ಸಾವಿರ ರೂಪಾಯಿಗೆ ಇಪ್ಪತ್ತು ಪುಸ್ತಕ ಖರೀದಿ.
ನಿನ್ನೆ ನಾನು ರಜೆಯ ಮೇಲಿದ್ದು ಸ್ವಲ್ಪ ಸಮಯ ಹೊಂದಿಸಿಕೊಂಡು ಇಲ್ಲಿ ( ಮುಂಬಯಿ)ಯಲ್ಲಿನ ದಾದರ್ ಹತ್ತಿರ ಇರುವ ಭಾರತೀಯ ಸಾಹಿತ್ಯ ಅಕಾಡೆಮಿ ಕಛೇರ್‍ಇಗೆ ಹೋದೆ . ಸಾಹಿತ್ಯ ಅಕಾಡೆಮಿ ಭಾರತೀಯ ಭಾಷೆಗಳ ಶ್ರೇಷ್ಠ ಪುಸ್ತಕಗಳನ್ನು ಭಾರತದ ಇಪ್ಪತ್ತೈದು ಭಾಷೆಗಳಲ್ಲಿ ಅನುವಾದಿಸಿ ಪ್ರಕಟಿಸುತ್ತದೆ. ಎಲ್ಲ ಭಾಷೆಗಳ ಪುಸ್ತಕಗಳೂ ಇಲ್ಲಿ ಲಭ್ಯವಿದ್ದವು . ( ಬೆಂಗಳೂರಿನಲ್ಲಿ ಅವರ ಶಾಖೆ ಅಂಬೇಡ್ಕರ್ ಬೀದಿಯಲ್ಲಿದೆ). ಸರಕಾರದ ಸಂಸ್ಥೆಯಾಗಿದ್ದರಿಂದ ಬೆಲೆಯೂ ಕಡಿಮೆ; ಶೇ. ೨೫ ರಷ್ಟು ರಿಯಾಯಿತಿಯನ್ನು ಕೊಟ್ಟಿದ್ದರಿಂದ ನಾನು ಇಪ್ಪತ್ತೊಂದು ಪುಸ್ತಕ ಒಂದು ಸಾವಿರದ ಐವತ್ತು ರೂಪಾಯಿಗಳಿಗೆ ಖರೀದಿಸಲು ಸಾಧ್ಯ ಆಯಿತು . ಅಲ್ಲಿ ಸಿಬ್ಬಂದಿ ವರ್ಗ ಚೆನ್ನಾಗಿ ವ್ಯವಹರಿಸಿದರು. ಮತ್ತೆ ಬರುವೆ ಎಂದು ಹೇಳಿ ಬಂದೆ. ಹಾಗೆಯೇ ಇಲ್ಲಿ ಸರಕಾರದ್ದೇ ಇನ್ನೊಂದು ಸಂಸ್ಥೆಯಾದ ನ್ಯಾಶನಲ್ ಬುಕ್ ಟ್ರಸ್ಟ್ ಕಚೇರಿಯೂ ಹತ್ತಿರವೇ ಇದೆ . ಮತ್ತೆಂದಾದರೂ ಹೋಗಬೇಕು.
ತೆಗೆದುಕೊಂಡ ಪುಸ್ತಕಗಳನ್ನು ಓದಿ ಏನಾದರೂ ವಿಶೇಷವಿದ್ದರೆ ಆ ಕುರಿತು ಇಲ್ಲಿ ಬರೆಯುವೆ.