ವಿಧ: Basic page
July 13, 2006
ಸುಮಾರು ಆರೇಳು ವರ್ಷಗಳಿಂದಲೂ ಗುಲ್ಬರ್ಗ ಹಾಗೂ ಬೀದರ್ ಸುತ್ತಾಡಿಬರಬೇಕೆಂಬುದು ನನ್ನ ಒಂದು ದೊಡ್ಡ ಆಸೆಯಾಗಿತ್ತು. ಗೆಳೆಯರ ಮದುವೆ ಪ್ರಯುಕ್ತ ಎರಡು ಸಲ ಗುಲ್ಬರ್ಗಕ್ಕೆ ತೆರಳಿದರೂ, ಸುತ್ತಾಡುವ ಅವಕಾಶ ಇರಲಿಲ್ಲ. ಬೀದರಂತೂ ಹೇಗಿದೆ ಎಂಬ ಕಲ್ಪನೆಯೇ ಇರಲಿಲ್ಲ. ಪ್ರಜಾವಾಣಿ, ಕನ್ನಡ ಪ್ರಭ, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಲ್ಲಿ ಗುಲ್ಬರ್ಗ ಹಾಗೂ ಬೀದರ್ ಬಗ್ಗೆ ಬಂದ ಎಲ್ಲಾ ಲೇಖನಗಳನ್ನು ಸಂಗ್ರಹಿಸಿಟ್ಟುಕೊಂಡು, ಭೇಟಿ ನೀಡುವ ಅವಕಾಶವನ್ನು ಕಾಯುತ್ತಾ ಇದ್ದೆ. ಕಳೆದ ಮೇ ತಿಂಗಳಂದು ಮಂಗಳೂರಿನ…
ವಿಧ: ಬ್ಲಾಗ್ ಬರಹ
July 13, 2006
ಗೀಚಿದರು ಕವನಗಳ ನವ ಯುವ ಕವಿಯಾದಿ
ಪ್ರಾಸಕ್ಕೆ ತಿಣುಕಾಡಿ ಸಾರವಾ ಕೊ೦ದು ||
ಲೇಸು ಇವರೆದುರು, ದೀರ್ಘಮೌನಿಗಳು
ಹುಸಿಜಸವ ತೋರರೋ ಪ೦ಡಿತಪುತ್ರ ||
--
ದಿನನಿತ್ಯ ಪತ್ರಿಕೆಗಳಲ್ಲಿ ಬರುವ so called ಕವಿಗಳ ಕವನಗಳನ್ನೋದಿದಾಗ ಆದ ಅನುಭವ....
ನನ್ನ ಕವನಗಳನ್ನೋದಿ ಓದುಗರಿಗೆ ಹೀಗೆ ಅನ್ನಿಸದಿದ್ದರೆ ನಾನು ಧನ್ಯ....ಹಹಹ
ವಿಧ: ಬ್ಲಾಗ್ ಬರಹ
July 13, 2006
ಕೇಳಿದ್ದೆ , ಓದಿದ್ದೆ . ಕಾವೇರಿಯಿಂದ ಗೋದಾವರಿವರೆಗೆ ಕನ್ನಡನಾಡು ವ್ಯಾಪಿಸಿತ್ತು ಮತ್ತು ಇದು 'ಕವಿರಾಜಮಾರ್ಗ'ದಲ್ಲಿದೆ ಎಂದಷ್ಟೇ ಗೊತ್ತಿತ್ತು. ಇದರಲ್ಲಿ 'ಮಾ' ಎಂದರೇನು ಗೊತ್ತಿರಲಿಲ್ಲ . ವಸುಧಾ-ವಲಯ-ವಿಲೀನ, ವಿಶದ-ವಿಷಯ-ವಿಶೇಷಂ ಎಂದೇನೋ ನಂತರದ ಸಾಲು ಇದೆ ಎಂದು ಗೊತ್ತಿತ್ತು ಅದರರ್ಥ ಗೊತ್ತಿರಲಿಲ್ಲ . ಈಗ ನನಗೆ ಈ ಬಗ್ಗೆ ಶ್ರೀ ಕೆ.ವಿ.ಸುಬ್ಬಣ್ಣ ಅವರ ಲೇಖನವೊಂದರಲ್ಲಿ ಮಾಹಿತಿ ಸಿಕ್ಕಿತು. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುವೆ.
