ನನ್ನ ಭಾಗ್ಯ

ನನ್ನ ಭಾಗ್ಯ

ನನ್ನ ಭಾಗ್ಯ.

ದೇವ್ರಾಣೆ ನಿನ್ನಂಥ ಮಡದಿ ಸಿಗೋಲ್ಲ
ಸಿಕ್ಕಾಗ ನಿನ್ಬೆಲೆ ಗೊತ್ತೇ ಇರಲಿಲ್ಲ/
ನನ್ನಾಣೆ ನನ್ಬೆಲೆ ನಾಲ್ಕಾಣೆ ಇಲ್ಲ
ನಿನ್ನಾಣೆ ನನ್ಮಾತು ನಂಬು ಸುಳ್ಳಲ್ಲ//

ಕಲಿಕೆಯ ವಯಸಲಿ ಕುಲಗಳ ತೊರೆದು
ಹಿರಿಯರನೆದುರಿಸಿ ನನ್ನಲಿ ಬೆರೆತು/
ಬಂಗಾರವಿಲ್ಲದ ಬಡತನದಲ್ಲಿ
ಬಂಗಾರವಾಗಿ ನನ್ನನೀ ಸೇರಿದೆ//

ಹುಟ್ಟೂರು ಬೆಳೆದೂರು ಕಲೆತೂರು ತೊರೆದು
ಹೊರನಾಡ ಬಂದು ನನ್ನೊಡನೆ ನಿಂತೆ/
ಆಶಾಶೂನ್ಯದ ನಿನ್ನೊಡಗೂಡಿ
ಭವಭಾರದಲೂ ನಾ ನಾಕವ ಕಂಡೆ//

ಸಿಂಧೂರ ಶಿವಗಂಗ ರೋಹಿಣಿ ಪ್ರಣತಿ
ಶಿವ ನಮಗೆ ಕೊಡುತಿರುವ ಸಂಹಿತೆ ಸೇರಿ/
ನೀ ತಂದ ಭಾಗ್ಯದ ಪಾಂಚಜನ್ಯಗಳು
ನಿನ್ನ ತ್ಯಾಗಕೆ ಸಂದ ದೇವ ಕುರುಹುಗಳು.

ಅರಿಯದ ವಯಸಿಗೆ ಅರಿಗಳ ಕಂಡೆ
ಅರಿಗಳ ಮುರಿಯಲು ನೀ ಬಂದು ನಿಂದೆ/
ಗಿರಿಗಳ ಹತ್ತಿ ಗುರಿಗಳ ಮುಟ್ಟಲು
ಹರಿಹರರ ಸೇವೆಗೆ ಹೆಗಲಾಗಿ ಬಂದೆ//

ಅಹೋರಾತ್ರ.
೨೦:೧೦.
೧/೫/೬.
ಮುಂಬೈ.

Rating
No votes yet