ಏಪ್ರಿಲ್ ೨೬, ೨೦೦೫, ರ ದುರ್ದಿನ, ಮುಂಬೈನಲ್ಲಿ ಮತ್ತೆ ಮರುಕಳಿಸುವುದು ಬೇಡ !

ಏಪ್ರಿಲ್ ೨೬, ೨೦೦೫, ರ ದುರ್ದಿನ, ಮುಂಬೈನಲ್ಲಿ ಮತ್ತೆ ಮರುಕಳಿಸುವುದು ಬೇಡ !

ಬರಹ

ಅಮೆರಿಕ, ಹಾಗೂ ವಶ್ವದ ಪ್ರಜೆಗಳ ದಿನಚರಿಯಲ್ಲಿ ೯/೧೧ ಹೇಗೆ ಭಯಾನಿಕ ದಿನವೋ, ಹಾಗೆಯೆ ಮುಂಬೈ ನಿವಾಸಿಗಳಿಗೆ ಏಪ್ರಿ ಲ್ ೨೬ ,೨೦೦೫, ಒಂದು ಅಂತಹ 'ದುರ್ದಿನ 'ವೆಂದರೆ ಕೌತುಕವಾಗದಿರಲಾರದು !

ಮುಂಬೈ ನಗರಕ್ಕೆ ವರುಣನಕೃಪೆಯಿಂದ ಜೂನ್ ತಿಂಗಳ ಮೊದಲೆನೆ ವಾರದಿಂದ ಶುರುವಾಗುವ 'ಮಾನ್ ಸೂನ್' ಸೆಪ್ಟೆಂಬರ್ ಕೊನೆಯವರೆಗೆ, ಹಾಗೂ ಮುಂದೆಯೂ ಕಂತುಗಳಲ್ಲಿ ಮಳೆಬಿದ್ದು, ವರ್ಷದ ಸರಾಸರಿ ೧,೮೦೦ ರಿಂದ ೨,೪೦೦ ಮಿ.ಮಿ.ವರೆಗೆ ಆಗುವುದು. ಆದರೆ ಜುಲೈ ೨೬ ರಂದು ಒಂದೇ ದಿನ, ೯೪೪ ಮಿ.ಮಿ. ಮಳೆ ಹಿಂದಿನ ೯೫ ವರ್ಷಗಳ ದಾಖಲೆಯನ್ನು ಮುರಿದು ನೂರಾರು ಜನರ 'ಜೀವಾಹುತಿ'ಯನ್ನು ತೆಗೆದುಕೊಂಡ 'ಮಹಾವಿಪತ್ತಿನದುರ್ದಿನ' ವೆಂದು ದಾಖಲಿಸಲ್ಪಟ್ಟಿದೆ. (ಜುಲೈ ೧೨,೧೯೧೦, ರಲ್ಲಿ ಮೇಘಾಲಯ ರಾಜ್ಯದ 'ಚಿರ್ರಾಪುಂಜಿ' ಯಲ್ಲಿ ೮೩೮.೨ ಮಿ.ಮೀ.ಮಳೆ ಬಂದಿತ್ತು. ಮತ್ತೆ ಜುಲೈ ೫, ೧೯೭೪ ರಲ್ಲಿ ಮುಂಬೈ ನಲ್ಲಿ ೫೭೫.೬ ಮಿ.ಮಿ ಮಳೆ ಬಿದ್ದಿತ್ತು.) ಸಮುದ್ರಕ್ಕೆ ಹತ್ತಿರವಿರುವ ತಗ್ಗು ಪ್ರದೇಶದ ಜನರ ಪಾಡು ಹೇಳತೀರದು.' ಅಟ್ಟದಿಂದ ಬಿದ್ದವನನ್ನು ಛಡೀ ತೊಗೊಂಡ್ ಹೊಡೆದರು' ಅನ್ನೋತರಹ ಮಳೆಯ ಪ್ರೊಕೋಪ ಒಂದು ಕಡೆ ಆದರೆ ಮಹಾಸರೋವರಗಳಿಂದ ಕೋಡಿ ಹೊಡೆದು ಬಂದ ಹೆಚ್ಚುವರಿ ನೀರು ಅದರ ಹಿಂಭಾಗದ ತಗ್ಗು ಪ್ರದೇಶದ 'ನಾಲ್ಲಾ' ಎಂದೇ ಹೆಸರದ 'ಮೀಥಿ ರಿವರ್'(ಅದು ನದಿಯೆ ?) ನಿಂದ ಹರಿದು ಸಾಕಿನಾಕಾ,ಕುರ್ಲಾ, ಕಲೀನ, ವಕೋಲಾ, ಬಾಂದ್ರ್ -ಕುರ್ಲಾ ಕಾಂಪ್ಲೆಕ್ಸ್, ಧಾರಾವಿ, ಯಲ್ಲಿ ಹರಿದು ಮಹೀಮ್ ಕೊಲ್ಲಿ, ಯಿಂದ ಅರಬ್ಬೀ ಸಮುದ್ರ ಕ್ಕೆ ಹೋಗಿ ಸೇರುತ್ತದೆ. ಮುಂಬೈನ ಕಟ್ಟಡ ನಿರ್ಮಾಣದ ಮಹಾಪೂರದಲ್ಲಿ ನದಿಯ ಅಕ್ಕ ಪಕ್ಕದ ಸಿಕ್ಕ ಸಿಕ್ಕ ಜಾಗವನ್ನು ಕಬಳಿಸಲು ನಿರಂತರ ಮಸಲತ್ತು ಬಹಳ ಹಿಂದಿನಿಂದ ನಡೆದಿದೆ. ನಗರ ದ ಎಲ್ಲಾ ರಸ್ತೆಗಳೂ ಈಗ ಕಾಂಕ್ರೀಟ್ ಆಗಿದ್ದು ನೀರು ಇಂಗಲು ಅವಕಾಶವೇ ಇಲ್ಲವಾಗಿದೆ. ಅರ್ಧಂಬರ್ಧ ಕೊಳೆ, ಕಸ ಕಡ್ಡಿಗಳಿಂದ, ತುಂಬಿರುವ ಒಳ ಚರಂಡಿಗಳು ನೀರನ್ನು ನಗರದಿಂದ ಹೊರಕ್ಕೆ, ಸಮುದ್ರಕ್ಕೆ ಸೇರಿಸುವಲ್ಲಿ ಅಸಮರ್ಥವಾಗಿವೆ. ಏಕೆಂದರೆ ಸಮುದ್ರದಲ್ಲಿ ನೀರಿನ ಹೊರ ಒತ್ತಡ ಹೇಚ್ಚಾಗಿದ್ದು ಚರಂಡಿಯ ನೀರು ಹೊರಗೆ ಹೋಗಲು ಸಾಧ್ಯವಾಗಲಿಲ್ಲ. ಪರಿಸ್ತಿತಿ ಹದಗೆಟ್ಟಿತ್ತು. ಇವೆಲ್ಲದರ ಪರಿಣಾಮ ನಗರದ ಕೆಲವೇ ಚಿಕ್ಕ ರೋಡುಗಳು ನೀರಿನಿಂದ ತುಂಬಿ ನೀರಿನ ಮಟ್ಟ ಹೆಚ್ಚಾದಂತೆ 'ಡಬ್ಬಲ್ ಡೆ ಕ್ಕರ್ ಬಸ್' ಆದಿಯಾಗಿ ಎಲ್ಲಾ ವಾಹನಗಳೂ ಮಲಿನವಾದ ಎಣ್ಣೆಯ ನೀರು, ಗಟ್ಟರ್ ನೀರಿನಿಂದ ತುಂಬಿ ತೇಲಿ ಹೋದವು. ವಾಹನಗಳಲ್ಲಿ ಕುಳಿತ ಜನರು ಹೊರಗೆ ಬರಲಾರದೆ ಉಸಿರು ಕಟ್ಟಿಕೊಂಡು ಮರಣ ಹೊಂದಿದರು.ತೇಲಿ ಹೋದವರು, ವಿದ್ಯುತ್ ತಗುಲಿ ಸತ್ತವರೂ ಬಹಳ ಮಂದಿ ! ವಾರಂತ್ಯದಲ್ಲಿ ಹೀಗೆ ಸತ್ತವರು ೧,೦೦೦ ಕ್ಕಿಂತ ಜಾಸ್ತಿ ಎಂದು ವರದಿಗಳು ತಿಳಿಸಿದವು.

