿತ್ರದ ಸನ್ನಿವೇಶ ವನ್ನು ತಿಳಿಯ ಹೇಳುತ್ತಿದ್ದಾಗ, ಅವರು ಶಿವಣ್ಣ ನನ್ನು ನೇಪಥ್ಯ' ಕ್ಕೆ ಕರೆದು, 'ಸಿಗರೇಟ್ ಸೇದಿ ಪರವಾಗಿಲ್ಲ. ಆದರೆ ದಯವಿಟ್ಟು ಒಳಗೆ ಬೇಡ. ಇದು ದೇವಸ್ಥಾನ ಇದ್ದ ಹಾಗೆ. ಇಲ್ಲಿ ನೀವು ಸಿಗರೇಟ್ ಸೇದಿದರೆ, ನಾಳೆ ಎಲ್ಲರೂ ಇಲ್ಲಿ ಸೇದುತ್ತಾರೆ. ಅದರಿಂದ ಸೆಟ್ಟಿನ' 'ಪಾವಿತ್ರ್ಯತೆ' ಹಾಳಾಗುತ್ತೆ' ! ಅವರು ವಿನಯದಿಂದಲೇ ಎಲ್ಲರನ್ನೂ ತಿದ್ದಿ ಗೆಲ್ಲುತ್ತಿದ್ದರು. ಶಿವಣ್ಣ, ಮೂಂದೆ ಅಂತಹ ತಪ್ಪು ಎಂದೂ ಮಾಡಲಿಲ್ಲ.

'ಕರಾವಳಿಯ ಕನ್ನಡಿಗರ ಬಗ್ಗೆ ಅಪಾರ ಪ್ರೀತಿ :

ಬಂಗಾರದ ಮನುಷ್ಯ' ದ ಚಿತ್ರೀಕರಣದ ಬಹು ಭಾಗ ಉಡುಪಿ ಹತ್ತಿರದ 'ಮಲ್ಪೆ' ದ್ವಿಪದ ಬಳಿ ನಡೆಯಿತು. ಅವರ ಇನ್ನೂ ಕೆಲವು ಚಿತ್ರಗಳ ಚಿತ್ರೀಕರಣ, ಉಡುಪಿ ಜಿಲ್ಲೆಯ ಮಣಿಪಾಲ್ ನ 'ಸೆಯಿಂಟ್ ಮೇರೀಸ್' ದ್ವೀಪದಲ್ಲಿ ಅದದ್ದನ್ನು ಅವರ ಚಿತ್ರ ಪೇಮಿಗಳು ನೆನೆಸಿಕೊಳ್ಳುತ್ತಾರೆ. ದಿನಚರಿ: ರಾಗಿ ರೊಟ್ಟಿ, ರಾಗಿ ಮುದ್ದೆ, ಸೊಪ್ಪಿನ ಹುಳಿ, ಕೋಳೀ ಮಾಂಸದ ಊಟ' ಅವರಿಗೆ ಪಂಚ ಪ್ರಾಣ. ದಿನ ನಿತ್ಯದ ಜೀವನದಲ್ಲೂ ಒಂದು ಶಿಸ್ತು -

ಮಲಗುವುದು, ಚಾಪೆಯ ಮೇಲೆ;

ಒಂದು ಜಮಖಾನ ಹಾಕಿಕೊಂಡು. ತಲೆಗೆ ದಿಂಬು, ಹೊದೆಯಲು ಚಾದರ. ಹೊತ್ತಿಗೆ ಮುಂಚೆ, ಬೆಳಿಗ್ಯೆ, ೫ ಘಂಟೆಗೇ ಎದ್ದು ಮನೆತುಂಬ ಓಡಾಡುತ್ತಿದ್ದರು. ಯೋಗ, ಸ್ನಾನ ದೇವರ ಪೂಜೆ. ೮-೩೦ ಕ್ಕೆ ಉಪಹಾರ ಮಾಡಿ ಚಿತ್ರಿಕರಣಕ್ಕೆ ಹೊರಟರೆ, ಸಾಯಂಕಾಲ ೮-೩೦ ರ ವರಿಗೂ ಕೆಲಸ. ನಂತರ ಊಟ, ಸಂಗೀತ, ಕನ್ನಡ ಚಿತ್ರಗಳ ವೀಕ್ಷಣೆ, ೧೦ ಕ್ಕೆ ಸರಿಯಾಗಿ ನಿದ್ರೆ.

'ಮಾತಾ ಪಿತೃ,' ಗಳ ಬಗ್ಗೆ ಅತೀವ ಮಮತೆ:

ರಾಜ್ ಅವರ 'ಚಿತ್ರಾಭಿನಯದ' ಜೀವನದ ಉತ್ಕರ್ಷದ ಸಮಯದಲ್ಲಿ ತಂದೆಯರು ಇಲ್ಲದಿದ್ದದ್ದು ಅವರಿಗೆ ಬೇಸರ ತಂದಿತ್ತು. ತಾಯಿಯವರ ಸಾನ್ನಿಧ್ಯದಿಂದ ಈ ಕೊರತೆ ಸ್ವಲ್ಪ ಕಡಿಮೆಯಾಗಿರಬಹುದೆಂದು ತೋರುತ್ತದೆ ! ತಾಯಿ, ಲಕ್ಷ್ಮಮ್ಮ ನವರನ್ನು, ಎಲ್ಲಾ ಸಮಾರಂಭದಲ್ಲೂ ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು. ಅಮೆರಿಕಾಕ್ಕೆ ಹೋದಾಗ ತಮಗೆ ದೊರೆತ ಅಭಿನಂದನೆಗಳು ಸನ್ಮಾನಗಳೂ ಎಲ್ಲವನ್ನೂ ರಾಜ್, ತಾಯಿಗೆ ಮಡಿಲಿಗೆ ಸಮರ್ಪಿಸಿದರು. ಲಕ್ಷ್ಮಮ್ಮನವರು ಪಟ್ಟ ಸಂತಸ ಅಷ್ಟಿಟ್ಟಲ್ಲ !

