ಸ್ವಾತಂತ್ರ್ಯದಾಮಂತ್ರ.

ಸ್ವಾತಂತ್ರ್ಯದಾಮಂತ್ರ.

ಸ್ವಾತಂತ್ರ್ಯದಾಮಂತ್ರ.

ವಂದೇ ಮಾತರಂ ಮಂತ್ರ
ತಂದುಕೊಟ್ಟ ಸ್ವತಂತ್ರ/

ವೈರಿ ಕಪಟ ಕುತಂತ್ರ
ಗೆದ್ದು ಬಂತು ಗಣತಂತ್ರ/

ಸತ್ಯವೆಂಬ ಸುಮಂತ್ರ
ಸ್ವದೇಶಿ ಚರಕ ಯಂತ್ರ/

ತಂತ್ರ ಯಂತ್ರ ಮಂತ್ರವಿಲ್ಲ
ಕಾಣದಾಯ್ತು ಸ್ವತಂತ್ರ/

ಕಂತ್ರಿಗಳೇ ಮಂತ್ರಿಗಳು
ಮಲಿನವಾಯ್ತು ಗಣತಂತ್ರ/

ನರಕ ಬಿಟ್ಟು ಚರಕ ತನ್ನಿ
ಮತ್ತೆ ಬೇಕು ಸ್ವತಂತ್ರ/

ಇದೇ ನನ್ನ ಆಮಂತ್ರ
ವಿದ್ಯೆ ನಮ್ಮ ಮಂತ್ರ
ಸತ್ಯಧರ್ಮ ತಂತ್ರ
ಜನಗಣವೇ ಯಂತ್ರ
ಆಗ ಮಾತ್ರ ಸ್ವಾತಂತ್ರ್ಯ.

ಅಹೋರಾತ್ರ.

೧೬/೦೮/೨೦೦೬.
ಕೃಷ್ಣಾಷ್ಠಮಿ.

 

Rating
No votes yet