`ಕವಿರಾಜಮಾರ್ಗ' ವೆಂಬ…
ವಿಧ: ಬ್ಲಾಗ್ ಬರಹ
July 13, 2006
ಹಾರಿಹೋಗುವವೆಲ್ಲಿಗೆ ಹೃದಯದ ಭಾವನೆಗಳು
ಈ ಯಾಂತ್ರಿಕ ತಾಂತ್ರಿಕ ರಕ್ಕಸ ಮಂದಿಯೊಳಗೆ
ಹುಟ್ಟಿ ಬರುವವೆಲ್ಲಿಗೆ ಜೀವಿಗಳೆಡೆ ಚೇತನಗಳು
ಈ ಸೃಷ್ಟಿ ನಿಯಮದ ಸತ್ಯ ಪೃಥ್ವಿಯೊಳಗೇ..
ಬಿಡದೆ ಕಾಡುವವೇಕೆ ದುಃಖ ದುಮ್ಮಾನಗಳು
ನಮ್ಮದೇ ಕನಸು-ಮನಸಿನ ಸ್ವರ್ಗದೊಳಗೆ
ವಿಜ್ಞಾನ, ತಾಂತ್ರಿಕತೆಯಲಿ ಸಕಲ ಭೋಗಗಳೇಕೆ
ಸುಖದ ಕಲ್ಪನೆಯದೇಕೆ ಬದುಕಿನೀ ಬಲುಮೆಯೊಳು
ಅದಿರುವುದೇಕೆ ಸ್ವಾರ್ಥ-ಹುಸಿ ವೇಷದ ಪರಿಧಿಯೊಳಗೇ.
ಮತ್ತೆಲ್ಲ ಸಿಡಿವ ಮದ್ದೇತಕೆ ನಯವಂಚಕರ ಜಾಲದಲಿ
ಅದಿರುವುದೇ ದುಷ್ಟರ ದಮನ ಸೂತ್ರದೊಳಗೇ...?
…
ವಿಧ: ಬ್ಲಾಗ್ ಬರಹ
July 13, 2006
ಮುಂಬೈನಲ್ಲಿ ಜೂನ್ 11, 2006 ರ ಸಂಜೆ 6-20 ರಿಂದ 6-32 ರ ವರೆಗೆ ಕೇವಲ ಹನ್ನೆರಡೇ ನಿಮಿಷಗಳಲ್ಲಿ 7 ಬಾರಿ ಸಂಭವಿಸಿದ ಭಾರಿ ಸ್ಫೋಟಕ್ಕೆ 200ಕ್ಕೂ ಹೆಚ್ಚು ಮುಗ್ಧ ಜನರು ಸಾವನ್ನಪ್ಪಿರುವ ಸುದ್ದಿ ಬೆಳಗಿನ ಪತ್ರಿಕೆಗಳಲ್ಲಿ ಅಚ್ಚಾಗಿ ಅದರ ಶಾಯಿ ಆರುವ ಮುನ್ನವೇ ಜುಲೈ 12ರ ಬೆಳಗ್ಗೆ ಅಲ್ಲಿನ ಜನಜೀವನ ಮಾಮೂಲಿ ಸ್ಥಿತಿಗೆ ಬಂದಾಗಿತ್ತು.
ಅದೇ ಮುಂಬೈ ಸೆಂಟ್ರಲ್-ವಿರಾರ್ ಮಾರ್ಗದ ರೈಲುಗಳಲ್ಲಿ ಜನ ಮತ್ತೆ ತಮ್ಮ "ರೋಜ್ ಕಾ ರೋಟಿ" ಗಾಗಿ ಪಯಣ ಬೆಳೆಸಿದರು. ನಿನ್ನೆಯ ಘಟನೆಗೆ ಬೆದರಿ ಯಾರೂ ಮನೆಯಲ್ಲಿ…
ವಿಧ: Basic page
July 12, 2006
ಹೊರಟಳೆತ್ತಾ ನೋಡು ತಾಯಿ ಮಹಾತಾಯಿ ಗ೦ಗೆ.