ಅನೇಕ ಬಾರಿ ಪತ್ರಿಕೆಗಳಲ್ಲಿ ವರದಿಯಾದ ಅಭಿಮಾನಿಗಳ "ಆತ್ಮಾಹುತಿ" ಯನ್ನು ತೀವ್ರವಾಗಿ ಖಂಡಿಸಿದ್ದ ಅವರು, ಕಳಕಳಿಯಿಂದ ವಿನಂತಿ ಮಾಡಿಕೊಳ್ಳುತ್ತಿದ್ದರು, "ಶಾಂತಿಯಿಂದಿರಿ, ಆತ್ಮಾಹುತಿ ಬೇಡ". ಆದರೆ, ರಾಜ್ ಅಂತಿಮ ಸಂಸ್ಕಾರದ ದಿನದಂದು ಸಾವನ್ನಪ್ಪಿದ ಯುವಕರ ಪ್ರಕರಣದಿಂದ ಎಶ್ಟು ನೊಂದುಕೊಳ್ಳುತ್ತಿದ್ದರೋ ಏನೋ ! ಅವರನ್ನು ಹೆತ್ತ ತಂದೆ ತಾಯಿಗಳು ಇನ್ನೂ ಜೀವನದ ಸಂತೋಷಗಳನ್ನು ಮಕ್ಕಳೊಂದಿಗೆ ಹಂಚಿಕೊಂಡು ದೇವರ ಪಾದ ಸೇರುವ ಮೊದಲು, ಮಕ್ಕಳೇ ಇಹಲೋಕವನ್ನು ತೊರೆದಿದ್ದಾರೆ.

ಸಾಮಾನ್ಯ ಪರಿವಾರದಲ್ಲಿ ಜನಿಸಿದ ಮುತ್ತುರಾಜ್, ತಮ್ಮ ಅಸಾಧಾರಣ ಪ್ರತಿಭೆ, ಸದ್ಗುಣಗಳಿಂದ ಅತ್ಯಂತ ಎತ್ತರಕ್ಕೆ- 'ಡಾ. ರಾಜ್ ಕುಮಾರ್,' ಆಗಿ ಬೆಳೆದು ನಮ್ಮೆಲ್ಲರ ಮನಸ್ಸನ್ನು ರಂಜಿಸಿ ಹಟಾತ್ತನೆ ಕಣ್ಮರೆಯಾದರು !

ಎಶ್ಟು ಎತ್ತರಕ್ಕೆ ಬೆಳೆದರೂ, ಅವರ ಸೌಜನ್ಯತೆ, ಸಜ್ಜನಿಕೆ, ವಿನಯಗಳು ಅವರ ಸುತ್ತಲೂ ಹಮ್ಮಿಕೊಂಡಿದ್ದವೇ ವಿನಃ ಅವರಿಂದ ದೂರ ಸರಿಯಲಿಲ್ಲ ! ಹುಟ್ಟು ಆಕಸ್ಮಿಕ ; ಮರಣವೂ ಅಷ್ಟೆ. ಆದರೆ ಅದು ಅನಿವಾರ್ಯ. ನಾವೆಲ್ಲರೂ ಸಾವಿನ ಕಡೆಗೆ ವೇಗವಾಗಿ ಸಾಗುತ್ತಿದ್ದೇವೆ; ರಾಜ್ ನಂತೆ, ಅಲ್ಲದಿದ್ದರೂ, ಕಿಂಚಿತ್ತಾದರೂ ಸಾಧಿಸಬಹುದಲ್ಲ !

ರಾಜ್ ಮೃತ ದೇಹ ನೊಡಲು ಹೊಗಿ, ಧಾಂಧಲೆಯಲ್ಲಿ ಸಾಯುವುದು ಯಾವ ನ್ಯಾಯ ?

ಇವರನ್ನು ಹೆತ್ತ ತಂದೆ ತಾಯಿಗಳ 'ಆರ್ತನಾದ' ಕೇಳುವವರು ಯಾರು ? ಕನ್ನಡಮ್ಮನ ಮಡಿಲಿನಲ್ಲಿ ಅನೇಕ 'ಅನರ್ಘ್ಯ' ರತ್ನಗಳಿವೆ. ಸಮಯ ಬಂದಾಗ ಅವುಗಳ ಜ್ಯೊತಿ ಹೀಗೆಯೇ ನಂದಬಹುದು !

ಆಗ ನಾವು ವೈಜ್ಞಾನಿಕವಾಗಿ ಯೋಚಿಸಿ ಅಗಲಿದ ಚೇತನಗಳಿಗೆ ಅವರ ಕನಸನ್ನು ನನಸಾಗಿಸುವಲ್ಲಿ ಸರ್ವ ಪ್ರಯತ್ನ ಮಾಡೋಣ. ನಾವೂ ಸ್ಪಂದಿಸೋಣ !

* ಖಂಡಿತ ಸೊಳ್ಳೆಗಳಂತೆ ಸಾಯುವುದು ಬೇಡ !!

-ಹೊರಂಲವೆಂ.