ತರಂಗ ಯುಗಾದಿ (೨೦೦೬) ವಿಶೇಷಾಂಕ

ತರಂಗ ಯುಗಾದಿ (೨೦೦೬) ವಿಶೇಷಾಂಕ

ಈ ಸಲದ ತರಂಗ ಯುಗಾದಿ (೨೦೦೬) ವಿಶೇಷಾಂಕದಲ್ಲಿ 'ಆರ್ಯ'ರವರು ಬರೆದ 'ಭಾಷೆ, ಧರ್ಮ, ದೇಶ ಮುಂತಾದ ಗಡಿಗಳನ್ನು ನಯಗೊಳಿಸಿದ' ಒಂದು ಕಥೆ ಇದೆ. ಚೆನ್ನಾಗಿ ಓದಿಸಿಕೊಂಡೂ ಹೋಗುತ್ತದೆ.

ಕ್ರಿಸ್ಟಲ್ ರೀಡಿಂಗ್ , ಟಾರಟ್ ಕಾರ್ಡ್ , ಕಾಲಗಣನೆ ಕುರಿತ ಲೇಖನಗಳು ಇಲ್ಲಿವೆ. ಮುಖ್ಯವಾಗಿ ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿನ ಶಿಕ್ಷಣ , ವೈದ್ಯಕೀಯ , ಕೈಗಾರಿಕೋದ್ಯಮ , ಪ್ರವಾಸೋದ್ಯಮ, ಬ್ಯಾಂಕಿಂಗ್ ರಂಗಗಳಲ್ಲಿನ ಅದ್ಭುತ ಸಾಧನೆಗಳ ಬಗ್ಗೆ ಸ್ವಲ್ಪ ಹೆಚ್ಚೇ ಅನಿಸುವಷ್ಟು ( ೧೦೦ ಪುಟ !!) ಇದೆ.

ಸೆಲ್ ಫೋನ್ ಸ್ವಾರಸ್ಯ - ಓದುಗರ ಪುಟ್ಟ ಲೇಖನಗಳು ಇವೆ. ತೆಂಗಿನಕಾಯಿ ಕೀಳುವಾಗ ಮೊಬೈಲ್ ಕರೆಗೆ ಉತ್ತರಿಸಲು ಯತ್ನಿಸಿ ತೆಂಗಿನ ಮರದಿಂದ ಬಿದ್ದು ತಲೆ ಒಡೆದುಕೊಂಡ ,'ದರ್ಶನ' ಸಮಯದಲ್ಲಿ ಪಾತ್ರಿಯೊಬ್ಬ ಮೊಬೈಲ್ ಕರೆಯ ಸದ್ದಿಗೆ ಓಗೊಟ್ಟು ಸೊಂಟದಲ್ಲಿನ ಮೊಬೈಲ್ ತೆಗೆದು 'ಈಗ ಮೈ ಮೇಲೆ ಬಂದಿದೆ , ಆಮೇಲೆ ರಿಂಗ್ ಮಾಡು' ಎಂದು ಉತ್ತರಿಸಿ ಭಕ್ತಾದಿಗಳ ಕೋಪಕ್ಕೆ ಗುರಿಯಾದ ಪ್ರಸಂಗ ಇಲ್ಲಿವೆ.

ಎಂದಿನಂತೆ ವರ್ಷಭವಿಷ್ಯ , ಸಿನೆಮಾ ಕುರಿತ ಲೇಖನಗಳಿವೆ ಬೆಲೆ ಸ್ವಲ್ಪ ಹೆಚ್ಚೇ ಅನಿಸುತ್ತದೆ . ( ೫೫ ರುಪಾಯಿ) . ಪ್ರತಿವರ್ಷದಂತೆ ಒಂದೆರಡು ಊದಿನಕಡ್ಡಿ , ಒಂದಿಷ್ಟು ಸೀಗೆಪುಡಿ , ಕಾಫಿಪುಡಿ ಕೂಡ ಕೊಟ್ಟಿದ್ದಾರೆ!.

Rating
No votes yet