ಶಿವನ ಜಡೆಯ ಎಳೆದುಕೊ೦ಡು ಪರ್ವತಗಳ ಸೀಳಿಕೊ೦ಡು. ಋಷಿಮುನಿಗಳ ಬೀಳ್ಕೊ೦ಡು ಜನಮನಗಳ ತೊಳೆದುಕೊ೦ಡು.
ಹೊರಟಳೆತ್ತಾ ನೋಡು ತಾಯಿ ಮಹಾತಾಯಿ ಗ೦ಗೆ.
ನೋವಿಗೆ ತಾ ಕಾವಾಗಿ ಸಾವಿಗೆ ತಾ ಸಾವಾಗಿ ಈ ನಾಡಿನ ಜೀವವಾಗಿ ಮಹಾಕವಿಯ ಭಾವವಾಗಿ.
ಹೊರಟಳೆತ್ತಾ ನೋಡು ತಾಯಿ ಮಹಾತಾಯಿ ಗ೦ಗೆ.
ಕರುಣೆಯನ್ನು ಉಟ್ಟುಕೊ೦ಡು ಭಕ್ತ ಹೃದಯ ತಟ್ಟಿಕೊ೦ಡು ಪಾಪವೆಲ್ಲಾ ಸುಟ್ಟುಕೊ೦ಡು ಪ್ರೇಮರ೦ಗ ತೊಟ್ಟುಕೊ೦ಡು
ಹೊರಟಳೆತ್ತಾ ನೋಡು ತಾಯಿ ಮಹಾತಾಯಿ ಗ೦ಗೆ.
ಮನದ ತಾಪ ಕಳಚಿಕೊ೦ಡು…
ವಿಧ: ಬ್ಲಾಗ್ ಬರಹ
July 12, 2006
ವಿಜಯ ಕರ್ನಾಟಕದ ದಿನ ವಿಶೇಷ ಗಮನಿಸುತ್ತಿದ್ದಾಗ ಮೇಲಿನ ವಿಚಾರ ಅರಿವಿಗೆ ಬಂತು. ೧೮೮೦ರಲ್ಲಿ ಈ ದಿನ ವಿಜಾಪುರದಲ್ಲಿ 'ಕರ್ನಾಟಕ ಕುಲಪುರೋಹಿತ' ಆಲೂರು ವೆಂಕಟರಾಯರ ಜನನವಾಗಿತ್ತು.
ಅಂತರ್ಜಾಲದಲ್ಲಿ ಅವರ ಚಿತ್ರ ಸಿಕ್ಕೀತೆ ಎಂದು ತಡಕಾಡಿದಾಗ ಈ ಲಿಂಕ್ ಸಿಕ್ಕಿತು.
