ವಿಧ: ಚರ್ಚೆಯ ವಿಷಯ
July 25, 2006
ಸಾಧಿಸಿದ್ದಾದರೂ ಏನು? ಕಳೆದುಕೊಂಡದ್ದು ಎಷ್ಟೊಂದು? ನಷ್ಟ ಯಾರಿಗೆ? ಇದೆಲ್ಲ ಯಾರ ಒಳಿತಿಗಾಗಿ? ಇವೆಲ್ಲ ಪ್ರಾರಂಭವಾದದ್ದು ಹೇಗೆ ಯಾರಿಂದ?
ಕಳೆದ ವಾರ ಮುಂಬಯಿ ಲೋಕಲ್ ಟ್ರೈನ್‍ಗಳಲ್ಲಿ ೭ ಕಡೆಗಳಲ್ಲಿ ಸರಣಿ ಬಾಂಬ್ ಸ್ಫೋಟವಾಗಿದ್ದು ಇಡೀ ಜಗತ್ತಿಗೇ ತಿಳಿದಿದೆ. ಇದರ ಬಗ್ಗೆ ರಾಜಕೀಯ ವ್ಯಕ್ತಿಗಳು ತಮ್ಮ ತಮ್ಮ ಮೂಗಿನ ನೇರಕ್ಕೆ ಮಾತನಾಡುತ್ತಿದ್ದಾರೆ. ಕೆಲವು ಇವರದಲ್ಲ ಎಂದರೆ ಇನ್ನು ಕೆಲವರು ಇವರದೇ ಕೃತ್ಯ ಎಂದು ಹೇಳುತ್ತಿದ್ದಾರೆ. ಒಬ್ಬರಿಗೊಬ್ಬರು ಬೆರಳು ತೋರುತ್ತಾ ಕಿತ್ತಾಡುವುದರಲ್ಲಿ…
ವಿಧ: Basic page
July 24, 2006
"ನಾಯಿ ಮನುಷ್ಯನಿಗೆ ಕಚ್ಚಿದರೆ ಸುದ್ದಿಯಲ್ಲ, ಮನುಷ್ಯ ನಾಯಿಗೆ ಕಚ್ಚಿದರೆ ಸುದ್ದಿ" - ಎಂದು ಸುದ್ದಿಯ ಅರಿವು (ನ್ಯೂಸ್ ಸೆನ್ಸ್) ಮೂಡಿಸಲು ಪತ್ರಿಕೋದ್ಯಮದ ಮೊದಲ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಮೇಷ್ಟ್ರು ಹೇಳುವ ಪಾಠ. ಇದರರ್ಥ ಸಾಮಾನ್ಯವಾಗಿರುವುದಕ್ಕಿಂತ ಅಸಾಮಾನ್ಯವಾಗಿದ್ದೇ ಸುದ್ದಿ.
ಆದರೆ ಕಳೆದ ಐದಾರು ವರ್ಷಗಳಲ್ಲಿ ಸರಕಾರದ ಉದಾರೀಕರಣ ನೀತಿಯಿಂದಾಗಿ ಹತ್ತಾರು ಪತ್ರಿಕೆಗಳು ಅಷ್ಟೇ ಸಂಖ್ಯೆಯ ಟಿವಿ ಚಾನೆಲ್ ಗಳು ಮೈಕೊಡವಿಕೊಂಡು ಆಖಾಡಕ್ಕಿಳಿದಿವೆ. ಪತ್ರಿಕೆಗಳಿಗಿಂತ ಟಿವಿ ಚಾನೆಲ್‌ಗಳ…
ವಿಧ: ಚರ್ಚೆಯ ವಿಷಯ
July 24, 2006
ಕಳೆದ ಶನಿವಾರ ನಮ್ಮೂರಿಗೆ ಹೋಗಿದ್ದೆ. ಹಾಗೇ ಬೆಳಗಿನ ಕಾಫಿ ಹೀರುತ್ತಾ ದೂರದರ್ಶನದ ಕಾರ್ಯಕ್ರಮ ವೀಕ್ಷಿಸುತ್ತಿದ್ದೆ. ನನ್ಜೊತೆ ನಮ್ಮಮ್ಮ, ನಮ್ಮಜ್ಜಿ, ನಮ್ಮಣ್ಣ, ನಮ್ಮ ಅಕ್ಕನ ಮಕ್ಕಳು ಹಾಗೂ ನಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಅಜ್ಜ.. ಎಲ್ರೂ ಇದ್ದರು. ನಾವು ನೋಡುತ್ತಿದ್ದದ್ದು ಒಂದು ಕನ್ನಡ ಚಾನಲ್