ಮುಂಬೈ ಜನ ಎಲ್ಲ ಒಟ್ಟಿಗೆ ಸಹಕಾರ ದಿಂದ ತಮ್ಮ ಸಹಾಯ ಹಾಗೂ ಸೇವೆಯಿಂದ ಅನೇಕರ ಜೀವ ಉಳಿಸಿದರು.
ಈಗ 'ಮೀಥಿ ನದಿ'ಯನ್ನು ಶುದ್ಧಿ ಗೊಳಿಸಿ, ಅಗಲಗೊಳಿಸುವ ಕೆಲಸ ಭರದಿಂದ ಸಾಗಿದೆ, ಎಂದು ವರ್ತಮಾನ ಪತ್ರಿಕೆಗಳು ಪ್ರಕಟಿಸುತ್ತಿವೆ. 'ಮಾನ್ ಸೂನ್' ಶುರುವಾಗಲು ಕೇವಲ ಒಂದು ವಾರ ಅಥವ ಎರಡು ವಾರ ಹೆಚ್ಚೆಂದರೆ, ಆಗಬಹುದು! ಏನು ಮಾಡಬಹುದೋ, ಸಾಧ್ಯವೋ, ಯಾರಿಗೂ ನಿಖರವಾಗಿ ತಿಳಿದಿಲ್ಲ !

ಒಟ್ಟಿನಲ್ಲಿ ಹಿಂದಿನ ವರ್ಷದ "ಕಹಿ ನೆನಪುಗಳು" ಮರುಕಳಿಸುವುದು ಬೇಡ !