ಪೋಲೆಂಡ್, ಈಗ ಗೊಲ್ ಹೊಡೆದು ಮುನ್ನಡೆಯಲು ಹಾತೊರೆಯುತ್ತಿದೆ ! ವಿಶ್ವಕಪ್ ನಾಕ್ ಔಟ್ ಪ್ರಕ್ರಿಯೆ ಸಾಗಿದೆ !

ಪೋಲೆಂಡ್, ಈಗ ಗೊಲ್ ಹೊಡೆದು ಮುನ್ನಡೆಯಲು ಹಾತೊರೆಯುತ್ತಿದೆ ! ವಿಶ್ವಕಪ್ ನಾಕ್ ಔಟ್ ಪ್ರಕ್ರಿಯೆ ಸಾಗಿದೆ !

ಬರಹ

ಮಂಗಳವಾರ, ೨೦, ಜೂನ್, ೨೦೦೬ ರಂದು ನಡೆದ ವಿಶ್ವ ಕಪ್ ಫುಟ್ ಬಾಲ್ ಪಂದ್ಯಗಳು:

೧. ನೆನ್ನೆ ನಡೆದ ಗ್ರುಪ್, 'ಎ' ಪಂದ್ಯದಲ್ಲಿ, ಪ.ಜರ್ಮನಿ ವಿರುಧ್ದ ಇಕ್ವೆಡಾರ್, ಜರ್ಮನಿ, (೩-೦)ಭರ್ಜರಿ ಜಯದಿಂದ ತನ್ನ ಗ್ರುಪಿನ ಪ್ರಥಮ ಸ್ಥಾನ ವನ್ನು ಅಲಂಕರಿಸಿತು.ಸೀಟಿ ಬಾರಿಸಿದ ೫ ನೆ ನಿಮಿಷದಲ್ಲೆ ಮಿರೊಸ್ಲೋವ್ ಕ್ಲೊಸೆ ಮೊದಲ ಗೊಲ್ ಬಾರಿಸಿದರು. ತಮ್ಮ ಇನ್ನೊಂದು ಗೊಲನ್ನು ೪೪ ನೆ ನಿಮಿಷದಲ್ಲಿ ಹೊಡೆದು ಜರ್ಮನಿಗೆ ಹೊಸ ಹುರುಪು ತಂದು ಕೊಟ್ಟರು.೫೭ ನೆ ನಿಮಿಷದಲ್ಲಿ ಪೊಡೊಲಸ್ಕಿ ಲ್ಯುಕಾಸ್ ಜರ್ಮನಿಗೆ ಮತ್ತೊಂದು ಗೋಲ್ ಹೊಡೆಯುವ ಮೂಲಕ ಅದರ ಸ್ಥಾನ ಮಾನ ವನ್ನು ಮತ್ತೂ ಭದ್ರಪಡಿಸಿದರು.

೨. 'ಎ' ಗ್ರುಪ್ ನ ಇನ್ನೊಂದು ಪಂದ್ಯ, ಕೊಸ್ಟರಿಕ ವಿರುಧ್ದ ಪೋಲೆಂಡ್ , ನಡೆದು ಪೋಲೆಂಡ್ ಪ್ರಥಮಬಾರಿ (೧-೨) ಗೋಲಿನಿಂದ ಮುಂದಿದೆ.ಈ ಎರಡು ಟೀಮ್ ಗಳೂ ಹೆಸರಿಗೆ ಮಾತ್ರ ಆಡುತ್ತಿದ್ದರೂ, ಪೋಲೆಂಡ್ ಮನೆಗೆಹೋಗುವಾಗ ಈ ಗೆಲುವಿನ ಸವಿನೆನಪನ್ನು ಒಯ್ಯಬಹುದು ! ೨೪ ನೆ ನಿಷದಲ್ಲಿ ಕೊಸ್ಟರಿಕದ ರೋನಾಲ್ಡ್ ಗೊಮೆರ್ರೋ ಗೋಲ್ ಬಾರಿಸಿದರು.ಆದರೆ ಪೋಲೆಂಡ್ ಜೋರಾಗಿ ಆಡಿ ಬಾರ್ತೋಝ್ ಬೋಸಾಕಿ ಎರಡು ಗೋಲ್ಗಳನ್ನು ಚಚ್ಚಿದರು ! ೩೨, ಮತ್ತು ೬೬ ನೆ ನಿಮಿಷಗಳಲ್ಲಿ !
ಪೋಲೆಂಡ್ ತನ್ನ ಗ್ರುಪಿನಲ್ಲಿ ಪ್ರಥಮಸ್ಥಾನ ಪಡೆಯಿತು.