ಟಿ.ವಿ. ಯಲ್ಲಿ ನಿರೂಪಣೆ ಶುರುವಾಯ್ತು.., ನಮ್ಮೆಲ್ಲರ ಗಮನ ದೂರವಾಣಿ ಕರೆಗಳನ್ನು ಸ್ವೀಕರಿಸುತ್ತಿದ್ದ ನಿರೂಪಕಿಯ ಮೇಲೆ..,
"Good Morning everybody, I am .... ....(name), with…
ವಿಧ: Basic page
July 23, 2006
ಹೇ ರಾಧೆ,
ನಿನ್ನ ಬಳೆಗಳ ಮೆಲ್ದನಿಗಳಿಗೆ
ಝೇಂಕರಿಪ ಬೆಳ್ಳಿ ಕಾಲ್ಗೆಜ್ಜೆ,
ನನ್ನ ಮುರಳೀ ಗಾನಕ್ಕೆ ನಿನ್ನ ಗಾನವು ಬೆರೆತು
ತಂಪಾದ ಮಧುವನವು
ನೆನಪಿಲ್ಲವೇ ನಿನಗೆ ಹೇ ರಾಧೆ??
ನಿನ್ನ ಮಡಿಲ ಮಂಟಪದಿ
ತಲೆಯಿಟ್ಟು ಮಲಗಿರಲು ನಾ
ನಿನ್ನ ಕಂಗಳ ಕಾಡಿಗೆ ನನ್ನ ತುಟಿಗಳ ಮೇಲಿರಲು
ನಾನಿಟ್ಟ ಮುತ್ತುಗಳು
ಮರೆತುಹೋದವೇ ನಿನಗೆ ಹೇ ರಾಧೆ??
ನೀನಿರದ ಈ ದ್ವಾರಕೆಯಲಿ,
ನಿನ್ನ ನೆನಪಿನಾ ವಿರಹ,
ಬೆಳದಿಂಗಳೂ ನನಗೆ ಸಹ್ಯವಿಲ್ಲ ರಾಧೇ,
ನನ್ನ ಕನಸಲಾದರೂ ಇಂದು
ಬರಲಾರೆಯಾ ಹೇ ರಾಧೆ??
-ಶ್ರೀನಿಧಿ
(ರಾಧೆಯ ವಿರಹದ…
ವಿಧ: Basic page
July 22, 2006
ಶೇಣಿಯವರು ಕಾಲವಾದಾಗ ಕಡೇಪಕ್ಷ ಮುಖ್ಯಮಂತ್ರಿಗಳ ಕಚೇರಿಯಿಂದ ಒಂದು ಸಂತಾಪ ಸಂದೇಶ ಕೂಡ ಬರಲಿಲ್ಲ. ಅಗಲಿದ್ದು ಸಾಮಾನ್ಯ ವ್ಯಕ್ತಿತ್ವವಲ್ಲ. ಕರ್ನಾಟಕ ಮತ್ತು ಕೇರಳ ಸರ್ಕಾರಗಳಿಂದಲೂ ರಾಜ್ಯ ಪ್ರಶಸ್ತಿ ಪುರಸ್ಕೃತ, ಎರಡು ಡಾಕ್ಟರೇಟ್ ಪ್ರಬಂಧಗಳ ಸೃಷ್ಟಿಗೆ ವಸ್ತುವಾದ ಸಾಧಕ, ಜೊತೆಗೆ ಸ್ವತಃ ವಿಶ್ವ ವಿದ್ಯಾಲಯವೊಂದರಿಂದ ಗೌರವ ಡಾಕ್ಟರೇಟ್ ಪಡೆದ ಪ್ರತಿಭೆ. ಆದರೂ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿಯಾದಿಯಾಗಿ ಯಾರೊಬ್ಬರಿಂದಲೂ ಒಂದು ಪ್ರತಿಕ್ರಿಯೆ ಬರಲಿಲ್ಲ!
