ಚಲನೆ.

ಚಲನೆ.

ಬರಹ

ಚಲನೆ.
ಚಲನೆ ಚಲನೆ ಚಲನೆ ಚಲನೆ,
ನಿರಂತರದ ಜಗದ ಚಲನೆ,
ಅಚಲನಾದ ಹರಿಯಲ್ಲಿಗೆ
ಚರಾಚರದ ಚಲನೆ.//ಪ//.

ಆಕಾಶದಿ ಹುಟ್ಟಿ ಬಂದ
ಶಬ್ದ ತರಂಗಗಳ ಹೊತ್ತ
ಗಾಳಿಯಿಂದ ಜ್ವಲಿಸುತಿರುವ
ಅಗ್ನಿ ನಡೆಸೊ ನೀರಚಕ್ರ
ಮಣ್ಣ ಏರುಪೇರುಗೊಳಿಸಿ,
ಜೀವ ಬೀಜ ಮೊಳಕೆಯೊಡೆದು
ಬೇರು ಬಿಟ್ಟು ನೀರನ್ಹೀರಿ
ಮಣ್ಣ ಸಾರ ಜೊತೆಗೆ ಬೆರೆಸಿ
ಕಾಂಡ ಬಳಸಿ ಎಲೆಯ ಬೆಳಸಿ,
ಬೆಳಕಿನಿಂದ ಪಾಕ ಮಾಡಿ
ತಿಂಗಳನೊಡನುಸಿರಾಡಿ,
ಪರಾಗರೇಣು ಹೂ ಬಿಟ್ಟು
ದುಂಬಿಗಳಾ ದೊಂಬಿ ಕರೆದು,
ಕಾಯಿ ಹಣ್ಣು ಬೆಳಸಿಕೊಂಡು
ಪ್ರಾಣಿ ಪಕ್ಷಿ ಪ್ರಕೃತಿಯ
ದೆಸೆಯಿಂದ ಬೀಜಹರಡೊ
ಮರದ ಸಂ ೭ ೭ ೭ ೭
ಚಲನೆ ಚಲನೆ ಚಲನೆ.//೧//.

ಜಗದ ಹಿರಿಯ ಹರಿಯು ಮನದಿ
ಜೀವಕೊಟ್ಟು ಬೆಳೆಯಲೊಸಗ
ಹೆಣ್ಣು ಗಂಡು ಸೂತ್ರಮಾಡಿ
ಬೆರೆಯಲೊಂದು ಆಶೆಯಿಟ್ಟು
ಪಾಶದಿಂದ ಮಗುವ ಕೊಟ್ಟು,
ಕೆಲಸದಲ್ಲಿ ಸುಖವನಿಟ್ಟು
ಕಪಟತನಕೆ ದುಃಖವಿಟ್ಟು,
ಸತತವಾಗಿ ದುಡಿಯಲೆಂದು
ಮರಿಮಕ್ಕಳ ಬೆಳೆಸಲೆಂದು,
ಗುಣಕೆ ತಕ್ಕ ಕೆಲಸ ಮಾಡಿ
ಕುಲಗಳನ್ನು ಮರೆಯಲೆಂದು
ಗುರುಹಿರಿಯರ ಬೆರೆಯಲೆಂದು
ಕಾಮ ಕ್ರೊಧ ಗೆಲ್ಲಲೆಂದು
ಭಯೋಧ್ವೇಗ ತ್ಯಜಿಸಲೆಂದು
ರಾಗದ್ವೆಷ ಬಿಡಿಸಲೆಂದು,
ಧರೆಯ ತೊರೆದು ಹರಿಯ ಬಳಿಗೆ
ನಡೆವ ದಾರಿ ನಿಲ್ಲದ ಸಂ-
ಚಲನೆ ಚಲನೆ ಚಲನೆ.//೨//.

ದೇಶವನ್ನು ಉಳಿಸಲಿಕ್ಕೆ
ದೇವರಲ್ಲಿ ಶಪತ ತೊಟ್ಟು
ದೇಹದಲ್ಲಿ ಶಕ್ತಿ ತುಂಬಿ,
ಧೀರರಾಗಿ ಮೆರೆಯುತಿರುವ
ಜಲವಾಯು ಭೊ ಸೇನೆಯ
ದೇಶ ಭಕ್ತ ಯೋಧರು,
ಕಾಡು ಮೇಡು ಗಡಿಗಳಲ್ಲಿ
ಸಾಗರಾಕಾಶದಲ್ಲಿ
ಶೀತೋಷ್ಣವ ಸಹಿಸಿಕೊಂಡು
ನಾಡಗದ್ದೆ ಮುದ್ದೆ ತಿಂದು
ನಿದ್ದೆ ಬಿಟ್ಟು ನಿರತರಾಗಿ
ವೈರಿಗಳಾ ಸದ್ದಡಗಿಸೆ
ಜೀವಕೊಡಲು ಸಿದ್ಧರಾಗಿ
ಯುದ್ಧಗಳನು ಎದುರಿಸಲು
ಬದ್ಧರಾಗಿ ಬುದ್ಧರಾದ
ನಾಡ ಮುದ್ದುಮಕ್ಕಳಿವರ
ಸಮವಸ್ತ್ರದ ಪಥದ ಸಂ-
ಚಲನೆ ಚಲನೆ ಚಲನೆ.//೩//.

ಕಣರೇಣು ಅಣುವಿನಿಂದ,
ಬ್ರಹ್ಮಾಂಡದ ಕೊನೆಯವರೆಗೆ,
ಜೀವಿನಿರ್ಜೀವಿಗಳಲಿ
ತಿರುಗುತಿರುವ ತಿಂಗಳಲಿ
ಪ್ರತಿಫಲಿಸುವ ಗ್ರಹಗಳಲಿ
ಪ್ರಾಜ್ವಲ್ಯದ ಅರ್ಕನಲಿ
ಅಗಣ್ಯವಾದ ತಾರೆಗಳಲಿ
ದೇವಾಸುರ ಗಣಗಳಲಿ
ಕ್ಷಣಕ್ಷಣಗಳ ಸಮಯದಲಿ
ಜಣಜಣಿಸುವ ಹಣಗಳಲಿ,
ನಿಯಮವಾಗಿ ನಿರತವಾಗಿ,
ನೆಲದ ಮೇಲೆ ಜಲದ ಹಾಗೆ
ಆಗಸದಾ ಮೋಡಧ್ಹಾಗೆ,
ಅಂಬುಧಿಯ ಅಲೆಯ ಹಾಗೆ,
ನಿಲ್ಲದಿರುವ ನಡೆಯುತಿರುವ
ವೆಂಕಟಾಚಲಪತಿಯ
ಬಲದಿಂದ ಚಲಿಸುತಿರುವ
ಚಲನೆ ಚಲನೆ ಚಲನೆ.//೪//.

-: ಅಹೋರಾತ್ರ.
[೧೭-೦೪-೨೦೦೪]