ಇವರು ಮೂಲತಃ ಧಾರವಾಡದವರಾಗಿ ಜಾತಿಯಿಂದ ಲಿಂಗವಂತರಾದ್ದರಿಂದ........ (ಉ.ಕ.ಕ-೧೦)
೧೮೬೬ರ 'ಮಠಪತ್ರಿಕೆ'ಯು ಹೀಗೆ ಹೇಳಿದೆ ."ರಸೆಲ್ ದೊರೆಗಳವರು ಬಂದದಂದಿನಿಂದ ಮಹಾರಾಷ್ಟ್ರ , ಗುಜರಾಥ ಪ್ರಾಂತಗಳಲ್ಲಿ ದೇಶಭಾಷೆಗಳು ಹ್ಯಾಗೆ ಅಭಿವೃದ್ದಿಯಾಗಿರುತ್ತವೆಯೋ , ಅದೇ ಮೇರಿಗೆ ಈ ಭಾಗದಲ್ಲಿ ಕರ್ನಾಟಕಭಾಷೆಯಾಗಬೇಕೆಂದು ಅವರು ಬಹಳ ಯತ್ನಪಡುತ್ತಿದ್ದಾರೆ . ಈ ಉದ್ದೇಶವು ಕೈಗೂಡಬೇಕಾಗಿ ಅವರು ಮಾಡಿದ ಉಪಾಯಗಳು ಏನಂದರೆ - ರಾವಸಾಹೇಬ ಮಹಾದೇವ ವಾಸುದೇವ ಬರ್ವೆ ಇವರು ಘನತೆಉಳ್ಳವರಾಗಿ ಈ ಜಿಲ್ಲೆಯ ಡಿಪುಟೀ ಕಲೆಕ್ಟರ್ ಕೆಲಸಕ್ಕೆ ನೇಮಿಸಲ್ಪಟ್ಟದ್ದರಿಂದ ಅವರ ಸ್ಥಳದಲ್ಲಿ ಈ ಜಿಲ್ಲೆಯ ಡಿಪುಟಿ ಇನ್‍ಸ್ಪೆಕ್ಟರ ಕೆಲಸಕ್ಕೆ ಚನಬಸಪ್ಪಣ್ಣನವರ ಯೋಜನೆಯಾಯಿತು . ಇವರು ಮೂಲತಃ ಧಾರವಾಡದವರಾಗಿ ಜಾತಿಯಿಂದ ಲಿಂಗವಂತರಾದ್ದರಿಂದ ಇವರು ಕನ್ನಡ ಭಾಷೆಯ ಪೂರ್ಣ ಅಭಿಮಾನಿಗಳಾಗಿರುತ್ತಾರೆಂದು ನಾವು ಹೇಳಬೇಕಿಲ್ಲ . ಇವರ ಕೆಳಗೆ ಕಾನಡಾ ಜಿಲ್ಲೆಯ ಕೆಲಸಕ್ಕೆ ನೇಮಿಸಿದ ಅಸಿಸ್ಟಾಂಟರಾದರೂ ಕನ್ನಡ ಭಾಷೆಯನ್ನು ಚನ್ನಾಗಿ ಬಲ್ಲವರು. ಧಾರವಾಡ ಕಲಾದಗೀ ಜಿಲ್ಲೆಗಳ ಡಿಪುಟಿ ಇನ್‍ಸ್ಪೆಕ್ಟರ ರು ಮಹಾರಾಷ್ಟ್ರ ದೇಶದವರಾದಾಗ್ಯೂ ತಮ್ಮ ಶಾಲೆಗಳನ್ನು ಪರೀಕ್ಷಿಸತಕ್ಕಷ್ಟು .ಕನ್ನಡು ಭಾಷೆಯನ್ನು ಕಲಿತುಕೊಳ್ಳುವ ಬಗ್ಗೆ ರಸೆಲ್ ದೊರೆಗಳು ಅವರಿಗೆ ಮಾಡಿದ ಹುಕುಮಿನ ಪ್ರಕಾರ ಅವರು ಕಲಿತುಕೊಂಡಿದ್ದಾರೆ . ಇದಲ್ಲದೆ ಕನ್ನಡು ಭಾಷೆಯ ಪರೀಕ್ಷೆ ಕೊಡಬೇಕೆಂಬುದಾಗಿ ಯೆಲ್ಲಾ ಶಾಲೆಗಳ ಮಾಸ್ತರರಿಗೆ ಹುಕುಂ ಫರ್ಮಾಯಿಸಿ ಯಷ್ಟೋ ಜನರನ್ನು ಪರೀಕ್ಷಿಸಿದರು . ಶಾಲೆಗಳ ವೇಳಾಪತ್ರಿಕೆಗಳನ್ನು ತಿದ್ದಿ ಕನ್ನಡು ಭಾಷೆಯ ಅಭ್ಯಾಸಕ್ಕೆ ತಕ್ಕಷ್ಟು ವೇಳೆ ಕೊಟ್ಟರು . ನಾರ್ಮಲ್ ಶಾಲೆಯ ಹೆಡ್‍ಮಾಸ್ತರ ಕೆಲಸಕ್ಕೂ ಫಸ್ಟ ಅಸಿಸ್ಟಾಂಟ ಕೆಲಸಕ್ಕೂ ಇಂಗ್ಲೀಷ ಭಾಷೆಯನ್ನೂ ಕನ್ನಡ ಭಾಷೆಯನ್ನೂ ಚನ್ನಾಗಿ ಬಲ್ಲವರನ್ನೂ ನೇಮಿಸಿದರು. ಕನ್ನಡ ಕಾವ್ಯಗ್ರಂಥಗಳನ್ನು ಚನ್ನಾಗಿ ಬಲ್ಲವರೂ , ಬಹು ದಿವಸ ಶಿಕ್ಷಣಿಯ ಕೆಲಸದಲ್ಲಿ ಪರಿಶ್ರಮ ಮಾಡಿದವರೂ ಆದ ಇನ್ನೊಬ್ಬ ಶಿಕ್ಷಕರನ್ನು ಅದೇ ಶಾಲೆಯಲ್ಲಿ ನೇಮಿಸಿದರು. ಈ ವರುಷ ಮಹಾರಾಷ್ಟ್ರ ೫ ನೇ ಪುಸ್ತಕವು ಕನ್ನಡಿನಲ್ಲಿ ಭಾಷಾಂತರಿಸಲ್ಪಟ್ಟಿತು. ೪ ನೆ ಪುಸ್ತಕವು ಪೂರ್ವದಲ್ಲಿಯೇ ಭಾಷಾಂತರವಾಗಿರುತ್ತದೆ. ಅದನ್ನು ಛಾಪಿಸುವ ತರ್ತೂದು ನಡೆದಿದೆ"
Comments
ಉ: ಇವರು ಮೂಲತಃ ಧಾರವಾಡದವರಾಗಿ ಜಾತಿಯಿಂದ ಲಿಂಗವಂತರಾದ್ದರಿಂದ........ ...