೩. ಗ್ರುಪ್ 'ಬಿ' ನಲ್ಲಿ ಸ್ವೀಡನ್ ಇಂಗ್ಲೆಂಡ್ ಜೊತೆ ಸೆಣಸಿ (೨-೨) ಗೋಲ್ ಗಳಿಂದ 'ಡ್ರಾ' ಮಾಡಿ ಕೊಂಡಿದ್ದರಿಂದ ಇಂಗ್ಲೆಂಡಿನ ನಂತರ, ತನ್ನ ಎರಡನೆಯ ಸ್ಥಾನ ವನ್ನು ಪಡೆಯಿತು.
ಸ್ವೀಡನ್ ನ ,ಮಾರ್ಕಸ್ ಅಲ್ಲಬೆಕ್ ೫೦ ನೆ ನಿಮಿಷದಲ್ಲಿ ಗೊಲ್ ಹೊಡೆದರು.ನಂತರದ ಗೋಲನ್ನು ಹೆನ್ರಿಕ್ ಲಾರ್ಸ್ ನ್ ೯೦ ನೆ ನಿಮಿಷದಲ್ಲಿ ಬಾರಿಸಿದರು. ಇಂಗ್ಲೆಂಡ್ ಪರವಾಗಿ ಜೊ ಕೊಲೆ ೩೩ ನೆ ನಿಮಿಷ ಮತ್ತು ಸ್ಟೀವನ್ ಗೆರಾಲ್ಡ್ ೮೫ ನೆ ನಿಮಿಷದಲ್ಲಿ ಇನ್ನೊಂದು ಗೊಲ್ ಮಾಡಿ ಸ್ಕೊರ್ ಸರಿಸಮ ಮಾಡಿದರು. ಇಗ್ 'ಬಿ ಗ್ರುಪ್ ನಲ್ಲಿ ಇಂಗ್ಲೆಂಡ್ ಪ್ರಥಮ ಮತ್ತು ಸ್ವಿಡನ್ ಎರಡನೆ ಸ್ಥಾನ ಪಡೆದಿವೆ. ಈಗ್ ಇಂಗ್ಲೆಂಡ್ ಇಕ್ವೆಡಾರ್ ವಿರುಧ್ದ ಆಡಿದರೆ, ಸ್ವಿಡನ್ ಜರ್ಮನಿ ವಿರುಧ್ದ ಸೆಣಸಬೇಕಾಗಿದೆ.

೪.'ಬಿ' ಗ್ರುಪ್ ನ ಕೊನೆಯ ಆಟದಲ್ಲಿ, ಪರಗ್ವೆ ವಿರುಧ್ದ ಟ್ರಿನಿಡಾಡ್ ಮತ್ತು ಟೊಬ್ಯಾಗೊ ಆಡಿ (೨-೦) ನಿಂದ ಪರಗ್ವೆ ವಿಜಯ ಸಾಧಿಸಿದೆ.ಬ್ರೆಟ್ ಸ್ಯಾಂಚೋ ೨೪ ನೆ ನಿಮಿಷದಲ್ಲಿ ಮತ್ತು ೮೫ ನೆ ನಿಮಿಷದಲ್ಲಿ ನೆಲ್ಸನ್ ಕ್ಯುವಸ್ ಆಕರ್ಷಕವಾಗಿ ಗೋಲ್ ಬಾರಿಸಿ ,ಪರಗ್ವೆಯನ್ನು ಸಂತೋಷ ಪಡಿಸಿದರು. ಈ ಗೆಲುವಿನ ಸವಿ ನೆನಪಿನೊಂದೆಗೆ ಪರಗ್ವೆ ಮನೆಗೆ ಹೋಗಬಹುದು! ಅವರ ಕಪ್ತಾನ್ ಕಾರ್ಲೋಸ್ ಗಮಾರ್ರ , ತಮ್ಮ ೩೫ ನೆ ವಯಸ್ಸಿನಲ್ಲಿ ನ ಕ್ರೀಡಾ ಜೀವನದಲ್ಲಿ ೧೧೦ ನೆ ಆಟ ಆಡಿದ್ದು, ವಿಶ್ವಕಪ್ಪಿಗೆ ವಿದಾಯಹೇಳುವವರಿದ್ದಾರೆ !

ಈ ದಿನ ಬುಧವಾರ, ೨೧, ಜೂನ್, ೨೦೦೬ ರಂದು ನಡೆಯಲಿರುವ, ವಿಶ್ವಕಪ್ ಫುಟ್ಬಾಲ್ ಪಂದ್ಯಗಳು :

ಸಾ. ೭-೩೦ ಪೋರುಗಲ್ ವಿರುಧ್ದ ಮೆಕ್ಸಿಕೊ 'ಡಿ' ಗ್ರುಪ್
ಸಾ. ೭-೩೦ ಇರಾನ್ ವಿರುಧ್ದ ಅಂಗೋಲ 'ಡಿ' ಗ್ರುಪ್
ಮ.ರಾ.ಅರ್ಜೆಂಟೈನ ವಿರುಧ್ದ ಡಚ್ 'ಸಿ' ಗ್ರುಪ್
ಮ.ರಾ.ಐವರಿಕೋಸ್ಟ್ ವಿರುಧ್ದ ಸರ್ಬಿಯ.ಮ 'ಸಿ' ಗ್ರುಪ್