`ಗದಾಯುದ್ಧ'ದ…
ವಿಧ: ಬ್ಲಾಗ್ ಬರಹ
July 22, 2006
ಮೊದಲು ಸುಪ್ರಸಿದ್ಧವಾದ ಈ ಪ್ರಾರ್ಥನಾ ಶ್ಲೋಕವನ್ನು ನೋಡಿ:
ಓಂ ಸಹನಾವವತು ಸಹನೌ ಭುನಕ್ತು
ಸಹವೀರ್ಯಂಕರವಾವಹೈ
ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ
ಇದು ಕನ್ನಡದಲ್ಲಿ ಹೊಸ ಹುಟ್ಟು ಪಡೆದಿರುವ ಬಗೆಯನ್ನು ನೋಡಿ:
ಕೂಡಿ ಓದಿ, ಕೂಡಾಡಿ, ಕೂಡಿ
ಅರಿಯೋಣ ಕೂಡಿ ಕೂಡಿ
ಕೂಡಿ ತಿಂದು, ಕೂಡುಂಡು ಕುಡಿದು
ದುಡಿಯೋಣ ಕೂಡಿ ಕೂಡಿ
ಕೂಡಿ ನಡೆದು, ಒಡಗೂಡಿ ಪಡೆದು
ನುಡಿ ಹೇಳಿ ಕೇಳಿ ಕೂಡಿ
ಕೂಡಿ ಬೆಳೆದು ಬೆಳಗೋಣು
ದೇವರೊಲು ಕೂಡಿ ಕೂಡಿ
[೧೯೫೧, “ಗಂಗಾವತರಣ” ಸಂಕಲನ]
ಈ ಸುಪ್ರಸಿದ್ಧ ಪ್ರಾರ್ಥನಾ ಪದ್ಯ…
ವಿಧ: Basic page
July 22, 2006
ಇದೊಂದು ವಿಶಿಷ್ಟ ಪ್ರವಾಸ ಕಥನ. ಕೇವಲ ಸ್ಥಳಪುರಾಣಕ್ಕೋ, ಊಟ ತಿಂಡಿಗಳ ವರ್ಣನೆಗೋ ಕಥನವನ್ನು ಸೀಮಿತಗೊಳಿಸದೆ ಆದರೆ ಅವನ್ನೂ ಉಳಿಸಿಕೊಂಡು ಫಿನ್ಲೆಂಡ್ ಕನ್ನಡದ ಸಂಸ್ಕೃತಿಗಳ ನಡುವಣ ತುಲನೆ ಮತ್ತು ವಿಶ್ಲೇಷಣೆಗಳ ಜತೆಗೆ ಸಾಗುವ ಕಥನ ಇದು. ಇದು ಕನಿಷ್ಠ ಹತ್ತು ಭಾಗಗಳಲ್ಲಿ ಪ್ರಕಟವಾಗಲಿದೆ.
-ಸಂಪದ ನಿರ್ವಾಹಕ ಬಳಗ
ಸ್ಥಳ: ಫಿನ್ಲೆಂಡ್. ೨೦೦೪ರ ಏಪ್ರಿಲ್ ಎರಡು. ಸ್ಟುಡಿಯೊ ಒಳಕ್ಕಿರಲಿ ಫಿನ್ಲೆಂಡ್ ದೇಶದೊಳಕ್ಕೆ ಕಾಲಿಟ್ಟೇ ಕೇವಲ ಎರಡು ಗಂಟೆ ಕಾಲವಾಗಿತ್ತು. ಫೋನ್ ರಿಂಗಾಯಿತು. ಪರವಾಗಿಲ್ಲ.…
ವಿಧ: ಚರ್ಚೆಯ ವಿಷಯ
July 21, 2006
ನನ್ನ ಸ್ನೇಹಿತನೊಬ್ಬ ಒಳ್ಳೆಯ ಐತಿಹಾಸಿಕ ಕನ್ನಡ ಪುಸ್ತಕಗಳ ಬಗ್ಗೆ ವಿಚಾರಿಸುತ್ತಿದ್ದಾನೆ.