ಮರಾಠಿ, ಉರ್ದು, ಅಂಗ್ರೇಜಿಗಳ ಹೊಡೆತಕ್ಕೆ ಉತ್ತರ ಕರ್ನಾಟಕದಲ್ಲಿ ಕನ್ನಡ ತತ್ತರಿಸಿಹೋಗಿದ್ದ ಕಾಲಕ್ಕೆ ಕನ್ನಡಪರ ಚಿಂತನದ ಜ್ಯೋತಿ ಹಚ್ಚಿ ತನ್ಮೂಲಕ ಕರ್ನಾಟಕದ ಏಕೀಕರಣಕ್ಕೆ ಕಾರಣೀಭೂತರಾದವರಲ್ಲಿ ಅಗ್ರಗಣ್ಯರು. 'ಕರ್ನಾಟಕ…
ವಿಧ: ಬ್ಲಾಗ್ ಬರಹ
July 12, 2006
ದಿನಾಂಕ ೧೨ ರಂದು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ತಮಿಳು ಸಿನಿಮಾವೊಂದರಲ್ಲಿ ಬ್ರಿಟೀಷರ ವಿರುದ್ಧ ಹೋರಾಡಿ ಪ್ರಾಣ ತೆತ್ತ ಗಂಡುಗಲಿ ಸಂಗೊಳ್ಳಿ ರಾಯಣ್ಣನ ಹೆಸರನ್ನು ದೇಶದ್ರೋಹಿ ಪಾತ್ರವೊಂದಕ್ಕೆ ಕೊಟ್ಟಿದ್ದಾರಂತೆ ನೋಡಿ ಇವರ ಉದ್ಧಟತನ. ನನ್ನ ಲೇಖನಗಳಲ್ಲಿ ದೋಷ ಕ್ಂಡು ಬಂದಲ್ಲಿ ನನ್ನನ್ನು ಕ್ಷಮಿಸಬೇಕು ಏಕೆಂದರೆ, ನನ್ನ ಆಪರೇಟಿಂಗ್ ಸಿಸ್ಟಮ್ windows 2000 ಇದರಲ್ಲಿ ಕನ್ನಡ ಫ಼ಾಂಟ್ ಸರಿಯಾಗಿ ಬರೋದಿಲ್ಲ, ಆದರೂ ಆದಷ್ಟು ತಪ್ಪುಗಳನ್ನು ಮಾಡದಿರಲು ಪ್ರಯತ್ನಿಸುತ್ತೇನೆ.......
ವಿಧ: ಬ್ಲಾಗ್ ಬರಹ
July 12, 2006
ಸುಕೃತಿ
ಅಕಾರದಿಂದ ಆಕೃತಿ, ಉಕಾರದಿಂದ ಪ್ರಕೃತಿ, ಮಕಾರದಿಂದ ಸಂಸ್ಕೃತಿ, ಓಂ ಕಾರದಿಂದ ಸುಕೃತಿ.//ಪ//
ಹುಟ್ಟು ಬಟ್ಟೆ ಪ್ರಕೃತಿ, ಉಟ್ಟ ಬಟ್ಟೆ ಸಂಸ್ಕೃತಿ, ಕೆಟ್ಟ ಬಟ್ಟೆ ವಿಕೃತಿ, ಹೊಟ್ಟೆ-ಬಟ್ಟೆ ಎರಡು ಸುಕೃತಿ.//೧//.
ಮಾತು ನಮ್ಮ…
ವಿಧ: ಬ್ಲಾಗ್ ಬರಹ
July 12, 2006
ದೇಶದ ವಾಣಿಜ್ಯ ನಗರಿ ಬಾಂಬೆ ಅಲಿಯಾಸ್ ಮುಂಬೈ ವರುಣನ ರೌದ್ರಾವತಾರದಿಂದ ಚೇತರಿಸಿಕೊಳ್ಳುವಷ್ಟರಲ್ಲೇ ಮತ್ತೊಂದು ಅನಾಹುತ. ಬೃಹನ್ನಗರದ ಜೀವನಾಡಿ ಲೋಕಲ್ ಟ್ರೇನಿನಲ್ಲಿ ದಿನದ ಕೆಲಸ ಮುಗಿಸಿ ಸಂಜೆ ಮನೆಗೆ ತೆರಳುತ್ತಿದ್ದ ಮುಗ್ಧ ನಾಗರಿಕರ ಮಾರಣಹೋಮ. ಕೇವಲ ಹನ್ನೆರಡೇ ನಿಮಿಷಗಳಲ್ಲಿ ಏಳು ಕಡೆ ಏಕಕಾಲಕ್ಕೆ ಜುಲೈ 11, 2006 ರಂದು ಸಂಭವಿಸಿದ ಸ್ಫೋಟದಲ್ಲಿ ನೂರಾರು ಮುಗ್ಧರು ಮಸಣದ ಹಾದಿ ಹಿಡಿದಿದ್ದಾರೆ.
ಮೊನ್ನೆ ವಾರಾಣಸಿಯಾಯಿತು, ನಿನ್ನೆ ಬೆಂಗಳೂರಿನ ವಿಜ್ಞಾನ ಕೇಂದ್ರ, ಇವತ್ತು ಮುಂಬೈ, ಶ್ರೀನಗರ…