ನಾನು ಶಾಲೆಯಲ್ಲಿ ಇತಿಹಾಸ ಓದಿದ್ದು ಬಿಟ್ಟರೆ, ಇತರೆ ಇತಿಹಾಸದ ಪುಸ್ತಕಗಳನ್ನು ಓದಿಲ್ಲ. ನಿಮಗೆ ಒಳ್ಳೆಯ ಪುಸ್ತಕಗಳ ಪರಿಚಯ ಇದ್ದಲ್ಲಿ ದಯವಿಟ್ಟು ತಿಳಿಸಿ, ಸಹಾಯ ಮಾಡಿ. ಆತನಿಗೆ ಸ್ವಾತಂತ್ರ್ಯ ಸಂಗ್ರಾಮದ (ಒಳ್ಳೆಯ) ಪುಸ್ತಕಗಳ ಪಟ್ಟಿ ಬೇಕಂತೆ.
ವಿಧ: ಬ್ಲಾಗ್ ಬರಹ
July 21, 2006
"ನೀನು ದೊಡ್ದವನಾದಗ ಎನಾಗುತ್ತೀಯಾ?" ಎಂಬ ಪ್ರಶ್ನೆ ಕೇಳಿದಾಗ ಮಗು, ತನ್ನ ಮುಕ್ತ ಮನಸ್ಸಿನಿಂದ "ನಾನು ಏರೊಪ್ಲೇನ್ ಓಡಿಸ್ತೇನೆ!" ಎಂದು ಉತ್ತರಿಸಿತು... ಇದನ್ನು ಕೇಳಿದಾಗ, ನನ್ನ ಮನಸ್ಸಿನಲ್ಲಿ ಪ್ರಶ್ನೆಗಳ ಅಲೆಗಳು ಬಡಿದಂತಾಯಿತು! ಕೆಲವನ್ನು ಈ ಲೆಖನದಲ್ಲಿ ವ್ಯಕ್ತಪಡಿಸುತ್ತಿದ್ದೇನೆ!
ಬದುಕಿಗಾಗಿ ಪ್ರತಿಯೊಂದು ಜೀವಿ ಹೊರಾಡುತ್ತದೆ, ಆದರೆ ಕೊನೆಗೆ ಬದುಕು ಮಿಥ್ಯವಾಗುವುದಿಲ್ಲವೆ? ಸಾವು ಸತ್ಯವಾಗುವುದಿಲ್ಲವೆ?
ಬದುಕಿಗಾಗಿ ಹೊರಾಡಿ ನಾವು ಕೊನೆಗೆ ಸಾಯುವಾಗ ಗಳಿಸಿದ್ದನೆಲ್ಲ ಬಿಟ್ಟು…
ವಿಧ: ಬ್ಲಾಗ್ ಬರಹ
July 21, 2006
ಬ್ಲಾಗ್ ಸ್ಪಾಟ್ ಗಳನ್ನು ಬ್ಲಾಕ್ ಮಾಡಿ ಕೇಂದ್ರ ಸರಕಾರ ಬಹಳ ದೊಡ್ಡ ತಪ್ಪು ಮಾಡಿತು.
ಜನತೆಯ ಸ್ವಾತಂತ್ರವನ್ನು ಕಿತ್ತಿಕೊಂಡಂತೆ ಆಗ್ಗಿತ್ತು. ಯಾರು ಬ್ಲಾಗ್ ಮುಲಕ ಏನು ತಿಳಿಸುವುದಿಲ್ಲ. ಇದ್ದನ್ನು ಸಕಾ೯ರ ಒಪ್ಪಿಕೊಳ್ಳ ಬೇಕು.
ಎಸ್ ಎಂ ಎಸ್ ಗಳನ್ನು ಸಕಾ೯ರ ಬ್ಲಾಕ್ ಮಾಡಬಹುದ್ದಿತ್ತಲ್ಲ. ಮುಂದಾದು ಈ ರೀತಿಯ ಘಟನೆಯಾದಲ್ಲಿ ಎಸ್ ಎಮ್ ಎಸ್ ಬ್ಲಾಕ್ ಮಾಡುವುದು ಒಳ್ಳೆಯದು.
ಆನಂದ ರಾವ್.